ಡಿ.ವಿ.ಹಾಲಭಾವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಾನಪ್ಪ ವ್ಹಿ. ಹಾಲಭಾವಿಯವರು ೧೯೦೭ ನವೆಂಬರ ೨೮ರಂದು ಧಾರವಾಡದಲ್ಲಿ ಜನಿಸಿದರು. ಇವರ ತಂದೆ ಶ್ರೀ ವ್ಹಿ.ಬಿ.ಹಾಲಭಾವಿಯವರು ಮುಂಬಯಿ ಪ್ರಾಂತದಲ್ಲಿ ಸಬ್ ಜಜ್ ಎಂದು ನೌಕರಿ ಪ್ರಾರಂಭಿಸಿದ್ದರಿಂದ, ಮುಂಬಯಿ ಪ್ರಾಂತದ ದೂರ ದೂರದ ಭಾಗಗಳಿಗೆಲ್ಲ ವರ್ಗಾವಣೆ ನಿಮಿತ್ತ ಅಲೆದಾಡಬೇಕಾಯಿತು.

ಕಲೆಯ ಸೆಳೆತ[ಬದಲಾಯಿಸಿ]

ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಒಲವು ಬೆಳೆಸಿಕೊಂಡ ದಾನಪ್ಪನವರು, ೧೯೨೩ರಲ್ಲಿ ಬೆಳಗಾವಿಯಲ್ಲಿದ್ದಾಗ ಇಂಟರಮೀಡಿಯೇಟ್ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೨೬ರಲ್ಲಿ, ಮುಂಬಯಿಯಲ್ಲಿ ಸsರ್ ಜೆ.ಜೆ.ಸ್ಕೂಲ್ ಆಫ್ ಆರ್ಟ್ ನಲ್ಲಿ ಸೇರಿದರು. ೧೯೨೮ರಲ್ಲಿ ಅಲ್ಲಿಯ ಡಿ.ಟಿ.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೩೫ರಲ್ಲಿ ಡ್ರಾಯಿಂಗ್ ಮತ್ತು ಪೇಂಟಿಂಗದಲ್ಲಿ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಉದ್ಯೋಗ[ಬದಲಾಯಿಸಿ]

ಹಾಲಭಾವಿಯವರು ೧೯೨೪ರಿಂದ ೧೯೨೬ರವರೆಗೆ R.D.A.V.ಸ್ಕೂಲಿನಲ್ಲಿ ಚಿತ್ರಕಲಾ ಶಿಕ್ಷಕರೆಂದು ,ವೇತನವನ್ನು ತೆಗೆದುಕೊಳ್ಳದೆ, ಕಾರ್ಯ ನಿರ್ವಹಿಸಿದರು. ೧೯೨೮ರಲ್ಲಿ ನಿಪ್ಪಾಣಿಯ ಮುನಸಿಪಲ್ ಹಾಯ್ ಸ್ಕೂಲಿನಲ್ಲಿ ಚಿತ್ರಕಲಾ ಶಿಕ್ಷಕರೆಂದು ಕೆಲ ಕಾಲ ಸೇವೆ ಸಲ್ಲಿಸಿದರು.

ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಣ ಕೊಡುವ ಉದ್ದೇಶದಿಂದ ೧೯೩೫ರಲ್ಲಿ,ಧಾರವಾಡದಲ್ಲಿ School of Art ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿದರು. ಅದು ಈ ವರೆಗೂ ಕಲಾಸಕ್ತರಿಗೆ ಉತ್ತಮ ಸೇವೆಯನ್ನು ನೀಡುತ್ತ ಬಂದಿದೆ.

ಮಹತ್ವದ ಚಿತ್ರಗಳು[ಬದಲಾಯಿಸಿ]

೧.ಬೆಳಗಾವಿಯ ಕಾಯದೆ ಮಹಾವಿದ್ಯಾಲಯಕ್ಕಾಗಿ ರಾಜಾ ವಂಟಮುರಿಯವರ ಆಳೆತ್ತರದ ತೈಲಚಿತ್ರ

೨.ರಾಣಿಬೆನ್ನೂರ ನಗರಪಾಲಿಕೆಗೆ ಮಹಾತ್ಮಾ ಗಾಂಧೀಜಿಯವರ ತೈಲಚಿತ್ರ

೩.ಕರ್ನಾಟಕ ವಿಶ್ವವಿದ್ಯಾಲಯಕ್ಕಾಗಿ ಶ್ರೀ ಬಿ.ಡಿ.ಜತ್ತಿಯವರ ತೈಲಚಿತ್ರ

೪.ಡೆಪ್ಯುಟಿ ಚನ್ನಬಸಪ್ಪನವರ ತೈಲಚಿತ್ರ

೫.ರೊದ್ದ ಶ್ರೀನಿವಾಸರಾಯರ ತೈಲಚಿತ್ರ

೬.ಡಿ. ಸಿ. ಪಾವಟೆಯವರ ತೈಲಚಿತ್ರ

ಪುರಸ್ಕಾರ[ಬದಲಾಯಿಸಿ]

ಶ್ರೀ ಹಾಲಭಾವಿಯವರ ಕಲಾಸೇವೆಯ ಮನ್ನಣೆಯ ಪ್ರತೀಕವಾಗಿ ಅವರಿಗೆ ಅನೇಕ ಪುರಸ್ಕಾರಗಳು, ಪದಕಗಳು ಇತ್ಯಾದಿ ಲಭಿಸಿವೆ. ಅಲ್ಲದೆ, ಈ ಕೆಳಗಿನ ಹುದ್ದೆಗಳನ್ನೂ ಸಹ ಅವರು ಅಲಂಕರಿಸಿದರು:

೧. Member of Art and Craft Education & Examination, Mysore State

೨. ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿಯ ಸದಸ್ಯರು

೩. Federation of Art Institutions, Bombay, ಸದಸ್ಯರು

೪. ೧೯೬೭ರಲ್ಲಿ ರಾಜ್ಯ ಸರಕಾರದ ಪ್ರಶಸ್ತಿ