ಡೆರಿಲ್ ಕ್ಯಾಸ್ಟಲಿನೊ

ವಿಕಿಪೀಡಿಯ ಇಂದ
Jump to navigation Jump to search


'ಡೆರಿಲ್ ಕ್ಯಾಸ್ಟಲಿನೊ ನಡೆಸುತ್ತಿದ್ದ ಚಾಪರ್'

ಭಾರತದ ಉತ್ತರಪ್ರದೇಶದ ಸಮೀಪದ ಉತ್ತರಾಂಚಲ್ ರಾಜ್ಯದಲ್ಲಿ ಸನ್. ೨೦೧೩ ರ, ಜೂನ್, ೨೪ ರಂದು ವಿಪರೀತ ಮಳೆ ಬಿದ್ದ ಪರಿಣಾಮವಾಗಿ ಅಪಾರ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗಳ ನಷ್ಟವಾಯಿತು. ನದಿಯ ಪ್ರಕೋಪಕ್ಕೆ ಬಲಿಯಾಗಿ ಮಾರ್ಗವನ್ನು ಕಾಣದೆ ಪರಿತಪಿಸುತ್ತಿದ್ದಾಗ ಭಾರತ ಸರಕಾರದ ವಾಯಿಪಡೆಯ ಯೋಧರು ಮತ್ತು ಬಾರ್ಡರ್ ಸೆಕ್ಯೂರಿಟಿ ಯೋಧರು ತಮ್ಮ ಅಮೂಲ್ಯ ಸಹಾಯವನ್ನು ಕೊಟ್ಟು ಸಾವಿರಾರು ಜನರ ಜೀವವನ್ನು ಉಳಿಸಿದರು. ಆ ಸಮಯದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ ವಾಯುಪಡೆಯ ಎಮ್. ಐ.-೧ ೭ ವಿ. ೫ ಚಾಪರ್ ಹೆಲಿಕಾಪ್ಟರ್, ನಿರಾಶ್ರಿತರನ್ನು ಹೊತ್ತು ಕೇದಾರ್ ನಾಥ್ ನ 'ಗೌರಿ ಕುಂಡ್' ನಿಂದ ಸುರಕ್ಷಿತ ಜಾಗಕ್ಕೆ ಬರುತ್ತಿದ್ದಾಗ, ೩೮ ವರ್ಷ ಪ್ರಾಯದ ಹರೆಯದ ಮಂಗಳೂರು ಮೂಲದ ವಿಂಗ್ ಕಮಾಂಡರ್ ಡೆರಿಲ್ ಕ್ಯಾಸ್ಟಲಿನೋ ಹಾಗೂ ಭದ್ರತಾ ಪಡೆಯ ಯೋಧ ಬಸವರಾಜ್, ತಮ್ಮ ಹೆಲಿಕಾಪ್ಟರ್ ನಲ್ಲಿ ಉತ್ತರಾ ಖಂಡದ ಪ್ರವಾಹ ಸಂತ್ರಸ್ತ ರನ್ನು ರಕ್ಷಿಸಲು ತೆರಳಿದ್ದಾಗ, ಅವರ ಹೆಲಿಕಾಪ್ಟರ್ ಪತನಗೊಂಡು ಎಲ್ಲರೂ ವಿಧಿವಶರಾದದರು. ಅದರಲ್ಲಿ ವಾಯುಪಡೆ ಯೋಧ ವಿಂಗ್ ಕಮಾಂಡರ್ ಕ್ಯಾಸ್ಟಲಿನೊ ಮತ್ತು ಗಡಿ ರಕ್ಷಣಾ ಯೋಧ, 'ಬಸವರಾಜ್' ರೂ ಸೇರಿದ್ದರು. ಒಟ್ಟಾರೆ ಚಾಪರ್ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ೨೦ ಜನರಲ್ಲಿ, 'ಇಂಡೋ ಟಿಬೆಟಿಯನ್ ಬಾರ್ಡರ್ ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್' ನ ಯೋಧರು ಹೆಚ್ಚಾಗಿದ್ದರು.

ವಾಯುಪಡೆ ಯೋಧ[ಬದಲಾಯಿಸಿ]

'ಏರ್ ಕಮಾಂಡರ್ ಕ್ಯಾಸ್ಟಲಿನೊ', ಗುಪ್ತಕಾಶಿ, ಮತ್ತು ಕೇದಾರನಾಥ ದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಂತ್ರಸ್ತರ ರಕ್ಷಣೆಗೆ ತಮ್ಮ ಹೆಲಿಕಾಪ್ಟರ್ ನಲ್ಲಿ ಹೃಷಿಕೇಶ್ ಜೋಶಿಮಾಥ ಮಾರ್ಗದಲ್ಲಿ ಹಾರಾಟ ನಡೆಸುತ್ತಿದ್ದ ಸಮಯದಲ್ಲಿ ಜೂನ್ ೨೫, ಮಂಗಳವಾರ, ಈ ಅವಗಢ ಜರುಗಿತು.

ಪರಿವಾರ[ಬದಲಾಯಿಸಿ]

'ಡೆರಿಲ್ ಕ್ಯಾಸ್ಟಲಿನೊ ರವರ ಮೃತದೇಹದ ಪೆಟ್ಟಿಗೆ ಮುಂಬಯಿಗೆ ಬಂದಾಗ'

ಮುಂಬಯಿ ನಗರದ ಉಪನಗರವಾದ ವಕೋಲದ 'ಡೈಮಂಡ್ ಪಾರ್ಕ್ ಬಹುಮಹಡಿ ಕಟ್ಟಡ'ದ ಎರಡನೆಯ ಮಹಡಿಯ 'ಫ್ಲಾಟ್' ನಲ್ಲಿ ಅವರು ವಾಸವಾಗಿದ್ದರು. ತಂದೆ, ಮಂಗಳೂರಿನ ಕದ್ರಿ ಮೂಲದ 'ಕ್ಯಾಸ್ಟಲಿನೊ', ಮತ್ತು ತಾಯಿ, ಬಜ್ಜೆ ಕಿನ್ನಿಗೋಳಿ ಮೂಲದ 'ಲೀನಾ' ದಂಪತಿಗಳ ಪ್ರೀತಿಯ ಮಗನಾಗಿದ್ದ 'ಡೆರಿಲ್' ತಮ್ಮ ವೃತ್ತಿಜೀವನವನ್ನು ಐ.ಎ.ಎಫ್ ನಲ್ಲಿ ಪ್ರಾರಂಭಿಸಿದರು. ಒಳ್ಳೆಯ ಹೃದಯವಂತ ವ್ಯಕ್ತಿ. ತಮ್ಮ ವೃತ್ತಿಯಲ್ಲಿ ಅವರಿಗೆ ಬಹಳ ಪ್ರೀತಿ ಹಾಗೂ ಆಸಕ್ತಿ. ಹೆಮ್ಮೆ. ವ್ಯಾಸಂಗಮಾಡಿದ್ದು ಮುಂಬಯಿ ಉಪನಗರದ ಸಾಂತಾಕೃಜ್(ಪೂ) ವಕೋಲಾ (ಪ) 'ಹೋಲಿಕ್ರಾಸ್ ಹೈಸ್ಕೂಲಿ'ನಲ್ಲಿ. ತಾಯಿ 'ಲೀನಾ', ಸೋದರಿಯರಾದ 'ಶೆರಿಲ್', 'ಮೆರಿಲ್', ಪತ್ನಿ, 'ಜ್ಯೋತಿ', ೭ ವರ್ಷದ ಮಗ 'ಈಥಾನ್ ', ೪ ವರ್ಷದ ಮಗಳು, 'ಆಂಗೆಲಿನ' ರನ್ನು ಅಗಲಿ ಹೋಗಿದ್ದಾರೆ.

ಸಾಂತಾಕ್ಲಾಸ್[ಬದಲಾಯಿಸಿ]

ನೆರೆಮನೆಯವರಾದ ಉಜ್ವಲ ರಾಣೆ ಕ್ರಿಸ್ಮಸ್ ದಿನಗಳ ಬಗ್ಗೆ ಹೇಳುತ್ತಿದ್ದರು. ಕ್ಯಾಸ್ಟಲಿನೊ ಸಾಂತಾಕ್ಲಾಸ್ ವೇಶ ಧರಿಸಿ, ಮಕ್ಕಳಿಗೆ ಸಿಹಿ ಹಂಚುತ್ತಿದ್ದರು. ಲೀನಾರಿಗೆ ಮಗನ ಸಾವಿನ ಬಗ್ಗೆ ತಿಳಿದಿರಲಿಲ್ಲ. ಕೊಲ್ಕತ್ತಾ ತಲುಪಿದಮೇಲೆ ಅವರಿಗೆ ವಿಷಯ ತಿಳಿಯುತ್ತದೆ.

ಅಂತ್ಯ ಕ್ರಿಯೆ[ಬದಲಾಯಿಸಿ]

ಮರಣೋತ್ತರ ವೈದ್ಯಕೀಯ ಪರೀಕ್ಷೆಗೆ ಒಳಗಾಗಿರುವ ಕ್ಯಾಸ್ಟಲಿನೊ ರವರ ಪಾರ್ಥಿವ ಶರೀರವನ್ನು ತರಲು ಅವರ ಪರಿವಾರದವರು, ಕೊಲ್ಕತ್ತಾಕ್ಕೆ ಹೋಗಬೇಕಾಯಿತು. ಸನ್.೨೦೧೩ ರ, ಜೂನ್, ೨೯, ಶನಿವಾರದಂದು ಶವಪೆಟ್ಟಿಗೆ ಮುಂಬಯಿನಗರಕ್ಕೆ ಬಂತು. ಜೂನ್, ೩೦, ರವಿವಾರದಂದು ಅದನ್ನು ಮಧ್ಯಾನ್ಹ ೩ ಗಂಟೆಗೆ, ಸಾಂತಾಕೃಜ್ ಪೂ ದ, ಡೈಮಂಡ್ ಪಾರ್ಕ್ ಕಟ್ಟಡಲ್ಲಿ ವಾಸವಾಗಿರುವ ಅವರ ಫ್ಲಾಟ್ ಗೆ ತರಲಾ ಯಿತು. ಆಲ್ಲಿ ಡೆರಿಲ್ ಕ್ಯಾಸ್ಟಲಿನೊ ರವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಇದರ ಬಳಿಕ, ಮುಂದಿನ ಶವ ಸಂಸ್ಕಾರಕ್ಕಾಗಿ, ಸಾಂತಾಕೃಜ್ ಉಪನಗರದ (ಪೂ)ವಕೋಲದ ಸೇಂಟ್ ಆಂಥೋನಿ ಚರ್ಚ್ ನಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಅಂತ್ಯಕ್ರಿಯೆಯ ವಿಧಿಗಳು ಜರುಗಿದವು. ನಂತರ ಅವರ ದೇಹವನ್ನು , ಕಲೀನಾದ 'ಅವರ್ ಲೇಡಿ ಆಫ್ ಇಜಿಪ್ಟ್ ' ಸಮಾಧಿ ಭೂಮಿಯಲ್ಲಿ ದಫನ್ ಕ್ರಿಯೆ ನೆರೆವೇರಿಸಲಾಯಿತು.

  • ನಡೆಸುತ್ತಿದ್ದ ಚಾಪರ್ ಹೆಲಿಕಾಪ್ಟರ್-ತುಳುನಾಡು ಟೈಮ್ಸ್ ಇ-ಪತ್ರಿಕೆ.
  • ಶವದ ಪೆಟ್ಟಿಗೆಯನ್ನು ಹೊತ್ತು ತರುತ್ತಿರುವ ಚಿತ್ರ : ಉದಯವಾಣಿ ದಿನಪತ್ರಿಕೆ (೨೦೧೩ ರ, ಜುಲೈ.೧, ಸೋಮವಾರ)

,