ತೀಸ್ತಾ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೀಸ್ತಾ ನದಿಯು ಪೂರ್ವ ಹಿಮಾಲಯದಲ್ಲಿ ಹುಟ್ಟುವ ೩೧೫ ಕಿ.ಮಿ. ಉದ್ದದ ನದಿಯಾಗಿದೆ. ಇದು ಭಾರತೀಯ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಪ್ರವೇಶಿಸುತ್ತದೆ.[೧] ಇದು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ನಡುವಿನ ಗಡಿರೇಖೆಯನ್ನು ರೂಪಿಸುತ್ತದೆ.

ಅದರ ಮಾರ್ಗದಲ್ಲಿ, ತೀಸ್ತಾ ನದಿಯು ಸಿಕ್ಕಿಮ್‍ನಲ್ಲಿ ಕಮರಿಗಳು ಮತ್ತು ಕೊರಕಲುಗಳನ್ನು ಕೊರೆದಿದೆ. ಕಾಲಿಂಪಾಂಗ್ ಗಿರಿಧಾಮವು ನದಿಯ ಪಕ್ಕದಲ್ಲಿ ಸ್ಥಿತವಾಗಿದೆ. ಈ ಮಾರ್ಗದುದ್ದಕ್ಕೆ ವೈವಿಧ್ಯಮಯ ಸಸ್ಯಗಳನ್ನು ಕಾಣಬಹುದು. ಕಡಿಮೆ ಎತ್ತರದ ಸ್ಥಳಗಳಲ್ಲಿ, ಉಷ್ಣವಲಯದ ಪರ್ಣಪಾತಿ ಮರಗಳು ಮತ್ತು ಪೊದರುಗಳು ಸುತ್ತಲಿನ ಗುಡ್ಡಗಳನ್ನು ಆವರಿಸುತ್ತವೆ; ಹೆಚ್ಚು ಎತ್ತರದ ಸ್ಥಳಗಳಲ್ಲಿ ಉನ್ನತ ಪರ್ವತ ಪ್ರದೇಶದ ಸಸ್ಯಗಳು ಕಂಡುಬರುತ್ತವೆ. ನದಿಯ ನೀರಿನಲ್ಲಿ ಮತ್ತು ಸುತ್ತಲು ಇರುವ ದೊಡ್ಡ ಬಂಡೆಗಳ ಕಾರಣ ಇದು ರಾಫ್ಟಿಂಗ್ ಉತ್ಸಾಹಿಗಳಿಗೆ ಅತಿ ಯೋಗ್ಯವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Mullick, M. R. A.; Babel, M. S.; Perret, S. R. (2011). "Discharge‐based economic valuation of irrigation water: Evidence from the Teesta River, Bangladesh". Irrigation and Drainage. 60 (4): 481−492. doi:10.1002/ird.597. {{cite journal}}: Unknown parameter |lastauthoramp= ignored (help)

ಹೊರಗಿನ ಕೊಂಡಿಗಳು[ಬದಲಾಯಿಸಿ]