ತೀರಥ್‍ಗಢ್ ಜಲಪಾತ
ಗೋಚರ
ತೀರಥ್‍ಗಢ್ ಜಲಪಾತವು ಭಾರತದ ಛತ್ತೀಸ್‌ಘಡ್ ರಾಜ್ಯದ ಬಸ್ತರ್ ಜಿಲ್ಲೆಯಲ್ಲಿನ ಕಾಂಗೇರ್ ಘಾಟಿಯ ಜಗದಾಲ್ಪುರ್ ಹತ್ತಿರವಿರುವ ಜಲಪಾತವಾಗಿದೆ.
ಜಲಪಾತ
[ಬದಲಾಯಿಸಿ]ತೀರಥ್‍ಗಢ್ ಜಲಪಾತವು ಕಾಂಗೇರ್ ನದಿಯಲ್ಲಿ ರೂಪಗೊಂಡ ಖಂಡ ಪ್ರಕಾರದ ಜಲಪಾತವಾಗಿದೆ. ನೀರು ಒಂದೇ ಪಾತದಲ್ಲಿ ೯೧ ಮೀಟರ್‌ಗಳಷ್ಟು (೨೯೯ ಅಡಿ) ಧುಮುಕುತ್ತದೆ.[೧]
ಸ್ಥಳ
[ಬದಲಾಯಿಸಿ]ಇದು ಜಗ್ದಾಲ್‍ಪುರದ ನೈಋತ್ಯಕ್ಕೆ ೩೫ ಕಿ.ಮಿ. (೨೨ ಮೈಲಿ) ದೂರದಲ್ಲಿದೆ. ಜಗದಾಲ್ಪುರ್‌ನ್ನು ಸುಕ್ಮಾಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹತ್ತಿರದ ದರ್ಭಾದಿಂದ ಈ ಜಲಪಾತವನ್ನು ಸಮೀಪಿಸಬಹುದು. ತೀರಥ್‍ಗಢ್ ಮತ್ತು ಕುಟುಮ್‍ಸಾರ್‌ಗೆ ಭೇಟಿಕೊಡಲು ದರ್ಭಾ ಜಂಕ್ಷನ್‍ನಿಂದ ಜೀಪ್‍ನಲ್ಲಿ ಪ್ರಯಾಣಿಸಬೇಕಾಗುತ್ತದೆ. ಕುಟುಮ್‍ಸಾರ್ ಗುಹೆಗಳು ಮತ್ತು ಕೈಲಾಶ್ ಗುಹೆ ಹತ್ತಿರದ ಆಕರ್ಷಣೆಗಳಿವೆ. ಇದು ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನದಲ್ಲಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Teerathgarh Falls". World Waterfall Database. Archived from the original on 2010-12-02. Retrieved 2010-07-04.