ತ್ರಿಶಾ
ಆರಂಭಿಕ ಜೀವನ
[ಬದಲಾಯಿಸಿ]ತ್ರಿಶಾ ಭಾರತದ ನಟಿಯರಲ್ಲಿ ಒಬ್ಬರು. ಇವರು ೧೯೮೩ ಯ ಮೇ ೪ ರಂದು ಜನಿಸಿದರು. ತಂದೆ ಕೃಷ್ಣನ್ ಮತ್ತು ತಾಯಿ ಉಮಾ. ತ್ರಿಶಾಳ ಮಾತುರು ಭಾಷೆ ತಮಿಳು. ಇವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ಧ ರಾಗಿದಾರೆ.ಇವರು ಜನಿಸಿದ್ದು ಚೆನೈ, ತಮಿಳುನಾಡಿನಲ್ಲಿ.
ವಿದ್ಯಾಭ್ಯಾಸ
[ಬದಲಾಯಿಸಿ]ವಿದ್ಯಾಭ್ಯಾಸವನ್ನು ಚೆನೈನ ಹಾರ್ಟ್ ಮೆಟ್ರಿಕ್ಯುಲೇಷನ್ ಶಾಲೆ ಮತ್ತು ಒಂದು ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಅನ್ನು ಎಥಿರಜ ಕಾಲೇಜಲ್ಲಿ ಮುಗಿಸಿದ್ದಾರೆ.ತ್ರಿಶಾ ಆರಂಭದಲ್ಲಿ ಕ್ರಿಮಿನಲ್ ಮನಶ್ಶಾಸ್ತ್ರಜ್ಞ ಆಗಬೇಕೆಂದು ಅಪೇಕ್ಷಿಸಿದರು, ಮತ್ತು ಮೊದಲು ಆಕೆಯ ಅಧ್ಯಯನಗಳನ್ನು ಸಂಪೂರ್ಣಗೊಳಿಸಲು ಬಯಸಿದ್ದರು. ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರಿಂದ ಅವರಿಗೆ ವಿದ್ಯಾಭ್ಯಾಸವನ್ನು ಮುಗಿಸಲು ಕಷ್ಟವಾಯಿತು. ಆದರೆ ಅವರು ತಮ್ಮ ಛಲವನ್ನು ಬಿಡದೆ ಬೇಸಿಗೆ ಶಿಬರಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಮುಗಿಸಿದರು.
ವೃತ್ತಿ
[ಬದಲಾಯಿಸಿ]ತ್ರಿಶಾ ಚಿತ್ರರಂಗಕ್ಕೆ ಚಿಕ್ಕ ಪತ್ರಗಳಿಂದ ಪ್ರವೆಶಿಸಿದರು. ಮೊದಲು ಪ್ರಿಯಾದರ್ಶನ್ ಅವರು ನಿರ್ದೆಶಿಸಿದ ಲೆಸ-ಲೆಸ ಎಂಬ ಚಿತ್ರದಲ್ಲಿ ಮೊದಲಿಗೆ ನಟಿಯ ಪಾತ್ರ ಮಾಡಿದರು.ಅ ಚಿತ್ರ ಒಂದು ಮಟ್ಟಕ್ಕೆ ಪ್ರಸಿದ್ದಿ ತಂದಿತ್ತು. ಅವರು ಹಲವಾರು ತಮಿಳು ಚಿತ್ರದಲ್ಲಿ ನಟಿಯಾಗಿ ಪಾತ್ರವಹಿಸಿದರು.ಇವರ ಹಲವು ಚಿತ್ರಗಳೆಂದರೆ ಸಾಮಿ,ಗಿಲ್ಲಿ,ಕುರುವಿ,ವಿನೈತಾಡಿವರುವಾಯ ಇತ್ಯಾದಿ. ಇವರು ೧೯೯೯ರಲ್ಲಿ ಮಿಸ್ ಮದ್ರಾಸ್ ಸ್ಪರ್ಧೆಯಲ್ಲಿ ವಿಜೇತರಾದರು. ಅವರು ತೆಲುಗು ಚಿತ್ರರಂಗದಲ್ಲಿ ಎಮ್. ಎಸ್ ರಾಜು ಎಂಬ ಪ್ರಣಯ ಚಿತ್ರವನ್ನು ವರ್ಶನ್ ಅವರ ಜೊತೆ ನಟಿಸಿದರೆ. ತಮಿಳಿನಲ್ಲಿ ಮಂಗತ ಎಂಬ ಚಿತ್ರವನ್ನು ಅಜಿತವರ ಜೊತೆ ನಟಿಸಿದಾರೆ.ತ್ರಿಶಾ ಅವರಿಗೆ ತೆಲುಗು ಚಿತ್ರರಂಗದಲ್ಲಿ ಸಂತೋಷನ್ ಪ್ರಶಸ್ತಿ ಲಭಿಸಿದೆ.ಅವಳು ತಮ್ಮ ಘಿಲ್ಲಿ ಚಿತ್ರವನ್ನು ವಿಜಯ್ ಯವರ ಜೊತೆ ನಟಿಸಿದಾರೆ.ಘಿಲ್ಲಿ ಚಿತ್ರದಲ್ಲಿ ಧನಲಕ್ಶ್ಮಿ ಎಂಬ ಹೆಸರಿನಲ್ಲಿ ನಟಿಸಿದಾಳೆ.ಘಿಲ್ಲಿ ಚಿತ್ರ ಪ್ರಸಿದ್ಧ ಚಿತ್ರವಾಗಿ ಹೊರ ಹೊಮಿತ್ತು.ತ್ರಿಶರವರಿಗೆ ೧೨ ಬಿಡುಗಡೆಗಳು ಇವೆ. ಇದ್ವರ ಎರಡನೆಯ ತೆಲುಗು ಸಿನಿಮಾ ನುವ್ವೊಸ್ತಾನಂಟೆ ನೇನ್ನೊದ್ದಂಟಾನ ಚಿತ್ರವು ಬಹಳ ಹೆಸರು ಮಾಡಿ ಅವರ ಕೀರ್ತಿಯನ್ನು ಮತ್ತಷ್ಟು ಮೇಲೇರಿಸಿತು. ಇವರ ಜೊತೆ ಈ ಚಿತ್ರದಲ್ಲಿ ನಾಯಕನಟನಾಗಿ ಸಿದ್ಧಾರ್ತ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಿರಿ ಎಂಬ ಪಾತ್ರವನ್ನು ಮಾಡಿದ್ದಳು. ಇದಕ್ಕೆ ಅತ್ಯುತ್ತಮ ನಟಿ ಎಂಬ ಪ್ರಶಸ್ತಿ ಸಿಕ್ಕಿದೆ. ಅವರಿಗೆ ಇದೇ ಚಿತ್ರದ ಪಾತ್ರಕ್ಕೆ ಫಿಲ್ಮ್ ಫೇರ್ ಅವಾರ್ಡ್ ಕೂಡ ದೊರೆತಿದೆ. ಈ ಚಿತ್ರವು ಪ್ರಭುದೇವರ ಮೊದಲನೆಯ ನಿರ್ದೇಶನದ ಚಿತ್ರವಾಗಿದೆ.
ಆಸಕ್ತಿ
[ಬದಲಾಯಿಸಿ]ಅವರಿಗೆ ಪ್ರಾಣಿಗಳ ಮೇಲೆ ತುಂಬಾ ಪ್ರೀತಿ.ಅವರು PETA[People for ethical treatment of animals] ನ ಗುಡ್ ವಿಲ್ ಅಂಬಾಸಿಡರ್ ಆಗಿದ್ದರೆ.ನಮ್ಮ ದೇಶದ ನಾಯಿಗಳ ಮೇಲೆ ಒಲವು ಪ್ರೀತಿ ತೋರಿಸಿ, ಅವುಗಳ ಜೀವ ಉಳಿಸುವಂತೆ ಜನರಲ್ಲಿ ವಿನಂತಿಸಿಕೊಂಡರು. ಇವರು ೨೦೧೦ರಲ್ಲಿ ಆಯೋಜಿಸಿದ Angel for animals ಎನ್ನುವ ಯೋಜನೆಯ ಗುಡ್ ವಿಲ್ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸಿದರು. ಇವರು ಫಾಂಟಾ ಕಂಪನಿಯ ರಾಯಭಾರಿಯಾಗಿ ಆಯ್ಕೆ ಆಗಿದ್ದರು. ಇವರು ಸ್ಕೂಟಿ ಪೆಪ್ಟ್ ನ ರಾಯಭಾರಿಯೂ ಆಗಿದ್ದಾರೆ. ಐ.ಟಿ.ಸಿ ಯ ವಿಲ್ಲ್ಸ್ ಸಿಗರೇಟಿನ ರಾಯಭಾರಿಯೂ ಆಗಿದ್ದಾರೆ. ಅವರು ಫೇರ್ ಎವರ್ ಫೇರ್ ನೆಸ್ ಕ್ರೀಮ್ ನ ರಾಯಭಾರಿ. ಅವರ ತಾಯಿ ತನ್ನ ಮಗಳ ಚಿತ್ರರಂಗದ ಬೆಳವಣಿಗೆಯಲ್ಲಿ ತುಂಬಾ ಸಹಕರಿಸಿದರು. ತಾಯಿ ತಮ್ಮ ಬಿಡುವಾದ ಸಮಯದಲ್ಲಿ ಮಗಳ ನಟನೆಯನ್ನು ವೀಕ್ಷಿಸಲು ತೆರಲುತ್ತಾರೆ.ಈ ಮುಖಾಂತರ ಅವಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಾರೆ. ತಾಯಿ ಮಗಳ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾಯಿ ಮತ್ತು ಮಗಳ ಬಾಂಧವ್ಯವನ್ನು ಇಡೀ ಸಿನಿಮಾರಂಗ ಮೆಚ್ಚಿ ಹೊಗಳುತ್ತದೆ. ತ್ರಿಶಾಗೆ ೨೦೧೫ರ ಜನವರಿ ೨೩ರಂದು ಚೆನ್ನೈ ನ ಉದ್ಯಮಿಯಾದ ವರುಣ್ ಜೊತೆ ನಿಶ್ಚಿತಾರ್ತವಾಯಿತು. ಕೆಲವು ಕಾರಣಾಂತರಗಳಿಂದ ಸಂಬಂಧ ಮುರಿದು ಹೋಯಿತು. ಈ ರೀತಿ ಜೀವನದಲ್ಲಿ ಮತ್ತು ಸಿನಿಮಾರಂಗದಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ ಆದರೆ ಎಲ್ಲವನ್ನು ಸಮಾನವಾಗಿ ತೆಗೆದುಕೊಂಡು ಮುಂದೆ ಸಾಗಿತ್ತಾ ಬಂದರು.
ಪ್ರಶಸ್ತಿಗಳು
[ಬದಲಾಯಿಸಿ]ಇಅರು ಬಹಳಷ್ಟು ಪ್ರಶಸ್ತಿಗಳಿಗೆ ಭಾಜನರಾಗಿದ್ದು ಅವುಗಳಲ್ಲಿ ಲೆಲವು ಹೀಗಿವೆ: ಇವರು ೮ ಬಾರಿ ದಕ್ಶಿಣ ಫಿಲ್ಮ್ ಫೆರ್ ಅವಾರ್ಡ್ಸ್ ಗೆ ನಾಮಿನಿಯಾಗಿದ್ದು ಅದರಲ್ಲಿ ೩ ಬಾರಿ ಪ್ರಶಸ್ತಿಯನು ತಮ್ಮ ಮಡಿಲಿಗೆ ಸೇರಿಸಿಕೊಂಡರು. ಇವರು ೯ ಬಾರಿ ವಿಜಯ್ ಪ್ರಶಸ್ತಿಗಳಿಗೆ ನಾಮಿನಿಯಾಗಿ ಅದರಲ್ಲಿ ಮೂರು ಬಾರಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ೨೦೧೦ರ ಸದರ್ನ್ ಸ್ಟಾರ್ ಆಫ್ ದಿ ಇಯರ್ ಎಂಬ ಪ್ರಶಸ್ತಿಗೆ ಭಜನರಾದ ಹೇಮ್ಮೆಇವರಿಗೆ. ತಮಿಳುನಾಡು ರಾಜ್ಯದ ೨೦೦೯ರ ಫಿಲ್ಮ್ ಫೆರ್ ಅವಾರ್ಡ್ಸ್ ನ ಅತ್ತ್ಯುತ್ತಮ ನಟಿಯಾಗಿ ಮಿಂಚಿದ್ದಾರೆ.[೧][೨]
ಉಲ್ಲೇಖಗಳು
[ಬದಲಾಯಿಸಿ]