ದಯಾಲನ್ ಹೇಮಲತಾ

ವಿಕಿಪೀಡಿಯ ಇಂದ
Jump to navigation Jump to search

ದಯಾಲನ್ ಹೇಮಲತಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್‍ಉಮನ ಹಾಗೂ ಬಲಗೈ ಆಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ತಮಿಳುನಾಡು, ಸೌತ್ ಝೋನ್ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ದಯಾಲನ್ ಹೇಮಲತಾ ರವರು ಸೆಪ್ಟಂಬರ್ ೨೯, ೧೯೯೪ ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು.[೨]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ದೇಶಿ ಕ್ರಿಕೆಟ್‍ನಲ್ಲಿ ತಮಿಳುನಾಡು, ಸೌತ್ ಝೋನ್ ಕ್ರಿಕೆಟ್ ತಂಡಗಳಿಗೆ ಆಡುತ್ತಾರೆ. ಇವರು ಆರಂಭಿಕ ಬ್ಯಾಟ್ಸ್‌‌ಉಮನ್ ಆಗಿ ತಂಡಕ್ಕೆ ಆಯ್ಕೆಗೊಂಡರು. ಆರಂಭಿಕ ಬ್ಯಾಟಿಂಗ್ ಜೊತೆಗೆ ಹೇಮಲತಾ ಆಫ್ ಬ್ರೇಕ್ ಬೌಲಿಂಗ್ ಕೋಡ ಮಾಡುತ್ತಾರೆ. ಮಾರ್ಚ್ ೨೦೧೮ ರಲ್ಲಿ ಇಂಗ್ಲೆಂಡ್ ವಿರುದ್ದ ಭಾರತೀಯ ತಂಡಕ್ಕೆ ಆಯ್ಕೆಯಾಗಿದ್ದರೂ ೧೧ರ ಬಳಗದಲ್ಲಿ ಆಡಿರಲಿಲ್ಲ. ನಂತರ ಶ್ರೀಲಂಕಾ ವಿರುದ್ದ ತಂಡದಲ್ಲಿ ಸ್ಥಾನ ಪಡೆದರು.[೩]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಸೆಪ್ಟಂಬರ್ ೧೧, ೨೦೧೮ ರಂದು ಶ್ರೀಲಂಕಾದ ಗಾಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ವಿರುದ್ದ ನಡೆದ ಸರಣಿಯ ಎರಡನೇ ಪಂದ್ಯದ ಮೂಲಕ ಹೇಮಲತಾ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪]ನಂತರ ನವಂಬರ ೦೯, ೨೦೧೮ರಲ್ಲಿ ಅಮೇರಿಕಾದ ಪ್ರಾವಿಡೆನ್ಸ್‌ನಲ್ಲಿ ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಐಸಿಸಿ ಟಿ-೨೦ ವಿಶ್ವಕಪ್ ೨೦೧೮ರ ಮೊದಲನೇ ಗ್ರೂಪ್ ಪಂದ್ಯದ ಮೂಲಕ ಹೇಮಲತಾ ರವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೫]

ಪಂದ್ಯಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ : ೦೭' ಪಂದ್ಯ[೬]
  • ಏಕದಿನ ಕ್ರಿಕೆಟ್ : ೦೬ ಪಂದ್ಯಗಳು


ವಿಕೇಟ್‍ಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೦೫
  • ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ: ೦೨


ಉಲ್ಲೇಖಗಳು[ಬದಲಾಯಿಸಿ]

  1. https://www.news18.com/cricketnext/profile/dayalan-hemalatha/69399.html
  2. https://www.cricbuzz.com/profiles/13639/dayalan-hemalatha
  3. https://sportstar.thehindu.com/cricket/college-cricket-culture-turned-hemalathas-tide/article23357633.ece
  4. http://www.espncricinfo.com/series/8674/scorecard/1157706/sri-lanka-women-vs-india-women-1st-odi-icc-womens-championship-2017-18-2021
  5. http://www.espncricinfo.com/series/8634/scorecard/1150533/india-women-vs-new-zealand-women-1st-match-group-b-icc-womens-world-t20-2018-19
  6. http://www.espncricinfo.com/india/content/player/961107.html