ತೀಯೊಡೋರ್ ಫಿಲಿಪ್ ಟಾಯೆನ್ಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೀಯೊಡೋರ್ ಫಿಲಿಪ್ ಟಾಯೆನ್ಬಿ -1916-1981. ಇಂಗ್ಲೆಂಡಿನ ಪ್ರಖ್ಯಾತ ಕಾದಂಬರಿಕಾರ.

ಬದುಕು ಮತ್ತು ಬರಹ[ಬದಲಾಯಿಸಿ]

ತಂದೆ ಆರ್ನಲ್ಡ್ ಟಾಯ್‍ನ್‍ಬಿ. ಹುಟ್ಟಿದ್ದು ಆಕ್ಸ್‍ಫರ್ಡ್‍ನಲ್ಲಿ. ರಗ್ಬಿ ಮತ್ತು ಕ್ರೈಸ್ತ್ ಚರ್ಚ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ. 1937ರಲ್ಲಿ ಸ್ಯಾವೇಚ್ ಡೇಸ್ ಎಂಬ ಕಾದಂಬರಿಯನ್ನು ಪ್ರಕಟಿಸಿದ. ಕಮ್ಯೂನಿಸ್ಟ್ ಪಕ್ಷದ ಸದಸ್ಯನಾದ. ಯೂನಿಯನ್ನಿನ ಕಮ್ಯೂನಿಸ್ಟ್ ಅಧ್ಯಕ್ಷನಾದ. ಆದರೆ 1939ರ ವೇಳೆಗೆ ಕಮ್ಯೂನಿಸ್ಟ್ ಸಿದ್ಧಾಂತದಿಂದ ದೂರ ಸರಿದ. 1939ರ ಅನಂತರ ಜನಸಾಮಾನ್ಯರ ಪಕ್ಷವಾಗಿದ್ದ ಲೇಬರ್ ಪಾರ್ಟಿಗೆ ತನ್ನ ಬೆಂಬಲವನ್ನು ನೀಡುತ್ತ ಬಂದ. ಎರಡನೆಯ ಮಹಾಯುದ್ಧ ಆರಂಭವಾದಾಗ ಸೈನ್ಯಕ್ಕೆ ಸೇರಿದ. ಯುದ್ಧ ಮುಗಿದಮೇಲೆ ಅಬ್ಸರ್‍ವರ್ ಎಂಬ ಪತ್ರಿಕಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡ. ಎರಡನೆಯ ಮಹಾಯುದ್ಧದ ಕಾಲದಲ್ಲೂ ಮತ್ತು ಅನಂತರವೂ ಅನೇಕ ಕಾದಂಬರಿಗಳನ್ನು ಬರೆದ. ಅವುಗಳಲ್ಲಿ ಮುಖ್ಯವಾದವು ಸ್ಕೂಲ್ ಇನ್ ಪ್ರೈವೇಟ್ (1941), ದಿ ಬ್ಯಾರಿಕೇಡ್ಸ್ (1944), ಟೀ ವಿತ್ ಮಿಸೆಸ್ ಗುಡ್‍ಮನ್ (1947) ಮತ್ತು ದಿ ಗಾರ್ಡನ್ ಟು ದಿ ಸಿ (1953). 1954ರಲ್ಲಿ ಹೊರಬಂದ ಫ್ರೆಂಡ್ಸ್ ಅಪಾರ್ಟ್‍ನಲ್ಲಿ ಯುದ್ಧದಲ್ಲಿ ಮಡಿದ ಇಬ್ಬರು ಸ್ನೇಹಿತರ ಜೀವನ ಚಿತ್ರವಿದೆ. ಇವನು ರಚಿಸಿದ ಕಾದಂಬರಿಗಳಲ್ಲಿ ಜನಸಾಮಾನ್ಯರ ಆಸೆ, ಆಕಾಂಕ್ಷೆಗಳ ನೈಜರೂಪವನ್ನು ನೋಡಬಹುದು. ಇವನ ಶೈಲಿ ಆಕರ್ಷಕವಾಗಿಯೂ ಸರಳವಾಗಿಯೂ ಇದೆ.