ಡೇನಿಯಲ್ ಡೇ-ಲೆವಿಸ್
ಗೋಚರ
ಡೇನಿಯಲ್ ಡೇ-ಲೆವಿಸ್ ಬ್ರಿಟಿಷ್ ಹಾಗು ಐರಿಷ್ ರಾಷ್ಟ್ರೀಯತೆ ಹೊಂದಿರುವ ಖ್ಯಾತ ಇಂಗ್ಲೀಷ್ ನಟ.ಲಂಡನ್ನಿನಲ್ಲಿಯೇ ಹುಟ್ಟಿ ಬೆಳೆದ ಇವರು ಕವಿ ಸೆಸಿಲ್ ಡೇ ಲೆವಿಸ್ ಮತ್ತು ನಟಿ ಜಿಲ್ಕನ್ ಇವರ ಮಗ. ಬ್ರಿಸ್ಟಲ್ ಓಲ್ಡ್ ವಿಕ್ ಶಾಲೆಯಲ್ಲಿ ತಮ್ಮ ಸಾಂಪ್ರದಾಯಿಕ ನಟ ತರಬೇತಿ ಪಡೆದು, ತಮ್ಮ ಚಿತ್ರದ ಪಾತ್ರಗಳಿಗೆ ನಿರಂತರ ಭಕ್ತಿ ಮತ್ತು ಸಂಶೋಧನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.ಇವರು ಸಾಮಾನ್ಯವಾಗಿ ಶೂಟಿಂಗ್ ಸಮಯದಲ್ಲಿ ಏಕಾಂಗಿಯಾಗಿ ತಮ್ಮ ಪಾತ್ರದ ಬಗ್ಗೆಯೇ ಯೋಚಿಸಿತ್ತಿರುತ್ತಾರೆ. ಇವರು ತಮ್ಮ ಪಾತ್ರವನ್ನು ಸೂಕ್ಷ್ಮವಾಗಿ ಆಯುತ್ತಾರೆ, ಆದರೆ ಆಯ್ದ ಮೇಲೆ ಅಷ್ಟೇ ಚೆನಾಗಿ ಅದನ್ನು ವಹಿಸುತ್ತಾರೆ. ೧೯೯೮ರಿಂದ ಐದೇ ಚಿತ್ರಗಳನ್ನು ಮಾಡಿದ್ದರೂ ಕೂಡಾ, ಐದೂ ಚಿತ್ರಗಳು ಹಿಟ್ ಆಗಿವೆ.