ತಾಪಮಾಪಕ

ವಿಕಿಪೀಡಿಯ ಇಂದ
Jump to navigation Jump to search

ತಾಪಮಾಪಕ(ಉಷ್ಣತಾಮಾಪಕ)[ಬದಲಾಯಿಸಿ]

ಗರಿಷ್ಠ-ಕನಿಷ್ಠ ತಾಪಮಾಪಕ
Kwikthermometers

ತಾಪಮಾಪಕವು [೧]ನ್ನು ಅಥವಾ [೨]ಅಳೆಯುವ ಸಾಧನವಾಗಿದೆ. ಒಂದು ತಾಪಮಾಪಕವು ಎರಡು ಭಾಗಗಳನ್ನು ಒಳಗೊಂಡಿದೆ; ೧)ತಾಪದ ಸಂವೇದಕ (ಉದಾ: ಗಾಜಿನ ತಾಪಮಾಪಕದ ಬಲ್ಬನಲ್ಲಿರುವ ಪಾದರಸ)ದಲ್ಲಿ ಉಷ್ಠತೆಯಿಂದ ಉಂಟಾಗುವ ಭೌತಿಕ ಬದಲಾವಣೆ ಮತ್ತು ೨)ಈ ಭೌತಿಕ ಬದಲಾವಣೆಯನ್ನು ಅಳೆಯಲು ಬಳಸಬಹುದಾದ ಯಾವುದಾದರು ಒಂದು ಅಳತೆ ಮಾಪನ (ಉದಾ:ಗಾಜಿನ ತಾಪಮಾಪಕದಲ್ಲಿರುವ ದೃಷ್ಠಿಗೆ ಕಾಣ ಸಿಗುವ ಅಳತೆ ಪಟ್ಟಿ). ತಾಪಮಾಪಕಗಳು ಹಲವಾರು ತತ್ವಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ಅವುಗಳಲ್ಲಿ ಪ್ರಮುಖವಾಗಿ ತಾಪದಿಂದ ಘನ ಮತ್ತು ದ್ರವ ವಸ್ತುಗಳು [೩] ಹೊಂದುವುದು ಅಥವಾ ಅನಿಲ ವಸ್ತುಗಳ ಕಾಯಿಸುವಿಕೆ ಅಥವಾ ತಂಪುಗೊಳಿಸುವಿಕೆ ಮೇಲೆ ಒತ್ತಡ ಹೇರುವಿಕೆಯಿಂದಾಗುವ ಬದಲಾವಣೆಯನ್ನು ಒಳಗೊಂಡಿದೆ.ವಿಕಿರಣ ರೀತಿಯ ತಾಪಮಾಪಕಗಳು ವಸ್ತುಗಳಿಂದ ಹೊರಹೊಮ್ಮುವ ಅವಕೆಂಪು ಕಿರಣಗಳನ್ನು,ಆ ವಸ್ತುಗಳನ್ನು ಮುಟ್ಟದೇ ತಾಪವನ್ನು ಅಳೆಯುತ್ತವೆ. ತಾಪಮಾಪಕಗಳನ್ನು ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚಾಗಿ ಹಲವಾರು ಪ್ರಕ್ರಿಯೆಗಳನ್ನು ಬದಲಾವಣೆ ಮಾಡಲು ಅಥವಾ ನಿಯಂತ್ರಿಸಲು ಬಳಸಲಾಗುತ್ತದೆ.ಹಾಗೂ ಹವಾಮಾನದ ಅಧ್ಯಯನ,ಔಷಧೀಗಳ ಕ್ಷೇತ್ರಗಳಲ್ಲಿ, ವೈಜ್ಞಾನಿಕ ಅನ್ವೇಷಣೆಯಲ್ಲಿ ಬಳಸಲಾಗುತ್ತಿದೆ. ಕೆಲವು ತಾಪಮಾಪಕಗಳು ಕಾರ್ಯನಿರ್ವಹಿಸುವ ತತ್ವಗಳು ಗ್ರೀಕ್ ತತ್ವಜ್ಞಾನಿಗಳಿಗೆ ೨೦೦೦ ವರ್ಷಗಳ ಹಿಂದಿನಿಂದಲು ತಿಳಿದಿತ್ತು. ೧೮ ಶತಮಾನದ ಹೊತ್ತಿಗೆ ಬೇರೆ ಬೇರೆ ತಾಪಮಾಪಕಗಳ ಅಳೆಯುವಿಕೆಯನ್ನು ಪ್ರಮಾಣೀಕೃತ ಮಾಪಕಗಳಿಂದ ತಿಳಿಯಲು ಸಾಧ್ಯವಾಯಿತು.

ಉಷ್ಣತೆ[ಬದಲಾಯಿಸಿ]

ಒಂದು ಪ್ರತ್ಯೇಕ ಉಷ್ಣತಾಮಾಪಕವು ಬಿಸಿಯ ಮಟ್ಟವನ್ನು ಅಳೆಯುತ್ತದೆ, ಎರಡು ತಾಪಮಾಪಕಗಳ ಅಳತೆಯನ್ನು ಒಂದು ಪ್ರಮಾಣೀಕೃತ ಅಳತೆಗೆ ಒರೆ ಹಚ್ಚಿದಾಗ ಮಾತ್ರ ಅವುಗಳನ್ನು ಹೋಲಿಸಲು ಸಾಧ್ಯವಾಗುತ್ತದೆ. ಇಂದು ಸಂಪೂರ್ಣ ಉಷ್ಣಗತಿವಿಜ್ಞಾನ ಅಳತೆ ಮಾಪನವಿದೆ. ಅಂತರರಾಷ್ಟ್ರೀಯವಾಗಿ ಒಪ್ಪಬಲ್ಲ ಅಳತೆ ಮಾಪನಗಳನ್ನು, ತಾಪಮಾಪಕಗಳ ಅಂತರ ಧ್ರುವಗಳ ಮತ್ತು ಸ್ಥಿರಬಿಂದುಗಳ ನಡುವೆ ಅತೀ ಸಮೀಪದಲ್ಲಿ ಹೋಲಿಸಬಹುದಾಗಿದೆ. ಇತ್ತೀಚಿನ ಅಂತರ ರಾಷ್ಟ್ರೀಯ ತಾಪಮಾಪನದ ಪ್ರಮಾಣೀಕೃತ ಮಾಪನವನ್ನು ೧೯೯೦ ರಲ್ಲಿ ಒಪ್ಪಲಾಯಿತು. ಅದು 0.65 K (−272.5 °C; −458.5 °F) ರಿಂದ 1,358 K (1,085 °C; 1,985 °F)ವರೆಗೆ ಅಂದಾಜಾಗಿರುತ್ತದೆ..

ತಾಪಮಾಪಕಗಳು ಬೆಳೆದುಬಂದ ದಾರಿ[ಬದಲಾಯಿಸಿ]

ಹಲವಾರು ಸಂಶೋಧಕರು ತಾಪಮಾಪಕಗಳ ಅಣ್ವೇಷಣೆಗೆ ಕಾಣಿಕೆ ನೀಡಿದ್ದಾರೆ, ಗೆಲಿಲಿಯೋ ಗೆಲಿಲಿ, ಕಾರ್ನೇಲಿಸ್ ಡೆಬೆಲ್, ರಾಬರ್ಟ ಫ್ಲಡ್ ಪ್ರಮುಖರಾಗಿದ್ದಾರೆ. ತಾಪಮಾಪಕ ಒಂದು ಪ್ರತ್ಯೇಕ ಅನ್ವೇಷಣೆಯಲ್ಲ ಅದೊಂದು ಬೆಳವಣಿಗೆಯಾಗಿದೆ. ಬೈಜೆಂಟಿಯಂನ ಫಿಲೋ ಇಂಜಿನಿಯರ್ ಮತ್ತು ಅಲೆಕ್ಸಾಂಡ್ರಿಯಾದ ನಾಯಕ ಗ್ರೀಕ್ ನ ಗಣಿತಜ್ಞರು ಒಂದು ಧಾರಕದಲ್ಲಿರುವ ನೀರು ಹೇಗೆ ವಿಕಸಿಸುತ್ತದೆ ಮತ್ತು ಸಂಕುಚಿತಗೊಳ್ಳುತ್ತದೆ ಎಂಬುದರ ಹಿಂದಿನ ತತ್ವವನ್ನು ತಿಳಿದಿದ್ದರು[೪]. ಒಂದು ಕೊಳವೆಯಲ್ಲಿ ಪ್ರವಹರಿಸುವ ದ್ರವ ಅಥವಾ ಅನಿಲಗಳು ಅವುಗಳ ಸಂಕುಚನ ಅಥವಾ ವಿಕಸನದಿಂದ ಸಾದ್ಯವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ತಾಪಮಾಪಕ&oldid=742483" ಇಂದ ಪಡೆಯಲ್ಪಟ್ಟಿದೆ