ಡಿ. ಕೆ. ಮೆಂಡನ್
೧೯೫೬ ರಲ್ಲೇ, ಮುಂಬಯಿ ಕನ್ನಡಪತ್ರಿಕೆ, ತಾಯಿನುಡಿ.
[ಬದಲಾಯಿಸಿ]ಮುಂಬಯಿನ ಹಳೆಯ ಪ್ರಖ್ಯಾತ ದಿನಪತ್ರಿಕೆ, "ತಾಯಿನುಡಿ" ಪತ್ರಿಕೆಯ ಸಂಪಾದಕರಾಗಿದ್ದ, ಶ್ರೀ. ಮೆಂಡನ್, ದಕ್ಷಿಣ ಕನ್ನಡ ಜಿಲ್ಲೆಯ 'ಪೊಲಿಪು,' ಎಂಬಲ್ಲಿ ೦೯-೧೧-೧೯೨೯ ರಲ್ಲಿ ಜನಿಸಿದರು. ಮೇ, ತಿಂಗಳ, ೩೧, ೧೯೫೬ ರಲ್ಲಿ, ತಾಯಿನುಡಿ, ಪತ್ರಿಕೆಯ ಶುಭಾರಂಭವನ್ನು ಮುಂಬಯಿನಲ್ಲಿ ಮಾಡಿದರು. ಅಂದು ಪ್ರಾರಂಭಿಸಿದ ಕನ್ನಡ ಪತ್ರಿಕೆ, ತೊಂಬತ್ತರದಶಕದ ತನಕ, ಮುಂಬಯಿ ಮಾತ್ರವಲ್ಲ, ಇಡೀ ಕರ್ನಾಟಕದಾದ್ಯಂತ ಎಲ್ಲರ ಗಮನ ಸೆಳೆದಿತ್ತು. ಟೈಮ್ಸ್ ಆಫ್ ಇಂಡಿಯ ಗ್ರೂಪ್, ನ ಜನರಲ್ ಮ್ಯಾನೇಜರ್, ಜೆ. ಸಿ. ಜೈನ್ ಅವರಲ್ಲಿ, ಕರ್ನಾಟಕ ಟೈಮ್ಸ್, ಕನ್ನಡ ದೈನಿಂದಿಕವನ್ನು ಮುಂಬಯಿನ್ ನಲ್ಲಿ ಆರಂಭಿಸುವ ಬಗ್ಗೆ ಚರ್ಚಿಸಿದಾಗ, ಜೈನ್ ಅವರು ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ಕನ್ನಡಿಗ ಮೆಂಡನ್, ಧೃತಿಗೆಡದೆ, ತಾವೇ 'ತಾಯಿನುಡಿ' ಪತ್ರಿಕೆಯನ್ನು ಹೊರತಂದ ಸಾಹಸಿ.
ಹಿಂದಿಭಾಷಾ ಶಿಕ್ಷಕ, ಮತ್ತು ಸಂಪಾದಕ
[ಬದಲಾಯಿಸಿ]೩೨ ವರ್ಷ, ಮುಂಬಯಿನ, ಕೋಟೆಪ್ರದೇಶದಲ್ಲಿರುವ, ಸಿದ್ಧಾರ್ಥಕಾಲೇಜ್ ನಲ್ಲಿ, ಹಿಂದಿ ಅಧ್ಯಾಪಕರಾಗಿ ಸೇವೆಸಲ್ಲಿಸಿದ್ದರು. ಹಿಂದಿ ದೈನಿಕಗಳಾಗಿದ್ದ, ವಿಶ್ವಾಮಿತ್ರ,' ವಿಕಾಸ್' ಹಿಂದಿ ಮಾಸಿಕ ಪತ್ರಿಗಳಲ್ಲಿ ಪತ್ರಕರ್ತರಾಗಿ ದುಡಿದಿದ್ದರು. ಅಬ್ಬಾಸ್ ರ ಸರ್ಗಮ್, ಹಿಂದಿ ಮಾಸಿಕದಲ್ಲೂ ಇವರು ಪತ್ರಕರ್ತರಾಗಿ ಸೇವೆಸಲ್ಲಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಕನ್ನಡಸಾಹಿತ್ಯದ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಟೈಡ್ ಇಂಗ್ಲೀಷ್ ಪತ್ರಿಕೆ, ಫೌಂಡೇಶನ್ ಗಳ ಸಂಪಾದಕರಾಗಿದ್ದ, ಹಾಗೂ ಬಾಂಬೆ ಯೂನಿಯನ್ ಆಫ್ ಜರ್ನಲಿಸ್ಟ್ಸ್, ನ ಸಂಪಾದಕ, ಕನ್ನಡಿಗ 'ಯೂಜಿ'[ ಅವರ ಗರಡಿಯಲ್ಲಿ ಪಳಗಿದವರು. ತೆಲುಗಿನ ಕ್ರಾಂತಿಕಾರಿ ನಾಟಕಾಚಾರ್ಯ, ಆಚಾರ್ಯ ಅತ್ರೆ, ಯವರ ಗುಮಾಸ್ತೆ', ನಾಟಕವನ್ನು ಹಿಂದಿ ಭಾಷೆಗೆ, ಮೆಂಡನ್ ರೂಪಾಂತರಿಸಿ, ಪ್ರದರ್ಶಿಸಿದ್ದರು. ಇದು ಓದುಗರ ಸಂಮಿಶ್ರ ಭಾವನೆಗಳಿಗೆ ಎಡೆಮಾಡಿಕೊಟ್ಟಿತ್ತು. ಮುಂಬಯಿ ಕನ್ನಡಿಗರ ಸ್ನೇಹ-ಸಮ್ಮೆಳನವನ್ನು ಅದ್ಧೂರಿಯಾಗಿ ಜರುಗಿಸಿ, ತಮ್ಮ ಸಂಘಟನಾಶಕ್ತಿಯ ಪೂರ್ಣ ಪರಿಚಯವನ್ನು ಮಾಡಿಕೊಟ್ಟದ್ದರು.
ಪಾರ್ಶ್ವವಾಯುಪೀಡಿತರಾದರು
[ಬದಲಾಯಿಸಿ]ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಅವರಿಗೆ ಪಾರ್ಶ್ವವಾಯುಹೊಡೆದು ತಮ್ಮ ಬರವಣಿಗೆಯನ್ನು ನಿಲ್ಲಿಸಬೇಕಾಯಿತು. ಇತ್ತೀಚೆಗೆ ಅವರನ್ನು ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಸೇರಿಸಿಲಾಗಿತ್ತು. ದಿ. ವಿದ್ವಾನ್ ರಾಮಚಂದ್ರ ಉಚ್ಚಿಲ್ ರ ಪ್ರಥಮ ಸಂಸ್ಮರಣಾ ಪ್ರಶಸ್ತಿ, ಯನ್ನು ಪಡೆದಿದ್ದರು. ಒಂದುಕಾಲದಲ್ಲಿ ಕರ್ನಾಟಕ ರಾಜ್ಯದ ರಾಯಭಾರಿಯೆಂದೇ ಕರೆಸಿಕೊಳ್ಳುತ್ತಿದ್ದ "ತಾಯಿನುಡಿ", ಪತ್ರಿಕೆಯ ಸಂಪಾದಕ ಮೆಂಡನ್, (೭೮) ನವೆಂಬರ್ ೪, ರ ಮಧ್ಯಾನ್ಹ ೩-೩೦ ಕ್ಕೆ ಮುಂಬಯಿ ಜುಹುವಿನ, 'ಆರೋಗ್ಯನಿಧಿ,' ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ, ಹಾಗೂ ಅಪಾರ ಬಂಧುವರ್ಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಮೆಂಡನ್ ಅ. ನ. ಕೃ, ರವರ ನಿರಂಜನ ರ ಒಂದು ಕಾಲದಲ್ಲಿ ನಿರಂಜನರ ಕೃತಿಗಳಹಕ್ಕು, ಮೆಂಡನ್ ರವರ ಕೈಯಲ್ಲಿತ್ತು. ಅದನ್ನು ಅವರು ನಂತರ ಹಿಂದಿರುಗಿಸಿದರು. ನವಕರ್ನಾಟಕದ, ಅನೇಕ ಕೃತಿಗಳನ್ನು ಮೆಂಡನ್ ವಿಮರ್ಶೆಗೆ ಬಂದಾಗ ಅದನ್ನು ಜೋಕಟ್ಟೆಯವರಿಗೆ ಮೌಲ್ಯಮಾಪನಕ್ಕೆ ನೀಡುತ್ತಿದ್ದರಂತೆ. ತಾಯಿನುಡಿಪತ್ರಿಕೆಯ ದೀಪಾವಳಿಸಂಚಿಕೆ ಬಹಳ ಉತ್ತಮ ಮಟ್ಟದ್ದಾಗಿರುತ್ತಿತ್ತು. ಆ ಸಚಿಕೆಗೆಗಾಗಿ ಕಾಯುವರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ, ತಾಯಿನುಡಿಗೆ ಕೆಲವು ಹಿತಶತೃಗಳಿದ್ದರು. ಯಾವುದೇ ಜಾತಿ, ಸಂಘಗಳ ಸಹಾಯವಿಲ್ಲದೆ ಒಬ್ಬರೇ ಪತ್ರಿಕೆ ಯೊಂದನ್ನು ಹೊರತಂದಸಾಹಸಿ. ಪತ್ರಿಕಾವೃತ್ತಿಯಲ್ಲಿ ಅವರು ಯಾವ ರಾಜಕೀಯ ಪಕ್ಷಗಳ ಕಡೆಯೂ ವಾಲದೆ, ರಾಜಿಮಾಡಿಕೊಳ್ಳದೆ ನಿರ್ಭೀತಿಯಿಂದ ಮುನ್ನುಗ್ಗಿನಡೆದ ಧೀಮಂತವ್ಯಕ್ತಿ, ಮೆಂಡನ್. "ನಿಜವಾದ ಅರ್ಥದಲ್ಲಿ ಪತ್ರಕರ್ತರಾಗಿ, ಮತ್ತು ಪತ್ರಕರ್ತರಿಗಾಗಿಯೇ ಬದುಕಿದವರು".
ಈಗ ಕರ್ನಾಟಕ ಮಲ್ಲದ, ಉಪ-ಸಂಪಾದಕರಾಗಿರುವ ಶ್ರೀನಿವಾಸ ಜೋಕಟ್ಟೆ ಯವರ ಪ್ರಥಮ ಕವನ, ೧೯೮೨ ರಲ್ಲಿ, ತಾಯಿನುಡಿ ಪತ್ರಿಕೆಯಲ್ಲಿ ಪ್ರಕಟವಾಯಿತು. ೧೯೯೧ ರಲ್ಲಿ, ಕರ್ನಾಟಕ ಪತ್ರಿಕಾ ಅಕಾಡೆಮಿಯ, ೧೪೪ ನೆ ವರ್ಷಾಚರಣೆಯಸಂದರ್ಭದಲ್ಲಿ, ೨೫ ವರ್ಷ ಬದುಕಿರುವ ಕನ್ನಡ ಪತ್ರಿಕೆಗಳಿಗೆ ಬೆಂಗಳೂರಿನಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆ ಸಮಯದಲ್ಲಿ ಮುಂಬಯಿನಿಂದ ಆಯ್ಕೆಯಾಗಿದ್ದ ಎರಡು ಪತ್ರಿಕೆಗಳಲ್ಲಿ ತಾಯಿನುಡಿ, ಮತ್ತು ಮೊಗವೀರ, ಪ್ರಮುಖವಾದವುಗಳು. ಆಗ ಮೆಂಡನ್ ಅವರ ಪರವಾಗಿ ಪ್ರಶಸ್ತಿಪಡೆಯಲು ಜೋಕಟ್ಟೆಯವರನ್ನು ಕಳಿಸಿದ್ದರು. ಶ್ರೀನಿವಾಸ ಜೋಕಟ್ಟೆಯವರು ಮೆಂಡನ್ ಅವರನ್ನು ತೀರ ಹತ್ತಿರದಿಂದ ಬಲ್ಲರು. ತಾಯಿನುಡಿಯ ಪ್ರಾರಂಭದ ದಿನಗಳಿಂದಲೂ, ಮೆಂಡನ್ ರವರ ಸಮೀಪವರ್ತಿಯಾಗಿ ದುಡಿದವರು. ಈಗ, ಶ್ರೀವಿವಾಸ ಜೋಕಟ್ಟೆ, ಮುಂಬಯಿನ ಕರ್ನಾಟಕಸಂಘದ, ಸ್ನೇಹಸಂಬಂಧ ಮಾಸ-ಪತ್ರಿಕೆಯ ಸಂಪಾದಕರಾಗಿ, ಕೆಲಸಮಾಡುತ್ತಿದ್ದಾರೆ. ೨೦೦೭ ರ ವವೆಂಬರ್ ತಿಂಗಳಿನಲ್ಲೇ ಇವರಿಗೆ, ಪತ್ರಕಾರ್ ರತ್ನ್, ಎಂಬ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಲಾಗಿದೆ. ಮುಂಬಯಿನ್ ನ ಐ.ಜೆ.ಅ, ಮತ್ತು ಚಾರ್ಕೋಪ್ ಸಮಾಚಾರ್, ಹಿಂದಿ ಸಾಪ್ತಾಹಿಕ್, ಪತ್ರಿಕೆಗಳು ಸಂಯುಕ್ತರೂಪದಿಂದ ಪ್ರಶಸ್ತಿ ಪ್ರದಾನಮಾಡಿದ್ದಾರೆ.
ಶಿಷ್ಯರನ್ನು ಮುಂದೆ ತಂದ ಶ್ರೇಯಸ್ಸು
[ಬದಲಾಯಿಸಿ]ಸುವರ್ಣ-ಕರ್ನಾಟಕ, ಜಾನಪದ ಉತ್ಸವ-೨೦೦೭ ರ ಸಂದಭದಲ್ಲಿ ನಡೆದ, 'ಜಾನಪದ ಹಾಗೂ ಜಾಗತೀಕರಣ ಸಂವಾದ ಗೋಶ್ಠಿ,' ಯಲ್ಲಿ, ಜಾನಪದ ಅಕಾಡೆಮಿ ಅಧ್ಯಕ್ಷ, ಕೆ. ಶಂಭುಹೆಗಡೆ ಅವರು, ಕರ್ನಾಟಕ ಸಂಘದ ಗೌ. ಕಾರ್ಯದರ್ಶಿ, ಸ್ನೇಹಸಂಬಂಧ ,ದ ಸಂಪಾದಕ, ಶ್ರೀ. ಶ್ರೀನಿವಾಸ ಜೋಕಟ್ಟೆಯವರಿಗೆ, ಸ್ಮರಣಿಕೆ ಪ್ರದಾನಿಸಿ, ಗೌರವಿಸಿದರು. ಮೇಲೆ ತಿಳಿಸಿದ ಎಲ್ಲಾ ಪ್ರಶಸ್ತಿ ಗೌರವಗಳ ಒಟ್ಟಾರೆ, ಶ್ರೇಯಸ್ಸು, ಯಶಸ್ವೀ ಶಿಷ್ಯವೃಂದವನ್ನು ತಯಾರಿಸಿದ ಪರದೆಯಹಿಂದೆ ನಿಂತು, ಪ್ರತಿ ಅಂಶಗಳನ್ನೂ ತಿದ್ದಿ, ಜೀವನರಂಗಕ್ಕೆ ಸಮರ್ಪಿಸಿದ ಚೇತನಕ್ಕೆ ಸೇರುತ್ತದೆ.
.
-ಕೃಪೆ : ಶ್ರೀನಿವಾಸ ಜೋಕಟ್ಟೆ.