ದಂತಧಾವಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಲ್ಲುಪುಡಿ ಮತ್ತು ದಂತಮಂಜನ ಸೇರಿದಂತೆ ದಂತಧಾವಕಗಳು ನೈಸರ್ಗಿಕ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ಅವುಗಳಿಗೆ ಹೊಳಪು ಕೊಡಲು ಟೂತ್ ಬ್ರಷ್‍ನೊಂದಿಗೆ ಬಳಸಲಾಗುವ ಪದಾರ್ಥಗಳು. ಇವುಗಳನ್ನು ಪೇಸ್ಟ್, ಪುಡಿ, ಜೆಲ್ ಅಥವಾ ದ್ರವದ ರೂಪದಲ್ಲಿ ಪೂರೈಕೆ ಮಾಡಲಾಗುತ್ತದೆ. ಹಲವು ವರ್ಷಗಳಿಂದ ಅನೇಕ ದಂತಧಾವಕಗಳನ್ನು ಉತ್ಪಾದಿಸಲಾಗಿದೆ. ಉತ್ಪನ್ನಗಳನ್ನು ಮಾರಾಟಮಾಡಲು ಕೆಲವು ದಂತಧಾವಕಗಳು ಬಿಳುಪಾಗಿಸುವ ಸಾಮರ್ಥ್ಯಗಳಂತಹ ಮಾರಾಟಗಾರಿಕೆ ಕಾರ್ಯತಂತ್ರಗಳ ಮೇಲೆ ಕೇಂದ್ರೀಕರಿಸಿವೆ. ದಂತವೈದ್ಯರು ಶಿಫಾರಸುಮಾಡುವ ಅತ್ಯಂತ ಮುಖ್ಯವಾದ ದಂತಧಾವಕವೆಂದರೆ ದಂತಮಂಜನ. ಇದನ್ನು ಟೂತ್‍ಬ್ರಷ್‍ನ ಜೊತೆಗೆ ಆಹಾರದ ಅವಶೇಷಗಳು ಮತ್ತು ದಂತ ನಿಕ್ಷೇಪಗಳನ್ನು ತೆಗೆಯಲು ನೆರವಾಗಲು ಬಳಸಲಾಗುತ್ತದೆ.

ದಂತಧಾವಕಗಳ ಬಗೆಗಳು[ಬದಲಾಯಿಸಿ]

ದಂತಮಂಜನ[ಬದಲಾಯಿಸಿ]

ಇದರ ಪ್ರಮುಖ ಘಟಕಗಳೆಂದರೆ ಅಪಘರ್ಷಕ, ಬಂಧಕ ವಸ್ತು, ಬಾಹ್ಯತಲ ಸಾಂದ್ರತಾಹ್ರಾಸಕ ಮತ್ತು ಆರ್ದ್ರಕ.

ಹಲ್ಲುಪುಡಿ[ಬದಲಾಯಿಸಿ]

ಕೆಂಪು ಹಲ್ಲುಪುಡಿ

ಹಲ್ಲನ್ನು ಸ್ವಚ್ಛಗೊಳಿಸಲು ಇದ್ದಿಲು, ಇಟ್ಟಿಗೆ ಮತ್ತು ಉಪ್ಪಿನಂತಹ ಪುಡಿಮಾಡಿದ ಪದಾರ್ಥಗಳ ಬಳಕೆಯು ಭಾರತದಲ್ಲಿ ಐತಿಹಾಸಿಕವಾಗಿ ವ್ಯಾಪಕವಾಗಿತ್ತು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ.[೧] ಇದನ್ನು ತೋರುಬೆರಳಿನಿಂದ ಹಚ್ಚಿ ತಿಕ್ಕಿಕೊಳ್ಳಬಹುದು ಮತ್ತು ಟೂತ್‍ಬ್ರಷ್‍ನ ಅಗತ್ಯವಿರುವುದಿಲ್ಲ. ಹಾಗಾಗಿ ಮಿತವ್ಯಯದ ಪರ್ಯಾಯವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Dogra, Balram (2010). Rural Marketing (in ಇಂಗ್ಲಿಷ್). Tata McGraw-Hill Education. ISBN 9780070660007.
"https://kn.wikipedia.org/w/index.php?title=ದಂತಧಾವಕ&oldid=977616" ಇಂದ ಪಡೆಯಲ್ಪಟ್ಟಿದೆ