ಡಿ. ಸುಬ್ಬಾರಾವ್
ಡುವ್ವುರಿ ಸುಬ್ಬಾರಾವ್ | |
ಭಾರತೀಯ ರಿಜರ್ವ್ ಬ್ಯಾಂಕ್‍ನ ೨೨ನೆಯ ಗವರ್ನರ್
| |
ಪ್ರಸಕ್ತ | |
ಅಧಿಕಾರ ಪ್ರಾರಂಭ ಸೆಪ್ಟೆಂಬರ್ ೫, ೨೦೦೮ | |
ಪೂರ್ವಾಧಿಕಾರಿ | ವೈ. ವೇಣುಗೋಪಾಲ್ ರೆಡ್ಡಿ |
---|---|
ಜನನ | [೧] | ೧೧ ಆಗಸ್ಟ್ ೧೯೪೯
ಜೀವನಸಂಗಾತಿ | ಊರ್ಮಿಳ ಸುಬ್ಬಾರಾವ್ |
ಧರ್ಮ | ಹಿಂದೂ |
ಡುವ್ವುರಿ ಸುಬ್ಬಾರಾವ್ ಇವರು ಭಾರತೀಯ ರಿಜರ್ವ್ ಬ್ಯಾಂಕ್ನ ೨೨ನೇಯ ಗವರ್ನರರು. ಇದಕ್ಕೂ ಮೊದಲು ಇವರು ಭಾರತ ಸರಕಾರದ ಹಣಕಾಸು ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು. ಯಾಗ ವೇಣುಗೋಪಾಲ ರೆಡ್ಡಿಯವರು ಸುಬ್ಬಾರಾವ್ ಇವರಿಗಿಂತ ಮೊದಲು ಭಾರತೀಯ ರಿಜರ್ವ್ ಬ್ಯಾಂಕ್ನ ಗವರ್ನರರಾಗಿದ್ದರು.
ಹುದ್ದೆಯಲ್ಲಿ ಸಾಗಿ ಬಂದ ಹಾದಿ
[ಬದಲಾಯಿಸಿ]- ೧೯೭೨ --> ಐ.ಎ.ಎಸ್ ಅಧಿಕಾರಿಯಾಗಿ ಆಯ್ಕೆ
- ೧೯೮೮ ಜುಲೈ ೧೫ --> ಹಣಕಾಸು ಮತ್ತು ಕಂಪನಿ ನಿರ್ವಹಣೆ ಮಂತ್ರಿ ಶಾಖೆಯಲ್ಲಿ ನಿರ್ದೇಶಕರಾಗಿ ನೇಮಕ
- ೧೯೯೦ ಜುನ್ ೪ --> ಪ್ಲ್ಯಾನಿಂಗ್ ಕಮೀಷನ್ನಲ್ಲಿ ಜಂಟಿ ಕಾರ್ಯದರ್ಶಿ
- ೨೦೦೫ ಮಾರ್ಚ್ ೨ --> ಪ್ಲ್ಯಾನಿಂಗ್ ಕಮೀಷನ್ನಲ್ಲಿ ಕಾರ್ಯದರ್ಶಿ
- ೨೦೦೭ ಮೇ ೧ --> ಭಾರತ ಸರಕಾರದ ಹಣಕಾಸು ಕಾರ್ಯದರ್ಶಿ
- ೨೦೦೮ ಸೆಪ್ಟಂಬರ್ --> ಭಾರತೀಯ ರಿಜರ್ವ್ ಬ್ಯಾಂಕಿನ ಗವರ್ನರ್
೧೯೭೨ರ ಐ.ಎ.ಎಸ್ ಪರೀಕ್ಷೆಯಲ್ಲಿ ಇವರು ಅಗ್ರ ಶ್ರೇಯಂಕವನ್ನು ಪಡೆದಿದ್ದರು. ೨೦೦೭ರಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ನೇಮಕವಾಗುವ ಮೊದಲು ಡಾ. ಸಿ. ರಂಗರಾಜನ್ ನೇತೃತ್ವದ ಪ್ರಧಾನ ಮಂತ್ರಿಗಳ ವಿತ್ತೀಯ ಕಾರ್ಯ ನಿರ್ವಹಣಾ ಮಂಡಳಿಯ ಸದಸ್ಯರಾಗಿ ಕಾಯನಿರ್ವಹಿಸಿದ್ದರು.
ವಿದ್ಯಾಭ್ಯಾಸ
[ಬದಲಾಯಿಸಿ]ಇವರು ಐ.ಐ.ಟಿ. ಕಾನಪುರದಲ್ಲಿ ತಮ್ಮ ಪದವಿಯನ್ನು ಪಡೆದರು. ಅಲ್ಲಿ ಇವರು ಭೌತಶಾಸ್ತ್ರವನ್ನು ಅಭ್ಯಸಿಸಿದರು. ಐ.ಎ.ಎಸ್. ಅಧಿಕಾರಿಯಾದ ನಂತರ ಇವರು ೧೯೭೮ರಲ್ಲಿ ಒಹೀಯೋ ಸ್ಟೇಟ್ ಯುನಿವರ್ಸಿಟಿಯಿಂದ ಎಕನಾಮಿಕ್ಸನಲ್ಲಿ ಎಮ್.ಎಸ್. ಪದವಿಯನ್ನು ಪಡೆದರು. ೧೯೮೨-೮೩ರ ಸಮಯದಲ್ಲಿ ಪ್ರತಿಷ್ಟಿತ ಎಮ್.ಐ.ಟಿಯಲ್ಲಿ ಹಂಫ್ರಿ ಫೆಲ್ಲೋ ಆಗಿದ್ದರು ಮತ್ತು ತಮ್ಮ ಪಿಎಚ್ ಡಿ ಪದವಿಯನ್ನು ಪಡೆದರು. ೧೯೯೯-೨೦೦೪ರ ಅವಧಿಯಲ್ಲಿ ಇವರು ವಿಶ್ವ ಬ್ಯಾಂಕಿನಲ್ಲಿ ಎಕಾನಾಮಿಸ್ಟ್ ಆಗಿ ಕೆಲಸ ಮಾಡಿದ್ದಾರೆ.
- ↑ "Biodata of Duvvuri Subbarao". Archived from the original on 2009-02-10. Retrieved 2009-07-04.