ಡೋಣಿ
ಡೋಣಿ ನದಿಯು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 250ಕಿ.ಮೀ. ಹರಿದು ಗುಲ್ಬರ್ಗಾ ಜಿಲ್ಲೆಯ ಕೋಡೆಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಜೋಳದ ಬೆಳೆಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. ಡೋಣಿ ಬೆಳೆದರೆ ಓಣಿಲ್ಲ ಜೋಳಯಂಬ ನಾಣ್ಣುಡಿಯಿದೆ. ಇಲ್ಲಿ ಬೆಳೆದ ಜೋಳ ಕರ್ನಾಟಕದ ತುಂಬೆಲ್ಲ ವಿಜಯಪುರ ಜೋಳ ಎಂದು ಪ್ರಸಿದ್ದವಾಗಿದೆ.[೧]
ಡೋಣಿ ನದಿಯು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಬಳಿ ಜತ್ತ ಹತ್ತಿರ ಹುಟ್ಟಿಪೂರ್ವಾಭಿಮುಖವಾಗಿ ಹರಿಯುತ್ತದೆ.ಇದು ಕರ್ನಾಟಕದ ವಿಜಯಪುರ ಜಿಲ್ಲೆಗಳಲ್ಲಿ ಹರಿದು ತಾಳಿಕೋಟೆಯಲ್ಲಿ ಹರಿದು ಯಾದಗಿರಿ ಜಿಲ್ಲಿಯ ಅಮ್ಮಾಪುರ (ಎಸ್ ,ಕೆ) ಬಳಿ ಕೃಷ್ಣಾ ನದಿಯನ್ನು ಸೇರುತ್ತದೆ. ಇದು ವಿಜಯಪುರ ಜಿಲ್ಲೆಯ ಜೋಳದ ಬೆಳೆಯ ಜೀವನಾಡಿಯಾಗಿದೆ.
ತಿರುವು
[ಬದಲಾಯಿಸಿ]ಧಾಶ್ಯಾಳ ಹತ್ತಿರ ಕುಡ್ಡ ಡೋಣಿ ಮತ್ತು ಮುಖ್ಯನದಿ ಸೇರುವ ಸ್ಥಳದಲ್ಲಿ ದಕ್ಷಿಣಕ್ಕೆ ತಿರುಗಿಸಿದರೆ ಯಕ್ಕುಂಡಿ ಮತ್ತು ಕಾತ್ರಾಳ ಬೃಹತ್ ಕೆರೆಗಳನ್ನು ತುಂಬಿ ಹಿರೆಹಳ್ಳದ ಮುಖಾಂತರ ಬಿದರಿ ಹತ್ತಿರ ಕೃಷ್ಣಾ ನದಿಗೆ ಸೇರಿಸುವುದು ಮತ್ತು ಸಾರವಾಡ ಹತ್ತಿರ 6 ಕಿ.ಮೀ ಕಾಲುವೆ ನಿರ್ಮಿಸಿ ಜಿಲ್ಲೆಯಲ್ಲಿಯೇ ದೊಡ್ಡ ಕೆರೆ ಮಮದಾಪುರವನ್ನು ತುಂಬಿಸುವುದು ಸೇರಿದಂತೆ ಹಲವು ಸಾಧ್ಯತೆಗಳಿವೆ.