ವಿಷಯಕ್ಕೆ ಹೋಗು

ತವರ ಲೇಪನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[ಸೂಕ್ತ ಉಲ್ಲೇಖನ ಬೇಕು]

ತವರದ ಲೇಪನ ಕೊಟ್ಟಿರುವುದು

ತವರ ಲೇಪನವು ಮೆತು ಕಬ್ಬಿಣ ಅಥವಾ ಉಕ್ಕಿನ ತಗಡುಗಳನ್ನು ತವರದಿಂದ ತೆಳುವಾಗಿ ಲೇಪಿಸುವ ಪ್ರಕ್ರಿಯೆ, ಮತ್ತು ಸೃಷ್ಟಿಯಾದ ಉತ್ಪನ್ನವನ್ನು ಟಿನ್‍ಪ್ಲೇಟ್ ಎಂದು ಕರೆಯಲಾಗುತ್ತದೆ. ಇದನ್ನು ಬಹುತೇಕ ವೇಳೆ ತುಕ್ಕನ್ನು ತಡೆಗಟ್ಟಲು ಬಳಸಲಾಗುತ್ತದೆ, ಆದರೆ ಸಾಮಾನ್ಯವಾಗಿ ವಿದ್ಯುತ್ ವಾಹಕಗಳಾಗಿ ಬಳಸಲಾದ ಕಟ್ಟುಳ್ಳ ತಂತಿಗಳ ತುದಿಗಳಿಗೆ ಕೂಡ ಲೇಪಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಉತ್ಕರ್ಷಣವನ್ನು ತಡೆಗಟ್ಟುವುದು (ವಿದ್ಯುತ್ ಪ್ರತಿರೋಧವನ್ನು ಹೆಚ್ಚಿಸುತ್ತದೆ), ಮತ್ತು ಟ್ವಿಸ್ಟ್ ಆನ್‍ಗಳು, ಬಂಧಕ ತುಂಡುಗಳು, ಅಥವಾ ಅಂತ್ಯದ ತುಂಡುಗಳಂತಹ ವಿವಿಧ ತಂತಿ ಸಂಬಂಧಕಗಳಲ್ಲಿ ಬಳಸಲಾದಾಗ ಎಳೆಬಿಡುವುದನ್ನು ಅಥವಾ ತಂತಿಗಳ ಹೆಣಿಗೆ ಬಿಚ್ಚುವುದನ್ನು ತಡೆಯುವುದು ಏಕೆಂದರೆ ಬಿಚ್ಚಿಕೊಂಡ ಎಳೆಗಳು ಮಾರ್ಗಸಂಕೋಚವನ್ನು ಉಂಟುಮಾಡಬಹುದು.

ಒಂದು ಕಾಲದಲ್ಲಿ, ಹೆಚ್ಚು ವ್ಯಾಪಕವಾಗಿ ಬಳಸಲ್ಪಡುತ್ತಿದ್ದ ಟಿನ್‍ಪ್ಲೇಟನ್ನು ಈಗ ಪ್ರಧಾನವಾಗಿ ತವರದ ಡಬ್ಬಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪೂರ್ವದಲ್ಲಿ, ಟಿನ್‍ಪ್ಲೇಟನ್ನು ಅಗ್ಗದ ಗಡಿಗೆಗಳು, ಬಾಣಲೆಗಳು ಮತ್ತು ಇತರ ತೆಟ್ಟೆಪಾತ್ರೆಗಳಿಗಾಗಿ ಬಳಸಲಾಗಿತ್ತು. ಈ ಬಗೆಯ ತೆಟ್ಟೆಪಾತ್ರೆಯನ್ನು ಟಿನ್‍ವೇರ್ ಎಂದು ಕೂಡ ಕರೆಯಲಾಗುತ್ತಿತ್ತು ಮತ್ತು ಇದನ್ನು ತಯಾರಿಸುವ ಜನರನ್ನು ಟಿನ್‍ಪ್ಲೇಟ್ ಕಾರ್ಮಿಕರು ಎಂದು ಕರೆಯಲಾಗುತ್ತಿತ್ತು. ತಯಾರಿಕೆಯಲ್ಲಿ ಬಳಸಲಾದ ತವರ ಬಳಿಯದ ತಗಡುಗಳನ್ನು ಕಪ್ಪು ತಗಡುಗಳು ಎಂದು ಕರೆಯಲಾಗುತ್ತದೆ. ಈಗ ಇವನ್ನು ಉಕ್ಕಿನಿಂದ ತಯಾರಿಸಲಾಗುತ್ತದೆ, ಬೆಸೆಮರ್ ಉಕ್ಕು ಅಥವಾ ತೆರೆದೊಲೆ ಉಕ್ಕು. ಪೂರ್ವದಲ್ಲಿ ಕಬ್ಬಿಣವನ್ನು ಬಳಸಲಾಗುತ್ತಿತ್ತು, ಮತ್ತು ಎರಡು ದರ್ಜೆಗಳದ್ದಿರುತ್ತಿತ್ತು, ಕೋಕ್ ಕಬ್ಬಿಣ ಮತ್ತು ಇದ್ದಿಲು ಕಬ್ಬಿಣ; ಎರಡನೆಯದು, ಹೆಚ್ಚು ಉತ್ತಮವಾದದ್ದಾಗಿತ್ತು ಮತ್ತು ತವರದ ಹೆಚ್ಚು ದಪ್ಪನೆಯ ಲೇಪನವನ್ನು ಪಡೆಯುತ್ತಿತ್ತು, ಮತ್ತು ಈ ಸಂದರ್ಭವು ಕೋಕ ತಗಡುಗಳು ಮತ್ತು ಇದ್ದಿಲು ತಗಡುಗಳು ಪದಗಳ ಮೂಲವಾಗಿದೆ. ಈಗ ಕಬ್ಬಿಣವನ್ನು ಬಳಸುವುದಿಲ್ಲವಾದರೂ, ಇವುಗಳಿಂದ ಟಿನ್‍ಪ್ಲೇಟ್‍ನ ಗುಣಮಟ್ಟವನ್ನು ಈಗಲೂ ಗೊತ್ತುಪಡಿಸಲಾಗುತ್ತದೆ. ತವರದ ಡಬ್ಬಿಗಳ ತಯಾರಿಕೆಗಾಗಿ ಟಿನ್‍ಪ್ಲೇಟನ್ನು ಅಗಾಧ ಪ್ರಮಾಣದಲ್ಲಿ ಬಳಸಲಾಗುತ್ತಿತ್ತು. ತವರದ ಡಬ್ಬಿಗಳಲ್ಲಿ ಸಂರಕ್ಷಿತ ಮಾಂಸ, ಮೀನು, ಹಣ್ಣು, ಬಿಸ್ಕೆಟ್‍ಗಳು, ಸಿಗರೇಟ್‍ಗಳು ಮತ್ತು ಅಸಂಖ್ಯಾತ ಇತರ ಉತ್ಪನ್ನಗಳನ್ನು ಕಟ್ಟಲಾಗುತ್ತದೆ. ಕಲಾಯಿಗಾರನು ತಯಾರಿಸುತ್ತಿದ್ದ ವಿವಿಧ ಬಗೆಗಳ ಮನೆ ಪಾತ್ರೆಗಳಿಗಾಗಿ ಕೂಡ ತವರವನ್ನು ಬಳಸಲಾಗುತ್ತಿತ್ತು.

ತವರ ಲೇಪನದ ಹಾಟ್ ಡಿಪಿಂಗ್ ವಿಧಾನದಲ್ಲಿ ಮೊದಲು ಉಕ್ಕು ಅಥವಾ ಕಬ್ಬಿಣವನ್ನು ಕಡಿಮೆ ಉಷ್ಣಾಂಶದಲ್ಲಿ ಉರುಳೆಯಂತ್ರದಿಂದ ಚಪ್ಪಟೆಮಾಡಲಾಗುತ್ತದೆ. ನಂತರ ಪಿಕ್ಲಿಂಗ್ ವಿಧಾನದಿಂದ ಯಾವುದೇ ಬೇಡವಾದ ಪೊರೆಗಳನ್ನು ತೆಗೆಯಲಾಗುತ್ತದೆ. ನಂತರ ಗಟ್ಟಿತನ ಹೆಚ್ಚಿಸಲು ಬಿಸಿದಣ್ಣಿಕೆ ವಿಧಾನವನ್ನು ಬಳಸಲಾಗುತ್ತದೆ. ಕೊನೆಯದಾಗಿ ತವರದ ತೆಳುವಾದ ಪದರವನ್ನು ಲೇಪಿಸಲಾಗುತ್ತದೆ.

"https://kn.wikipedia.org/w/index.php?title=ತವರ_ಲೇಪನ&oldid=881372" ಇಂದ ಪಡೆಯಲ್ಪಟ್ಟಿದೆ