ವಿಷಯಕ್ಕೆ ಹೋಗು

ಡೀಸಲ್ ನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಯಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎ ಕುಮ್ಮಿನ್ಸ್ ಡೀಸಲ್ ಜನರೇಟರ್ of 500kVA ಸಾಮರ್ಥ್ಯದ ಇದು ಈಜಿಪ್ತ್ ನ ಪ್ರವಾಸಿ ರೆಸಾರ್ಟ್ ನಲ್ಲಿದೆ.

ಒಂದು ಡೀಸಲ್ ವಿದ್ಯುತ್ ಯಂತ್ರ ವೆಂದರೆ ಇದು ಡೀಸಲ್ ಎಂಜಿನ್ ಆಗಿದ್ದು ಇದನ್ನು ಒಂದು ಎಲ್ಕ್ಟ್ರಿಕಲ್ ಜನರೇಟರ,ವಿದ್ಯುತ್ ಜನಕ (ಡೀಸಲ್ )ಯಂತ್ರ ಎಂದು ಹೇಳಲಾಗುತ್ತದೆ.(ಸಾಮಾನ್ಯವಾಗಿ ಇದನ್ನು ವಿದ್ಯುತ್ ಪ್ರವಾಹವನ್ನುಂಟು ಮಾಡುವ ಪರ್ಯಾಯಕಯಂತ್ರ) ಎನ್ನಲಾಗುತ್ತದೆ. ಡೀಸಲ್ ವಿದ್ಯುತ್ ಪ್ರವಾಹದ ಜನಕ ಯಂತ್ರಗಳನ್ನು ವಿದ್ಯುತ್ ಗ್ರಿಡ್ ನ ಸಂಪರ್ಕವಿಲ್ಲದೆಡೆ ಅಥವಾ ಪ್ರಮುಖ ಗ್ರಿಡ್ ತುರ್ತುಸ್ಥಿತಿಯಲ್ಲಿ ವಿಫಲವಾದಾಗ ಬಳಕೆ ಮಾಡಲಾಗುತ್ತದೆ. ಸಣ್ಣ ಕೈಗೆಟುಕುವ ಡೀಸಲ್ ಜನರೇಟರ್ ಗಳು ಸುಮಾರು 1 kVA ರಿಂದ 10 kVA ವರೆಗಿನ ಸಾಮರ್ಥ್ಯದ ಯಂತ್ರಗಳು ಲಭ್ಯವಾಗುತ್ತವೆ.ಇದನ್ನು ಕಟ್ಟಡ ನಿರ್ಮಾಣದ ಜಾಗೆಗಳಲ್ಲಿ,ಅಥವಾ ಸಣ್ಣ ಪ್ರಮಾಣದ ವಾಹನಗಳಿಗೆ ಅಥವಾ ಸಂಚಾರಿ ಮನೆಗಳಲ್ಲಿ ಉಪಯೋಗಿಸಲಾಗುತ್ತದೆ.

ಡೀಸಲ್ ಜನರೇಟರ್ ಸೆಟ್

[ಬದಲಾಯಿಸಿ]

ಡೀಸಲ್ ಜನರೇಟರ್ ಹಲವು ಭಾಗಗಳ ಜೋಡಣೆಯ ಸುಸಜ್ಜಿತ ಯಂತ್ರವಾಗಿದೆ.ಅದರಲ್ಲಿ ಅಂಗಜೋಡಣೆಗಳಾದ ಮೂಲಾಧಾರ,ಮೇಲ್ಛಾವಣಿ,ವಿದ್ದುದ್ದೀಪದ ಸಾಧನಗಳು,ನಿಯಂತ್ರಣ ವಿಧಾನ,ಸಕ್ಯುಟ್ ಬ್ರೆಕೆರ್ಸ್ ಗಳು ಜಾಕೆಟ್ ವಾಟರ್ ಹೀಟರ್ಸ್,ಆರಂಭದ ಉಪಕರಣ ಇತ್ಯಾದಿಗಳನ್ನೊಳಗೊಂಡಿದೆ.

ಈ ಗಾತ್ರವು ಮನೆಗಳಿಗಾಗಿ 8 to 30 kVA ನಷ್ಟಾಗಿರುತ್ತದೆ.ಸಣ್ಣ ಅಂಗಡಿಗಳು ಮತ್ತು ಕಚೇರಿಗಳುಳ್ಳ ದೊಡ್ಡ ಉದ್ದಿಮೆಗಳಲ್ಲಿ ಮತ್ತು ಸಂಕೀರ್ಣಗಳು ಮತ್ತು ಫ್ಯಾಕ್ಟರಿಗಳಿಗಾಗಿ 2,000 kVA ಸಾಮರ್ಥ್ಯದ ಯಂತ್ರವನ್ನಿಟ್ಟಿರುತ್ತಾರೆ. ಒಂದು 2,000 kVA ಸಾಮರ್ಥ್ಯದ ಸೆಟ್ 40ಅಡಿ ಧಾರಕದಲ್ಲಿಡಬಹುದಾಗಿದೆ.ಇದನ್ನು ಸಂಪೂರ್ಣವಾಗಿ ಹೊದಿಕೆಯೊಂದಿಗೆ ಸಾಗಿಸಲು ಸುಲಭಗೊಳಿಸಿ ಸಿದ್ದಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 5 MW ಸಾಮರ್ಥ್ಯದವುಗಳನ್ನು ಸಣ್ಣ ಪಾವರ್ ಸ್ಟೇಶನ್ ಗಳಲ್ಲಿ ಸ್ಥಾಪಿಸಲಾಗುತ್ತದೆ.ಇದನ್ನು ಒಂದರಿಂದ 20 ಘಟಕಗಳಿಗೂ ಬಳಸಬಹುದಾಗಿದೆ. ದೊಡ್ಡ ಗಾತ್ರದವುಗಳಲ್ಲಿ ಎಂಜಿನ್ ಮತ್ತು ಜನರೇಟರ್ ಗಳನ್ನು ಅವುಗಳಿರಬೇಕಾದ ಸ್ಥಳಗಳಿಗೆ ಪ್ರತ್ಯೇಕವಾಗಿ ತಂದು ನಂತರ ಜೋಡಿಸಲಾಗುತ್ತದೆ.

ಸಣ್ಣ ಪ್ರಮಾಣದ ಅಂದರೆ 250 kVA ಸಾಮರ್ಥ್ಯವಿರುವ ಯಂತ್ರಗಳನ್ನು ತುರ್ತು ವಿದ್ಯುತ್ ಪೂರೈಕೆಗಾಗಿ ವ್ಯಾಪಕವಾಗಿ ಉಪಯೋಗಿಸಲಾಗುತ್ತಿದೆ.ಇನ್ನು ಕೆಲವು ಯಂತ್ರಗಳಲ್ಲಿ ಹೆಚ್ಚುವರಿ ವಿದ್ಯುತ್ ಶೇಖರಣೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅದನ್ನು ಸಮಯಾನುಸಾರದ ವಿದ್ಯುತ್ ಕೊರತೆ ನೀಗಿಸಲು ಬಳಸಲಾಗುತ್ತದೆ.

ಡೀಸಲ್ ಜನರೇಟರ್ ಆನ್ ಆನ್ ಆಯಿಲ್ ಟ್ಯಾಂಕರ್

ಹಡಗುಗಳಲ್ಲಿ ಸಹ ಈ ವಿದ್ಯುತ್ ಜನಕ ಯಂತ್ರಗಳನ್ನು ಅಲ್ಲಿರುವ ಫ್ಯಾನ್ಸ್ ,ಲೈಟ್ ಮತ್ತು ಸಿಲಿಂಡರಗಳ ಸ್ಥಳಾಂತರದಲ್ಲಿ ಇದನ್ನು ಉಪಯೋಗಿಸಲಾಗುವುದಲ್ಲದೇ,ಹಡಗಿಗೆ ಬೇಕಾಗುವ ಚಲನಶೀಲ ತಿರುಗು ಚಕ್ರಕ್ಕೂ ಬೇಕಾಗುವ ವಿದ್ಯುತ್ ಗಾಗಿ ಡೀಸಲ್ ಜನರೇಟರ್ ಗಳ ಉಪಯೋಗ ಮಾಡಿಕೊಳ್ಳಲಾಗುತ್ತದೆ. ಹಡಗುಗಳಿಗೆ ಮುನ್ನೂಕುವ ನೋದಕ ಶಕ್ತಿಗಾಗಿ ಈ ಯಂತ್ರಗಳನ್ನು ಬಳಸಿ ಹೆಚ್ಚಿನ ಸಾಮರ್ಥ್ಯದ ವಸ್ತುಗಳ ಸಾಗಾಟಕ್ಕೆ ಅನುಕೂಲ ಮಾಡಲಾಗುತ್ತದೆ. ಹಡಗುಗಳಿಗೆ ಈ ವಿದ್ಯುತ್ ಚಾಲನಾ ಶಕ್ತಿ ತುಂಬುವುದು WW I ಮೊದಲ ಮಹಾಯುದ್ದಕ್ಕಿಂತಲೂ ಮೊದಲೇ ಆಚರಣೆಯಲ್ಲಿತ್ತು.ವಿದ್ಯುತ್ ಚಾಲಿತ ಶಸ್ತ್ರಾಸ್ತ್ರಗಳನ್ನು ಹಡಗಿನಲ್ಲಿಡುವ ಪದ್ದತಿ ಎರಡನೆಯ ಮಹಾಯುದ್ದ WW II ರಲ್ಲಿ ಪ್ರಚಾರ ಪಡೆಯಿತು.ಆಗ ಉತ್ಪಾದಕರ ಸಾಮರ್ಥ್ಯವು ಸೀಮಿತವಾಗಿತ್ತು,ಅದಕ್ಕೆ ಬೇಕಾದ ಗಿಯರ್ ಗಳ ದೊಡ್ಡ ಪ್ರಮಾಣದ ಉತ್ಪಾದನೆ ಅಷ್ಟಾಗಿ ತೃಪ್ತಿಕರವಾಗಿರಲಿಲ್ಲ.ವಿದ್ಯುತ್ ಉಪಕರಣ ಸಿದ್ದಪಡಿಸಲು ಅಗತ್ಯ ಕಚ್ಚಾ ಸಾಮಗ್ರಿಗಳ ಕೊರತೆಯೂ ಆಗ ಕಂಡು ಬಂದಿತ್ತು.[] ಇದೇ ತೆರನಾದ ಒಂದು ಡೀಸಲ್-ಎಲೆಕ್ಟ್ರಿಕ್ ವ್ಯವಸ್ಥೆ ಕೂಡಾ ಭೂಮಿ ಮೇಲೆ ಸಂಚರಿಸುವ ವಾಹನಗಳಲ್ಲಿಯೂ ಇತ್ತು.

ಈ ವಿದ್ಯುತ್ ಜನಕ ಯಂತ್ರಗಳನ್ನು ಅವು ಯಾವ ಘಟಕಕ್ಕೆ ಎಷ್ಟು ಪ್ರಮಾಣದ ವಿದ್ಯುತ್ ಪೂರೈಸಬೇಕು ಎಂಬುದರ ಮೇಲೆ ಸ್ಥಾಪಿಸಲಾಗುತಿತ್ತು.ಉದಾಹರಣೆಗೆ ಕೇವಲ ತುರ್ತು ಸಂದರ್ಭಗಳಲ್ಲಿ ಮಾತ್ರವೇ,ಎಷ್ಟು ಪ್ರಮಾಣದ ವಿದ್ಯುತ್ ಅಗತ್ಯ,ಯಾವುದೇ ಮಾನದಂಡದ ಯಂತ್ರದ ಬಳಕೆಯನ್ನು ಅಲ್ಲಿನ ಸಂಭಂಧಿಸಿದ ಚಟುವಟಿಕೆಗಳಿಗೆ ಬಳಸಲಾಗುತ್ತದೆ,ಇತ್ಯಾದಿ.

ವಿದ್ಯುತ್ ಸ್ಥಾವರಗಳು - ವಿದ್ಯುತ್ "ದ್ವೀಪ" ವಿಧಾನ

[ಬದಲಾಯಿಸಿ]

ಒಂದು ಅಥವಾ ಹೆಚ್ಚು ಡೀಸಲ್ ವಿದ್ಯುತ್ ಜನಕ ಯಂತ್ರಗಳು ನೇರವಾಗಿ ವಿದ್ಯುತ್ ಗ್ರಿಡ್ ಗಳಿಗೆ ಸಂಪರ್ಕ ಪಡೆಯದೇ ಇರಬಹುದು,ಇಂತಹ ಕಾರ್ಯನಿರತ ಯಂತ್ರಗಳನ್ನು "ದ್ವೀಪ ಮಾದರಿ ವಿಧಾನ" ದಲ್ಲಿರುವ ಯಂತ್ರಗಳನ್ನೆತ್ತಾರೆ. ಇಂತಹ ದ್ವೀಪ ಮಾದರಿ ವಿಧಾನದ ಎಂಜಿನ್ ಗಳು ಸಾಮಾನ್ಯ ಪರ್ಯಾಯವಾಗಿ ಇರುವ ಜನರೇಟರ್ ಗಳ ಮೂಲಕ ಸಾಕಷ್ಟು ಮತ್ತು ಲೋಡ್ ಗಳ ಸಂದರ್ಭದಲ್ಲಿ ಉತ್ತಮ ಕಾರ್ಯದಕ್ಷತೆ ನೀಡುವಲ್ಲಿ ಯಶಸ್ವಿಯಾಗುತ್ತವೆ. ಇಂತಹ ದ್ವೀಪ ಮಾದರಿಯ ವಿದ್ಯುತ್ ಜನಕ ಯಂತ್ರಗಳು ದೂರ ಪ್ರದೇಶದಲ್ಲಿರುವ ಒಂದು ವಿಶಿಷ್ಟ ಸಮುದಾಯಕ್ಕೆ ವಿದ್ಯುತ್ ನೀಡುವ ಸಂದರ್ಭದಲ್ಲಿ ಒದಗಿಸಲಾಗುತ್ತದೆ.("ಪ್ರಾಥಮಿಕ ವಿದ್ಯುತ್")ಇಲ್ಲಿ ಕನಿಷ್ಟ ಮೂರು ಡೀಸಲ್ ವಿದ್ಯುತ್ ಜನಕ ಯಂತ್ರಗಳಿರುತ್ತವೆ,ಇದರಲ್ಲಿ ಎರಡು ಆ ಪ್ರದೇಶದ ಕನಿಷ್ಟ ಲೋಡ್ ಅಥವಾ ಅಗತ್ಯಗಳನ್ನು ಪೂರೈಸುತ್ತವೆ.ಮಿಕ್ಕಿದ್ದು ತುರ್ತು ಸ್ಥಿತಿಗಳಲ್ಲಿ ಬಳಸಲಾಗುತ್ತದೆ. ಸುಮಾರು 20 ರ ಗುಂಪುಗಳು ಸಾಮಾನ್ಯವಾಗಿರುತ್ತವೆ.

ಈ ಜನರೇಟರ್ ಗಳನ್ನು ಒಟ್ಟಿಗೆ ಸಂಪರ್ಕಕ್ಕೆ ಸಿದ್ದಗೊಳಿಸಿ ಆಗಾಗ ಒಂದೊಕ್ಕೊಂದು ಪರ್ಯಾಯವಾಗಿ ಏಕಕಾಲಿಕತೆಯ ಸಮಬಲದೊಂದಿಗೆ ಚಾಲಿತವಾಗುವಂತೆ ಮಾಡಲಾಗಿರುತ್ತದೆ. ಈ ಏಕಕಾಲಿಕ ಸಮಬಲಗೊಳಿಸುವಿಕೆಯು ವಿದ್ಯುತ್ ಪ್ರವಾಹದ ಹೊಂದಾಣಿಕೆ,ಅದರ ಪ್ರವಹಿಸುವಿಕೆ ಮೇಲಿನ ಹಂತೀಯ ನಿಯಂತ್ರಣ ಮತ್ತು ಜನರೇಟರ್ ನ್ನು ಸಜೀವ ವಿದ್ಯುತ್ ಕೋಶಕ್ಕೆ ಸಂಪರ್ಕಿಸುವುದೂ ಸೇರಿದೆ. ಸಂಪರ್ಕಕ್ಕೆ ಮುಂಚೆ ಇವುಗಳನ್ನು ಏಕಕಾಲಕ್ಕೆ ಸಮಬಲಗೊಳಿಸುವುದನ್ನು ಬಿಟ್ಟರೆ ಅದು ದೊಡ್ಡ ಪ್ರಮಾಣದ ಶಾರ್ಟ್-ಸರ್ಕ್ಯುಟ್ ಅಥವಾ ಹಠಾತ್ ವಿದ್ಯುತ್ ಆಘಾತಗಳಿಗೆ ಕಾರಣವಾಗುತ್ತದೆ.ಇಲ್ಲವೆ ಜನರೇಟರ್ ನ ದುರಸ್ತಿ ಅದರ ಸ್ವಿಚ್ ಗಿಯರ್ ಇತ್ಯಾದಿಗಳ ಉಸ್ತುವಾರಿ ದುಬಾರಿಯಾಗಬಹುದು. ಈ ಏಕಕಾಲಿಕ ಸಮಬಲಗೊಳಿಸಿ ಅದರ ಕಾರ್ಯನಿಯಂತ್ರಣವು ಸಾಮಾನ್ಯವಾಗಿ ಸ್ವಯಂ-ಸಿಂಕ್ರೊನೈಜರ್ ವಿಧಾನದ ಮೂಲಕ ನಡೆಯುತ್ತದೆ. ಈ ಸ್ವಯಂ ಬಲಗೊಳಿಸುವಿಕೆಯು ವೊಲ್ಟೇಜ್ ಪ್ರಮಾಣವನ್ನು ತಿಳಿಸುತ್ತದೆ,ಅದರ ಪ್ರವಹಿಸುವ ಹಂತ,ಅಲ್ಲಿನ ಸ್ಥಾವರದ ಮಾನದಂಡ ಇತ್ಯಾದಿಗಳನ್ನು ತೋರಿಸುತ್ತದೆ.ಇಲ್ಲಿ ಈ ವಿದ್ಯುತ್ ಜನಕ ಯಂತ್ರದ ನಿರ್ವಾಹಕವನ್ನು ECM (ಎಂಜಿನ್ ಕಂಟ್ರೊಲ್ ಮಾಡ್ಯುಲ್)ಎಂಜಿನ್ ನ ವೇಗವನ್ನೂ ನಿಯಂತ್ರಣಗೊಳಿಸುತ್ತದೆ. ಇದೇ ಮಾದರಿಗಳ ಉತ್ಪಾದಕರೆಂದರೆ ಡಿಎಸ್ ಇ, ಕಾಮ್ ಏಪಿ, ಜಿಎಸಿ, ಡಿಇಐಎಫ್,ವುಡ್ ವರ್ಡ್ ಮತ್ತು ಹೆಂಜಿಮೆನ್ ಇವರು ಮಾರುಕಟ್ಟೆಯಲ್ಲಿ ಪ್ರಾಧಾನ್ಯತೆ ಪಡೆದಿದ್ದಾರೆ.

ವಿದ್ಯುತ್ ಪರಿಮಾಣದ ಲೋಡ್ ನ್ನು ಪರ್ಯಾಯ ಯಂತ್ರಗಳ ಮೂಲಕ ನಿರ್ವಹಿಸಲಾಗುತ್ತದೆ,ಕಾರ್ಯಾಚರಣೆಯಲ್ಲಿರುವ ಜನರೇಟರ್ ಗಳು ಲೋಡ್ ಹಂಚಿಕೊಳ್ಳುವ ಮೂಲಕ ಪರಿಸ್ಥಿತಿ ನಿಭಾಯಿಸಲಾಗುತ್ತದೆ. ವಿದ್ಯುತ್ ಪ್ರಸರಣದ ಲೋಡ್ ಹಂಚಿಕೆಯನ್ನು ಶಕ್ತಿಯ ವೇಗ ನಿಯಂತ್ರಣದ ಮೂಲಕ ನಿಯಂತ್ರಿಸಲಾಗುತ್ತದೆ.ಅದರ ವಿದ್ಯುತ್ ತರಂಗಾಂತರಗಳ ಅಲೆಗಳ ಪ್ರಸರಿಕೆಯನ್ನು ಹೊಂದಾಣಿಕೆ ಮಾಡಿ ಸರಬರಾಜನ್ನು ಸರಳ ಮಾಡಲಾಗುತ್ತದೆ.ಒಂದರಿಂದ ಇನ್ನೊಂದು ಜನರೇಟರಿಗೆ ಅದರ ಸಾಮರ್ಥ್ಯದ ಆಧಾರ ಮತ್ತು ಅಗತ್ಯ ವೇಳೆ ಪರಿಗಣಿಸಿ ಸಿದ್ದಗೊಳಿಸಲಾಗಿರುತ್ತದೆ. ಒಂದು ಡೀಸಲ್ ಜನರೇಟರ್ ನಲ್ಲಿನ ಇಂಧನ ಪ್ರಮಾಣ ಹೆಚ್ಚಿಸಿದಾಗ ಅದು ಇನ್ನಷ್ಟು ವೊಲ್ಟೇಜ್ ಭಾರವನ್ನು ತಡೆಯಲು ಸಮರ್ಥವಾಗುತ್ತದೆ.ಅದರ ಲೋಡ್ ಬಿಡುಗಡೆಯಾಗಿ ಇಂಧನ ಪೂರೈಕೆ ಕಡಿಮೆಯಾದರೆ ಅದರ ಸಾಮರ್ಥ್ಯವೂ ಇಳಿಕೆಯಾಗುತ್ತದೆ

ಪ್ರಧಾನ ಬಳಕೆ ಸಾಮರ್ಥ್ಯದ ಕೇಂದ್ರ ಘಟಕಗಳಿಗೆ ಪೂರಕ ಬೆಂಬಲ

[ಬದಲಾಯಿಸಿ]

ಇದಲ್ಲದೇ ಈ ಜನರೇಟರ್ ಗಳು ವಿದ್ಯುತ್ ಕೈಕೊಟ್ಟಾಗ ಪೂರೈಕೆಗೆ ಸಹಕರಿಸುವದರ ಜೊತೆಗೆ ಈ ಸೆಟ್ ಗಳು ಪ್ರಧಾನ ಸರಬರಾಜು ಕೇಂದ್ರ ಘಟಕಗಳು ಅಥವಾ ಗ್ರಿಡ್ ಗಳಿಗೆ ಎರಡು ತೆರನಾದ ಬೆಂಬಲದ ವಿಶಿಷ್ಟ ಸಹಾಯ ಮಾಡುತ್ತವೆ:

ಬೇಡಿಕೆಯ ಅತ್ಯುನ್ನತ ಸ್ಥಿತಿಯ ನಿಯಂತ್ರಣ

[ಬದಲಾಯಿಸಿ]

ಹಲವಾರು ಪ್ರದೇಶಗಳಲ್ಲಿ ನಿಗದಿತ ವೇಳೆಯಲ್ಲಿನ ಬೇಡಿಕೆಗನುಗುಣವಾಗಿ ತೆರಿಗೆ ವಿಧಾನ ಜಾರಿಯಲ್ಲಿರುತ್ತದೆ. ಯುರೊಪ್ ನಂತಹಲ್ಲಿ ಸಾಮಾನ್ಯವಾಗಿ ಚಳಿಗಾಲದ ವಾರಾಂತ್ಯದಲ್ಲಿ ಬೇಡಿಕೆ ಅಧಿಕವಾಗಿರುತ್ತದೆ.ಸಾಯಂಕಾಲದಲ್ಲಿ ಜನರು ತಮ್ಮ ತಮ್ಮ ಮನೆಗಳಿಗೆ ವಾಪಾಸಾದಾಗ ಅವರ ಅಡುಗೆಗೆ ಮತ್ತು ಬೆಳಕಿಗಾಗಿ ಅಂದರೆ ಸುಮಾರು 5.30 - 7.00 ಸಾಯಂಕಾಲದ ವೇಳೆ,ಆದರೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಸಾಮಾನ್ಯವಾಗಿ ಬೇಸಿಗೆ ಸಮಯದ ವಾತಾನುಕೂಲನಿರ್ವಹಣೆ ಅಂದರೆ ಏರ್ ಕಂಡೀಶನರ್ ಗಳ ಬಳಕೆಗೆ ಅಧಿಕ ಪ್ರಮಾಣದ ಬೇಡಿಕೆ-ಅಗತ್ಯ ಇರುತ್ತದೆ.

ಗ್ರಿಡ್ ಬೆಂಬಲ

[ಬದಲಾಯಿಸಿ]

ತುರ್ತುಸ್ಥಿತಿಗಳಲ್ಲಿ ಈ ಪರ್ಯಾಯ ಡೀಸಲ್ ಜನರೇಟರ್ ಗಳನ್ನು ಉದಾಹರಣೆಗಾಗಿ ಆಸ್ಪತ್ರೆಗಳಲ್ಲಿ,ನೀರು ಪೂರೈಕೆ ಸ್ಥಾವರಗಳಲ್ಲಿ ಒಂದು ದ್ವೀತಿಯ ಪರ್ಯಾಯವಾಗಿ ಉಪಯೋಗಿಸಲಾಗುತ್ತದೆ.ಆದರ US ಮತ್ತು UK ಗಳಲ್ಲಿನ ರಾಷ್ಟ್ರೀಯ ಸರಬರಾಜಿನ ಗ್ರಿಡ್ ಗಳಿಗೆ ಬೆಂಬಲಿಸಲು ಈ ವಿದ್ಯುತ್ ಜನಕ ಯಂತ್ರಗಳ ನೆರವು ಪಡೆಯಲಾಗುತ್ತದೆ. ಉದಾಹರಣೆಗೆ UK ನಲ್ಲಿ ಕೆಲವು 0.5 GWe ಪ್ರಮಾಣದ ಡೀಸಲ್ ವಿದ್ಯುತ್ ಜನಕ ಯಂತ್ರಗಳನ್ನು ನ್ಯಾಶನಲ್ ಗ್ರಿಡ್ ಗಳ ನೆರವಿಗೆ ವಿನಿಯೋಗಿಸಲಾಗುತ್ತದೆ.ಇಲ್ಲಿ ಅತ್ಯುನ್ನತ ಲೋಡ್ ಸುಮಾರು 60 GW ಆಗಿರುತ್ತದೆ.ಇಲ್ಲಿ ಗ್ರಿಡ್ ಗೆ ಬೆಂಬಲಿಸುವುದಕ್ಕಾಗಿ 200 kW ದಿಂದ 2 MW ವರೆಗಿನ ಜನರೇಟರ್ ಗಳಿರುತ್ತವೆ.ಉದಾಹರಣೆಗೆ ದೊಡ್ಡ ಪ್ರಮಾಣದ ಸರಬರಾಜಾಗುವ 660 MW ಸ್ಥಾವರದಲ್ಲಾಗುವ ಹಠಾತ್ ನಿಲುಗಡೆ ಅಥವಾ ಹಠಾತ್ ಆಗಿ ನೇಕಾರಿಕೆಯಂತಹ ವಲಯದಲ್ಲಿನ ಹೆಚ್ಚುವರಿ ಬೇಡಿಕೆ ಇತ್ಯಾದಿಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.[]

ಇದು ಎರಡೂ ಕಡೆಯವರಿಗೆ ಅನುಕೂಲಸಿಂಧುವಾಗಿದೆ.ಯಾಕೆಂದರೆ ಈಗಾಗಲೇ ವಿದ್ಯುತ್ ಜನಕ ಯಂತ್ರಗಳ ಖರೀದಿ ಮತ್ತು ಕಾರ್ಯಾಚಾರಣೆಯು ಹಲವಾರು ಕಾರಣಗಳಿಗಾಗಿ ಮಾಡಲಾಗಿದ್ದರೂ ಪ್ರಧಾನ ಕೇಂದ್ರಗಳ ಸರಬರಾಜನ್ನು ಗಮನಿಸಿ ಇದರ ಬಳಕೆಯಾಗುತ್ತದೆ. ಗ್ರಿಡ್ ಗಳ ಸಮಾನಾಂತರ ಸಾದೃಶ್ಯ ಬಳಕೆಯು ಒಂದು ಅನುಕೂಲಕರ ವ್ಯವಸ್ಥೆಯಾಗಿದೆ. ಈ ವಿಧಾನದಲ್ಲಿ ಮೂರನೆಯ ಪಕ್ಷಗಾರರು ಇದರ ಕಾರ್ಯಾಚರಣೆಯ ವ್ಯವಸ್ಥೆ ನೋಡಿಕೊಳ್ಳುತ್ತಾರೆ,ಅಂದರೆ ಜನರೇಟರ್ ಗಳ ವಿದ್ಯುತ್ ಉತ್ಪಾದನಾ ಚಟುವಟಿಕೆಯನ್ನೊಳಗೊಂಡಂತೆ ಎಲ್ಲಾ ತೆರನಾದ ಪರಸ್ಪರ ಸ್ಪಂದನೆಗಳ ಪ್ರತಿಕ್ರಿಯೆಗಳಿಗೂ ಅವರು ಜವಾಬ್ದಾರರಾಗಿರುತ್ತಾರೆ.

ಹೀಗೆ UK ನ ನ್ಯಾಶನಲ್ ಗ್ರಿಡ್ ಸುಮಾರು 2 GW ರ ಉತ್ಪಾದನಾ ಸ್ಥಾವರದ ಚಾಲನೆಗೆ ಪರ್ಯಾಯವಾಗಿ ಎರಡೇ ನಿಮಿಷದಲ್ಲಿ ಸರಬರಾಜನ್ನು ವ್ಯವಸ್ಥಿತಗೊಳಿಸಬಲ್ಲದು. ಇದು ಮೂಲದ ಬೇಸ್ ಲೋಡ್ ಪಾವರ್ ಕೇಂದ್ರಗಿಂತ ಶೀಘ್ರವಾಗಿ ವಿದ್ಯುತ್ ವೈಫಲ್ಯವನ್ನು ನಿಭಾಹಿಸಬಲ್ಲದು.ಒಂದು ಟರ್ಬೈನ್ ಅನಿಲ ಯಂತ್ರಗಿಂತ ವೇಗವಾಗಿ ಕಾರ್ಯಪ್ರವೃತ್ತವಾಗುತ್ತದೆ.ಯಾಕೆಂದರೆ ಇದು ಹಲವಾರು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಈ ಡೀಸಲ್ ಯಂತ್ರಗಳು ಬಹಳಷ್ಟು ದುಬಾರಿಯಾಗಿರುತ್ತವೆ,ವರ್ಷದಲ್ಲಿ ಕೆಲವೇ ಕೆಲವು ಗಂಟೆಗಳಿಗಾಗಿ ಬಳಸಬಹುದು,ಅವುಗಳ ಲಭ್ಯತೆ ಆಧಾರದ ಮೇಲೆ ಪ್ರಧಾನ ಸ್ಥಾವರ ಅಥವಾ ಗ್ರಿಡ್ ಗಳಿಂದ ವಿದ್ಯುತ್ ವ್ಯತ್ಯಯವನ್ನು ತಪ್ಪಿಸಬಹುದಾಗಿದೆ.ವೊಲ್ಟೇಜ್ ಲೋಡ್ ಗಳ ತಡೆಯುವ ಸಾಮರ್ಥ್ಯವನ್ನು ನಿರಂತರವಾಗಿಡುವಲ್ಲಿ ಇವುಗಳ ಕಾರ್ಯ ಸಫಲವಾಗುವಂತೆ ನೋಡಿಕೊಳ್ಳಲಾಗುತ್ತದೆ. ಡೀಸಲ್ ಇಂಧನ ಬಳಕೆಯು ಸಾಮಾನ್ಯವಾಗಿ ಪ್ರಯೋಗಾರ್ಥದ ಅಥವಾ ಪರೀಕ್ಷಾರ್ಥ ಸಂದರ್ಭಗಳಲ್ಲಿ ಉಪಯೋಗ ಹೆಚ್ಚು. ನೋಡಿ ಕಂಟ್ರೊಲ್ ಆಫ್ ದಿ ನ್ಯಾಶನಲ್ ಗ್ರಿಡ್, ನ್ಯಾಶನಲ್ ಗ್ರಿಡ್ ರಿಜರ್ವ್ ಸರ್ವಿಸ್ [][]

ಇದೇ ತೆರನಾದ ವಿಧಾನ ಫ್ರಾನ್ಸ್ ನಲ್ಲಿ ಜಾರಿ ಇರುವ EJP ಗ್ರಿಡ್ ನ ಸಾಮರ್ಥ್ಯಗನುಗುಣವಾಗಿ ಗರಿಷ್ಟ ಉಪಯೋಗ ಮಾಡಲಾಗುತ್ತದೆ.ಇದರಿಂದ ಕನಿಷ್ಟ 5 GW ಡೀಸಲ್ ಇಂಧನದ ಬಳಕೆಯಿಂದ ಗ್ರಿಡ್ ಕೇಂದ್ರಕ್ಕೆ ಬೆಂಬಲವಾಗಿರುತ್ತದೆ.ಈ ಪ್ರಕರಣದಲ್ಲಿ ಡೀಸಲ್ ಎಂಜಿನ್ ಗಳ ಪ್ರಧಾನ ಕಾರ್ಯಚಟುವಟಿಕೆಯು ಗ್ರಿಡ್ ಗಳಿಗೆ ಹೆಚ್ಚು ಇಂಧನ ಒದಗಿಸುತ್ತದೆ.[]

ಸಾಮಾನ್ಯ ಕಾರ್ಯಚಟುವಟಿಕೆಯ ಏಕರೂಪದ ಸಮಬಲದ ವಿದ್ಯುತ್ ಪೂರೈಕೆಯ ನಿಯಂತ್ರಣ ಮತ್ತು ಸ್ಥಾವರದ ಶಕ್ತಿಗುಂದುವ ವೇಗ ನಿಯಂತ್ರಣ ಅಂದರೆ ಶೇಕಡಾ ಐದರಷ್ಟು ಬಲಕಡಿಮೆಗೊಳಿಸಿ ಸರಬರಾಜು ಮಾಡಲಾಗುತ್ತದೆ. ಅಂದರೆ ಪೂರ್ಣಪ್ರಮಾಣದ ಲೋಡ್ 100% ರಷ್ಟಾದರೆ ಲೋಡ್ ರಹಿತ ವೇಗವು 105% ರಷ್ಟಾಗಿರುತ್ತದೆ. ವಿದ್ಯುತ್ ಜಾಲವನ್ನು ಕಾರ್ಯಚಟುವಟಿಕೆಗೆ ಸಿದ್ದಗೊಳಿಸಿ ಅದರ ನಿಯಂತ್ರಣ ಮಾಡಿ ಅಗತ್ಯ ಸ್ಥಾವರಕ್ಕೆ ದಕ್ಷತೆ ತುಂಬುವುದಾಗಿದೆ. ವಾಡಿಕೆಯಲ್ಲಿ ವೇಗದಲ್ಲಿನ ಬದಲಾವಣೆಗಳು ಅಲ್ಪಪ್ರಮಾಣದೆನಿಸುತ್ತವೆ. ವಿದ್ಯುತ್ ನ ಒಟ್ಟು ಉತ್ಪಾದನೆಯನ್ನು ಸಣ್ಣ ಪ್ರಮಾಣದ ಶಕ್ತಿಕಡಿಮೆಗೊಳಿಸುವ ತಿರುವಿನ ವೇಗ ಹೆಚ್ಚಿಸಿ ಸಮಯ-ಸಂದರ್ಭದ ಒತ್ತಡಗಳನ್ನು ಕೇಂದ್ರೀಯ ನಿಯಂತ್ರಕದ ಮೇರೆಗೆ ಮಾಡಬಹುದಾಗಿದೆ. ಒಟ್ಟಾರೆಯಾಗಿ ಎಲ್ಲಾ ವಿದ್ಯುತ್ ಸ್ಥಾವರಗಳಲ್ಲಿ ಮೂಲ ಅಗತ್ಯ ಬೇಡಿಕೆಗಳನ್ನು ಪೂರೈಸಲು ವಿಧಾನಗಳ ಅಳವಡಿಕೆ ಅವಶ್ಯವಾಗಿದೆ.ಹೊಸ ಸ್ಥಾವರಗಳ ಕಾರ್ಯದಕ್ಷತೆ ಹೆಚ್ಚಿಸಿ ಅವುಗಳ ಪೂರ್ಣ ಸಾಮರ್ಥ್ಯ ಬಳಸಲು ಬೆಂಬಲಿತ ಜನರೇಟರ್ ಗಳ ಬೇಡಿಕೆ ಇದ್ದೇ ಇರುತ್ತದೆ.ವಿದ್ಯುತ್ ಅಲೆಗಳ ಪ್ರವಹಿಸುವ ಪ್ರಕಾರ ಹೊರಗಿನ ಮತ್ತು ಆಂತರಿಕ ಉತ್ಪಾದನೆಗಳಿಗೆ ಆದ್ಯತೆ ನೀಡಲೇಬೇಕಾಗುತ್ತದೆ. []

ವಿದ್ಯುತ್ ತಯಾರಿಕೆ ಖರ್ಚು-ವೆಚ್ಚ

[ಬದಲಾಯಿಸಿ]

ನೋಡಿ: ವಿವಿಧ ಮೂಲಗಳಿಂದ ವಿದ್ಯುತ್ ತಯಾರಿಕೆಗಾಗಿ ತಗಲುವ ವೆಚ್ಚದ ಪ್ರಮಾಣ

ಮಾದರಿ ರೂಪದ ಕಾರ್ಯಾಚರಣೆ ವೆಚ್ಚಗಳು

[ಬದಲಾಯಿಸಿ]

ಡೀಸಲ್ ಸ್ಥಾವರಗಳಲ್ಲಿನ ಇಂಧನದ ದುಬಾರಿ ವೆಚ್ಚವು ವಿದ್ಯುತ್ ಅಳವಡಿಕೆಯ ಸೂತ್ರಗಳಿಗೆ ವೆಚ್ಚದಾಯಕವಾಗಿ ಪರಿಣಮಿಸುತ್ತದೆ.ಬೆಂಬಲಿತ ತುರ್ತು ನೆರವಿನ ಜನರೇಟರ್ ಗಳಲ್ಲಿ ಹೆಚ್ಚು ವೆಚ್ಚ ತಗಲುವುದು ಕಳವಳಕಾರಿ ವಿಷಯವಾಗಿದೆ. ವಿಶೇಷ ಸಂದರ್ಭದಲ್ಲಿನ ಇಂಧನ ಬಳಕೆಯು ವ್ಯತ್ಯಾಸಗೊಳ್ಳುತ್ತದೆ,ಆದರೆ ಒಂದು ಆಧುನಿಕ ಡೀಸಲ್ ಸ್ಥಾವರ 0.28 ಮತ್ತು 0.4 ಲೀಟರ್ಸ್ ಗಳಷ್ಟು ಇಂಧನ ಬಳಸುತ್ತದೆ.ಜನರೇಟರ್ ಟರ್ಮಿನಲ್ ಬಳಿಯ ಕಿಲೊವ್ಯಾಟ್ ಅವರ್ ಅನುಪಾತದಲ್ಲಿ ಇಂಧನ ಖರ್ಚನ್ನು ಗಣಿಸಬಹುದಾಗಿದೆ.

ಆದಾಗ್ಯೂ ಡೀಸಲ್ ಎಂಜಿನ್ ಗಳು ವಿಭಿನ್ನ ಡೀಸಲ್ ಇಂಧನಗಳ ಬಳಸಿ ಕೆಲಸ ಮಾಡುತ್ತವೆ.ಆ ಎಂಜಿನ್ ರಚನಾ ವಿನ್ಯಾಸ,ಅದಕ್ಕೆ ತಕ್ಕುದಾದ ಡೀಸಲ್ ಇಂಧನ ಅದನ್ನು ಕಚ್ಚಾ ಎಣ್ಣೆಯಿಂದ ಪರಿಷ್ಕರಣಗೊಳಿಸಿ ತೆಗೆಯುವುದು ಸಾಮಾನ್ಯವಾಗಿದೆ. ಈ ಎಂಜಿನ್ ಗಳು ಕಚ್ಚಾ ತೈಲದ ಶುದ್ದೀಕರಣದ ಸಂಪೂರ್ಣ ಸಾಮರ್ಥ್ಯಕ್ಕಾಗಿ ಕೆಲಸ ಮಾಡುತ್ತವೆ.ಇದನ್ನು ನೈಸರ್ಗಿಕ ಅನಿಲ,ಆಲ್ಕಹಾಲ್ ಗಳು,ಗ್ಯಾಸೊಲಿನ್ ಸೌದೆ ಅನಿಲ ದಿಂದ ಪಡೆಯಲಾಗಿರುತ್ತದೆ.ಇವುಗಳನ್ನು ಇಂಧನ ತೈಲಗಳ ರೂಪದಲ್ಲಿ ಗೃಹೋಪಯೋಗಿ ವಿಷಯಗಳಲ್ಲೂ ಬಳಕೆ ಮಾಡಲಾಗುತ್ತದೆ.[] ಇದನ್ನು ಅನಿಲವು ಗಾಳಿಯನ್ನು ಒಳಪಡೆಯುವ ವಿಧಾನದ ಮೂಲಕ ಪರಿಚಯಿಸಲಾಗುತ್ತದೆ.ಸಣ್ಣ ಪ್ರಮಾಣದ ಡೀಸಲ್ ನ್ನು ಅದರ ಆರಂಭಿಕ ಚಾಲನಾಶಕ್ತಿ ತುಂಬಲು ಬಳಸಲಾಗುತ್ತದೆ. ಹೀಗೆ 100% ರಷ್ಟು ಡೀಸಲ್ ಇಂಧನವನ್ನು ಕಾರ್ಯಾಚರಣೆಗಾಗಿ ಬಳಸಿ ಅದೇ ವೇಳೆಗೆ ಉತ್ಪಾದನೆ ಮತ್ತು ವಿದ್ಯುತ್ ಪರಿವರ್ತನಾ ಗುರಿಗೆ ತಲುಪಬೇಕಾಗುತ್ತದೆ.[]

  • ಇಂಧನ ವೆಚ್ಚ 11p - 16p/kWh (ಇಲ್ಲಿ ಕೆಂಪು ಡೀಸಲ್ ನ್ನು 40p/ಲೀಟರ್ ದರದಲ್ಲಿ)
  • ಜೀವಮಾನವಿಡೀ ಉಸ್ತುವಾರಿ ವೆಚ್ಚ ಸುಮಾರು 0.5p/kWh - 1.0/kWh[]

ಗ್ರಿಡ್ ಕಾರ್ಯಾಚರಣೆಗಾಗಿ ಪರ್ಯಾಯ ಪರಿವರ್ತನೆಯ ಮಾದರಿ ವೆಚ್ಚಗಳು

[ಬದಲಾಯಿಸಿ]

ಪರ್ಯಾಯವಾಗಿ ಕಾರ್ಯಚಟುವಟಿಕೆಗೆ ಪೂರಕವಾಗಲು ಪ್ರಧಾನ ನಿಶ್ಚಿತ ಸುಧಾರಣೆಗಳ ಅಗತ್ಯವಿದೆ.ಅದರಲ್ಲಿ ಮುಖ್ಯವಾದವುಗಳೆಂದರೆ:

  • ಅಂದಾಜು. £3k ಈ ಅಳತೆಗೆ ಸೂಕ್ತವಾಗುವ PLC ಯು ಆ ಸೆಟ್ ಗೆ ಅಳವಡಿಸಲಾಗುತ್ತೆ.
  • ಪರ್ಯಾಯಗೊಳಿಸುವಿಕೆ ಮತ್ತು ಏಕಕಾಲಿಕ ಸಮಬಲದ ಸರಬರಾಜು ನಿಯಂತ್ರಣ ಮತ್ತು G59 ಉಪಕರಣ.(ಇದು ಗ್ರಿಡ್ ಸಂಪರ್ಕವನ್ನು ಕಲ್ಪಿಸುತ್ತದೆ)ಅಂದಾಜು £5k
  • ಸೆಟ್ ನ್ನು ಸಮಪ್ರಮಾಣದಲ್ಲಿ ನಿಯಂತ್ರಿಸುವುಕೆ (ಸದ್ದು, ವಿಶಾಲ ಇಂಧನ ಟ್ಯಾಂಕ್) ಅಪ್ರೊಕ್ಸ್ ಮತ್ತೊಂದು £5k
  • ಇಲ್ಲಿಯವರೆಗೆ 1MW ಸೆಟ್…£13/kW
  • 50 kW…ಗೆ £260/kW ಪೂರಕವಾಗಬಹುದು.

ಈ ಬಂಡವಾಳದ ಸ್ಥಿರ ಅಸಲಿನ ವೆಚ್ಚವು £13/kW - £260/kW ರಷ್ಟಾಗಿರುತ್ತದೆ.ಅದನ್ನು ಸಂಯೋಜಿತ ಚಕ್ರೀಯ ಅನಿಲ ಟರ್ಬೈನ್ ಗಳ ವೆಚ್ಚಕ್ಕೆ ಹೋಲಿಸಿದರೆ ಅದರದು £350/kW ಎಂದು ಅಂದಾಜಿಸಲಾಗಿದೆ.[]

ಜನರೇಟರ್ ನ ಗಾತ್ರ ಗುರುತಿಸುವಿಕೆ ಮತ್ತು ದರಗಳು

[ಬದಲಾಯಿಸಿ]

ದರ ಪ್ರಮಾಣ ಮಾಪಕ

[ಬದಲಾಯಿಸಿ]

ಸಾಮಾನ್ಯವಾಗಿ ವಾಡಿಕೆಯಂತೆ ಜನರೇಟರ್ ಗಳು ವಾರ್ಷಿಕವಾಗಿ ಇಷ್ಟು ಗಂಟೆಗಳ ವರೆಗೆ ವಿದ್ಯುತ ಉತ್ಪಾದನೆಗೆ ಸಮರ್ಥವಾಗಿರುವಂತೆ ವಿನ್ಯಾಸಕಾರರು ನಿರ್ಮಿಸಿರುತ್ತಾರೆ,ಅದರ ಸೂಕ್ತ ಚಾಲನೆ ಮತ್ತು ಕಾರ್ಯಾಚರಣೆಗೆ ಅನುಕೂಲವಾಗಲು ಹಾಗು ಅದರ ಹಾನಿ ತಪ್ಪಿಸಲು ಸರಿಯಾದ ನಿಗಾವಹಿಸುವುದು ಅತ್ಯಗತ್ಯವಾಗಿದೆ. ಮಾದರಿಯಾಗಿ ಒಂದು ಸೆಟ್ ವಾರ್ಷಿಕವಾಗಿ ಕೆಲವು ಗಂಟೆಗಳ ಅವಧಿಗೆ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು ಅಥವಾ ನಿರಂತರವಾಗಿ ವಿದ್ಯುತ ಉತ್ಪಾದನೆಯಲ್ಲಿಯೂ ತೊಡಗಿರಬಹುದಾದ ಸಾಧ್ಯತೆ ಇದೆ. ಬದಲಿ ವ್ಯವಸ್ಥೆಯಾಗಿರಿಸಿದ ಜನರೇಟರ್ ಸೆಟ್ ವಾರ್ಷಿಕವಾಗಿ ಅತ್ಯಧಿಕ ಬೇಡಿಕೆ ಅವಧಿಯಲ್ಲಿ ತನ್ನ ಕ್ಷಮತೆ ತೋರುತ್ತದೆ.ಆದರೆ ನಿರಂತರವಾಗಿ ನಡೆಯುವ ಸೆಟ್ ಕಡಿಮೆ ಉತ್ಪಾದನೆ ನೀಡುವ ಸಾಧ್ಯತೆ ಹೆಚ್ಚು.ಏನೇ ಆದರೂ ಅವೆರಡನ್ನೂ ಸಂದರ್ಭಕ್ಕನುಗುಣವಾಗಿ ದುರಸ್ತಿ,ಕಾಳಜಿ ಪೂರ್ವಕ ರಕ್ಷಣೆಯ ಅಗತ್ಯವಿದೆ.

ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜನರೇಟರ್ ಗಳ ಉತ್ಪಾದಕನು ಅವುಗಳಿಗೆ ಅಂತರರಾಷ್ಟ್ರೀಯ ಒಪ್ಪಿತ ವ್ಯಾಖ್ಯಾನಗಳಿಗನುಗುಣವಾಗಿ ನಿಗದಿತ ದರ ಪ್ರಮಾಣೀಕೃತ ವನ್ನು ನೀಡಿರುತ್ತಾನೆ.

ಇಂತಹ ಶ್ರೇಣೀಕೃತ ಗುಣಮಟ್ಟದ ದರದ ವ್ಯಾಖ್ಯಾನವನ್ನು ಈ ಯಂತ್ರದ ಸರಿಯಾದ ನಿಗಾವಹಿಸುವ ನಿಟ್ಟಿನಲ್ಲಿ ಬಳಸಲಾಗುತ್ತದೆ.ಇದರಿಂದ ಕೊಳ್ಳುವವರಿಗೆ ಇತರ ಉತ್ಪನ್ನಗಳ ಹೋಲಿಕೆಗೆ ಅನುಕೂಲವಾಗುತ್ತದೆ.ಕೆಲವು ಉತ್ಪಾದಕರು ಅವುಗಳ ಕಾರ್ಯದಕ್ಷತೆ ಬಗ್ಗೆ ಹಾದಿ ತಪ್ಪಿಸುವ ವಿವರಗಳನ್ನು ನೀಡುವ ಸಾಧ್ಯತೆ ಇದೆ.ಇದರಿಂದಾಗಿ ಪ್ರತಿ ಜನರೇಟರ್ ನೊಡನೆ ಅದರ ಬಳಕೆ,ಬಾಳಿಕೆ,ದಕ್ಷತೆ,ಕಾರ್ಯಕ್ಷಮತೆ ಮತ್ತು ಸವಕಳಿ ತತ್ವಗಳ ಪೂರ್ಣ ಪಾಠ ಇರಬೇಕಾಗುತ್ತದೆ.

ಜನರೇಟರ್ ರೇಟಿಂಗ್ ಡೆಫೆನಿಶನ್ಸ್ [](ವಿದ್ಯುತ್ ಜನಕಗಳ ದರ ಪ್ರಮಾಣೀಕೃತದ ವ್ಯಾಖ್ಯಾನಗಳು)


ಸ್ಟ್ಯಾಂಡ್ ಬೈ ರೇಟಿಂಗ್ ಮೂಲ ದಲ್ಲಿ ಅದರ ಅಳವಡಿಕೆಗೆ ಸಂಭಂಧಿಸಿದೆ.ತುರ್ತು ಸ್ಥಿತಿಯಲ್ಲಿ ವಿದ್ಯುತ್ ಪೂರೈಕೆ ಅದರ ಕರ್ತವ್ಯವಾಗಿದೆ.ಇನ್ನಿತರ ಜನರೇಟರ್ ಗಳ ಕಾರ್ಯದಕ್ಷತೆ ಮೀರಿ ಸಾಮಾನ್ಯ ವಿದ್ಯುತ್ ಕಡಿತಕ್ಕಿಂತ ವಿಶೇಷ ಸಂದರ್ಭಗಳಲ್ಲಿ ಈ ರೇಟಿಂಗ್ ಪರಿಗಣಿಸಲ್ಪಡುತ್ತದೆ. ಆದರೆ ನಿರಂತರ ಸಮಯದ ಲಭ್ಯತೆಯ ಸಾಮರ್ಥ್ಯದ ಮೇಲೆ ಇದರ ಉತ್ಪಾದನಾ ದರವನ್ನು ನೀಡಲಾಗುತ್ತದೆ. (ಇದು ಫ್ಯುಯಲ್ ಸ್ಟಾಪ್ ಪಾವರ್ ಗೆ ಸಮನಾಗಿದೆ,ಅಂತರರಾಷ್ಟ್ರೀಯ ಪ್ರಮಾಣೀಕೃತ ದರ ISO3046, AS2789, DIN6271 ಮತ್ತು BS5514) ಅವಲಂಬಿಸಿದೆ. ನಾಮಮಾತ್ರಕ್ಕೆ ಸಂಬಂಧಿಸಿದ ದರ ನಿಗದಿ.

ಏಕರೂಪದ ಅಳವಡಿಕೆ-ಆಸ್ಪತ್ರೆಗಳಲ್ಲಿ,ಕಚೇರಿಗಳಲ್ಲಿ,ಫ್ಯಾಕ್ಟರಿಗಳಲ್ಲಿ ತುರ್ತು ವಿದ್ಯುತ್ ಸ್ಥಾವರ ಸ್ಥಾಪನೆ ಮೂಲಕ ಸರಬರಾಜು.ಇದು ಗ್ರಿಡ್ ಗೆ ಸಂಪರ್ಕ ಹೊಂದಿರುವುದಿಲ್ಲ.


ಪ್ರಧಾನ(ಅನ್ ಲಿಮಿಟೆಡ್ ರನ್ನಿಂಗ್ ಟೈಮ್) ದರ ನಿಗದಿಕರಣ: ಆದರೆ ಇದನ್ನು ವಿದ್ಯುತ್ ಅಳವಡಿಕೆಯ ರಚನಾ ವಲಯದಲ್ಲಿ ಮಾತ್ರ ಪರಿಗಣಿಸಲಾಗದು. ಅಪರಿಮಿತ ಅವಧಿಯ ವೊಲ್ಟೇಜ್ ಲೋಡ್ ನಿರ್ವಹಿಸಲು ಲಭ್ಯವಿರುವ ಒಟ್ಟು ವಿದ್ಯುತ್ ಉತ್ಪಾದನೆ. ಸರಾಸರಿ ಉತ್ಪಾದನೆಯು ಪ್ರಧಾನ ದರಕ್ಕಿಂತ 70% ರಷ್ಟಿರುತ್ತದೆ. ಮಾದರಿಯ ಅತ್ಯಧಿಕ ಬೇಡಿಕೆಯ ಪ್ರಧಾನ-ದರ ಪ್ರಮಾಣಿತ ekW 100% ರಷ್ಟಾದರೆ ಅದರಲ್ಲಿ 10% ರಷ್ಟು ಅಧಿಕ ಲೋಡಿನ ಪ್ರಮಾಣವು ತುರ್ತು ಸಂದರ್ಭದಲ್ಲಿ ಅದನ್ನು ಬಳಸಿಕೊಳ್ಳಬಹುದಾಗಿದೆ.ಗರಿಷ್ಟ 12 ರಲ್ಲಿ 1ಗಂಟೆಯ ಅವಧಿಗೆ ಅದರ ಕಾರ್ಯದಕ್ಷತೆ ಪ್ರಮಾಣೀಕೃತವಾಗಿರುತ್ತದೆ. ಹೀಗೆ ಒಂದು 10% ಅಧಿಕ ಲೋಡ್ ನ ಕಾರ್ಯಕ್ಷಮತೆಯು ನಿಗದಿತ ಅವಧಿಗೆ ಮಾತ್ರ ಲಭ್ಯವಾಗುತ್ತದೆ. (ಇದು ಪ್ರಧಾನ ವಿದ್ಯುತ್ ಶಕ್ತಿ ಪ್ರಮಾಣವು ಇದಕ್ಕೆ ISO8528 ಸಮನಾಗಿರುತ್ತದೆ.ಅದಲ್ಲದೇ ಅತ್ಯಧಿಕ ಲೋಡ್ ನ್ನು ಇದಕ್ಕನುಗುಣವಾಗಿ ISO3046, AS2789, DIN6271, ಮತ್ತು BS5514 ಆಗುತ್ತದೆ). ಈ ದರದ ಪ್ರಮಾಣವು ಎಲ್ಲಾ ಜನರೇಟರ್ ಸೆಟ್ ಮಾದರಿಗೆ ಅನ್ವಯಿಸಲಾಗುತ್ತದೆ.

ಅದೇ ಮಾದರಿಯ ಅಳವಡಿಕೆ-ಎಲ್ಲಿ ಈ ಜನರೇಟರ್ ಏಕೈಕ ವಿದ್ಯುತ್ ಮೂಲವಾಗಿದೆಯೋ ಅಂದರೆ ದೂರದ ಗಣಿಗಾರಿಕೆ ಪ್ರದೇಶ ಅಥವಾ ನಿರ್ಮಾಣ ಪ್ರದೇಶ,ಜಾತ್ರಾ-ಪ್ರದರ್ಶನ ಜಾಗೆ,ಹಬ್ಬ ಹರಿದಿನಗಳು ಇತ್ಯಾದಿಗಳಲ್ಲಿನ ಜಾಗೆಗಳಲ್ಲಿ ಇಂತಹವುಗಳ ಅಳವಡಿಕೆಯಾಗಿರುತ್ತದೆ.


ಮೂಲ ಲೋಡ್ (ನಿರಂತರ)ದರ ಪ್ರಮಾಣೀಕರಣವು ಆಧರಿಸಿದ್ದೆಂದರೆ :ವಿದ್ಯುತ್ ನ್ನು ತಡೆರಹಿತವಾಗಿ ಸ್ಥಿರ ಲೋಡ್ ಬೇಡಿಕೆ ಮೇಲೆ ಅಸೀಮಿತ ಗಂಟೆಗಳಿಗಾಗಿ ಉತ್ಪಾದನೆಯ ದರ ಪ್ರಮಾಣದ ಮೇಲೆ ಸರಬರಾಜು ಮಾಡುವುದು. ಇಂತಹ ದರ ಪ್ರಮಾಣದಲ್ಲಿ ಅಧಿಕ ಲೋಡ್ ಕುರಿತ ಕಾರ್ಯದಕ್ಷತೆಯು ಪ್ರಮಾಣಿಕೃತದಲ್ಲಿ ಲಭ್ಯವಾಗದು. ಪ್ರಮಾಣೀಕರದ ದರ ನಿಗದಿಗೆ ಅಧಿಕೃತ ಹಂಚಿಕೆದಾರರನ್ನು ಸಂಪರ್ಕಿಸಬೇಕಾಗುತ್ತದೆ. (ಇಲ್ಲಿನ ನಿರಂತರ ವಿದ್ಯುತ್ ಪೂರೈಕೆ ಪ್ರಮಾಣ ದರವು ಇವುಗಳಿಗೆ ಸಮನಾಗಿರುತ್ತದೆ.ಜೊತೆಗೆ ISO8528, ISO3046, AS2789, DIN6271, ಮತ್ತು BS5514)ಇತ್ಯಾದಿ ದರ ನಿಗದಿಕರಣ ಮಾನದಂಡಗಳಾಗಿವೆ. ಈ ದರದ ಪ್ರಮಾಣವು ಎಲ್ಲಾ ಜನರೇಟರ್ ಸೆಟ್ ಮಾದರಿಗೆ ಅನ್ವಯಿಸಲಾಗದು.

ಏಕರೂಪತೆಯ ಅನ್ವಯಿಸುವಿಕೆ-ನಿರಂತರವಾಗಿ ಓಡುವ ಜನರೇಟರ್ ಯಾವುದೇ ಲೋಡ್ ವ್ಯತ್ಯಾಸವಿಲ್ಲದೇ ಕಾರ್ಯಪ್ರವೃತ್ತವಾದಾಗ ಅದರ ಗರಿಷ್ಟ ಪ್ರಮಾಣದ ವಿದ್ಯುತ್ ಶಕ್ತಿ ಪೂರೈಕೆಯನ್ನು ವಾರ್ಷಿಕವಾಗಿ 8760 ಗಂಟೆಗಳಾಗಿರುತ್ತದೆ ಎಂದು ಅಂದಾಜು ಮಾಡಲಾಗುತ್ತದೆ. ಈ ನಿಯಮವು ಅತ್ಯಧಿಕ ಬೇಡಿಕೆಯ-ಲಭ್ಯ/ಗ್ರಿಡ್ ಬೆಂಬಲವನ್ನು ಪರಿಗಣಿಸಿದಾಗ ಇದು ವಾರ್ಷಿಕ 200 ಗಂಟೆಗಳೆಂದು ಗುರುತಿಸಬಹುದು.

ಉದಾಹರಣೆಯೊಂದರಲ್ಲಿ ವಿಶಿಷ್ಟ ಸೆಟ್ ವೊಂದರಲ್ಲಿ ಸ್ಟ್ಯಾಂಡ್ ಬೈ ರೇಟಿಂಗ್ 1000 kW,ಆಗಿದ್ದರೆ ಪ್ರಧಾನ ವಿದ್ಯುತ್ ರೇಟಿಂಗ್ 850 kW ನಮೂದಾಗುತ್ತದೆ.ಅಲ್ಲದೇ ನಿರಂತರ ರೇಟಿಂಗ್ ಪ್ರಮಾಣವು 800 kW ಆಗಿರುತ್ತದೆ.ಈ ಪ್ರಮಾಣೀಕೃತ ದರವು ವಿದ್ಯುತ್ ಜನಕದ ಉತ್ಪಾದನಾ ಸಾಮರ್ಥ್ಯ ಅವಲಂಬಿಸಿದ್ದು ಅದರ ಉತ್ಪಾದಕನ ಉತ್ಪನ್ನದ ಮಾಹಿತಿಯಲ್ಲಿ ಇನ್ನಷ್ಟು ಅಂಕಿಅಂಶ ಪಡೆಯಬಹುದು.

ಅಂಕಿಅಂಶದ ಫಲಕದ ಮೇಲೆ ಮೂರೂ ರೇಟಿಂಗ್ ಗಳ ನಮೂದೆಯಾಗಿದ್ದರೂ ಕೆಲವು ವೇಳೆ ಇದು ಅಗತ್ಯದ ಸ್ಟ್ಯಾಂಡ್ ಬೈ ರೇಟಿಂಗ ಅಥವಾ ಪ್ರಧಾನ ರೇಟಿಂಗ್ ಆಗಿರಲು ಸಾಧ್ಯ.

ಗಾತ್ರ ವಿವರಣೆ

[ಬದಲಾಯಿಸಿ]

ಎಷ್ಟು ವಿದ್ಯುತ್ ನ್ನು ಯಾವ ಪ್ರಮಾಣದಲ್ಲಿ ಗರಿಷ್ಟ ಲೋಡ್ ಗೆ ಅನುಗುಣವಾಗಿ ಪಡೆಯಬೇಕೆಂಬುದನ್ನು ಅದರ ಸಂಪರ್ಕದ ಕೊಂಡಿಯಿಂದ ಪಡೆಯಬೇಕಾಗುತ್ತದೆ.ಆಗ ಕೇವಲ ದರ ನಿಗದಿ ಪ್ರಮಾಣವೊಂದೇ ಸಾಕಾಗುವುದಿಲ್ಲ ಅಗತ್ಯ ಪ್ರಮಾಣಕ್ಕೆ ತಕ್ಕಂತೆ ನಡೆಸಿಕೊಂಡು ಹೋಗಬೇಕಾಗುತ್ತದೆ. ಸೆಟ್ ಮೋಟಾರ ಚಾಲನೆಯಿಂದ ಆರಂಭಗೊಳ್ಳುತ್ತಿದ್ದರೆ ಅದು ಕನಿಷ್ಟ 3 ಪಟ್ಟು ಮೊಟಾರ್ ಗಿಂತ ಗಾತ್ರದಲ್ಲಿ ದೊಡ್ಡದಿರಬೇಕಾಗುತ್ತದೆ.ದೊಡ್ಡ ಮೋಟಾರ್ ಇದ್ದರೆ ಅದನ್ನು ಸಾಮಾನ್ಯವಾಗಿ ಮೊದಲು ಚಾಲಿತಗೊಳಿಸಬೇಕಾಗುತ್ತದೆ. ಇದರರ್ಥವೆಂದರೆ ಎಲ್ಲಿ ಬೇಕಾದಲ್ಲಿಯೂ ಇದನ್ನು ದರಪ್ರಮಾಣಿಕೃತದೊಂದಿಗಿನ ಸೆಟ್ ನ್ನುಆಯ್ಕೆ ಮಾಡಲಾಗದು.

ಆದ್ದರಿಂದ ಉತ್ಪಾದಕರು ಯಾವ ಪ್ರದೇಶದಲ್ಲಿ ಯಾವ ಪ್ರಮಾಣದ ಲೋಡ್ ಗೆ ಎಂತಹ ಸೆಟ್ ಅಳವಡಿಸಬೇಕೆಂಬುದನ್ನು ನಿರ್ಧರಿಸಿರುತ್ತಾರೆ.ಇದಕ್ಕಾಗಿ ಅವರು ಆಧುನಿಕ ಸಾಫ್ಟ್ ವೇರ್ ಬಳಕೆ ಮಾಡಿರುತ್ತಾರೆ.

ಸೂಕ್ತರೀತಿಯಲ್ಲಿ ಜನರೇಟರ್ (ವಿದ್ಯುತ್ ಜನಕ ಯಂತ್ರ)ಸ್ಥಾಪನೆ

[ಬದಲಾಯಿಸಿ]

ಜನರೇಟರ್ಸ್ ಗಳನ್ನು ಸೂಕ್ತ ರೀತಿಯಲ್ಲಿ,ಸಮರ್ಪಕವಾದ ಬಗೆಗಳಲ್ಲಿ ಸಂಸ್ಥಾಪಿಸುವುದರಿಂದ ಅವುಗಳ ಉತ್ತಮ ಕಾರ್ಯದಕ್ಷತೆ,ಚಾಲನಾ ಸಾಮರ್ಥ್ಯ ಹೆಚ್ಚಿಸಬಹುದು. ಇವುಗಳ ಉತ್ಪಾದಕರು ಇವುಗಳ ಪ್ರತಿಷ್ಟಾಪನೆಯ ಬಗ್ಗೆ ಸಮಂಜಸ ಮಾರ್ಗಸೂಚಿ,ಕೈಪಿಡಿಗಳನ್ನು ಒದಗಿಸುತ್ತಾರೆ:[೧೦][೧೧]

  • ಗಾತ್ರಗೊಳಿಸುವಿಕೆ ಮತ್ತು ಆಯ್ಕೆ
  • ವಿದ್ಯುತ್ ಸಂಬಂಧಿತ ಅಂಶಗಳು
  • ತಂಪುಗೊಳಿಸುವಿಕೆ
ತಂಪುಗೊಳಿಸುವ ವಿಧಾನಗಳು
  1. ಗಾಳಿ ತಂಪುಗೊಳಿಸುವುದು
  2. ಜಲ ಶೈತ್ಯೀಕರಣ
  • ವಾತಾಯನ ವ್ಯವಸ್ಥೆ
  • ಇಂಧನದ ಸಂಗ್ರಹಣೆ
  • ಶಬ್ದಮಾಲಿನ್ಯ
  • ಸಂಪೂರ್ಣ ಬಳಕೆ
  • ಚಾಲನಾ ವಿಧಾನಗಳು

ಇವುಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ,ಯಾಕೆಂದರೆ ಬಳಕೆದಾರರಿಗೆ ಇವು ತೊಂದರೆ ನೀಡುತ್ತವೆ.

ಜನರೇಟರ್ ಸೆಟ್ ನ ತಪ್ಪು ಅಳವಡಿಕೆ ಅಥವಾ ದುರುಪಯೋಗ ಡೀಸಲ್ ಎಂಜಿನ್ ಗೆ ಹಾನಿಯನ್ನುಂಟು ಮಾಡುತ್ತದೆ.

[ಬದಲಾಯಿಸಿ]

ಡೀಸಲ್ ಎಂಜಿನ್ ಗಳ ತಪ್ಪು ಅಳವಡಿಕೆ ಅಥವಾ ದುರುಪಯೋಗದಿಂದಾಗಿ ಈ ವಿದ್ಯುತ್ ಜನಕ ಯಂತ್ರ ಹಾನಿಗೀಡಾಗಬಹುದು-ಸಾಮಾನ್ಯವಾಗಿ ಆಂತರಿಕ ಗಾಜುಪೊರೆ ಬೆಳಕಿಗಾಗಿ(ಸಾಂದರ್ಭಕವಾಗಿ ಇದನ್ನು ಕೊಳವೆಗಳ ಇಣುಕುಗಳ ಅಥವಾ ಸುಮ್ಮನೆ ವೃಥಾ ಬಳಕೆ)ಇದರಲ್ಲಿ ಇಂಗಾಲ ಕಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಜನರೇಟರ್ ಗಳ ಬಳಕೆಯಲ್ಲಿನ ಸರ್ವೆಸಾಮಾನ್ಯ ಸಮಸ್ಯೆಯಾಗಿದೆ.ಇದರ ಅಳವಡಿಕೆಯಲ್ಲಿನ ನ್ಯೂನತೆ ಮತ್ತು ನಿರ್ವಹಣಾ ಮಾರ್ಗದರ್ಶಿ ಸೂತ್ರಗಳು ಸರಿಯಾದ ರೀತಿಯಲ್ಲಿ ಅನ್ವಯಿಸಲಾಗುತ್ತದೆ. ಒಂದು ಸರ್ವ ಸಾಮಾನ್ಯ ವಾಡಿಕೆಯಲ್ಲಿ ಒಂದು ಡೀಸಲ್ ಎಂಜಿನ್ ನನ್ನು ಕನಿಷ್ಟ 60-70% ಅದರ ಸಾಮರ್ಥ್ಯಕ್ಕನುಗುಣವಾಗಿ ಲೋಡ್ ಪ್ರಮಾಣವನ್ನು ಪಡೆಯಬೇಕಾಗುತ್ತದೆ. ಅಲ್ಪ ಪ್ರಮಾಣದ ಅವಧಿಯಲ್ಲಿ ಪೂರ್ಣ ಪ್ರಮಾಣದ ಲೋಡ್ ಸರಬರಾಜಿನಲ್ಲಿ ಓಡುವ ಇದು ನಿಯಮಿತವಾಗಿ ವಿದ್ಯುತ್ ಜನಕಕ್ಕೆ ಪೂರಕವಾಗಿರಬೇಕು

ಆಂತರಿಕ ಗಾಜುಪೊರೆ ಬೆಳಕಿನ ಹೊಳಹುಗಳ ಮತ್ತು ಇಂಗಾಲ ಕಟ್ಟುವಿಕೆಯು ನಿರಂತರ ಮತ್ತು ಕಡಿಮೆ ವೇಗದಲ್ಲಿ ನಡೆಯುವ ಎಂಜಿನ್ ಗಳು ಸಮಸ್ಯೆಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಗಳು ಎಂಜಿನ್ ನನ್ನು ಕೆಲಸವಿಲ್ಲದೇ ಇಟ್ಟಾಗ ಅಥವಾ ಅದನ್ನು "ಬದಲಿ ವ್ಯವಸ್ಥೆ"ಯಂತೆ ಮಾಡಿದಾಗ ಈ ಸಮಸ್ಯೆ ಉದ್ಭವವಾಗಬಹುದು.(ದುರುಪಯೋಗ)ಹೆಚ್ಚು ಬಳಕೆ ಮತ್ತು ಲೋಡಿಂಗ್ ನ್ನು ನೋಡದೇ ಡೀಸಲ್ ಘಟಕವನ್ನು ಆಯಾ ಸಾಮರ್ಥ್ಯ-ಸಂದರ್ಭಗಳ ನೋಡಿ ಅದರ ವೇಗ ಪ್ರಮಾಣವನ್ನು ನಿಶ್ಚಿತ ಮಾಡಬೇಕಾಗುತ್ತದೆ.ಪರೀಕ್ಷೆಗಾಗಿ ಡೀಸಲ್ ವಿದ್ಯುತ್ ಜನಕ ಯಂತ್ರಗಳ ಚಾಲಿತಗೊಳಿಸುವಾಗಲೂ ಎಚ್ಚರಿಕೆ ವಹಿಸಬೇಕಾಗುತ್ತದೆ.

ಕಡಿಮೆ ಲೋಡ್ ಮೇಲೆ ಎಂಜಿನ್ ಗಳನ್ನು ಓಡಿಸಿದಾಗ ಅದು ಕಡಿಮೆ ಸಿಲಿಂಡರ್ ಒತ್ತಡಕ್ಕೆ ಕಾರಣವಾಗುತ್ತದೆ,ಪಿಸ್ಟನ್ ಚಕ್ರಸುರಳಿ ಕೂಡ ತನ್ನ ವೇಗಕ್ಕೆ ಕಡಿವಾಣ ಹಾಕುತ್ತದೆ,ಇದು ನಂತರ ಅನಿಲ ಒತ್ತಡ ಬಲ ಪ್ರಯೋಗ ಮಾಡಬೇಕಾಗಬಹುದು. ಕಡಿಮೆ ಒತ್ತಡದ ಸಿಲಿಂಡರ್ ಕಡಿಮೆ ಮಟ್ಟದ ದಹನಕ್ರಿಯೆಗೆ ಕಾರಣವಾಗುತ್ತದೆ.ಇದು ನಂತರ ಕಡಿಮೆ ದಹನ ಕ್ರಿಯೆಯ ಒತ್ತಡಗಳು ಮತ್ತು ಶಾಖವನ್ನು ತೋರಿಸುತ್ತದೆ.

ಈ ಕಳಪೆ ದಹನಪ್ರಕ್ರಿಯೆ ಇಲಣದ ಶೇಖರಣೆಗೆ ಕಾರಣವಾಗುತ್ತದೆ.ಅರ್ಧ ಸುಟ್ಟ ಇಂಧನ ಉಳಿಕೆಗಳು ಮತ್ತು ಗೋಂದುಗಳು ಪಿಸ್ಟನ್ ಗಾಲಿಚಕ್ರದಲ್ಲಿ ಸುತ್ತಿಕೊಳ್ಳುತ್ತವೆ.ಇದರಿಂದಾಗಿ ಸಾಮರ್ಥ್ಯ ಇಳಿಕೆ ದಕ್ಷತೆಯಲ್ಲಿನ ಆರಂಭಿಕ ಕಡಿಮೆ ಒತ್ತಡದಲ್ಲಿರುತ್ತದೆ. ಈ ಬೆಳಕಿನ ಗಾಜು ಹೊಳವುಗಳನ್ನು ಒತ್ತಡದ ಅಂಶದ ಮೇಲೆ ನೋಡಬೇಕಾಗುತ್ತದೆ.ಯಾವಾಗ ಪಿಸ್ಟನ್ ಉಂಗುರವು ಸುತ್ತಿಕೊಂಡಾಗ ಸಿಲಿಂಡರ್ ಪೊರೆ ಗೋಡೆಗಳು ಒಂದು ಎನಾಮಲ್ ನ್ನು ರೂಪಿಸುತ್ತವೆ.ಗಾಜಿನಂತೆ ಈ ಭಾಗವು ಮೆದುವಾಗಿರುತ್ತದೆ.ಅದರ ಬೋರ್ ಮೇಲ್ಮೆನಲ್ಲಿ ಯಂತ್ರದ ಒಟ್ಟಾರೆ ಶಾಖ ಶೇಕರಣೆಯಾಗಿ ಅಲ್ಲಿ ತೈಲ ಮತ್ತು ಬಿರುಕಿನ ಕಾರಣವೂ ಗೋಚರವಾಗುತ್ತದೆ.

ಕಳಪೆ ದಹನಕ್ರಿಯೆಯಿಂದಾಗಿ ಇಂಗಾಲ ಕೂಡ ಶೇಖರಣೆ ರೂಪದಲ್ಲಿರುತ್ತದೆ.ಅದು ಅಲ್ಲಲ್ಲಿ ತೂತು ಇರುವ ಭಾಗವನ್ನು ತೋರಿಸುತ್ತವೆ.ಅದನ್ನು ಪಾಲಿಶ್ ಮೂಲಕ ಸರಿಪಡಿಸದಿದ್ದರೆ ಅದು ಹೆಚ್ಚಿನ ತೈಲ ತಿಂದು (ನೀಲಿ ಹೊಗೆ)ಹೊರಸೂಸಲು ಕಾರಣವಾಗುತ್ತದೆ.ಇದರಿಂದ ಒತ್ತಡ ಮತ್ತು ಪಿಸ್ಟನ್ ಸೀಲ್ ನ್ನು ಒಂದಕ್ಕೊಂದು ಸಮಸ್ಥಿತಿಯಲ್ಲಿಡುವಂತೆ ನೋಡಬೇಕಾಗುತ್ತದೆ.

ಉರಿಯದ ಇಂಧನ ಪಿಸ್ಟನ್ ಉಂಗುರದ ಮೂಲಕ ಸೋರಿಕೆ ಆರಂಭವಾಗುತ್ತದೆ.ಇದರಿಂದಾಗಿ ಲ್ಯೂಬ್ರಿಕಂಟ್ ತೈಲವನ್ನು ಅಶುದ್ದಗೊಳಿಸುತ್ತದೆ. ಇಲಣ ಅಥವಾ ಕಪ್ಪು ಮಸಿ ಇದರಲ್ಲಿ ಸಂಗ್ರಹಿತವಾಗಿ ಸಿಕ್ಕಿಹಾಕಿಕೊಳ್ಳುತ್ತದೆ.ಇದರಿಂದ ಇಂಧನ ಉರಿಯುವಿಕೆ ಮತ್ತಷ್ಟು ಕಷ್ಟಕರವಾಗುವುದಲ್ಲದೇ ಕಪ್ಪು ಹೊಗೆಗೆ ಕಾರಣವಾಗುತ್ತದೆ.

ನೀರಿನ ಸಾಂದ್ರೀಕರಣದಿಂದ ಎಂಜಿನ್ ತೈಲವು ಆಮ್ಲದ ರಚನೆಗೆ ಕಾರಣವಾಗಿ ಎಂಜಿನ್ ಮತ್ತು ಅದರ ಭಾಗಗಳಲ್ಲಿ ಸಮಸ್ಯೆಗಳಾಗುತ್ತವೆ.ಯಾಕೆಂದರೆ ನೀರು ಅತ್ಯಧಿಕ ಉಷ್ಣತೆಯಲ್ಲಿ ಕಾಯ್ದಿರುತ್ತದೆ. ಸಂಚಾಲನಕ್ಕೆ ಅನುಕೂಲವಾಗುವ ಲ್ಯೂಬ್ರಿಕಂಟ್ ತೈಲದಲ್ಲಿನ ಆಮ್ಲ ಶೇಖರಣೆ ಎಂಜಿನ್ ನ ಸಾಮರ್ಥ್ಯವನ್ನು ನಿಧಾನಗೊಳಿಸುತ್ತದೆ.

ಇದೇ ರೀತಿಯಾದ ಚಕ್ರೀಯ ಕ್ರಿಯೆಗಳು ಪುನರಾವರ್ತನೆಯಾದಾಗ ಎಂಜಿನ್ ಹಾನಿಗೀಡಾಗುತ್ತದೆ.ಆಗ ಆರಂಭಿಕ ಚಾಲನೆ ವಿಳಂಬ ಅಥವಾ ಚಾಲನೆಯಾಗದೇ ಇರುವ ಸಾಧ್ಯತೆಗಳೇ ಹೆಚ್ಚು.

ಕಡಿಮೆ ಪ್ರಮಾಣದ ಲೋಡ್ ಬಳಕೆ ಕೂಡ ಬಿಳಿ ಹೊಗೆಗೆ ದಾರಿಯಾಗುತ್ತದೆ,ದಹನವಾಗದೇ ಉಳಿದ ಇಂಧನ ಪ್ರಮಾಣವು ನೀಲಿ ಹೊಗೆಯನ್ನು ಉಂಟು ಮಾಡಿ ಎಂಜಿನ್ ನನ್ನು ಮುಸುಕು ಹಾಕಿಬಿಡುತ್ತದೆ.ಎಣ್ಣೆ ಸೋರಿಕೆ,ಪಿಸ್ಟನ್ ರಿಂಗ್ ಗಳಿಗೆ ಹಾನಿ ಅಲ್ಲದೇ ಕಪ್ಪು ಹೊಗೆ ಉಗುಳುವಿಕೆಯೂ ಎಂಜಿನ್ ಹಾನಿಗೆ ದಾರಿಯಾಗುತ್ತದೆ. ಇಂತಹ ಹವಾಮಾಲಿನ್ಯವು ಅಲ್ಲಿನ ಅಧಿಕೃತ ಅಧಿಕಾರಿಗಳಿಗೆ ಮತ್ತು ನೆರೆಹೊರೆಯವರಿಗೆ ಒಪ್ಪಿತವಾಗದು.

ಇದರಲ್ಲಿ ಗಾಜು ಹೊಳವಿನ ಬೆಳಕಿನಂತಹ ಪೊರೆ ಅಥವಾ ಇಂಗಾಲ ಪೊರೆಗಟ್ಟಿದಾಗ ಎಂಜಿನ್ ನನ್ನು ಸಂಪೂರ್ಣ ಬಿಚ್ಚಿ ಪರೀಕ್ಷೆಗೊಳಪಡಿಸಬೇಕಾಗುತ್ತದೆ.ಇಲ್ಲಿನ ಸಿಲಿಂಡರ್ ಬೋರ್ ಗಳು, ಯಂತ್ರದ ಮೇಲಿನ ಗುರುತುಗಳು ಇತ್ಯಾದಿಗಳನ್ನು ದಹನಕ್ರಿಯಾ ಭಾಗವನ್ನು ಸ್ವಚ್ಛಗೊಳಿಸಬೇಕಾಗುತ್ತದೆ.ಇಂಧನ ಒಳಸೇರಿಸುವಿಕೆ ಅದರ ನೋದಕ ಶಕ್ತಿ ಅಂಚುಗಳು ಮತ್ತು ವಾಲ್ವ್ ಗಳು ಹಾನಿಗೀಡಾಗುತ್ತವೆ. ಗರಿಷ್ಟ ಲೋಡ್ ಪಡೆಯುವ ಎಂಜಿನ್ ಗಳ ಸಮಸ್ಯೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಬೇಕಾಗುತ್ತದೆ.ಆಗ ಪಿಸ್ಟನ್ ಉಂಗುರಗಳಲ್ಲಿನ ಸುತ್ತುವರೆದ ಕಾರ್ಬನ್ ಮತ್ತು ಗಾಜುಪೊರೆಗಳನ್ನು ಹೊರಹಾಕಿ ಎಂಜಿನ್ ಕಾರ್ಯಾಚರಣೆಗೆ ಅನುಕೂಲ ಮಾಡಬೇಕಾಗುತ್ತದೆ. ಈ ಗಾಜಿನಂತಹ ಹೊಳವು ಪೊರೆ ಹೆಚ್ಚಾಗುತ್ತಾ ನಡೆದರೆ ಪಿಸ್ಟನ್ ಉಂಗುರಗಳು ತಮ್ಮ ಅಂಚುಗಳಲ್ಲಿ ನಿಷ್ಕ್ರಿಯವಾಗುವ ಸಂದರ್ಭ ಬರಬಹುದು.ಇದು ಎಂಜಿನ್ ನ ಮೇಲೆ ಪರಿಣಾಮ ಬೀರದಂತೆ ನೋಡಬೇಕು.

ಆದ್ದರಿಂದ ಜನರೇಟರ್ ಉತ್ಪಾದಕರ ಮುದ್ರಿತ ಮಾರ್ಗದರ್ಶಿ ಸೂತ್ರಗಳ ಮೇಲೆ ಎಂಜಿನ್ ನನ್ನು ಆಯ್ಕೆ ಮಾಡುವುದು ಉತ್ತಮ.

ತುರ್ತು ಸ್ಥಿತಿಗಳಲ್ಲಿ ಸೆಟ್ ಗಳನ್ನು ದೂರ ಸಂವೇದಿಯಂತೆ ಬಳಸಿದಾಗ ಅದು ಕೇವಲ 1/4 ರಷ್ಟು ಸ್ಟ್ಯಾಂಡ್ ಬೈ ಪ್ರಮಾಣವನ್ನು ನಿರ್ವಹಿಸಬಹುದು.ಅದರ ಗಾತ್ರ ಮತ್ತು ಸಾಂದ್ರೀಕೃತ ಇಂಧನ ತೈಲವನ್ನು ಸಹ ವೊಲ್ಟೇಜ್ ಇಳಿಮುಖವಾಗದಂತೆ ನೋಡುವ ಉದ್ದೇಶದಿಂದಲೇ ನಿರ್ಮಿಸಲಾಗಿರುತ್ತದೆ.ಆರಂಭಿಕ ವೊಲ್ಟೇಜ್ ನ್ನು ಕನಿಷ್ಟಗೊಳಿಸುವ ಕ್ರಮ ಸಹ ಇಲ್ಲಿ ಮಾಡಬಹುದು. ಹೀಗಾಗಿ ಲಭ್ಯ ವೊಲ್ಟೇಜ್ ಲೋಡ್ ಪ್ರಮಾಣದ ಪರೀಕ್ಷೆಗೆ ಒಳಪಡಿಸುವಾಗ ಎಂಜಿನ್ ಅಗತ್ಯಕ್ಕಿಂತಲೂ ಹೆಚ್ಚಾಗಿ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು.ಆದ್ದರಿಂದ ಪರೀಕ್ಷೆಯ ಅಥವಾ ಪ್ರಾಯೋಗಿಕತೆಯು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ನಡೆಸುವ ಮೂಲಕ ಆ ಸಂದರ್ಭಗಳಿಗೆ ಅನುಗುಣವಾಗಿ ನಿರಂತರ ಲೋಡ್ ಮೇಲೆ ನಿಗಾ ಇಡಬಹುದು,ಇಂತಹ ಪರಿಸ್ಥಿತಿಯ ಸಂದರ್ಭವನ್ನು ಲೋಡ್ ಬ್ಯಾಂಕ್ ನ್ನು ಬಾಡಿಗೆ ಪಡೆಯುವ ಇಲ್ಲವೆ ಶಾಶ್ವತ ಲೋಡ್ ಬ್ಯಾಂಕ್ ಸ್ಥಾಪನೆ ಮೂಲಕ ಅದರ ಆಗುಹೋಗುಗಳ ಮೇಲೆ ನಿಗಾ ಇಡಬಹುದಾಗಿದೆ. ಇವೆರಡೂ ಪರ್ಯಾಯಗಳು ವೆಚ್ಚದಾಯಕವಾಗಿದ್ದರೂ ಎಂಜಿನ್ ದುರಸ್ತಿ ಮತ್ತು ಉಸ್ತುವಾರಿಯ ಪ್ರಮಾಣದಲ್ಲಿ ಅದಕ್ಕೆ ಬದಲು ವ್ಯವಸ್ಥೆಗಳಾಗಿ ಕಾರ್ಯನಿರತವಾಗಿರುತ್ತವೆ.ವೊಲ್ಟೇಜ್ ಗಳ ವ್ಯತ್ಯಾಸ ಮತ್ತು ಎಂಜಿನ್ ಲೋಡಿಂಗ್ ಪ್ರಕ್ರಿಯೆಗಳು ಅಧಿಕ ಇಂಧನ ಪಡೆಯುವ ವಿಧಗಳಾಗಿವೆ. ದೂರದ ಗ್ರಾಮೀಣ ಸ್ಥಳೀಯತೆಯಲ್ಲಿನ ಒಂದು ಉಪ್ಪು ನೀರಿನ ವಿದ್ಯುತ್ ಪ್ರವಾಹ ನಿಯಂತ್ರಕವನ್ನು ಸದಾ ಸಜ್ಜುಗೊಳಿಸಿದ ಸ್ಥಿತಿಯಲ್ಲಿಡಲಾಗುತ್ತದೆ.

ಈ ಪ್ರಕರಣಗಳಲ್ಲಿ ಅತ್ಯುತ್ತಮ ಪರಿಹಾರವೆಂದರೆ ಸೆಟ್ ನ್ನು ಪರ್ಯಾಯ ಚಾಲಿತ ಯಂತ್ರ ಮತ್ತು ಗ್ರಿಡ್ ಗೆ ಲಭ್ಯವಿರುವ ವಿದ್ಯುತ್ ಪೂರೈಕೆ ಮಾಡಬೇಕಾಗುತ್ತದೆ.ತಿಂಗಳಿಗೊಮ್ಮೆ ಅದರ ಲೋಡ್ ಪರೀಕ್ಷೆ,ಯಂತ್ರದ ಸಾಮರ್ಥ್ಯವನ್ನು ಸಾರ್ವಜನಿಕ ಸೇವಾವಲಯಕ್ಕೆ ಬಳಸುವ ರಿಜರ್ವ್ ಸರ್ವಿಸ್ ಪ್ರಕಾರದ ಸೂತ್ರಗಳ ಅಳವಡಿಕೆ,ಇತ್ಯಾದಿಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿ ಇದಕ್ಕಾಗಿ ಬಳಸಿದ ಇಂಧನ ಖರ್ಚನ್ನು (ಆದಾಯ)ಉಳಿಸಬಹುದು.[೧೨][೧೩][೧೪]

ಇವನ್ನೂ ಗಮನಿಸಿ

[ಬದಲಾಯಿಸಿ]
  • ಕ್ಯಾಲ್ಕುಲೇಟಿಂಗ್ ದಿ ಕಾಸ್ಟ್ ಆಫ್ ದಿ UK ಟ್ರಾನ್ಸ್ ಮಿಶನ ನೆಟ್ವರ್ಕ್: ಕಾಸ್ಟ್ ಪರ್ kWh ಆಫ್ ಟ್ರಾನ್ಸ್ ಮಿಶನ
  • ಕ್ಯಾಲ್ಕುಲೇಟಿಂಗ್ ದಿ ಕಾಸ್ಟ್ ಆಫ್ ಬ್ಯಾಕ್ ಅಪ್: ಸೀ ಸ್ಪಾರ್ಕ್ ಸ್ಪ್ರೆಡ್
  • ಡೀಸೆಲ್ ಎಂಜಿನ್
  • ಲೋಡ್ ಮ್ಯಾನೇಜ್ ಮೆಂಟ್
  • ನ್ಯಾಶನಲ್ ಗ್ರಿಡ್ ರಿಜರ್ವ್ ಸರ್ವಿಸ್
  • ಎನರ್ಜಿ ಯುವ್ಜ್ ಅಂಡ್ ಕಾಂಜರ್ವೇಶನ್ ಇನ್ ದಿ ಯುನೈಟೆಡ್ ಕಿಂಗ್ಡಮ್
  • ನ್ಯಾಶನಲ್ ಗ್ರಿಡ್ ರಿಜರ್ವ ಸರ್ವಿಸ್
  • ಕಂಟ್ರೊಲ್ ಆಫ್ ದಿ ನ್ಯಾಶನಲ್ ಗ್ರಿಡ್
  • ವಿಭಿನ್ನ ಮೂಲಗಳಿಂದ ಉತ್ಪಾದಿಸಲಾದ ವಿದ್ಯುಚ್ಛಕ್ತಿಯ ಸಂಬಂಧಿತ ವೆಚ್ಚ
  • ಡೀಸಲ್-ಎಲೆಕ್ಟ್ರಿಕ್ ಟ್ರಾನ್ಸ್ ಮಿಶನ್
  • ಮೊಟಾರ್-ಜನರೇಟರ್
  • ಥ್ರೀ-ಫೇಸ್ ಎಲೆಕ್ಟ್ರಿಕ್ ಪಾವರ್
  • ಲೋಡ್ ಬ್ಯಾಂಕ್
  • ವೆಟ್ ಸ್ಟ್ಯಾಕಿಂಗ್
  • ನ್ಯಾಶನಲ್ ಗ್ರಿಡ್ ರಿಜರ್ವ ಸರ್ವಿಸ್

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2008-11-07. Retrieved 2010-11-17.
  2. http://www.claverton-energy.com/ಕಮರ್ಸಿಯಲ್-ಅಪಾರ್ಚುನಿಟೀಸ್-ಫಾಫ್-ಬ್ಯಾಕ್-ಅಪ್-ಜನರೇಶನ್-ಅಂಡ್-ಲೋಡ್-ರಿಡಕ್ಷನ್-ವಾಯಾ-ನ್ಯಾಶನಲ್-ಗ್ರಿಡ್-ದಿ-ನ್ಯಾಶನಲ್-ಎಲೆಕ್ಟ್ರಿಸಿಟಿ-ಟ್ರಾನ್ಸ್ ಮಿಶನ್-ಸಿಸ್ಟೆಮ್-ಆಪರೇಟರ್-ನೆಟ್ಸೊ-ಫಾರ್-ಇಂಗ್ಲೆಂಡ್-ಸ್ಕಾಟ್ ಲಂಡ್-ವೇಲ್ಸ್-ಅಂಡ್-offshore.html ಕಮರ್ಸಿಯಲ್ ಅಪೊರ್ಚುನಿಟೀಸ್ ಫಾಫ್ ಬ್ಯಾಕ್-ಅಪ್ ಜನರೇಶನ್ ಅಂಡ್ ಲೋಡ್ ರಿಡಕ್ಷನ್ ವಾಯಾ ನ್ಯಾಶನಲ್ ಗ್ರಿಡ್,ದಿ ನ್ಯಾಶನಲ್ ಎಲ್ಕ್ಟ್ರಿಸಿಟಿ ಟ್ರಾನ್ಸ ಮಿಶನ್ ಸಿಸ್ಟೆಮ್ ಆಪರೇಟರ್ (NETSO) ಫಾರ್ ಇಂಗ್ಲೆಂಡ್, ಸ್ಕಾಟ್ ಲ್ಯಾಂಡ್, ವೇಲ್ಸ್ ಮತ್ತು ಆಫ್ ಶೋರ್.
  3. ಪೇಪರ್ ಗಿವನ್ ಆಟ್ ಒಪನ್ ಯುನ್ವರ್ಸಿಟಿ ಕಾನ್ ಫೆರೆನ್ಸ್ ಕವರಿಂಗ್ ಯುವ್ಜ್ ಆಫ್ ಡಿಸಲ್ ಜನರೇಟರ್ಸ್ ಟು ಆಸಿಸ್ಟ್ ಡೀಲಿಂಗ್ ಉಯಿತ್ ಇಂಟರ್ ಮಿಟನಸಿ ಆಫ್ ರಿನ್ವಿವೇಬಲ್ ಎನರ್ಜಿ"ಒಪನ್ ಯುನ್ವರ್ಸಿಟಿ ಜನರೇಟರ್ಸ್ ಫಾರ್ ಲೋಡ್ ಮ್ಯಾನೇಜ್ ಮೆಂಟ್ "
  4. ೪.೦ ೪.೧ ೪.೨ Andrews, David (June 2007). "Emergency diesel standby generators of Wessex Water potential contribution to dealing with renewable energy sources intermittency & variability". 11 (3). The Institution of Diesel and Gas Turbine Engineers. {{cite journal}}: Cite journal requires |journal= (help)
  5. ಡಿಮಾಂಡ್_ಸೈಡ್_ಮ್ಯಾನೇಜ್ ಮೆಂಟ್ ಎನರ್ಜಿ ಡಿಮಾಂಡ್ ಸೈಡ್ ರಿಡಕ್ಷನ್
  6. ಸ್ಪೀಡ್ ಡ್ರೂಪ್ ಅಂಡ್ ಪಾವರ್ ಜನರೇಶನ್. ಅಪ್ಲಿಕೇಶನ್ ನೋಟ್ 01302. 2. ವುಡ್ ವರ್ಡ್. ವೇಗ
  7. http://www.thedigitalship.com/powerpoints/SMM06/lng/Barend%20Thijssen,%20wartsila.pdf Archived 2011-06-26 ವೇಬ್ಯಾಕ್ ಮೆಷಿನ್ ನಲ್ಲಿ. | title=Dual-fuel-electric LNG carrie==
  8. "Man Diesel Se - Press->Press & Trade Press Releases->Trade Press Releases ->Stationary Power->Medium-Speed". Manbw.com. 2008-11-19. Retrieved 2009-05-11.
  9. http://poweronthego.ca/rating_definitions.htm
  10. http://www.avk-seg.co.uk/content/AVK%20Generator%20Installation%20Guide%20-%20April%2003.pdf
  11. http://www.generatorjoe.net/html/Installation.pdf
  12. "How to Turn Standby Generation Into Profit-Making Assets". ವೆವನೆ ಬೋಕ್ಸ್, ಜನರೇಶನ್ ಮ್ಯಾನೇಜರ್ ವೆಸೆಕ್ಸ್ ವಾಟರ್, ಕ್ಲಾವೆರೇಶನ್ ಎನರ್ಜಿ ಗ್ರುಪ್ ಕಾನ್ ಫೆರೆನ್ಸ್, ಬಾತ್, ಅ.24 ನೆಯ 2008
  13. "Breaking in a Diesel Engine". ಜಯ್ ಕ್ಲೆಬೊಸ್ಕಿ, ಮರುಪಡೆದುದು ಡಿಸೆಂಬರ್ 22, 2009
  14. "Bore glazing in diesel engines". ಕಾಕ್ಸ್ ಎಂಜನೀಯರಿಂಗ್ ಎಂಜನೀಯರಿಂಗ್, ಮರುಪಡೆದದ್ದು ಡಿಸೆಂಬರ್ 22, 2009

INMESOL ಕಂಪನಿ ಜೆನೆ ಸೆಟ್& ಲೈಟಿಂಗ್ ಟಾವರ್ ಫ್ಯಾಕ್ಟರಿ Archived 2010-07-06 ವೇಬ್ಯಾಕ್ ಮೆಷಿನ್ ನಲ್ಲಿ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಡೀಸಲ್ ಜನರೇಟರ್ಸ್ ಆನ್ ಲೈನ್ ಫ್ರೀ ರಿಸೌರ್ಸ ಗೈಡ್ Archived 2011-01-31 ವೇಬ್ಯಾಕ್ ಮೆಷಿನ್ ನಲ್ಲಿ.