ಡೇವಿಡ್ ವಾರ್ನರ್

ವಿಕಿಪೀಡಿಯ ಇಂದ
Jump to navigation Jump to search
ವಾರ್ನರ್

ಡೇವಿಡ್ ಯ್ಯಾಂಡ್ರಿವ್ ವಾರ್ನರ್(ಜನನ:೨೭ ಅಕ್ಟೋಬರ್ ೧೯೮೬ ) ಆಸ್ಟೇಲಿಯಾ ಕ್ರಿಕೆಟಿಗ ಹಾಗೂ ತಂಡದ ಎಲ್ಲಾ ವಿಭಾಗಗಳಲ್ಲಿ ಉಪನಾಯಕನಾಗಿದ್ದಾರೆ. ಇವರು ಆಕ್ರಮಕಾರಿ ಆರಂಭಿಕ ಎಡಗೈ ಬ್ಯಾಟ್ಸಮನ್.ವಾರ್ನರ್ ಆಸ್ಟೇಲಿಯಾ ಕ್ರಿಕೆಟಿನ ೧೩೨ ವರ್ಷಗಳಲ್ಲಿ ಫ಼ಸ್ಟ್ ಕ್ಲಾಸ್ ಕ್ರಿಕೆಟ್[೧] ಆಡದೇ ಅನುಭವವಿಲ್ಲದೆ ತಂಡಕ್ಕೆ ಆಯ್ಕೆಆಗಿರುವ ಮೊದಲಿಗ.ಇವರು ಆಸ್ಟ್ರೇಲಿಯಾದ ನಿವ್ ಸವ್ತ್ ವೇಲ್ಸ್ ಮತ್ತು ಸಿಡ್ನಿ ತಂಡರ್ಸ್ ತಂಡಗಳಲ್ಲಿ ಆಡಿದ್ದಾರೆ ಅಲ್ಲದೆ ಭಾರತದ ಐಪಿಎಲ್ ನ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸರ್ಸ್ ಪರವಾಗಿ ಆಡಿದ್ದಾರೆ. ವಾರ್ನರ್ ೦೭ ನವೆಂಬರ್ ೨೦೧೫ ರಲ್ಲಿ ಟೆಸ್ಟ್ ಕ್ರಿಕೆಟ್ ನ ಎರಡೂ ಇನಿಂಗ್ಸ್ ನಲ್ಲಿ ಮೂರುಬಾರಿ ಶತಕಗಳಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ ಈ ದಾಖಲೆಯನ್ನು ಸುನಿಲ್ ಗವಾಸ್ಕರ್ ಮತ್ತೆ ರಿಕಿ ಪಾಂಟಿಂಗ್ ಮಾಡಿದ್ದರು.ವಾರ್ನರ್ ಆಸ್ತ್ರೇಲಿಯಾದ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ನಾಲ್ಕುಸಾವಿರ ರನ್ ಮಾಡುವುದರಲ್ಲಿ ಐದನೇಯವರು. (ಡಬ್ಲಿವ್ ಎ ಸಿ ಎ ) ಕ್ರಿಡಾಂಗಣ್ದಲ್ಲಿ ಮೂರು ಶತಕಗಳಿಸಿದ ಮೊದಲಿಗ ವಾರ್ನರ್ ಅದರಲ್ಲಿ ಎರಡು ಶತಕಗಳು ವಾರ್ನರ್ ನ ಉತ್ತಮ ರನ್ನುಗಳು.ವಾರ್ನರ್ ಒಬ್ಬ ಚುರುಕಾದ ಕ್ಷೇತ್ರರಕ್ಷಕ(ಪಿಲ್ಡರ್).ಅಧಿಕೃತ ಪ್ರಕಾರ ಐ ಸಿ ಸಿ ಆಟಗಾರರ ಶ್ರೇಯಾಂಕಗಳಲ್ಲಿ ಡಿಸೆಂಬರ್ ೨೦೧೫ ರಲ್ಲಿ ಅವರು ಟಿ-೨೦ಯಲ್ಲಿ ೧೫೦೦ ರನ್ನು ಮಾಡಿದ ಆಸ್ರ್ಟೇಲಿಯಾದ ಮೊದಲಿಗ.

ಆರಂಬಿಕ ಜೀವನ[ಬದಲಾಯಿಸಿ]

ವಾರ್ನರ್ ಸಿಡ್ನಿಯ ನ್ಯ್ ಸವ್ತ್ ವೇಲ್ಸ್ ನ ಪ್ಯಾಡಿಂಗ್ಟನ್ ನಲ್ಲಿ ಜನಿಸಿದರು.೧೩ರನೇ ವಯ್ಯಸ್ಸಿನಲೀ ಅವರು ಬಲಗೈ ಬ್ಯಾಟ್ಸಮನ್ ಆಗಿದ್ದರು.ನಂತರ ಅವರ ತಾಯಿ ಶೀಲಾವಾರ್ನರ್ ವಾರ್ನರ್ ಅನ್ನು ಎಡಗೈಯಿಂದ ಬ್ಯಾಟಿಂಗ್ ಆಡುವಂತೆ ಪ್ರೆರೇಪಿಸಿದರು. U/16(ಅಂಡರ್ ೧೬) ನಲ್ಲಿ ಸಿಡ್ನಿ ಕ್ರಿಕೆಟ್ ಕ್ಲಬ್ ನಲ್ಲಿ ದಾಖಲೆಯನ್ನು ಮಾಡಿದರು.U/19(ಅಂಡರ್ ೧೯)ನಲ್ಲಿ ಶ್ರೀಲಂಕ ಪ್ರವಾಸ ಕೈಗೊಂಡು ಅಲ್ಲಿಯೂ ದಾಖಲೆ ರನ್ನು ಮಾಡುವುದರ ಮುಖಾಂತರ ಆಸ್ತ್ರೇಲಿಯಾ ತಂಡಕ್ಕೆ ಆಯ್ಕೆಯಾದರು.

ವೃತ್ತಿ ಜೀವನ[ಬದಲಾಯಿಸಿ]

ವಾರ್ನರ್ ಆಕ್ರಮನಕಾರಿ ಆರಂಭಿಕ ಎಡಗೈ ಬ್ಯಾಟ್ಸಮನ್ ಮತ್ತು ಸ್ವಿಟ್ಚ್ ಹಿಟ್ ಹೊಡೆಯುವ ಸಾಮರ್ಥ್ಯವನ್ನುಲ್ಲವರು.ಅವರು ಚುರುಕಾದ ಅರ್ಥಲೆಟಿಕ್ ಕ್ಷೇತ್ರರಕ್ಷಕ ಮತ್ತು ಸಹ ಸ್ಪಿನ್ನರ್. ಇವರು ಆಪ್ ಸ್ಪಿನ್ ಮತ್ತು ಲೆಗ್ ಸ್ಪಿನ್ ಮಾಡಬಲ್ಲರು.ಇವರು ಆಸ್ತ್ರೇಲಿಯಾ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ತಸ್ಮಾನಿಯಾ ತಂಡದ ವಿರುದ್ದ (ಒ ಡಿ ಐ) ನಲ್ಲಿ ೧೬೫ ರನ್ನುಗಳಿಸಿದರು.ಈ ಹಿಂದೆ ಯಾರೂ ಇಷ್ಟು ರನ್ನು ಹೊಡೆದಿರಲಿಲ್ಲ.ಅಲ್ಲದೆ ನಂತರ ಪಂದ್ಯದಲ್ಲಿ ೫೪ ಎಸೆತಗಳಲ್ಲಿ ೯೭ ರನ್ನುಗಳಿಸಿದರು, ಆದರೆ ಅವರು ವೇಗದ ಶತಕ ಮಾಡುವುದರಲ್ಲಿ ವಿಫಲರಾದರು.ಆಸ್ತ್ರೇಲಿಯಾ ಡೊಮೆಸ್ಟಿಕ್ ನಲ್ಲಿ ಚೆನ್ನಾಗಿ ಆಡುದುದರಿಂದ ವಾರ್ನರ್ ರವರನ್ನು ೧೧ ನವೆಂಬರ್ ೨೦೦೯ರಲ್ಲಿ ಸವ್ತ್ ಆಪ್ರಿಕಾ ವಿರುದ್ದ ಮೆಲ್ ಬೋರ್ನ್ ಕ್ರಿಡಾಂಗನದಲ್ಲಿ ಟಿ-೨೦ ಇಂಟರ್ ನ್ಯಾಶನಲ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿಸಿದರು. ಪಾದರ್ಪಣೇ ಮ್ಯಾಚ್ ನಲ್ಲೇ ೮೯ರನ್ನುಗಳಿಸಿದರು. ೨೦೧೦ರಲ್ಲಿ ವೆಸ್ಟ್ ಇಂಡಿಸ್ ವಿರುದ್ದ ೧೮ಎಸೆತಗಳಲ್ಲಿ ಅರ್ಧಶತಕ ಮಾಡುವ ಮೂಲಕ ವಾರ್ನರ್ ವೇಗದ ಅರ್ಧಶತಕದ ದಾಖಲೆಯನ್ನು ಮಾಡಿದ್ದರು. ಈ ಹಿಂದೆ ಈ ದಾಖಲೆ ಭಾರತದ ಯುವರಾಜ್ ಸಿಂಗ್ ಹೆಸರಲ್ಲಿತ್ತು, ಅವರು ೧೯ ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ್ದರು.ವಾರ್ನರ್ ೦೭ ಆಕ್ಟೋಬರ್ ೨೦೧೧ ರಲ್ಲಿ ಚಾಂಪಿಯನ್ ಲೀಗ್ ನಲ್ಲಿ ಭಾರತದ ಚೆನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಶತಕಗಳನ್ನು ಗಳಿಸಿದರು.ಈರೀತಿ ಎರಡೂ ಟಿ-೨೦ ಮ್ಯಾಚ್ ನಲ್ಲಿ ಶತಕಗಳಿಸಿದ ಮೊದಲಿಗ, ಈ ದಾಖಲೆಯೂ ಅವರ ಹೆಸರಿನಲ್ಲಿದೆ.ವಾರ್ನರ್ ಟೆಸ್ಟ್ ಕ್ರಿಕೆಟ್ ಗೆ ೧ ಡಿಸೆಂಬರ್ ೨೦೧೧ ರಂದು ಬ್ರಿಸ್ನೆನ್ ಕ್ರೀಡಾಂಗನದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಪಾದಾರ್ಪಣೆ ಮಾಡಿದರು. ಜನವರಿ ೧೩ ೨೦೧೨ ರಲ್ಲಿ ಭಾರತದ ವಿರುದ್ದ ೬೯ಎಸೆತಗಳಲ್ಲಿ ಶತಕಗಳಿಸಿದರು. ಇದು ಐದನೇ ವೇಗದ ಶತಕವಾಗಿತ್ತು.ವಾರ್ನರ್ (ಒ ಡಿ ಐ) ಕ್ರಿಕೆಟ್ ಗೆ ೧೮ ಜನವರಿ ೨೦೦೯ ರಲ್ಲಿ ಪಾದರ್ಪಣೆ ಮಾಡಿದರು. ಐಸಿಸಿ ವಿಶ್ವಕಪ್ ೨೦೧೫ ರಲ್ಲಿ ವಾರ್ನರ್ ಆಪ್ಗಾನಿಸ್ತಾನ್ ವಿರುದ್ದ ೧೭೪ರನ್ನುಗಳಿಸಿದರು ಇದು ಅವರ ಒಡಿಐನ ಹೆಚ್ಚು ವ್ಯೆಯಿಕ್ತಿಕ ರನ್ನುಗಳು. ಒಟ್ಟಾರೆ ವಿಶ್ವಕಪ್ ನಲ್ಲಿ ೩೪೫ ರನ್ನು ಗಳಿಸಿದರು ಅಲ್ಲದೇ ವಿಶ್ವಕಪ್ ನ ಎಲ್ಲರ ವ್ಯೇಯಿಕ್ತಿಕ ರನ್ನುಗಳಲ್ಲಿ ಇವರು ಹನೋಂದನೇಯವರು.ವಾರ್ನರ್ ರವರು ೨೦೧೫ರಲ್ಲಿ ನಡೆದ ಯ್ಯಾಷಶ್ ಟೆಸ್ಟ್ ಕ್ರಿಕೆಟ್ ನಲ್ಲಿ ೪೧೮ರನ್ನುಗಳಿಸಿದರು ಅಲ್ಲದೆ ಆ ಟೂರ್ನಿಯಲ್ಲಿ ಹೆಚ್ಚುರನ್ನುಗಳಿಸಿದವರಲ್ಲಿ ವಾರ್ನರ್ ನಾಲ್ಕನೇಯವರು.

ಐ.ಪಿ.ಎಲ್ (ಇಂಡಿಯನ್ ಪ್ರೈಮರ್ ಲೀಗ್)[ಬದಲಾಯಿಸಿ]

ಐ.ಪಿ.ಎಲ್ ನ ಎರಡನೇ ಅವದಿಯಲ್ಲಿ ವಾರ್ನರ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದರು. ನಾಲ್ಕನೇ ಅವದಿಯಲ್ಲಿ ತನ್ನ ಮೊದಲ ಐ.ಪಿ.ಎಲ್ ಶತಕವನ್ನುಗಳಿಸಿದರು.೨೦೧೪ರಲ್ಲಿ ವಾರ್ನರನ್ನು ಸನ್ ರೈಸರ್ಸ್ ಹೈದ್ರಾಬಾದ್ ತಮ್ಮ ತಂಡಕ್ಕೆ ತೆಗೆದುಕೊಂಡರು ಅಲ್ಲದೆ ೨೦೧೫ರಲ್ಲಿ ಅವರನ್ನು ತಂಡದ ನಾಯಕನಾಗಿ ಮಾಡಿದರು.೨೦೧೬ರಲ್ಲಿ ವಾರ್ನರ್ ನ ಅದ್ಬುತ ಬ್ಯಾಟಿಂಗ್ ನಿಂದಾಗಿ ಹೈದ್ರಾಬಾದ್ ತಂಡವು ೨೦೧೬ ಐ.ಪಿ.ಎಲ್ ಚಾಂಪಿಯನ್ನಾಯಿತು(ವಿಜೇತರಾದರು).

ಕೆ.ಎಪ್.ಸಿ ಬಿಗ್ ಬ್ಯಾಷ್ ಮತ್ತು ಬಿಗ್ ಬ್ಯಾಷ್ ಲೀಗ್[ಬದಲಾಯಿಸಿ]

ಬಿಗ್ ಬ್ಯಾಷ್ ಲೀಗ್ ನಲ್ಲಿ ವಾರ್ನರ್ ತಸ್ಮಾನಿಯಾ ತಂಡದ ವಿರುದ್ದ ೧೮ಎಸೆತಗಳಲ್ಲಿ ಅರ್ಧಶತಕ ಮಾಡುವ ಮೂಲಕ ದಾಖಲೆಯನ್ನು ಮಾಡಿದರು.ಈ ಹಿಂದೆ ಈ ದಾಖಲೆಯನ್ನು ದ ಜಾರ್ಜ್ ಬೇಲಿಯವರು ೧೯ ಎಸೆತಗಳಲ್ಲಿ ಅರ್ಧಶತಕಗಳಿಸಿದ್ದರು. ವಾರ್ನರ್ ಬಿಗ್ ಬ್ಯಾಷ್ ಲೀಗ್ ನ ಮೊದಲ ಋತುವಿನಲ್ಲಿ ಸಿಡ್ನಿ ತಂಡರ್ಸ್ ತಂಡದ ನಾಯಕನಾಗಿದ್ದರು.ಮೊದಲ ಮ್ಯಾಚ್ ನಲ್ಲೇ ೫೧ ಎಸೆತಗಳಲ್ಲಿ ೧೦೨ ರನ್ನುಗಳಿಸಿದರು ಅಲ್ಲದೆ ಬಿಗ್ ಬ್ಯಾಷ್ ಲೀಗ್ ನಲ್ಲಿ ೩೮ ಸಿಕ್ಸ್ ಗಳನ್ನು ಹೊಡೆಯುವ ಮೂಲಕ ಲೀಗ್ ನಲ್ಲಿ ಸಾಧನೆ ಮಾಡಿದರು, ಈ ಹಿಂದೆ ಇಷ್ಟು ಸಿಕ್ಸ್ ಗಳನ್ನು ಡೆವಿಡ್ ಹಸ್ಸಿ ಹೊಡೆದಿದ್ದರು.

ಇಂಗ್ಲಿಷ್ ಕವ್ನ್ಂಟಿ ಕ್ರಿಕೆಟ್ ೨೦೦೯[ಬದಲಾಯಿಸಿ]

ವಾರ್ನರ್ ರವರು ಇಂಗ್ಲಿಷ್ ಕವ್ನ್ಂಟಿ ಡೊಮೆಸ್ಟಿಕ್ ನ ಇಂಗ್ಲಿಷ್ ಕವ್ನ್ಂಟಿ ಚಾಂಪಿಯನ್ಸ್ ದುರ್ಹಮ್ ತಂಡದ ಪರ ೨೦೦೯ ರಲ್ಲಿ ಆಡಿದ್ದರು.

ವಿವಾದ[ಬದಲಾಯಿಸಿ]

ಮಾಜಿ ನ್ಯಾಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಮಾರ್ಟಿನ್ ಕ್ರೊ ವಾರ್ನರ್ ರವರ ಬಗ್ಗೆ ಈ ರೀತಿ ಹೇಳಿದ್ದರು 'ವಾರ್ನರ್ ನ ಮೈದಾನದಲ್ಲಿನ ವರ್ತನೆ ಸರಿಯಿಲ್ಲವೆಂದು, ಇಂತಹವರು ಇರುದದರಿಂದ ಪುಟ್ ಬಾಲ್ ನಲ್ಲಿ ಯಾವರೀತಿ ರೆಡ್ ಕಾರ್ಡ್ ಮತ್ತು ಯೆಲ್ಲೊ ಕಾರ್ಡ್ ಕಾನೂನುಯಿದೆಯೋ ಅದೇರೀತಿ ಕ್ರಿಕೆಟ್ ನಲ್ಲಿ ಅಂತಹ ಕಾನೂನನ್ನು ತರಬೇಕು' ಎಂದು ಹೇಳಿದ್ದರು. ಅಲ್ಲದೆ ವಾರ್ನರ್ರ ರವರನ್ನು ೧೨ ಜೂನ್೨೦೧೩ ನಲ್ಲಿ ನಡೆದ ಐ.ಸಿ.ಸಿ ಚಾಂಪಿಯನ್ ಟ್ರೋಪಿಯ ಎರಡನೇ ಪಂದ್ಯದಿಂದ ಹೊರಹಾಕಿದ್ದರು,ಏಕೆಂದರೆ ವಾರ್ನರ್ ಇಂಗ್ಲೆಂಡಿನ ಜೋಯ್ ರೂಟ್[೨] ಅವರನ್ನು ಹೋಟೆಲ್ ನಲ್ಲಿ ಹೊಡೆದಿದ್ದರು. ಈ ರೀತಿ ಅವರು ತಮ್ಮ ಕ್ರಿಕೆಟ್ ಅವಧಿಯಲ್ಲಿ ಅನೇಕ ವಿವಾದಗಳಿಗೆ ಒಳಗಾಗಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ವಾರ್ನರ್ ರವರು ಆಸ್ಟ್ರೇಲಿಯಾದ ಕಾನ್ಡ್ ಲ್ಸಿ ಪಲ್ಜೋನ್ ರವರ ಜೊತೆ ಮದುವೆಯಾದರು.ಈ ದಂಪತಿಗಳಿಗೆ ೧೧ ಸೆಪ್ಟೆಂಬರ್ ೨೦೧೪ರಲ್ಲಿ ಮೊದಲನೇ ಮಗು ಇವಿಮಯಿವಾರ್ನರ್ ಹುಟ್ಟಿತು.ನಂತರ ೧೪ ಜನವರಿ ೨೦೧೬ ರಂದು ಎರಡನೇ ಮಗು ಇಂಡಿರಯಿವಾರ್ನರ್ ಗೆ ಜನ್ಮ ನೀಡಿದರು.

ಉಲ್ಲೇಖಗಳು[ಬದಲಾಯಿಸಿ]