ವಿಷಯಕ್ಕೆ ಹೋಗು

ಥಾಮಸ್ ಅರ್ನಾಲ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಥಾಮಸ್ ಅರ್ನಾಲ್ಡ್
Thomas Arnold, 1840
Born(೧೭೯೫-೦೬-೧೩)೧೩ ಜೂನ್ ೧೭೯೫
Died12 June 1842(1842-06-12) (aged 46)
Cause of deathangina pectoris
Resting placeRugby School Chapel
Nationalityಬ್ರಿಟನ್
EducationLord Weymouth's Grammar School; Winchester School
Alma materCorpus Christi College, Oxford
Occupation(s)Educator and historian
Known forReforms to Rugby School (immortalised in Tom Brown's Schooldays)
TitleRegius Professor of Modern History, Oxford
Term1841–1842
PredecessorEdward Nares
SuccessorJohn Antony Cramer
ChildrenMatthew Arnold, Tom Arnold, William Delafield Arnold

ಥಾಮಸ್ ಅರ್ನಾಲ್ಡ್ (೧೩ ಜೂನ್ ೧೭೯೫ – ೧೨ ಜೂನ್ ೧೮೪೨) ಪ್ರಸಿದ್ಧ ಇತಿಹಾಸಕಾರ, ಶಿಕ್ಷಣತಜ್ಞ. ವಿಂಚೆಸ್ಟರ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ. ೧೮೦೭ ರಲ್ಲಿ ವಿನ್ಸ್‌ಟರ್‍ಗೆ ತೆರಳಿ, ಆಕ್ಸ್‌ಫರ್ಡಿನಲ್ಲಿ ಕಾರ್ಪಸ್ ಕ್ರಿಸ್ಟಿ ಕಾಲೇಜ್ ಸೇರುವವರೆಗೂ ಅಲ್ಲಿಯೇ ಉಳಿದ. ನಾಲ್ಕು ವರ್ಷಗಳ ಅನಂತರ ಓರಿಯಲ್ ಕಾಲೇಜಿನ ಫೆಲೋ ಎಂದು ಆಯ್ಕೆಯಾದ. ವಿಶ್ವವಿದ್ಯಾಲಯ ಬಿಟ್ಟ ಅನಂತರ ಲಾಲ್ ಹಾಮ್ನಲ್ಲಿ ಉಳಿದು, ವಿದ್ಯಾರ್ಥಿಗಳಿಗೆ ಬೋಧಿಸುವುದರಲ್ಲಿ ಮತ್ತು ಅಧ್ಯಯನದಲ್ಲಿ ನಿರತನಾದ. ರೋಮ್ ಚರಿತ್ರೆ ಬರೆಯಲು ಪ್ರಾರಂಭಿಸಿದ. ೧೮೨೮ ರಿಂದ ೧೮೪೨ ರವರೆಗೆ ರಗ್ಬಿ ಶಾಲೆಯ ಮುಖ್ಯೋಪಾಧ್ಯಾಯನಾಗಿದ್ದ. ಶಾಲೆ ಕೇವಲ ಸಾಮಾನ್ಯ ಜ್ಞಾನ ಮತ್ತು ಸಾಹಿತ್ಯವನ್ನು ಬೋಧಿಸುವ ಸಂಸ್ಥೆಯಲ್ಲವೆಂದು ಹೇಳಿ ವ್ಯಕ್ತಿತ್ವದ ತರಬೇತಿಗೆ ಮಹತ್ತ್ವ ನೀಡಿದ. ಸಾರ್ವಜನಿಕ ಶಾಲೆಗಳ ಹೊರಗೂ ಇವನ ಪ್ರಭಾವ ಹರಡಿದ್ದು ಕಂಡುಬರುತ್ತದೆ. ೧೮೪೧ರಲ್ಲಿ ಆಕ್ಸ್‌ಫರ್ಡ್ ಕಾಲೇಜೊಂದರಲ್ಲಿ ಚರಿತ್ರೆಯ ಪ್ರಾಧ್ಯಾಪಕನಾಗಿ ನೇಮಕಗೊಂಡ. ಇವನು ಪ್ರಸಿದ್ಧ ಕವಿ ಮ್ಯಾಥ್ಯೂ ಆರ್ನಲ್ಡ್‌ನ ತಂದೆ. ಸ್ವತಃ ಹಲವಾರು ಕೃತಿಗಳನ್ನೂ ರಚಿಸಿದ್ದಾನೆ. ನೀತಿಬೋಧೆಯ (ಸರ್ಮನ್ಸ್) ಹಲವು ಸಂಪುಟ ರಚಿಸಿದ. ಎ ಹಿಸ್ಟರಿ ಆಫ್ ರೋಮ್ ಟು ದಿ ಸೆಕೆಂಡ್ ಪ್ಯುನಿಕ್ ವಾರ್ (೩ ಸಂಪುಟಗಳು ೧೮೩೮-೪೩), ಇಂಟ್ರಡಕ್ಟರಿ ಲೆಕ್ಚರ್ಸ್‍ ಆನ್ ಮಾಡರ್ನ್ ಹಿಸ್ಟರಿ (೧೮೪೨) ಮೊದಲಾದವು ಇವನ ಮುಖ್ಯ ಕೃತಿಗಳು. ಪ್ರಾಧ್ಯಾಪಕನಾಗಿ ಈತ ಶಾಲೆಯನ್ನು ನಡೆಸಿದ ಕ್ರಮ ಬಹು ಪ್ರಸಿದ್ಧವಾಯಿತಲ್ಲದೆ ಮುಂದೆ ಬಂದ ಅನೇಕರಿಗೆ ಮಾದರಿಯಾಯಿತು. ಥಾಮಸ್ ಹ್ಯೂಗ್ಸ್ (೧೮೨೨-೯೬) ಟಾಮ್ಬುನ್ಸ್ ಸ್ಕೂಲ್ ಡೇಸ್ ಎಂಬ ಕಾದಂಬರಿ ಅಂದಿನ ರಗ್ಬಿ ಶಾಲೆಯ ಜೀವನವನ್ನು ಬಹು ಸ್ವಾರಸ್ಯವಾಗಿ ಚಿತ್ರಿಸುತ್ತದೆಯಲ್ಲದೆ ಥಾಮಸ್ ಆರ್ನಲ್ಡನ ಪ್ರಾಧ್ಯಾಪಕಗಿರಿಯನ್ನು ವರ್ಣಿಸುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]