ವಿಷಯಕ್ಕೆ ಹೋಗು

ಡೊನಾಲ್ಡ್ ಸಾಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೊನಾಲ್ಡ್ ಸಾಂಗ್ ಹಾಂಗ್ ಕಾಂಗ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ೨೦೦೫-೧೨ರವರೆಗೆ ಸೇವೆ ಸಲ್ಲಿಸಿದರು. ೧೯೬೭ರಿಂದ ಹಾಂಗ್ ಕಾಂಗ್ ನ ಆಡಳಿತದಲ್ಲಿ ಸೇವೆ ಸಲ್ಲಿಸಿದ ಡೊನಾಲ್ಡ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಏರಿದ ಮೊದಲ ಚೀನೀ ಅಧಿಕಾರಿ.

ಅಕ್ಟೋಬರ್ ೧೯೪೪ರಂದು ಹಾಂಗ್ ಕಾಂಗ್ ನ ಪೋಲೀಸ್ ಅಧಿಕಾರಿಯೊಬ್ಬರಿಗೆ ಹಿರಿಮಗನಾಗಿ ಜನಿಸಿದ ಡೊನಾಲ್ಡ್ ರ ಪೂರ್ತಿ ಹೆಸರು ಡೊನಾಲ್ಡ್ ಸಾಂಗ್ ಯಾಂ ಕುಯೆನ್. ೧೯೬೪ರಲ್ಲಿ ಬ್ರಿಟಿಷ್ ಸರ್ಕಾರ ಆಡಳಿತವಿದ್ದ ಹಾಂಗ್ ಕಾಂಗ್ ನಲ್ಲಿಯೇ ಶಿಕ್ಷಣ ಪೂರೈಸಿದರು.

ಕುಟುಂಬ

[ಬದಲಾಯಿಸಿ]

ಡೊನಾಲ್ಡ್ ರ ತಮ್ಮ ಸಾಂಗ್ ಯಂ ಪುಯಿ ೨೦೦೩ರಲ್ಲಿ ಹಾಂಗ್ ಕಾಂಗ್ ನ ಪೋಲೀಸ್ ಕಮೀಷನರ್ ಆಗಿ ನಿವೃತ್ತಿಯಾದರು. ಡೊನಾಲ್ಡ್ ರ ತಂಗಿ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ನ ಹಾಂಗ್ ಕಾಂಗ್ ವಲಯಕ್ಕೆ ಅಧ್ಯಕ್ಷೆಯಾಗಿದ್ದಾರೆ.

ಸರ್ಕಾರಿ ಸೇವೆ

[ಬದಲಾಯಿಸಿ]

೧೯೬೭ರಲ್ಲಿ ಹಾಂಗ್ ಕಾಂಗ್ ನ ನಾಗರೀಕ ಸೇವೆಗೆ ಸೇರಿದ ಡೊನಾಲ್ಡ್ ಹಣಕಾಸು, ಉದ್ಯೋಗ, ವ್ಯಾಪಾರ-ವ್ಯವಹಾರ ಇಲಾಖೆಗಳಲ್ಲಿ ಸೇವೆಗೈದರು. ಹಣಕಾಸು ಕಾರ್ಯದರ್ಶಿಯಾದ ಸರ್ ಜಾನ್ ಕಾಪರ್ವೇಥ್ ರ ಮುಕ್ತ ಮಾರುಕಟ್ಟೆ ಮತ್ತು "ಮಿತ-ತೆರಿಗೆ, ಮಿತ-ಕಾನೂನು, ಸರ್ಕಾರದ ಖರ್ಚುಗಳಲ್ಲಿ ಮಿತವ್ಯಯ, ಮುಕ್ತ ಆರ್ಥಿಕ ವ್ಯವಸ್ಥೆ, ಉದಾರವಾದಿ ಮಾರುಕಟ್ಟೆ ನೀತಿಗಳಿಗೆ" ಡೊನಾಲ್ಡ್ ಹೆಗಲು ನೀಡಿದರು. ಸರ್ ಚಾರ್ಲ್ಸ್ ಕಾಡನ್ಕೇವ್ ಮತ್ತು ಸರ್ ಮುರ್ರೇ ಮೆಕ್ಲಹೋಸೆರ ಅವಧಿಯಲ್ಲಿ ಡೊನಾಲ್ಡ್ ರ ಕಾರ್ಯನಿರ್ವಹಣೆ ಮೆಚ್ಚಿಗೆಗೆ ಪಾತ್ರವಾಯಿತು. ೧೯೮೫-೮೯ರ ಅವಧಿಯಲ್ಲಿ ಸಾಮಾನ್ಯಸೇವೆಗಳ ಇಲಾಖೆಯ ಉಪಕಾರ್ಯದರ್ಶಿಯಾಗಿ ನೇಮಕಗೊಂಡ ಡೊನಾಲ್ಡ್, ೧೯೯೧ರಲ್ಲಿ ವ್ಯಾಪಾರ-ವ್ಯವಹಾರ ಇಲಾಖೆಯ ಮಹಾನಿರ್ದೇಶಕರಾದರು. ೧೯೯೩ರಲ್ಲಿ ಖಜಾನೆ ಕಾರ್ಯದರ್ಶಿಯಾದ ಡೊನಾಲ್ಡ್ ತೆರಿಗೆ ನೀತಿ, ಹಣಕಾಸು ಮಂಜೂರಾತಿ ಮತ್ತು ವೆಚ್ಚ ನಿರ್ವಹಣೆ ಯ ಹೊಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರು. ಇದರ ಪರಿಣಾಮವಾಗಿ ೧೯೯೫ರಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ನೇಮಕವಾದರು. ಈ ಹುದ್ದೆಗೆ ಏರಿದ ಮೊದಲ ಚೀನೀ ಅಧಿಕಾರಿಯೆಂಬ ಹಿರಿಮೆ ಡೊನಾಲ್ಡ್ ರದ್ದು. ಈ ಅವಧಿಯಲ್ಲಿ ಏಷ್ಯನ್ ಹಣಕಾಸು ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವಹಿಸಿದರು.[] ೧೯೯೭ರಲ್ಲಿ ಬ್ರಿಟಿಷ್ ಸರ್ಕಾರದ ನೈಟ್ ಕಮಾಂಡರ್ ಒಫ಼್ ಮೋಸ್ಟ್ ಎಕ್ಸಲೆಂಟ್ ಆರ್ಡರ್ (KBE) ಗೌರವಕ್ಕೆ ಪಾತ್ರರಾದರು. ೧೯೯೭ರಲ್ಲಿ ಹಾಂಗ್ ಕಾಂಗ್ ಆಡಳಿತ ಚೀನಾ ಸರ್ಕಾರಕ್ಕೆ ೫೦ ವರ್ಷಗಳ ಬಳಿಕ ಮರಳಿದಾಗ ಸರಾಗ ವಾದ ಆಡಳಿತವರ್ಗಾವಣೆಗೆ ಡೊನಾಲ್ಡ್ ಶ್ರಮವಹಿಸಿದರು. ೨೦೦೧ರಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದ ಡೊನಾಲ್ಡ್, ಆಗಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟುಂಗ್ ಚೀ ಹ್ವಾ ರ ಶಾಖಾ ಮಂಡಲ (Executive Council) ಕ್ಕೆ ಸೇರಿದರು. ೧೨ ಮಾರ್ಚ್ ೨೦೦೫ರಲ್ಲಿ ಟುಂಗ್ ಚೀ ಹ್ವಾ ರ ರಾಜೀನಾಮೆಯಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡರು.[]

ಹಾಂಗ್ ಕಾಂಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ

[ಬದಲಾಯಿಸಿ]

೨೦೦೫-೦೭ರ ಅವಧಿಯಲ್ಲಿ ಆಹಾರ ಸುರಕ್ಷೆ, ರಾಜಕೀಯ ಸುಧಾರಣೆ, ಪರಿಸರ ಮತ್ತು ಆರ್ಥಿಕ ಸುಧಾರಣೆಗೆ ಒತ್ತು ನೀಡಿದರು. ೨೦೦೭-೧೨ರ ಅವಧಿಯಲ್ಲಿ ಚೀನಾದೊಂದಿಗೆ ರಾಜಕೀಯ ವ್ಯವಸ್ಥೆ ನಿರ್ವಹಣೆ, ಶಿಕ್ಷಣ ಸುಧಾರಣೆ, ಮೂಲಭೂತ ಸೌಕರ್ಯ ಸುಧಾರಣೆಗಳಿಗೆ ಒತ್ತು ನೀಡಿದರು.[]

೨೦೧೨ರಲ್ಲಿ ೪೫ ವರ್ಷಗಳ ಸುದೀರ್ಘ ಸೇವೆಯ ನಂತರ ನಿವೃತ್ತಿಯಾದ ಡೊನಾಲ್ಡ್ ನಿವೃತ್ತಿಯ ನಂತರ ಕುಟುಂಬದೊಂದಿಗೆ ಹಾಂಗ್ ಕಾಂಗ್ ನಿಂದ ಹೊರಬಂದು ವಿಶ್ರಾಂತಿ ಜೀವನ ನಡೆಸುತ್ತಲಿದ್ದಾರೆ. ಡೊನಾಲ್ಡ್ ರ ಮೇಲೆ ೨೦೧೫ರಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಡೊನಾಲ್ಡ್, ತಮ್ಮ ವ್ಯಾಪ್ತಿಯ ಅಧಿಕಾರದಲ್ಲಿ ಕೇಬಲ್ ಜಾಲವೊಂದಕ್ಕೆ (ವಾಂಗ್ ಚೋರ್-ಬಾಉ ಒಡೆತನದ ವೇವ್ ಮೀಡಿಯಾ) ಲೈಸೆನ್ಸ್ ನೀಡುವ ಸಲುವಾಗಿ ಐಷಾರಾಮಿ ಬಂಗಲೆ ಪಡೆದಿದ್ದಾರೆ ಎಂಬುದು ಆರೋಪ. []ಇದರ ವಿಚಾರಣೆ ಹಾಂಗ್ ಕಾಂಗ್ ನಲ್ಲಿ ಇನ್ನೂ ಜಾರಿಯಲ್ಲಿದೆ.[]

೨೦೧೫ರ ಅಕ್ಟೋಬರ್ ೫ರಂದು ಡೊನಾಲ್ಡ್ ಸಾಂಗ್ ರನ್ನು ಬಂಧಿಸಲಾಯಿತು. ಶೆಂಜ಼ೆನ್ ನಲ್ಲಿ ವಿಲಾಸೀ ಬಂಗಲೆ ಖರೀದಿಸಲು ಮತ್ತು ಎರಡು ಬಾರಿ ವಿಲಾಸೀ ಪ್ರವಾಸವನ್ನು ಕೈಗೊಳ್ಳಲು ಭ್ರಷ್ಟಾಚಾರದ ಹಣದ ಬಳಕೆ ಮಾಡಿದ್ದು ಇದಕ್ಕೆ ಕಾರಣ. ಈ ಬಂಧನದ ಮುನ್ನ, ಮೂರು ವರ್ಷಗಳ ಕಾಲ ನಿರಂತರ ತನಿಖೆ ನಡೆಸಲಾಗಿತ್ತು.[] ೨೦೧೫ರ ಅಕ್ಟೋಬರ್ ನಲ್ಲಿ ವಿಲಾಸೀ ಪ್ರವಾಸದ ಹಗರಣದಲ್ಲಿ ಸಾಕ್ಷಿಗಳ ಕೊರತೆಯ ಕಾರಣ ನೀಡಿ, ಡೊನಾಲ್ಡ್ ರನ್ನು ಆರೋಪಮುಕ್ತರನ್ನಾಗಿಸಿ ಹಾಂಕಾಂಗ್ ನ್ಯಾಯಾಮ್ಗ ಇಲಾಖೆ ತೀರ್ಪು ಇತ್ತಿತು.

೨೦೧೬ರ ಅಂತ್ಯದ ಹೊತ್ತಿಗೆ ಡೊನಾಲ್ಡ್, ಹಾಂಕಾಂಗ್ ನ ಪ್ರಸಕ್ತ ಸರ್ಕಾರದ ನೀತಿಗಳನ್ನು ಟೀಕಿಸಿ [] ಪತ್ರಿಕೆಗಳಲ್ಲಿ ಬರೆದಿದ್ದಾರೆ. ಛೆಪ್ ಲಾಪ್ ಕೊಕ್ ವಿಮಾನ ನಿಲ್ದಾಣ, ಹಾಂಕಾಂಗ್-ಶೆಂಜ಼ೆನ್-ಗುಆಂಗ್ ಜ಼ಾಉ ದ ಹೆದ್ದಾರಿ ಕಾಮಗಾರಿ ಇವೇ ಮೊದಲಾದ ಕೆಲಸಗಳಲ್ಲಿ ಆಗುತ್ತಿರುವ ವಿಳಂಬ ಡೊನಾಲ್ಡ್ ರ ಟೀಕೆಗೆ ಕಾರಣ.

ಕೊಂಡಿ

[ಬದಲಾಯಿಸಿ]
  1. https://www.britannica.com/biography/Donald-Tsang
  2. www.china.org.cn/english/2005/Jun/132720.htm
  3. cityupress.edu.hk/Template/Shared//previewSample/9789629372033_preview.pdf
  4. http://www.scmp.com/news/hong-kong/law-crime/article/1878518/former-hong-kong-leader-donald-tsang-has-misconduct-case
  5. https://www.hongkongfp.com/2016/10/11/former-chief-executive-donald-tsang-faces-additional-bribery-charge/
  6. http://www.scmp.com/topics/donald-tsang
  7. http://www.scmp.com/news/hong-kong/politics/article/2047971/donald-tsang-criticises-hong-kong-governments-handling