ವಿಷಯಕ್ಕೆ ಹೋಗು

ತೀರಥ್‍ಗಢ್ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೀರಥ್‍ಗಢ್ ಜಲಪಾತವು ಭಾರತದ ಛತ್ತೀಸ್‌ಘಡ್ ರಾಜ್ಯದ ಬಸ್ತರ್ ಜಿಲ್ಲೆಯಲ್ಲಿನ ಕಾಂಗೇರ್ ಘಾಟಿಯ ಜಗದಾಲ್ಪುರ್ ಹತ್ತಿರವಿರುವ ಜಲಪಾತವಾಗಿದೆ.

ಜಲಪಾತ

[ಬದಲಾಯಿಸಿ]

ತೀರಥ್‍ಗಢ್ ಜಲಪಾತವು ಕಾಂಗೇರ್ ನದಿಯಲ್ಲಿ ರೂಪಗೊಂಡ ಖಂಡ ಪ್ರಕಾರದ ಜಲಪಾತವಾಗಿದೆ. ನೀರು ಒಂದೇ ಪಾತದಲ್ಲಿ ೯೧ ಮೀಟರ್‌ಗಳಷ್ಟು (೨೯೯ ಅಡಿ) ಧುಮುಕುತ್ತದೆ.[]

ಇದು ಜಗ್ದಾಲ್‍ಪುರದ ನೈಋತ್ಯಕ್ಕೆ ೩೫ ಕಿ.ಮಿ. (೨೨ ಮೈಲಿ) ದೂರದಲ್ಲಿದೆ. ಜಗದಾಲ್ಪುರ್‌ನ್ನು ಸುಕ್ಮಾಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹತ್ತಿರದ ದರ್ಭಾದಿಂದ ಈ ಜಲಪಾತವನ್ನು ಸಮೀಪಿಸಬಹುದು. ತೀರಥ್‍ಗಢ್ ಮತ್ತು ಕುಟುಮ್‍ಸಾರ್‌ಗೆ ಭೇಟಿಕೊಡಲು ದರ್ಭಾ ಜಂಕ್ಷನ್‍ನಿಂದ ಜೀಪ್‍ನಲ್ಲಿ ಪ್ರಯಾಣಿಸಬೇಕಾಗುತ್ತದೆ. ಕುಟುಮ್‍ಸಾರ್ ಗುಹೆಗಳು ಮತ್ತು ಕೈಲಾಶ್ ಗುಹೆ ಹತ್ತಿರದ ಆಕರ್ಷಣೆಗಳಿವೆ. ಇದು ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನದಲ್ಲಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Teerathgarh Falls". World Waterfall Database. Archived from the original on 2010-12-02. Retrieved 2010-07-04.

ಹೊರಗಿನ ಕೊಂಡಿಗಳು

[ಬದಲಾಯಿಸಿ]