ತ್ರಿಯುಗಿ ನಾರಾಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತ್ರಿಯುಗಿ ನಾರಾಯಣ ಭಾರತಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಒಂದು ಪುಣ್ಯಕ್ಷೇತ್ರ. ರುದ್ರ ಪ್ರಯಾಗದಿಂದ ಕೇದಾರನಾಥಕ್ಕೆ ಸಾಗುವ ಹೆದ್ದಾರಿಯಲ್ಲಿರುವ ಸೋನ ಪ್ರಯಾಗ ಗ್ರಾಮದಿಂದ ರಸ್ತೆಮಾರ್ಗವಾಗಿ ೧೨ ಕಿ.ಮೀ. ಮತ್ತು ಕಾಲುದಾರಿಯಲ್ಲಿ ೫ ಕಿ.ಮೀ. ದೂರದಲ್ಲಿ ತ್ರಿಯುಗಿ ನಾರಾಯಣ ಧಾಮವಿದೆ. ಪ್ರಾಚೀನ ವಿಷ್ಣು ದೇವಾಲಯ ಇಲ್ಲಿನ ಮುಖ್ಯ ಆಕರ್ಷಣೆ. ಅಲ್ಲದೆ ತ್ರಿಯುಗಿ ನಾರಾಯಣ ಶಿವ ಪಾರ್ವತಿಯರ ವಿವಾಹ ನಡೆದ ಸ್ಥಳವೆಂದು ಸಹ ನಂಬಿಕೆ. ವಿಷ್ಣು ಮಂದಿರದ ಎದುರಿಗೆ ಅನಾದಿಕಾಲದಿಂದಲೂ ಬೆಳಗುತ್ತಿರುವ ಅಗ್ನಿಯೊಂದಿದ್ದು ಇದೇ ಅಗ್ನಿಸಾಕ್ಷಿಯಾಗಿ ಶಿವನು ಪಾರ್ವತಿಯ ಪಾಣಿಗ್ರಹಣ ಮಾಡಿದನೆನ್ನಲಾಗುತ್ತದೆ. ಈ ಅಗ್ನಿಯು ಎಂದೂ ಆರದೆ ಚಿರಂತನವಾಗಿ ಉರಿಯುತ್ತಲೇ ಇರುತ್ತದೆ. ತ್ರಿಯುಗಿ ನಾರಾಯಣ ಕ್ಷೇತ್ರಕ್ಕೆ ಅತಿ ಸಮೀಪದ ರೈಲು ನಿಲ್ದಾಣವೆಂದರೆ ೨೧೬ ಕಿ.ಮೀ. ದೂರದಲ್ಲಿರುವ ರಿಷಿಕೇಶ.ಈ ಕ್ಷೇತ್ರಕ್ಕೆ ಬರುವ ಯಾತ್ರಿಕರು ಆ ಅಗ್ನಿ ಕುಂಡಕ್ಕೆ ಮರದ ತುಂಡುಗಳನ್ನು ದಾನವಾಗಿ ನೀಡುವರು.ಈ ದೇವಾಲಯದ ಅಂಗಳದಲ್ಲಿ ಒಂದು ಸಣ್ಣ ನೀರಿನ ತೊರೆಯು ಸಹ ಹರಿಯುವುದು.