ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ
ವಿಜಯಪುರ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ೧.೩೦ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಯಾದಗಿದೆ.
ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಹತ್ತಿರ ನಿರ್ಮಿಸಲಾಗಿರುವ ಇಂಟೆಕ್ ಕಾಲುವೆ, ಪಂಪ್ ಹೌಸ್, ವಿದ್ಯುತ್ ಸ್ಥಾವರಗಳು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಒಟ್ಟು ೩೫೭೨ ಕೋಟಿ ರೂ.ಗಳ ಮಾರ್ಪಾಡಿತ ಯೋಜನಾ ವರದಿಗೆ ಈಗಾಗಲೇ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಈ ಯೋಜನೆಯಡಿ ೬.೩೦ ಟಿ.ಎಂ.ಸಿ. ನೀರು ಬಳಸಿಕೊಂಡು ವಿಜಯಪುರ ಜಿಲ್ಲೆಯ ೨೮, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ೮ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ೪ ಗ್ರಾಮಗಳ ಒಟ್ಟು ೧,೩೦,೨೨೫ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.
ಈ ಯೋಜನೆಯಡಿ ಫೇಸ್-೧ ಹೆಡ್‍ವರ್ಕ್ ಕಾಮಗಾರಿಗಳಡಿ ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಹತ್ತಿರ ಇಂಟೆಕ್ ಕಾಲುವೆ, ಪಂಪ್ ಹೌಸ್ ಹಾಗೂ ವಿದ್ಯುತ್ ಸ್ಥಾವರಗಳ ಕಾಮಗಾರಿಗಳು ಪೂರ್ಣಗೊಂಡಿವೆ. ಅದರಂತೆ ಈ ಯೋಜನೆಯಡಿಯ ಡೆಲಿವರಿ ಚೇಂಬರ್ ೧ ಹಾಗೂ ಡೆಲಿವರಿ ಚೇಂಬರ್ ೨ ರ ಕಾಮಗಾರಿಗಳು ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.
ನಿರಂತರ ಪ್ರಯತ್ನದ ಫಲವಾಗಿ ಹಲವಾರು ಕಾಮಗಾರಿಗಳು ಪೂರ್ಣಗೊಂಡಿವೆ. ಏರು ಕೊಳವೆ ಮಾರ್ಗ ೨೧.೮೪ ಕಿ.ಮೀ. ಗುರುತ್ವಾಕರ್ಷಣೆ ಕೊಳವೆ ಮಾರ್ಗ ೧೪.೭೬ ಕಿ.ಮೀ. ಸಹ ಪೂರ್ಣಗೊಳಿಸಲಾಗಿದೆ. ೨೨೦ ಕೆವ್ಹಿ ವಿದ್ಯುತ್ ಮಾರ್ಗ, ೩೧.೭೭ ಕಿ.ಮೀ. ೨೨೦ ಕೆವ್ಹಿ ವಜ್ರಮಟ್ಟಿ ವಿದ್ಯುತ್ ಸ್ಥಾವರದಿಂದ ಪ್ರಾರಂಭವಾಗಿ ಕವಟಗಿ ಗ್ರಾಮದ ಪಂಪ್ ಹೌಸ್ ಹತ್ತಿರ ೨೨೦ ಕೆವ್ಹಿ ಸ್ಥಾವರದ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಗೊಂಡಿವೆ. ಈ ಯೋಜನೆಯಡಿ ೧೬೫೦೦ ಹೆಚ್ ಪಿ ಸಾಮಥ್ರ್ಯದ ೫ ಫಂಥ ಹಾಗೂ ಮೋಟಾರ್‍ಗಳ ಅಳವಡಿಕೆ ಪ್ರಗತಿಯಲ್ಲಿದೆ. ಎರಡು ಪಂಪ್ ಹಾಗೂ ಮೋಟರ್‍ಗಳ ಅಳವಡಿಕೆ ಪೂರ್ಣಗೊಂಡಿವೆ.
ಈ ಯೋಜನೆಯಡಿಯ ಇತರೆ ಎಲ್ಲ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕಾಮಗಾರಿ ಭರದಿಂದ ಸಾಗಿದ್ದು, ಈ ಯೋಜನೆ ಪೂರ್ಣಗೊಂಡಲ್ಲಿ ಈ ಯೋಜನಾ ವ್ಯಾಪ್ತಿಗೆ ಬರುವ ಗ್ರಾಮಗಳು ಹಾಗೂ ಪ್ರದೇಶವು, ಮಹಾರಾಷ್ಟ್ರದ ಪುಣೆ, ಬಾರಾಮತಿ, ನಾಸಿಕಗಳಿಗಿಂತಲೂ ಅಧಿಕ ಪ್ರಸಿದ್ಧಿ ಪಡೆಯಲಿದೆ. ಅತಿ ಎತ್ತರದ ತಿಕೋಟಾ ಹೋಬಳಿ ಮಟ್ಟದಲ್ಲಿ ಜಾರಿಯಾಗಿರುವ ರಾಷ್ಟ್ರ ಮಟ್ಟದಲ್ಲಿಯೇ ಏಕೈಕ ಯೋಜನೆ ಇದಾಗಿದೆ.