ವಿಷಯಕ್ಕೆ ಹೋಗು

ತಾಂತ್ರಿಕ ಲೇಖಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾಂತ್ರಿಕ ಲೇಖನಗಳಲ್ಲಿ ತೊಡಗಿಸಿಕೊಂಡು, ತಾಂತ್ರಿಕ ಮಾಹಿತಿ ಮತ್ತು ದಾಖಲೆಗಳನ್ನು ತಯಾರಿಸುವ ವೃತ್ತಿಪರ ಲೇಖಕರನ್ನು ತಾಂತ್ರಿಕ ಲೇಖಕ ರು ಅಥವಾ ತಾಂತ್ರಿಕ ಸಂವಾಹಕ ರು [] ಎಂದೂ ಕರೆಯಲಾಗುತ್ತದೆ. ವೈಜ್ಞಾನಿಕ ಮತ್ತು ತಾಂತ್ರಿಕ ಸಂವಹನಕಾರರ ಸಂಸ್ಥೆಯು ವ್ಯಾಖ್ಯಾನಿಸಿದಂತೆ, ಬಳಕೆದಾರರಿಗೆ ಸಹಾಯವಾಗುವಂತಹ ಮಾಹಿತಿಯನ್ನು ಸಿದ್ಧಪಡಿಸುವುದು ತಾಂತ್ರಿಕ ಲೇಖನ ವೃತ್ತಿಯ ಉದ್ದೇಶ.[] ತಾಂತ್ರಿಕ ಮಾಹಿತಿ-ದಾಖಲಾತಿಯಲ್ಲಿ ಆನ್‌ಲೈನ್ ಸಹಾಯ, ಬಳಕೆದಾರ ಕೈಪಿಡಿಗಳು, ಶ್ವೇತ ಪತ್ರಗಳು, ವಿನ್ಯಾಸ ವಿಧಾನಗಳು, ವ್ಯವಸ್ಥಾ ಕೈಪಿಡಿಗಳು, ಯೋಜನಾ ರೂಪುರೇಖೆಗಳು, ಪ್ರಯೋಗ ರೂಪುರೇಖೆಗಳು ಇತ್ಯಾದಿಗಳು ಒಳಗೊಂಡಿವೆ. ಕರ್ಟ್‌ ವೊನಗಟ್‌ ತಾಂತ್ರಿಕ ಲೇಖಕರನ್ನು ವಿವರಿಸಿದ್ದು ಹೀಗೆ:[]

"... ತಮ್ಮ ಬರವಣಿಗೆಯಲ್ಲಿ ತಮ್ಮಬಗ್ಗೆ ಏನ್ನೂ ಬಹಿರಂಗಪಡಿಸದಿರುವಲ್ಲಿ ತರಬೇತಿ ಪಡೆದಿರುವರು. ಇದರಿಂದಾಗಿ, ಲೇಖಕರ ಪ್ರಪಂಚದಲ್ಲಿ ಇವರು (ತಾಂತ್ರಿಕ ಲೇಖಕರು) ವಿಚಿತ್ರರೆನಿಸುತ್ತಾರೆ, ಏಕೆಂದರೆ ಪ್ರಪಂಚದಲ್ಲಿ ಶ್ಯಾಯಿಯಲ್ಲಿ ತೊಯ್ದ ಉಳಿದ ಎಲ್ಲಾ ಲೇಖಕರು ತಮ್ಮ ಬಗ್ಗೆ ಬಹಳಷ್ಟು ಬಹಿರಂಗಪಡಿಸುವವರಿದ್ದಾರೆ. "

ಶಿಲ್ಪಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಇತರೆ ವೃತ್ತಿಪರರು ಸಹ ತಾಂತ್ರಿಕ ಲೇಖನಗಳನ್ನು ಬರೆಯಬಹುದು. ಆದರೂ, ಅವರು ನಂತರ ಅದನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ, ಲೇಖನದ ಗುಣಮಟ್ಟ ಪರೀಕ್ಷಿಸಿ, ಕರಡು ಪ್ರತಿ ತಿದ್ದಲು, ಅಚ್ಚುಕಟ್ಟಾಗಿ ಮಾಡಿಕೊಡಲೆಂದು ಅನುಭವಿ ತಾಂತ್ರಿಕ ಲೇಖಕರಿಗೆ ರವಾನಿಸುತ್ತಾರೆ. ತಾಂತ್ರಿಕ ಲೇಖಕರು ತಾಂತ್ರಿಕ, ವ್ಯಾವಹಾರಿಕ ಹಾಗೂ ಗ್ರಾಹಕ ವೃಂದದವರಿಗಾಗಿ ತಾಂತ್ರಿಕ ದಾಖಲೆಗಳನ್ನು ರಚಿಸಿಕೊಡುತ್ತಾರೆ.

ಕೌಶಲ್ಯಸಂಕಲನ

[ಬದಲಾಯಿಸಿ]

ತಾಂತ್ರಿಕ ಲೇಖಕರು ವಿಷಯದಲ್ಲಿ ವಿಸ್ತೃತ ಸಂಶೋಧನೆ, ಭಾಷಾ ಹಾಗೂ ಲೇಖನ ಕೌಶಲ್ಯಗಳ ಜೊತೆಗೆ, ಕೆಳಕಂಡ ವಿಷಯಗಳಲ್ಲಿಯೂ ಸಹ ಪರಿಣತಿ ಹೊಂದಿರುತ್ತಾರೆ:

  • ಮಾಹಿತಿ ವಿನ್ಯಾಸ
  • ಮಾಹಿತಿ ರಚನೆ
  • ತರಬೇತಿ ಸಾಧನಗಳ ಅಭಿವೃದ್ಧಿ
  • ಸಚಿತ್ರ / ಗ್ರಾಫಿಕ್ ವಿನ್ಯಾಸ
  • ಅಂತರಜಾಲತಾಣದ ವಿನ್ಯಾಸ ಮತ್ತು ನಿರ್ವಹಣೆ
  • ಬಳಕೆದಾರ ಅಂತರಸಂಪರ್ಕಗಳು
  • ವ್ಯವಹಾರ ವಿಶ್ಲೇಷಣೆ

ತಾಂತ್ರಿಕ ಲೇಖನವು ನಿರ್ದಿಷ್ಟ ಓದುಗರಿಗೆ ವಿವರಿಸಲು ಅಗತ್ಯವೆನಿಸುವ ಯಾವುದೇ ವಿಷಯದ ಬಗೆಯಾಗಿರಬಹುದು. ವಿಷಯವು ತಾಂತ್ರಿಕ ವಿಷಯವಾಗಿರಬಹುದು ಅಥವಾ ಗ್ರಾಹಕರಿಗೆ ನೀಡಲಾಗುವ ಸರಳ ಮಾಹಿತಿಯಂತಹ ಸಾಮಾನ್ಯ ವಿಷಯವಾಗೂ ಇರಬಹುದು. ತಾಂತ್ರಿಕ ಲೇಖಕರು ಸಾಮಾನ್ಯವಾಗಿ ತಾವು ಬರೆಯಬೇಕಾದ ವಿಷಯದಲ್ಲಿ ಪರಿಣತರಾಗಿರುವುದಿಲ್ಲ. ಆದರೆ ಅವರು ನಿಖರ, ವ್ಯಾಪಕವಾದ ದಾಖಲೆಗಳನ್ನು ರಚಿಸುವ ಸಲುವಾಗಿ, ವಿಷಯ ಪರಿಣತರೊಂದಿಗೆ ಚರ್ಚೆ ನಡೆಸಿ ಮಾಹಿತಿ ಕಲೆಹಾಕುವ ಕೌಶಲ್ಯ ಹೊಂದಿರುತ್ತಾರೆ. ತಾಂತ್ರಿಕ ಲೇಖಕರನ್ನು ಉದ್ದಿಮೆಗಳು, ಸರ್ಕಾರಗಳು ಮತ್ತು ಇತರೆ ಸಂಸ್ಥೆಗಳು ನೇಮಿಸಿಕೊಳ್ಳುವುದು ನಿರ್ದಿಷ್ಟ ವಿಷಯದಲ್ಲಿ ಪರಿಣತಿಗಾಗಿ ಅಲ್ಲ; ಬದಲಿಗೆ ಅವರಲ್ಲಿರುವ ತಾಂತ್ರಿಕ ಮಾಹಿತಿ ರಚನಾ ಕ್ಷಮತೆ ಹಾಗೂ ಮಾಹಿತಿ ಸಂಗ್ರಹಿಸಿ ಸಮರ್ಪಕವಾದ ತಾಂತ್ರಿಕ ಲೇಖನ ಸಿದ್ಧಪಡಿಸುವ ಕ್ಷಮತೆಗಾಗಿ.

ಉತ್ತಮ ತಾಂತ್ರಿಕ ಲೇಖಕರು, ನಿಖರ ಸಂಪೂರ್ಣ, ಅಸಂದಿಗ್ಧ, ಮತ್ತು ಆದಷ್ಟು ಸಂಕ್ಷಿಪ್ತವಾಗಿರುವ ಲೇಖನವನ್ನು ಸಿದ್ಧಪಡಿಸುತ್ತಾರೆ. ತಾಂತ್ರಿಕ ಲೇಖಕರು ಮುದ್ರಿತ, ಅಂತರಜಾಲ-ಆಧಾರಿತ ಅಥವಾ ಇತರೆ ವಿದ್ಯುನ್ಮಾನ ರೂಪದಲ್ಲಿ ಲೇಖನವನ್ನು ರಚಿಸುತ್ತಾರೆ.

ಗುಣಲಕ್ಷಣಗಳು

[ಬದಲಾಯಿಸಿ]

ಉತ್ತಮ ತಾಂತ್ರಿಕ ಲೇಖಕರು ತಾಂತ್ರಿಕ ಮಾಹಿತಿಯನ್ನು ರಚಿಸಿ, ಸಮಾನರೂಪಗೊಳಿಸಿ, ಸಂಕ್ಷಿಪ್ತ ಹಾಗೂ ಪರಿಣಾಮಕಾರಿಯಾಗಿ ಸಂವಹಿಸುವ ಕ್ಷಮತೆ ಹೊಂದಿರುತ್ತಾರೆ. ಒಬ್ಬ ತಾಂತ್ರಿಕ ಲೇಖಕರು ನಿರ್ದಿಷ್ಟ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿರುತ್ತಾರೆ. ಉದಾಹರಣೆಗೆ, ಎಪಿಐ (API) ಲೇಖಕರು ಎಪಿಐ ಬಗೆಗಿನ ಮಾಹಿತಿಯನ್ನು ರಚಿಸುವರು, ಇತರೆ ತಾಂತ್ರಿಕ ಲೇಖಕರು ವಿದ್ಯುನ್ಮಾನ ವಾಣಿಜ್ಯ (e-Commerce), ತಯಾರಿಕೆ, ವೈಜ್ಞಾನಿಕ ಅಥವಾ ವೈದ್ಯಕೀಯ ವಿಷಯಗಳ ಬಗ್ಗೆ ಮಾಹಿತಿ ರಚಿಸಬಲ್ಲರು.

ತಾಂತ್ರಿಕ ಲೇಖಕರು ಹಲವು ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಅವರು ವಿವರಿಸುವಂತಹ ಉತ್ಪನ್ನ ಅಥವಾ ವಿಷಯದ ಬಗ್ಗೆ ತಕ್ಕಮಟ್ಟಿಗೆ ತಿಳಿದುಕೊಂಡಿರುವುದು ಉತ್ತಮ. ತಂತ್ರಾಂಶ ರಚನಕಾರರು, ಮಾರಾಟ ವ್ಯವಸ್ಥಾ ತಜ್ಞರು, ಸೇವಾ ಇಲಾಖೆಗಳು ಸೇರಿದಂತೆ, ತಾಂತ್ರಿಕ ಲೇಖಕರು ಪಡೆಯಬೇಕಾದ ಮಾಹಿತಿ ಮೂಲಗಳು ಕಾರ್ಯಸ್ಥಳದ ಉದ್ದಗಲಕ್ಕೂ ಚದುರಿರುತ್ತವೆ. ಇಂತಹ ಒಂದು ವ್ಯವಸ್ಥೆ ಸೃಷ್ಟಿಸಲು ಬೇಕಾದ ಶ್ರಮವನ್ನು ಪರಿಗಣಿಸಿದರೆ, ಹಲವು ತಾಂತ್ರಿಕ ಲೇಖಕರು ಸಹ ಉತ್ಪಾದಕರ ಅಥವಾ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಉದ್ಯೋಗಿಯಾಗಿರುತ್ತಾರೆ.

ಪಾತ್ರಗಳು ಮತ್ತು ಕಾರ್ಯಗಳು

[ಬದಲಾಯಿಸಿ]

ಮೌಖಿಕ ಮಾಹಿತಿಯನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸುವುದು ಗ್ರಾಹಕರು, ತಾಂತ್ರಿಕ ಮಾಹಿತಿಯ ಉದ್ದೇಶ ಮತ್ತು ಪ್ರಸಂಗಗಳನ್ನು ಒಳಗೊಂಡ ಯೋಜನೆಯ ಮೌಖಿಕ ಮಾಹಿತಿಯನ್ನು ತಾಂತ್ರಿಕ ಲೇಖಕರ ವಿಶ್ಲೇಷಣಾ ಕ್ಷಮತೆಯನ್ನು ಅವಲಂಬಿಸುತ್ತದೆ.[]

ಗ್ರಾಹಕರ ವಿಶ್ಲೇಷಣೆ ತಾಂತ್ರಿಕ ಲೇಖನವೊಂದನ್ನು ರಚಿಸುವಾಗ ತಾಂತ್ರಿಕ ಲೇಖಕರು ಜಟಿಲ, ಸಂಕೀರ್ಣ ಕಲ್ಪನೆಗಳು ಅಥವಾ ಪ್ರಕ್ರಿಯೆಯನ್ನು ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ವಿವರಿಸಲು ಯತ್ನಿಸುತ್ತಾರೆ. ತಮಗೇನು ಬೇಕೆಂಬುದನ್ನು ಕಂಡುಹಿಡಿಯಲು, ಕಂಡುಹಿಡಿದಿದ್ದನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅರ್ಥ ಮಾಡಿಕೊಂಡದ್ದನ್ನು ಬಳಸುವಲ್ಲಿ ಓದುಗರಿಗೆ ನೆರವಾಗುವುದು, ನಿರ್ದಿಷ್ಟ ತಾಂತ್ರಿಕ ಲೇಖನವೊಂದರ ಅಂತಿಮ ಉದ್ದೇಶವಾಗಿದೆ[]. ಈ ಗುರಿ ತಲುಪಲು, ತಮ್ಮ ಗ್ರಾಹಕರು ಯಾವ ರೀತಿಯಲ್ಲಿ ಲೇಖನವನ್ನು ಓದಿ ಉಪಯೋಗಿಸಿಕೊಳ್ಳುತ್ತಾರೆಂಬುದನ್ನು ತಾಂತ್ರಿಕ ಲೇಖಕರು ಅರ್ಥ ಮಾಡಿಕೊಳ್ಳಬೇಕು. ತಾಂತ್ರಿಕ ಲೇಖನದ ಯೋಜನಾ ಪ್ರಕ್ರಿಯೆಯ ಸಮಯ ಗ್ರಾಹಕರ ವಿಶ್ಲೇಷಣೆ ನಡೆಸಲಾಗುತ್ತದೆ. ಉದ್ದೇಶಿತ ಗ್ರಾಹಕ ವೃಂದವು ತಾಂತ್ರಿಕ ಲೇಖನದ ರೀತಿಯನ್ನು ಅವಲಂಬಿಸಿರುವ ಕಾರಣ, ಪ್ರತಿಯೊಂದು ತಾಂತ್ರಿಕ ಲೇಖನಾ ಯೋಜನೆಯ ಹಂತದಲ್ಲಿ ವಿಶ್ಲೇಷಣೆ ನಡೆಸಲಾಗುತ್ತದೆ. ಗ್ರಾಹಕರನ್ನು ವಿಶ್ಲೇಷಿಸುವಾಗ ತಾಂತ್ರಿಕ ಲೇಖಕರು ತಮ್ಮನ್ನು ತಾವೇ ಕೆಳಕಂಡ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು[] :

  • ಗ್ರಾಹಕರು ಯಾರು?
  • ತಮ್ಮ ಜನಸಂಖ್ಯಾಶಾಸ್ತ್ರೀಯ ಲಕ್ಷಣಗಳೇನು?
  • ಗ್ರಾಹಕರ ಪಾತ್ರವೇನು?
  • ವಿಷಯದ ಕುರಿತು ಓದುಗರ ಅನಿಸಿಕೆಯೇನು?
  • ತಾಂತ್ರಿಕ ಲೇಖನ ರಚಿಸಿ ಕಳುಹಿಸಿದವರ ಬಗ್ಗೆ ಓದುಗರ ಅನಿಸಿಕೆಯೇನು?
  • ಓದುಗರು ಯಾವ ರೀತಿಯಲ್ಲಿ ಮಾಹಿತಿಯನ್ನು ನಿರೀಕ್ಷಿಸುತ್ತಾರೆ?
  • ಗ್ರಾಹಕರ ಕೆಲಸ ಏನು?
  • ಗ್ರಾಹಕರ ಜ್ಞಾನ ಮಟ್ಟ ಏನು?
  • ಸಂದರ್ಭದ ಮೇಲಿನ ಪ್ರಭಾವಗಳು ಎಂತಹವವು?"

ನಿಖರ ಪ್ರೇಕ್ಷಕರ ವಿಶ್ಲೇಷಣೆಯು, ಲೇಖನದ ನಿರೂಪಣೆ ಮತ್ತು ವಿನ್ಯಾಸ (ಆನ್‌ಲೈನ್‌ ಸಹಾಯ ವ್ಯವಸ್ಥೆ, ಅಂತರಸಂಪರ್ಕವುಳ್ಳ ಅಂತರಜಾಲತಾಣ, ಕೈಪಿಡಿ ಇತ್ಯಾದಿ) ಹಾಗೂ ಲೇಖನದಲ್ಲಿ ಹಂಚಲಾದ ಜ್ಞಾನದ ಮಟ್ಟ ಮತ್ತು ಶೈಲಿಗಳಿಗೆ ಆಕಾರ ನೀಡುವ ರೂಪರೇಖೆ ಮತ್ತು ನಿಯಮಗಳನ್ನು ತಾಂತ್ರಿಕ ಲೇಖಕರಿಗೆ ಒದಗಿಸುತ್ತದೆ.

ಉದ್ದೇಶ 'ಉದ್ದೇಶ'ವು ನಿರ್ದಿಷ್ಟ ಸಂವಹನವೊಂದರ ಕಾರ್ಯಕಲಾಪವನ್ನು ಉಲ್ಲೇಖಿಸುತ್ತದೆ. ತಾಂತ್ರಿಕ ಲೇಖನದ ಧ್ಯೇಯಕ್ಕೆ ಅಗತ್ಯವಾದ ಉದ್ದೇಶವನ್ನು ತಾಂತ್ರಿಕ ಲೇಖಕರು ವಿಶ್ಲೇಷಿಸುತ್ತಾರೆ. ಸಂವಹನವೊಂದು ಓದುಗರನ್ನು 'ಇಂತಹ ರೀತಿಯಲ್ಲಿ ಯೋಗಿಸಲು ಅಥವಾ ಕಾರ್ಯಪ್ರವೃತ್ತರಾಗಲು, ಕಾರ್ಯವೊಂದನ್ನು ಮಾಡುವಲ್ಲಿ ನೆರವಾಗಲು, ವಿಷಯವೊಂದನ್ನು ಅರ್ಥ ಮಾಡಿಕೊಳ್ಳಲು, ತಮ್ಮ ಧೋರಣೆ ಬದಲಾಯಿಸಿಕೊಳ್ಳಲು ಪ್ರೇರೇಪಿಸಬಹುದೇ ಎಂದು ನಿರ್ಣಯಿಸುವುದರಿಂದ[], ತಾಂತ್ರಿಕ ಬರಹಗಾರರಿಗೆ ತಮ್ಮ ಲೇಖನವನ್ನು ಈ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲು ಸುಲಭವಾಗುವುದು.

ಸಂದರ್ಭ 'ಸಂದರ್ಭ' ಎಂಬುದು, ಓದುಗರು ತಮ್ಮ ಕಾರ್ಯಸ್ಥಳ ಅಥವಾ ಉತ್ಪನ್ನ ಘಟಕಗಳಲ್ಲಿ ಸಂವಹನ ಬಳಸುವಂತಹ ಭೌತಿಕ ಮತ್ತು ಪ್ರಾಪಂಚಿಕ ಸನ್ನಿವೇಶಗಳಾಗಿರಬಹುದು. ಈ ಸಂದರ್ಭವೆಂಬುದು ಮಂದಗತಿಯ ಬೇಸಿಗೆಯ ತಿಂಗಳುಗಳಾಗಿರಬಹುದು ಅಥವಾ ಸಂಸ್ಥೆಯ ಬಿಕ್ಕಟ್ಟಿನ ಸ್ಥಿತಿಯೂ ಆಗಿರಬಹುದು.[] ಈ ಪರಿಸ್ಥಿತಿಯನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಲ್ಲಿ, ಓದುಗರು ಹೇಗೆ ತಮ್ಮ ಸಂವಹನವನ್ನು ಬಳಸಿಕೊಳ್ಳುತ್ತಾರೆಂಬ ಬಗ್ಗೆ ಬಹಳ ಮುಖ್ಯ ಮಾಹಿತಿ ಒದಗುತ್ತದೆ. ಇದರ ಬಗೆಗಿನ ತಿಳುವಳೀಕೆಯು, ತಾಂತ್ರಿಕ ಲೇಖಕರು ರಚಿಸುವ ಸಂವಹನದ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ಉದಾಹರಣೆಗೆ, ಲಘು ಜಲಯಾನವೊಂದರಲ್ಲಿನ ನಿಯಂತ್ರಣಾ ವ್ಯವಸ್ಥೆಯ ದೋಷವೊಂದನ್ನು ಸರಿಪಡಿಸುವ ಕೈಪಿಡಿಯಾಗಿದ್ದಲ್ಲಿ, ನೀರು ಬಿದ್ದು ಕೆಡದಿರಲೆಂದು ತಾಂತ್ರಿಕ ಲೇಖಕರು ಈ ಕೈಪಿಡಿಗೆ ಲ್ಯಾಮಿನೇಟ್‌ ಮಾಡಿಸಬಹುದು.

ತಾಂತ್ರಿಕ ಲೇಖನದ ವಿನ್ಯಾಸ ತಾಂತ್ರಿಕ ಲೇಖನವು ಒಂದು ಸೃಜನಾತ್ಮಕ ಪ್ರಕ್ರಿಯೆ ಆಗಿರಬಹುದು. ಲೇಖನದ ವಿನ್ಯಾಸವು, ಅದರ ಪಠನೀಯತೆ ಹಾಗೂ ಉಪಯುಕ್ತತೆಯನ್ನು ಹೆಚ್ಚಿಸಲು ಬಳಸಲಾಗುವ ತಾಂತ್ರಿಕ ಲೇಖನದ ಒಂದು ಅಂಶ ತಮ್ಮ ತಾಂತ್ರಿಕ ಸಂವಹನವನ್ನು ಯೋಜಿಸಿ, ರಚಿಸುವಾಗ ತಾಂತ್ರಿಕ ಲೇಖಕರು ಕೆಳಕಂಡ ಆರು ವಿನ್ಯಾಸ ರೂಪರೇಖೆಗಳನ್ನು ಬಳಸಿಕೊಳ್ಳುತ್ತಾರೆ: ಜೋಡಣೆ, ಒತ್ತು, ಸ್ಫುಟತೆ, ಚುಟುಕುತನ, ಶೈಲಿ ಮತ್ತು ವಿಶಿಷ್ಟ ಲಕ್ಷಣ[]

ಜೋಡಣೆ : ಇದು ದೃಶ್ಯಾಂಶಗಳನ್ನು ಸರಣಿಯಾಗಿ, ಒಪ್ಪ-ಓರಣವಾಗಿ ಜೋಡಿಸುವುದನ್ನು ಉಲ್ಲೇಖಿಸತ್ತದೆ. ಈ ವ್ಯವಸ್ಥೆಯಿಂದ ಓದುಗರು ಅಂಶಗಳ ರಚನೆಯನ್ನು ನೋಡಿ, ಅವು ಗುಂಪೊಂದರಲ್ಲಿ ಹೇಗೆ ಹೊಂದಾಣಿಕೆಯಲ್ಲಿರುತ್ತವೆ, ಒಂದಕ್ಕೊಂದರ ನಡುವಿನ ವ್ಯತ್ಯಾಸ ಹಾಗೂ ಅಂಶಗಳ ಪದರ ಮತ್ತು ಶ್ರೇಣಿ ವ್ಯವಸ್ಥೆಯನ್ನು ಸರಾಗವಾಗಿ ಅರ್ಥ ಮಾಡಿಕೊಳ್ಳಬಲ್ಲರು[] ಜೋಡಣೆಯನ್ನು ಪರಿಗಣಿಸುವಾಗ, ಉಪಯುಕ್ತತೆಯನ್ನು ಹೆಚ್ಚಿಸಲು ಶೀರ್ಷಿಕೆಗಳು, ಪಟ್ಟಿಗಳು, ನಕ್ಷೆಗಳು ಮತ್ತು ಚಿತ್ರಗಳನ್ನು ಹೇಗೆ ಬಳಸುವುದು ಎಂಬುದನ್ನು ತಾಂತ್ರಿಕ ಲೇಖಕರು ಲೆಕ್ಕಾಚಾರ ಹಾಕುತ್ತಾರೆ.

ಒತ್ತು : ದಾಖಲೆಯಲ್ಲಿರುವ ಮುಖ್ಯ ವಿಭಾಗಗಳನ್ನು ಎದ್ದು ಕಾಣುವಂತೆ ಅಥವಾ ಭಾವಾತ್ಮಕವಾಗಿ ಒತ್ತು ನೀಡುವಂತೆ ಪ್ರದಶಿಸುವುದನ್ನು ಉಲ್ಲೇಖಿಸುತ್ತದೆ[] . ಒತ್ತನ್ನು ಪರಿಗಣಿಸುವಾಗ, ತಾಂತ್ರಿಕ ಲೇಖಕರು ಬಹುಮುಖ್ಯ ವಿಭಾಗಗಳು, ಎಚ್ಚರಿಕೆಗಳು, ಉಪಯುಕ್ತ ಸಲಹೆಗಳು ಇತ್ಯಾದಿಗಳನ್ನು ಪುಟದಲ್ಲಿ ಸೂಕ್ತ ಸ್ಥಳದಲ್ಲಿ ನಮೂದಿಸುವಿಕೆ, ಎದ್ದು ಕಾಣುವಂತಹ ಅಕ್ಷರಗಳು, ಬಣ್ಣ ಹಾಗೂ ಅಕ್ಷರ ಗಾತ್ರ ದೊಡ್ಡದು ಮಾಡುವುದರ ಮೂಲಕ  ಓದುಗರ ಗಮನಕ್ಕೆ ತರುತ್ತಾರೆ.

ಸ್ಪಷ್ಟತೆ: : ಸ್ವೀಕೃತಿದಾರರು ಲೇಖನವನ್ನು ಸುಲಭವಾಗಿ, ವೇಗವಾಗಿ ಹಾತೂ ಪೂರ್ಣವಾಗಿ ಅರ್ಥಮಾಡಿಕೊಂಡು, ಅಗತ್ಯವಿದ್ದಲ್ಲಿ ಯಾವುದೇ ಗೊಂದಲವಿಲ್ಲದೆ ಪ್ರತಿಕ್ರಿಯೆ ನೀಡಲು ಸಹಾಯಮಾಡುವ ಕಾರ್ಯತಂತ್ರಗಳನ್ನು ಉಲ್ಲೇಖಿಸುತ್ತದೆ[]. ಸ್ಪಷ್ಟತೆ ಪರಿಗಣಿಸುವಾಗ, ಓದುಗರನ್ನು ಸುಲಭವಾಗಿ ಅರ್ಥಮಾಡಿಸುವ ಸಲುವಾಗಿ ತಾಂತ್ರಿಕ ಲೇಖಕರು ದೃಶ್ಯ-ಚಿತ್ರಗಳಲ್ಲಿ ಗೋಜಲುಗಳನ್ನು ಕನಿಷ್ಠಗೊಳಿಸಿ, ವಿಪರೀತ ಜಟಿಲವಾದ ನಕ್ಷೆಗಳು ಅಥವಾ ಅಸ್ಪಷ್ಟ ಅಕ್ಷರಶೈಲಿಗಳನ್ನು (ಫಾಂಟ್‌ಗಳು) ತಡೆಗಟ್ಟುವತ್ತ ಗಮನ ಹರಿಸುತ್ತಾರೆ.

ಸಂಕ್ಷೇಪತೆ: ಇದು ಲೇಖನ ವಿನ್ಯಾಸದ ದೃಶ್ಯರೂಪಿ ಗಾತ್ರ ಮತ್ತು ಗಹನತೆಯನ್ನು ಉಲ್ಲೇಖಿಸುತ್ತದೆ. ಉದಾಹರಣೆಗೆ, ಶೀರ್ಷಿಕೆಗಳು ಮತ್ತು ಪಟ್ಟಿಗಳ ಸಂಖ್ಯೆ, ರೇಖೆಗಳು ಮತ್ತು ಚೌಕಾಕಾರಗಳು, ಬಣ್ಣಗಳು ಮತ್ತು ಬೂದುಬಣ್ಣಗಳು, ರೇಖಾಚಿತ್ರಗಳು ಮತ್ತು ದತ್ತಾಂಶ ಪ್ರದರ್ಶನಗಳ ವಿವರಗಳು, ಪಠ್ಯದ ಗಾತ್ರ, ಅಲಂಕಾರಮಯತೆ ಮತ್ತು ಪಠ್ಯಗಳ ನಡುವಿನ ಅಂತರಳನ್ನು ಸೂಚಿಸುತ್ತದೆ[]. ತಾವು ಬರೆದಿರುವ ತಾಂತ್ರಿಕ ಲೇಖನಗಳು ಬಳಸಲು-ಓದಲು ಸರಳವಾಗಿರಬೇಕೆಂದರೆ, ತಾಂತ್ರಿಕ ಲೇಖಕರು ಇವೆಲ್ಲಾ ವಿನ್ಯಾಸ ರೂಪರೇಖೆಗಳನ್ನು ಪರಿಗಣಿಸಬೇಕು.

ಶೈಲಿ: ಇದು ತಾಂತ್ರಿಕ ಲೇಖನದ ರೂಪವನ್ನು ಉಲ್ಲೇಖಿಸುತ್ತದೆ. ಓದುಗರೊಂದಿಗಿನ ಸಂವಹನೆಯು ಅತ್ಯೌಪಚಾರಿಕವಾಗಿರಬೇಕೇ ಅಥವಾ ಸ್ವಲ್ಪ ಹಾಸ್ಯ ಮಿಶ್ರಿತವಿದ್ದು ಅನೌಪಚಾರಿಕವಾಗಿರಬೇಕೇ ಎಂಬುದನ್ನು ಲೇಖನದ ಅಂಶವು ನಿರ್ಧರಿಸುತ್ತದೆ. ಜೊತೆಗೆ, ತಾಂತ್ರಿಕ ಲೇಖಕರು ಉಪಶೀರ್ಷಿಕೆ ಮತ್ತು ಪಂಕ್ತಿಗಳ ನಡುವಿನ ಅಂತರ, ಚಿತ್ರಗಳು ಹಾಗೂ ಅಕ್ಷರ(ಫಾಂಟ್‌)ಗಳ ಶೈಲಿ-ವಿನ್ಯಾಸವನ್ನೂ ಸಹ ನಿಗದಿಪಡಿಸುತ್ತಾರೆ.

ವಿಶಿಷ್ಟ ಲಕ್ಷಣ: ನಿರ್ದಿಷ್ಟ ಸಂದರ್ಭವೊಂದರಲ್ಲಿ ದೃಷ್ಟಿಭಾಷಾಸಂವಹನವು ಯಾವ ರೀತಿಯಲ್ಲಿ ಓದುಗರ ವಿಶ್ವಾಸ ಗಳಿಸುತ್ತದೆ ಎಂಬುದನ್ನು ಈ ವಿಶಿಷ್ಟ ಲಕ್ಷಣವು ನಿರ್ಧರಿಸುತ್ತದೆ.[]. ತಾಂತ್ರಿಕ ಬರಹಗಾರರು ತಮ್ಮ ಓದುಗರ ಮೆಚ್ಚುಗೆ ಗಳಿಸಿಕೊಳ್ಳಲು ದೋಷರಹಿತ ತಾಂತ್ರಿಕ ಲೇಖನ ಸಿದ್ಧಗೊಳಿಸಿ ಪ್ರಸ್ತುತಪಡಿಸಲು ಸಕಲ ಯತ್ನ ಮಾಡುವರು.

ವಿದ್ಯಾರ್ಹತೆ

[ಬದಲಾಯಿಸಿ]

ತಾಂತ್ರಿಕ ಬರಹಗಾರರು ತಾಂತ್ರಿಕ ಕಮ್ಯೂನಿಕೇಟರ್, ಮಾಹಿತಿ ಡೆವಲಪರ್, ಅಥವಾ ಟೆಕ್ನಿಕಲ್ ಡಾಕ್ಯುಮೆಂಟೇಶನ್ ತಜ್ಞರು ಸೇರಿದಂತೆ ವಿವಿಧ ಕೆಲಸ ಶೀರ್ಷಿಕೆಗಳು, ಹೊಂದಬಹುದು. ಯುನೈಟೆಡ್ ಕಿಂಗ್ಡಮ್ ಮತ್ತು ಇತರ ದೇಶಗಳಲ್ಲಿ, ಒಂದು ತಾಂತ್ರಿಕ ಲೇಖಕ ಸಾಮಾನ್ಯವಾಗಿ ತಾಂತ್ರಿಕ ಲೇಖಕ ಅಥವಾ ಜ್ಞಾನ ಲೇಖಕ ಕರೆಯಲಾಗುತ್ತದೆ.

ತಾಂತ್ರಿಕ ಬರಹಗಾರರು ಸಾಮಾನ್ಯವಾಗಿ ತಾಂತ್ರಿಕ ಮತ್ತು ಬರವಣಿಗೆಯ ಸಾಮರ್ಥ್ಯಗಳ ಮಿಶ್ರಣವನ್ನು ಹೊಂದಿವೆ. ಅವುಗಳು ವಿಶಿಷ್ಟವಾಗಿ ಒಂದು ತಾಂತ್ರಿಕ ಕ್ಷೇತ್ರದಲ್ಲಿ ಪದವಿ ಅಥವಾ ಪದವಿ, ಆದರೆ ಪತ್ರಿಕೋದ್ಯಮ, ವ್ಯಾಪಾರ, ಅಥವಾ ಇತರ ಕ್ಷೇತ್ರಗಳಲ್ಲಿ ಒಂದು ಹೊಂದಿರಬಹುದು. ಅನೇಕ ತಾಂತ್ರಿಕ ಬರಹಗಾರರು ಸಾಮಾನ್ಯವಾಗಿ ತಾಂತ್ರಿಕ ಸಂವಹನ ತರಗತಿಗಳು ಮೂಲಕ ಅಗತ್ಯವಿರುವ ಕೌಶಲ್ಯಗಳನ್ನು ಕಲಿಕೆಯ ನಂತರ, ಅಂತಹ ಪತ್ರಿಕೋದ್ಯಮ-ಅಥವಾ ಇಂಜಿನಿಯರಿಂಗ್ ಅಥವಾ ವಿಜ್ಞಾನ ತಾಂತ್ರಿಕ ಕ್ಷೇತ್ರವಾಗಿ, ಮತ್ತೊಂದು ಕ್ಷೇತ್ರ ಬದಲಾಯಿಸಿಕೊಳ್ಳಬಹುದು.

ಕಾರ್ಯವಿಧಾನ

[ಬದಲಾಯಿಸಿ]

ತಾಂತ್ರಿಕ ಡಾಕ್ಯುಮೆಂಟ್ ರಚಿಸಲು, ಒಂದು ತಾಂತ್ರಿಕ ಬರಹಗಾರ ಪ್ರೇಕ್ಷಕರ, ಉದ್ದೇಶ, ಮತ್ತು ಉತ್ಪನ್ನ ಅರ್ಥಮಾಡಿಕೊಳ್ಳಬೇಕು. ಅವು ಅಸ್ತಿತ್ವದಲ್ಲಿರುವ ವಸ್ತುಗಳನ್ನು, ಸಂದರ್ಶನ ಎಸ್ಎಂಇಗಳಿಂದ ರೂಪಿತವಾಗಿದ್ದು, ಮತ್ತು / ಅಧ್ಯಯನ ಮೂಲಕ ಮಾಹಿತಿಯನ್ನು ಸಂಗ್ರಹಿಸಲು ಅಥವಾ ವಾಸ್ತವವಾಗಿ ದಾಖಲಿಸಲ್ಪಡುವುದು ಉತ್ಪನ್ನಗಳನ್ನು ಬಳಸಿ, ಮತ್ತು ಅವರ ಅಗತ್ಯಗಳನ್ನು ಮತ್ತು ತಾಂತ್ರಿಕ ತಿಳುವಳಿಕೆ ಮಟ್ಟ ತಿಳಿಯಲು ಪ್ರೇಕ್ಷಕರು ಅಧ್ಯಯನ.

ಒಂದು ತಾಂತ್ರಿಕ ಪ್ರಕಟಣೆ ಅಭಿವೃದ್ಧಿ ಜೀವನಚಕ್ರದ ಒಟ್ಟಾರೆ ಉತ್ಪನ್ನ ಅಭಿವೃದ್ಧಿ ಯೋಜನೆ ಉಂಟಾಗಿವೆ ಇದು ಐದು ಹಂತಗಳನ್ನು ಒಳಗೊಂಡಿದೆ:[]

  • ಹಂತ 1: ಮಾಹಿತಿ ಸಂಗ್ರಹಣೆ ಮತ್ತು ಯೋಜನೆ
  • ಹಂತ 2: ವಿಷಯ ವಿವರಣೆಯನ್ನು
  • ಹಂತ 3: ವಿಷಯ ಅಭಿವೃದ್ಧಿ ಮತ್ತು ಜಾರಿ
  • ಹಂತ 4: ಉತ್ಪಾದನೆ
  • ಹಂತ 5: ಮೌಲ್ಯಮಾಪನ

ಸಮರ್ಪಕವಾಗಿ ಬರೆಯಲಾದ ತಾಂತ್ರಿಕ ಲೇಖನಗಳು ಸಾಮಾನ್ಯವಾಗಿ ವಿಧ್ಯುಕ್ತ ಗುಣಮಟ್ಟಗಳು ಮತ್ತು ನೀತಿ-ನಿಯಮಗಳನ್ನು ಅನುಸರಿಸುತ್ತವೆ. ಮಾಧ್ಯಮ ಮತ್ತು ಬರೆಯಲಾದ ವಿಷಯದ ಮೇರೆಗೆ, ತಾಂತ್ರಿಕ ಲೇಖನಗಳು ಹಲವು ಶೈಲಿಗಳು ಮತ್ತು ವಿನ್ಯಾಸಗಳಲ್ಲಿ ಮೂಡಿಬರುತ್ತವೆ. ತಾಂತ್ರಿಕ ಲೇಖನದ ಮುದ್ರಿತ ಮತ್ತು ಆನ್ಲೈನ್‌ ಆವೃತ್ತಿಗಳ ನಡುವೆ ವಿವಿಧ ರೀತಿಗಳ ವ್ಯತ್ಯಾಸಗಳಿವೆ. ಆದರೂ ಇವೆರಡೂ ಆವೃತ್ತಿಗಳು ಇವೆರಡಕ್ಕೂ ಅನ್ವಯಿಸುವ ಗದ್ಯ, ಮಾಹಿತಿಯ ರಚನಾವಿನ್ಯಾಸಗಳ ಬಗೆಗಿನ ನೀತಿ-ನಿಯಮಗಳನ್ನು ಅಕ್ಷರಶಃ ಅನುಸರಿಸುತ್ತವೆ. ತಾಂತ್ರಿಕ ಲೇಖಕರು ಸಾಮಾನ್ಯವಾಗಿ ಪ್ರಮಾಣಿತ ಶೈಲಿ ಕೈಪಿಡಿಯಲ್ಲಿ ಸೂಚಿಸಲಾದ ವಿನ್ಯಾಸ ನಿಯಮಗಳನ್ನು ಪಾಲಿಸುತ್ತಾರೆ. ಅಮೆರಿಕಾದಲ್ಲಿ ತಾಂತ್ರಿಕ ಲೇಖಕರು ಹೆಚ್ಚಿನ ಮಟ್ಟಿಗೆ ಷಿಕಾಗೊ ಮ್ಯಾನುಯಲ್ ಆಫ್ ಸ್ಟೈಲ್ (ಸಿಎಂಎಸ್‌) (ಶಿಕಾಗೊ ಶೈಲಿ ಕೈಪಿಡಿ) ಅನ್ನು ಬಳಸುತ್ತಾರೆ. ಲಾಂಛನದ ಬಳಕೆ, ಲಾಂಛನದ ಅಳವಡಿಕೆ ಮತ್ತು ಇತರೆ ಸಾಂಸ್ಥಿಕ ಶೈಲಿಗಳನ್ನು ಒಳಗೊಂಡಿರುವ ವಿಶಿಷ್ಟ ಸಾಂಸ್ಥಿಕ ವಿಚಾರಗಳ ಬಗ್ಗೆ ಮಾರ್ಗದರ್ಶಿ ನೀಡುವ ಆಂತರಿಕ ಶೈಲಿ ಕೈಪಿಡಿಗಳನ್ನು ಹಲವು ಸಂಸ್ಥೆಗಳು ಹೊಂದಿವೆ. ಮೈಕ್ರೊಸಾಪ್ಟ್‌ ಮ್ಯಾನುಯಲ್‌ ಆಫ್‌ ಟೆಕ್ನಿಕಲ್‌ ಪಬ್ಲಿಕೇಷನ್ಸ್‌ ಇವುಗಳಲ್ಲಿ ಮಾದರಿಯೆಂದೆನಿಸಿದೆ.

ಶಿಲ್ಪವೈಜ್ಞಾನಿಕ ಯೋಜನೆಗಳು, ಇದರಲ್ಲೂ ವಿಶಿಷ್ಟವಾಗಿ ರಕ್ಷಣಾ ಇಲಾಖೆ ಅಥವಾ ಅಂತರಿಕ್ಷ ವಿಜ್ಞಾನ-ಸಂಬಂಧಿತ ಯೋಜನೆಗಳು  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಲೇಖನಾ ಗುಣಮಟ್ಟಗಳನ್ನು ಪಾಲಿಸುತ್ತವೆ (ನಾಗರಿಕ ವಿಮಾನಗಳಿಗಾಗಿ ಎಟಿಎ100 ಅಥವಾ ರಕ್ಷಣಾ ಇಲಾಖೆಗಾಗಿ ಎಸ್‌1000ಡಿ).

ವೇದಿಕೆ

[ಬದಲಾಯಿಸಿ]

ತಾಂತ್ರಿಕ ಬಹಗಾರರು ಆಗಾಗ್ಗೆ ತಾಂತ್ರಿಕ ಲೇಖಕರ ತಂಡ ಅಥವಾ ತಂತ್ರಾಂಶ ಅಭಿವೃದ್ಧಿಗಾರರ ತಂಡದಲ್ಲೇ ಕೆಲಸ ಮಾಡುವುದುಂಟು. ವಿಶಿಷ್ಟವಾಗಿ, ಲೇಖಕರು ಕರಡೊಂದನ್ನು ಸಿದ್ಧಪಡಿಸಿ ಅದನ್ನು ಒಬ್ಬ ಅಥವಾ ಹಲವು ಎಸ್‌ಎಂಇಗಳಿಗೆ ಕಳುಹಿಸಿ ತಾಂತ್ರಿಕ ಪರಿಶೀಲನೆ ನಡೆಸಿರೆಂದು ಕೋರುತ್ತಾರೆ. ಎಸ್‌ಎಂಇಗಳು ತಾಂತ್ರಿಕ ಪರಿಶೀಲನೆ ನಡೆಸಿ ಕಡತವು ಎಲ್ಲಾ ರೀತಿಗಳಲ್ಲಿ ಸಮರ್ಪಕವಾಗಿದೆಯೆಂದು ಖಾತರಿಪಡಿಸಬೇಕು. ಶೈಲಿ, ವ್ಯಾಕರಣ ಮತ್ತು ಸುಲಭವಾಗಿ ಓದಬಹುದೇ ಎಂಬುದನ್ನು ಪರಿಶೀಲಿಸಲು ಇನ್ನೊಬ್ಬ ಬರಹಗಾರ ಅಥವಾ ಸಂಪಾದಕರು ಈ ಲೇಖನದ ಸಂಪಾದಕೀಯ ವಿಮರ್ಶೆ ನಡೆಸಬಹುದು.

ಸಂಪಾದಕೀಯ ವಿಮರ್ಶೆ ಮಾಡುವವರು ಸ್ಪಷ್ಟೀಕರಣ ಕೋರಬಹುದು ಅಥವಾ ಸಲಹೆ ನೀಡಬಹುದು. ಉಪಯುಕ್ತತೆ ಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ, ಕೆಲವೊಮ್ಮೆ ಲೇಖಕರು ಅಥವಾ ಇತರರು ಈ ಓದುರರೊಂದಿಗೆ ಚರ್ಚಿಸುತ್ತ ಈ ಲೇಖನದ ಪರೀಕ್ಷೆ ಮಾಡಬಹುದು. ಪ್ರಕಟಿತವಾದ ಲೇಖನದ ಗುಣಮಟ್ಟ ಮತ್ತು ಸಮಾನತೆಯನ್ನು ಖಚಿತಪಡಿಸಲು ತಪಾಸನೆ ನಡೆಸಿದ ನಂತರ ಲೇಖನದ ಅಂತಿಮ ಆವೃತ್ತಿಯನ್ನು ಹೊರತರಲಾಗುವುದು.[]

ವೃತ್ತಿಜೀವನದ ಬೆಳವಣಿಗೆ

[ಬದಲಾಯಿಸಿ]

ತಾಂತ್ರಿಕ ಲೇಖಕರಿಗೆ ಯಾವುದೇ ನಿರ್ದಿಷ್ಟ ವೃತ್ತಿಪಥವಿರದು, ಆದರೆ ಅವರು ಇತರೆ ಲೇಖಕರನ್ನೊಳಗೊಂಡಿರುವ ಯೋಜನೆಗಳಲ್ಲಿ ಮೇಲ್ವಿಚಾರಕ ಅಥವಾ ವ್ಯವಸ್ಥಾಪಕರಾಗಬಹುದು. ತಾಂತ್ರಿಕ ಲೇಖಕರು ಸಂಕೀರ್ಣ ಯೋಜನೆಗಳು ಅಥವಾ ಲೇಖಕರು-ಸಂಪಾದಕರ ತಂಡವನ್ನು ನಿರ್ವಹಿಸುವ ಹಿರಿಯ ತಾಂತ್ರಿಕ ಲೇಖಕರಾಗಬಹುದು. ಇನ್ನೂ ದೊಡ್ಡ ಗುಂಪುಗಳಲ್ಲಿ ದಸ್ತಾವೇಜು ವ್ಯವಸ್ಥಾಪಕರು ಸಂಕೀರ್ಣ ಯೋಜನೆಗಳು ಮತ್ತು ಅವುಗಳಲ್ಲಿ ಕೆಲಸ ಮಾಡುವ ತಂಡಗಳನ್ನೂ ನಿರ್ವಹಿಸಬಹುದು.

ತಾಂತ್ರಿಕ ಲೇಖಕರು ನಿರ್ದಿಷ್ಟ ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಪಡೆಯಬಹುದು, ಅಥವಾ ತಂತ್ರಾಂಶ ಗುಣಮಟ್ಟ ವಿಶ್ಲೇಷಣೆ (software quality analysis) ಅಥವಾ ವ್ಯವಹಾರ ವಿಶ್ಲೇಷಣೆ (business analysis)ಯಂತಹ ಸಂಬಂಧಿತ ಕ್ಷೇತ್ರಗಳತ್ತ ಮುಖ ಮಾಡಬಹುದು. ತಾಂತ್ರಿಕ ಲೇಖಕರು ಕ್ಷೇತ್ರವೊಂದರಲ್ಲಿ ವಿಷಯ-ಪರಿಣತರಾದಲ್ಲಿ, ಅವರು ತಾಂತ್ರಿಕ ಲೇಖನದಿಂದ ಪರಿಣತಿ ಹೊಂದಿದ ಆ ಕ್ಷೇತ್ರದತ್ತ ವಲಸೆ ಹೋಗಬಹುದು.

ಬರವಣಿಗೆ ಕೌಶಲ್ಯ ಹೊಂದಿದ ತಾಂತ್ರಿಕ ಲೇಖಕರು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳಲ್ಲಿ ನೌಕರಿ ಗಿಟ್ಟಿಸಿಕೊಳ್ಳಬಹುದು. ಇದರಿಂದಾಗಿ ಅವರು ತಾವು ಕೆಲಸ ಮಾಡುವ ಕ್ಷೇತ್ರವನ್ನು ಉತ್ತಮಗೊಳಿಸಬಹುದು ಅಥವಾ ಹೆಚ್ಚುವರಿ ಆದಾಯ ಗಳಿಸಬಹುದು.

ತಾಂತ್ರಿಕ ಲೇಖಕರಿಗಾಗಿ ಉದ್ಯೋಗ ಮಾರುಕಟ್ಟೆಯು 2010-2010ರ ದಶಕ-ಕಾಲದಲ್ಲಿ ಶೇಕಡಾ 17ರಷ್ಟು ವೃದ್ಧಿಯಾಗುವ ಸಾಧ್ಯತೆಯಿದೆ. ಇತರೆ ಎಲ್ಲಾ ಕಸುಬಿನಷ್ಟೆ ವೃದ್ಧಿ ಹೊಂದಬಹುದೆಂಬ ನಿರೀಕ್ಷೆಯಿದೆ. ವಿಶೇಷವಾಗಿ ತಾಂತ್ರಿಕ ನೈಪುಣ್ಯ ಹೊಂದಿರುವ ಅಭ್ಯರ್ಥಿಗಳ ಉದ್ಯೋಗಾವಕಾಶಗಳು, ಉತ್ತಮ ಎಂದು ನಿರೀಕ್ಷಿಸಲಾಗಿದೆ. ಅದರಲ್ಲೂ ವಿಶೇಷವಾಗಿ, ತಾಂತ್ರಿಕ ಕುಶಲತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಒಳ್ಳೆಯ ಉದ್ಯೋಗಾವಕಾಶಗಳು ಲಭಿಸುವವೆಂಬ ನಿರೀಕ್ಷೆಯೂ ಇದೆ.[]

ಇವನ್ನು ನೋಡಿ:

[ಬದಲಾಯಿಸಿ]
  • ಸಹಕಾರಿ ಸಂಪಾದನೆ
  • ತಂತ್ರಾಂಶ ದಸ್ತಾವೇಜು
  • ತಾಂತ್ರಿಕ ಸಂವಹನ
  • ತಾಂತ್ರಿಕ ಸಂವಹನ ಅನ್ವಯಿಕೆಗಳು / ಸಾಧನಗಳು
  • ತಾಂತ್ರಿಕ ಲೇಖನ

ಉಲ್ಲೇಖಗಳು‌‌

[ಬದಲಾಯಿಸಿ]
  1. Burton, S (2007). "From the executive director: Confronting change" (PDF). Archived from the original (pdf) on 2011-01-08. Retrieved 2009-09-23.
  2. David Farbey, Technical writer career information Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. at the official website of the Institute of Scientific and Technical Communicators. 2013ರ ಫೆಬ್ರವರಿ 28ರಂದು ಪಡೆಯಲಾಗಿದೆ.
  3. Gary Blake and Robert W. Bly, The Elements of Technical Writing , pg. 3. New York: Macmillan Publishers, 1993. ISBN 0020130856
  4. ೪.೦ ೪.೧ ೪.೨ ೪.೩ ೪.೪ ೪.೫ ೪.೬ ೪.೭ ೪.೮ Kostelnick, Charles (2011). Designing Visual Language. New York, NY: Longman. p. 3-390. ISBN 978-0-205-61640-4. {{cite book}}: More than one of |pages= and |page= specified (help)
  5. ೫.೦ ೫.೧ Riordan, Daniel (2005). Technical Report Writing Today. Boston, MA: Wadsworth Cengage Learning. p. 1-546. ISBN 978-0-618-43389-6. {{cite book}}: More than one of |pages= and |page= specified (help)
  6. Hackos, JoAnn T. (1994). Managing Your Documentation Projects. Wiley. p. 630. ISBN 0-471-59099-1.
  7. Tarutz, Judith A. (1992). Technical Editing. New York: Perseus Books. p. 456. ISBN 0-201-56356-8.
  8. Bureau of Labor Statistics, U.S. Department of Labor, Occupational Outlook Handbook, 2012-13 Edition, Technical Writers, on the Internet at http://www.bls.gov/ooh/media-and-communication/technical-writers.htm (visited February 22, 2013).

ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]