ವಿಷಯಕ್ಕೆ ಹೋಗು

ತುಲಾಭಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತುಲಾದಾನದ ತಕ್ಕಡಿ

ತುಲಾಭಾರ ಅಥವಾ ತುಲಾಪುರುಷ ಅಥವಾ ತುಲಾದಾನವು ಒಂದು ಪ್ರಾಚೀನ ಭಾರತೀಯ ಸಂಪ್ರದಾಯವಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿಯನ್ನು (ಚಿನ್ನ, ಧಾನ್ಯ, ಹಣ್ಣುಗಳು ಅಥವಾ ಇತರ ವಸ್ತುಗಳಂತಹ) ಒಂದು ದ್ರವ್ಯವನ್ನು ಬಳಸಿ ತೂಕ ಮಾಡಲಾಗುತ್ತದೆ, ಮತ್ತು ತೂಕಕ್ಕೆ ಸಮನಾದ ಆ ದ್ರವ್ಯವನ್ನು ಕಾಣಿಕೆಯಾಗಿ ನೀಡಲಾಗುತ್ತದೆ. ಪ್ರಾಚೀನ ಪಠ್ಯಗಳಲ್ಲಿ ತುಲಾಭಾರವನ್ನು ಹದಿನಾರು ಶ್ರೇಷ್ಠ ಕಾಣಿಕೆಗಳಲ್ಲಿ ಒಂದು ಎಂದು ಹೇಳಲಾಗಿದೆ. ಇದನ್ನು ಭಾರತದ ಹಲವಾರು ಭಾಗಗಳಲ್ಲಿ ಮಾಡಲಾಗುತ್ತದೆ.

ವಿವರಣೆ

[ಬದಲಾಯಿಸಿ]

ಮತ್ಸ್ಯ ಪುರಾಣವು ತುಲಾಪುರುಷ ಸಮಾರಂಭಕ್ಕೆ ಬೇಕಾದ ಹಲವು ಅಗತ್ಯಗಳನ್ನು ಒದಗಿಸುತ್ತದೆ. ಇದರಲ್ಲಿ ಸಮಾರಂಭಕ್ಕೆ ಬೇಕಾದ ಮಂಟಪವನ್ನು ನಿರ್ಮಿಸುವ ಆದೇಶಗಳು ಸೇರಿವೆ. ತಕ್ಕಡಿಯು (ತುಲಾ) ಒಂದೇ ತರಹದ ಕಟ್ಟಿಗೆಯಿಂದ ತಯಾರಿಸಲಾದ ಎರಡು ಕಂಬಗಳು ಹಾಗೂ ಅಡ್ಡತೊಲೆಯನ್ನು ಹೊಂದಿರಬೇಕು, ಮತ್ತು ಚಿನ್ನದಿಂದ ಅಲಂಕರಿಸಲ್ಪಟ್ಟಿರಬೇಕು ಎಂದು ಇದು ಹೇಳುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Annette Schmiedchen 2006, p. 146.


"https://kn.wikipedia.org/w/index.php?title=ತುಲಾಭಾರ&oldid=914518" ಇಂದ ಪಡೆಯಲ್ಪಟ್ಟಿದೆ