ತರಾವೀಹ್ ನಮಾಝ್
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ರಮಝಾನ್ ತಿಂಗಳ ಎಲ್ಲಾ ರಾತ್ರಿಗಳಲ್ಲಿ ಇಶಾ ನಮಾಝಿನ ನಂತರ ವಿಶೇಷವಾಗಿ 20 ರಕಾತ್ ನಮಾಝ್ ಸಾಮೂಹಿಕವಾಗಿ ನಿರ್ವಹಿಸಲಾಗುತ್ತದೆ. ಅದಕ್ಕೆ ತರಾವೀಹ್ ಎಂದು ಹೇಳಲಾಗುತ್ತದೆ. ಉಲಮಾಗಳ ಒಕ್ಕೂಟದ ತೀರ್ಮಾನದ ಪ್ರಕಾರ ಇದು ಸುನ್ನತಾಗಿದೆ. ಹಾಫಿಝ್ ಇಬ್ನ್ ರಜಬ್ (ರ.ಅ) ರವರು ಹೇಳುತ್ತಾರೆ, ರಮಝಾನ್ ಮಾಸದಲ್ಲಿ ಒಬ್ಬ ವ್ಯಕ್ತಿಗೆ ಎರಡು ತ್ಯಾಗಗಳು ಎದುರಾಗುತ್ತವೆ. ಒಂದನೆಯದಾಗಿ ಹಗಲಿಡೀ ಉಪವಾಸದಿಂದಿರುವುದು, ಎರಡನೆಯದಾಗಿ ರಾತ್ರಿಯ ವಿಶೇಷ ನಮಾಝ್. ಯಾರು ಈ ಎರಡು ತ್ಯಾಗಗಳಲ್ಲಿ ಸಫಲರಾಗುತ್ತಾರೋ ಅಲ್ಲಾಹು ಅವರಿಗೆ ಪೂರ್ಣ ರೀತಿಯ ಪ್ರತಿಫಲಗಳನ್ನು ನೀಡುವನು.
ರಸೂಲುಲ್ಲಾಹ್ (ಸ್ವ.ಅ) ರವರು ಕೆಲವು ರಾತ್ರಿಗಳಲ್ಲಿ ಸ್ವಹಾಬಿಗಳನ್ನು ಒಟ್ಟುಗೂಡಿಸಿ ತರಾವೀಹ್ ನಮಾಝನ್ನು ಸಾಮೂಹಿಕವಾಗಿ ನಿರ್ವಹಿಸಿದ್ದಾರೆ. ಆದರೆ, ದಿನನಿತ್ಯ ಈ ನಮಾಝನ್ನು ಸಾಮೂಹಿಕವಾಗಿ ನಿರ್ವಹಿಸಿದಲ್ಲಿ, ಅಲ್ಲಾಹನು ಎಲ್ಲಾದರೂ ಇದನ್ನು ಉಮ್ಮತ್ ಗಳ ಮೇಲೆ ಫರ್ಝ್(ಖಡ್ಡಾಯ) ಗೊಳಿಸುವನೋ ಎಂಬ ಭಯದಿಂದ ಇದನ್ನು ಮುಂದುವರಿಸಲಿಲ್ಲ. ಪುನಃ ಎರಡನೆ ಖಲೀಫ ಹಝ್ರತ್ ಉಮರ್(ರ.ಅ) ರವರ ಕಾಲದಲ್ಲಿ ರಮಝಾನ್ ತಿಂಗಳಲ್ಲಿ 20 ರಕಾತ್ ತರಾವೀಹ್ ನಮಾಝನ್ನು ಸಾಮೂಹಿಕವಾಗಿ ನಿರ್ವಹಿಸುವ ಪದ್ಧತಿಯನ್ನು ಜಾರಿಗೊಳಿಸಲಾಯಿತು. ಅದು ಇಂದಿಗೂ ಜಾರಿ ಇದೆ.
ಇಡೀ ವಿಶ್ವದಲ್ಲಿರುವ ಮುಸ್ಲಿಮರ ಜಾಗತಿಕ ಕೇಂದ್ರ ಪವಿತ್ರ ಮಕ್ಕಾ ಹಾಗೂ ಮದೀನ ಮುನವ್ವರವಾಗಿದೆ. ಇಂದಿಗೂ ಅಲ್ಲಿ ತರಾವೀಹ್ ನಮಾಝ್ 20 ರಕಾತ್ ಸಾಮೂಹಿಕವಾಗಿ ನಿರ್ವಹಿಸಲಾಗುತ್ತದೆ. ಲಕ್ಷೋಪಲಕ್ಷ ಜನರು ಅಲ್ಲಿ ಈ ನಮಾಝ್ ನಲ್ಲಿ ಪಾಲ್ಗೊಳ್ಳುತ್ತಾರೆ. ತರಾವೀಹ್ ನ ರಕಾತ್ ಗಳ ಬಗ್ಗೆ ಇದಕ್ಕಿಂತ ದೊಡ್ಡ ಆಧಾರ ಬೇಕಾಗಿಲ್ಲ. ಆದರೂ ಕೆಲವೊಂದು ಜನ ಇದರ ಬಗ್ಗೆ ವಿನಾ ಕಾರಣ ಗೊಂದಲಗಳನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದ ಸಂಶಯ ನಿವಾರಣೆಯ ಸಲುವಾಗಿ ಅತ್ಯಂತ ಸಂಕ್ಷಿಪ್ತವಾಗಿ ಕೆಲವು ದಲೀಲ್ (ಆಧಾರ) ಗಳನ್ನು ಇಲ್ಲಿ ನೀಡಲಾಗಿದೆ.
1. ಹಝ್ರತ್ ಜಾಬಿರ್ ಬಿನ್ ಅಬ್ದುಲ್ಲಾ(ರ.ಅ) ರವರು ಹೇಳುತ್ತಾರೆ, ರಸೂಲುಲ್ಲಾ (ಸ್ವ.ಅ) ರವರು ರಮಝಾನಿನ ಒಂದು ರಾತ್ರಿ ನಮ್ಮ ಬಳಿ ಬಂದರು. ನಾಲ್ಕು ರಕಾತ್ ಇಶಾ, 20 ರಕಾತ್ ತರಾವೀಹ್ ಹಾಗೂ ಮೂರು ರಕಾತ್ ವಿತ್ರ್ ನಮಾಝನ್ನು ಸಾಮೂಹಿಕವಾಗಿ ಮಾಡಿದರು.( ತಾರೀಖ್ ಜುರ್ ಜಾನ್, ಹಂಝ ಬಿನ್ ಯೂಸುಫ್ ಅಸ್ಸಹಮೀ ಪುಟ: 146) 2. ಹಝ್ರತ್ ಅಬ್ದುಲ್ಲಾ ಬಿನ್ ಅಬ್ಬಾಸ್(ರ.ಅ) ರವರು ಹೇಳುತ್ತಾರೆ,ರಸೂಲುಲ್ಲಾ(ಸ್ವ.ಅ) ರವರು ರಮಝಾನಿನ ರಾತ್ರಿ 20 ರಕಾತ್ (ತರಾವೀಹ್) ಹಾಗೂ ವಿತ್ರ್ ನಮಾಝನ್ನು ಸಾಮೂಹಿಕವಾಗಿ ನಿರ್ವಹಿಸಿದ್ದರು (ಮುಸನ್ನಫ್ ಇಬ್ನ್ ಅಬೀ ಶೈಬಾ 2/286, ಮುಅ್ ಜಮ್ ಕಬೀರ್ ತಬ್ರಾನೀ 5/433) 3. ಹಝ್ರತ್ ಉಬೈ ಇಬ್ನ್ ಕಅಬ್(ರ.ಅ) ರವರು ಹೇಳುತ್ತಾರೆ, ಹಝ್ರತ್ ಉಮರ್ ಬಿನ್ ಖತ್ತಾಬ್(ರ.ಅ) ರವರು ನನಗೆ ರಮಝಾನ್ ತಿಂಗಳ ರಾತ್ರಿ ನಮಾಝ್ ಮಾಡಿಸುವ ಆದೇಶವನ್ನು ನೀಡಿದರು. ಉಮರ್(ರ.ಅ) ರವರು ಹೇಳಿದರು, ಜನರು ಹಗಲಲ್ಲಿ ಉಪವಾಸವಿರುತ್ತಾರೆ ಆದ್ದರಿಂದ ರಾತ್ರಿ ಸಮಯ ಸರಿಯಾಗಿ ಕಿರಾತ್(ಕುರಾನ್ ಪಾರಾಯಣ) ಮಾಡುವುದಿಲ್ಲ. ಆದ್ದರಿಂದ ರಾತ್ರಿ ಹೊತ್ತು ಕುರ್ ಆನಿನ ತಿಲಾವತ್(ಪಾರಾಯಣ) ಮಾಡಿದಲ್ಲಿ ಚೆನ್ನಾಗಿತ್ತು. ಆಗ ಉಬೈ ಇಬ್ನ್ ಕಅಬ್(ರ.ಅ) ರವರು ಹೇಳಿದರು, ಅಮೀರುಲ್ ಮುಅ್ ಮಿನೀನ್ ರವರೇ, ಈ ರೀತಿ ಕುರ್ ಆನ್ ಪಾರಾಯಣ ಮಾಡುವ ರೀತಿ ಮುಂಚೆ ಇರಲಿಲ್ಲ. ಅದಕ್ಕೆ ಉಮರ್(ರ.ಅ) ರವರು ಹೇಳಿದರು, ನನಗೆ ಚೆನ್ನಾಗಿ ಗೊತ್ತಿದೆ ಆದರೂ ಈ ರೀತಿ ಪಾರಾಯಣ ಮಾಡುವುದು ಒಳ್ಳೆಯದು. ಆ ಕೂಡಲೇ ಉಬೈ ಇಬ್ನ್ ಕಅಬ್(ರ.ಅ) ರವರು ಉಮರ್(ರ.ಅ) ರವರ ಆದೇಶವನ್ನು ಪಾಲಿಸುತ್ತಾ ಜನರಿಗೆ ಸಾಮೂಹಿಕವಾಗಿ 20 ರಕಾತ್ ನಮಾಝ್(ತರಾವೀಹ್) ನಿರ್ವಹಿಸಿದರು. (ಇತ್ತಿಹಾಫುಲ್ ಖಿಯರಃ 2/424)