ವಿಷಯಕ್ಕೆ ಹೋಗು

ಡೇನಿಯಲ್ ಡೇ-ಲೆವಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಡೇನಿಯಲ್ ಡೇ-ಲೆವಿಸ್
ಆಸ್ಕರ್ ಪಡೆದ ಮಾರನೆ ದಿನ ಬರ್ಲಿನ್ನಲ್ಲಿ
ಜನನ
ಡೇನಿಯಲ್ ಮೈಕೆಲ್ ಬ್ಲೇಕ್ ಡೇ-ಲೆವಿಸ್

29-4-1957
ಲಂಡನ್, ಇಂಗ್ಲೆಂಡ್
ರಾಷ್ಟ್ರೀಯತೆಬ್ರಿಟಿಷ್, ಐರಿಷ್
ವಿದ್ಯಾಭ್ಯಾಸಸೆವೆನೊಆಕ್ಸ್ ಶಾಲೆ
ಶಿಕ್ಷಣಬ್ರಿಸ್ಟಲ್ ಓಲ್ಡ್ ವಿಕ್ ತಿಯೇಟರ್ ಶಾಲೆ
ವೃತ್ತಿನಟ
Years active1970–ಪ್ರಸ್ತುತ
Spouseರೆಬೆಕ್ಕ ಮಿಲ್ಲರ್
Partnerಇಸಬೆಲ್ಲ್ ಅಡ್ಜಾನಿ (೧೯೮೯-೧೯೯೫)
ಮಕ್ಕಳುಗೇಬ್ರಿಯಲ್ ಕೇನ್
ರೋನನ್ ಕಾಲ್
ಕೇಶೆಲ್ ಬ್ಲೇಕ

ಡೇನಿಯಲ್ ಡೇ-ಲೆವಿಸ್ ಬ್ರಿಟಿಷ್ ಹಾಗು ಐರಿಷ್ ರಾಷ್ಟ್ರೀಯತೆ ಹೊಂದಿರುವ ಖ್ಯಾತ ಇಂಗ್ಲೀಷ್ ನಟ.ಲಂಡನ್ನಿನಲ್ಲಿಯೇ ಹುಟ್ಟಿ ಬೆಳೆದ ಇವರು ಕವಿ ಸೆಸಿಲ್ ಡೇ ಲೆವಿಸ್ ಮತ್ತು ನಟಿ ಜಿಲ್ಕನ್ ಇವರ ಮಗ. ಬ್ರಿಸ್ಟಲ್ ಓಲ್ಡ್ ವಿಕ್ ಶಾಲೆಯಲ್ಲಿ ತಮ್ಮ ಸಾಂಪ್ರದಾಯಿಕ ನಟ ತರಬೇತಿ ಪಡೆದು, ತಮ್ಮ ಚಿತ್ರದ ಪಾತ್ರಗಳಿಗೆ ನಿರಂತರ ಭಕ್ತಿ ಮತ್ತು ಸಂಶೋಧನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.ಇವರು ಸಾಮಾನ್ಯವಾಗಿ ಶೂಟಿಂಗ್ ಸಮಯದಲ್ಲಿ ಏಕಾಂಗಿಯಾಗಿ ತಮ್ಮ ಪಾತ್ರದ ಬಗ್ಗೆಯೇ ಯೋಚಿಸಿತ್ತಿರುತ್ತಾರೆ. ಇವರು ತಮ್ಮ ಪಾತ್ರವನ್ನು ಸೂಕ್ಷ್ಮವಾಗಿ ಆಯುತ್ತಾರೆ, ಆದರೆ ಆಯ್ದ ಮೇಲೆ ಅಷ್ಟೇ ಚೆನಾಗಿ ಅದನ್ನು ವಹಿಸುತ್ತಾರೆ. ೧೯೯೮ರಿಂದ ಐದೇ ಚಿತ್ರಗಳನ್ನು ಮಾಡಿದ್ದರೂ ಕೂಡಾ, ಐದೂ ಚಿತ್ರಗಳು ಹಿಟ್ ಆಗಿವೆ.