ಡಿವ್ಎಕ್ಸ್ (DivX)
Part of a series on |
DivX |
---|
ಡಿವ್ಎಕ್ಸ್ ಎಂಬುದು DivX, Inc.(ಡಿವ್ಎಕ್ಸ್, ಸಂಘಟಿತ ಸಂಸ್ಥೆ)(ಹಿಂದೆ DivXNetworks, Inc. ) ತಯಾರಿಸುವ ಉತ್ಪನ್ನಗಳ ಬ್ರ್ಯಾಂಡ್ ನ ಹೆಸರಾಗಿದೆ. ಡಿವ್ಎಕ್ಸ್ ಕೊಡೆಕ್ ಅನ್ನು ಒಳಗೊಂಡಂತೆ ; ಇದು ಬಹಳ ಉದ್ದವಾಗಿರುವ ವಿಡಿಯೋದ ಒಂದು ಭಾಗವನ್ನು ಸಣ್ಣ ಗಾತ್ರಕ್ಕೆ ಸಂಕುಚಿತ ಗೊಳಿಸುವ ಹಾಗು ತುಲನಾತ್ಮಕವಾಗಿ ಅತ್ಯಂತ ಸ್ಪಷ್ಟವಾಗಿ ಕಾಣಿಸುವಂತಹ ಗುಣಮಟ್ಟವನ್ನು ಹೊಂದಿರುವ ಸಾಮರ್ಥ್ಯದಿಂದ ಇದು ಜನಪ್ರಿಯವಾಗಿದೆ. ಎರಡು ಡಿವ್ಎಕ್ಸ್ ಕೊಡೆಕ್ ಗಳಿವೆ; ಮಾಮೂಲಿನ MPEG-4 ಭಾಗ 2 ಡಿವ್ಎಕ್ಸ್ ಕೊಡೆಕ್ ಮತ್ತು H.264/MPEG-4 AVC ಡಿವ್ಎಕ್ಸ್ ಪ್ಲಸ್ HD ಕೊಡೆಕ್. ಇದೂ ಕೂಡ ಅನೇಕ ಕೊಡೆಕ್ ಗಳಲ್ಲಿ ಒಂದಾಗಿದ್ದು, ಸಾಮಾನ್ಯವಾಗಿ "ರಿಪಿಂಗ್" ಗೆ ಸಂಬಂಧಿಸಿದೆ. ಇದರ ಮೂಲಕ ಆಡಿಯೋ ಮತ್ತು ವಿಡಿಯೋ ಮಲ್ಟಿಮೀಡಿಯವನ್ನು ಹಾರ್ಡ್ ಡಿಸ್ಕ್ ಗೆ ಕಳುಹಿಸಲಾಗುವುದು ಹಾಗು ಸಂಕೇತಾಂತರಿಸ(ಟ್ರಾನ್ಸ್ ಕೋಡೆಡ) ಲಾಗುವುದು.
ಇತಿಹಾಸ
[ಬದಲಾಯಿಸಿ]"ಡಿವ್ಎಕ್ಸ್"(DivX) ಬ್ರಾಂಡ್, "ಡಿವ್ಎಕ್ಸ್" (ಡಿಜಿಟಲ್ ವಿಡಿಯೋ ಎಕ್ಸ್ ಪ್ರೆಸ್) ಗಿಂತ ಭಿನ್ನವಾಗಿದೆ. ಇದು ವಿಶೇಷ ಡಿಸ್ಕ್ ಗಳನ್ನು , ಪ್ಲೇಯರ್ ಗಳನ್ನು ಒಳಗೊಂಡಿರುವ ವಿಡಿಯೋ ರೆಂಟಲ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವಂತೆ ಸರ್ಕಿಟ್ ಸಿಟಿಯ ಹಿಂದಿನ U.S. ವ್ಯಾಪಾರಿಯು ಮಾಡಿದ ಪ್ರಯತ್ನವಾಗಿದೆ.[೧] ಮೊದಲಿನ "DivX ;-)" (ಡಿವ್ಎಕ್ಸ್;-)) ಕೊಡೆಕ್ ನಲ್ಲಿದ್ದ ಕಣ್ಣುಮಿಟುಕಿಸುವ ಎಮೊಟಿಕಾನ್ನ ಹೆಸರು ವ್ಯಂಗ್ಯವಾಗಿ ವಿಫಲ ಡಿವ್ಎಕ್ಸ್ ವ್ಯವಸ್ಥೆಯನ್ನು ಸೂಚಿಸುತ್ತದೆ. ಡಿವ್ಎಕ್ಸ್ ಕಂಪನಿ ನಂತರ ಪಾಪ್ಯೂಲರ್ ಡಿವ್ಎಕ್ಸ್ ;-) ಕೊಡೆಕ್ ನ ಹೆಸರನ್ನು ತೆಗೆದುಕೊಂಡಿತು. (ಇದು ಅವರು ಸೃಷ್ಟಿಸಿರುವುದಲ್ಲ),ಸ್ಮೈಲಿಯನ್ನು ತೆಗೆದುಹಾಕಿ ಡಿವ್ಎಕ್ಸ್ ನ ಮೊದಲನೆಯ ಆವೃತ್ತಿಯಾದ ಡಿವ್ಎಕ್ಸ್ 4.0 ಅನ್ನು ಬಿಡುಗಡೆ ಮಾಡಲಾಯಿತು. (ಗಮನಹರಿಸಿ DivX;-) (ಡಿವ್ಎಕ್ಸ್ ;-)) ಮತ್ತು ಡಿವ್ಎಕ್ಸ್ ಎರಡು ವಿಭಿನ್ನ ಉತ್ಪನ್ನಗಳಾಗಿವೆ.ಅಲ್ಲದೇ ಬೇರೆ ಬೇರೆ ವ್ಯಕ್ತಿಗಳಿಂದ ರಚಿಸಲ್ಪಟ್ಟಿವೆ; DivX;-) (ಡಿವ್ಎಕ್ಸ್ ;-)), ಡಿವ್ಎಕ್ಸ್ ನ ಹಳೆಯ ಆವೃತ್ತಿಯಲ್ಲ). DivX (ಡಿವ್ಎಕ್ಸ್) ನ ಹೆಸರು ಅದರ ವ್ಯಾಪಾರ ಮುದ್ರೆಯಾಗಿದೆ.[೨][೩] ಇದನ್ನು DIV-ex ಎಂದು ಉಚ್ಛರಿಸಲಾಗುತ್ತದೆ.
ಆರಂಭಿಕ ವೃತ್ತಿಜೀವನ
[ಬದಲಾಯಿಸಿ]DivX ;-) (ಡಿವ್ಎಕ್ಸ್ ;-)) ( ಡಿವ್ಎಕ್ಸ್ ಅಲ್ಲ) ನ 3.11 ಆಲ್ಫ ಮತ್ತು ನಂತರದ 3.xx ಆವೃತ್ತಿಗಳು Windows(ವಿಂಡೋಸ್ ) ಮೀಡಿಯ ಟೂಲ್ಸ್ 4 ಕೊಡೆಕ್ಸ್ ನಿಂದ Microsoft (ಮೈಕ್ರೋಸಾಫ್ಟ್) MPEG-4 ಆವೃತ್ತಿ 3 ವಿಡಿಯೋ ಕೊಡೆಕ್ ನ ( MPEG-4 ಭಾಗ 3 ಎಂದು ತಪ್ಪುತಿಳಿದು ಕೊಳ್ಳಬೇಡಿ) ಹ್ಯಾಕ್ಡ್ (ಅಕ್ರಮ) ಆವೃತ್ತಿಯನ್ನು ಸೂಚಿಸುತ್ತದೆ.[೪][೫] ವಾಸ್ತವವಾಗಿ MPEG-4 ನ ಅನುವರ್ತನ ಶೀಲವಲ್ಲದ ವಿಡಿಯೋ ಕೊಡೆಕ್ ಅನ್ನು , 1998ರ ಹೊತ್ತಿಗೆ ಫ್ರೆಂಚ್ ಹ್ಯಾಕರ್ ಜೆರೋಮ್ ರೋಟ (ಗೇಜ್ ಎಂದು ಸಹ ಕರೆಯಲಾಗುತ್ತದೆ) ಎಂಬುವವನು ಮಾಂಟ್ ಪಿಲ್ಲರ್ ನಲ್ಲಿ ಕಂಡುಹಿಡಿದನು. Microsoft codec (ಮೈಕ್ರೋಸಾಫ್ಟ್ ಕೊಡೆಕ್) ಮೂಲತಃ ASFಫೈಲ್ ನಲ್ಲಿ ಇಡಲು ಸಾಧ್ಯವಾಗುವ ಸಂಕುಚಿತ ಜೌಟ್ ಪುಟ್(ಮಾಹಿತಿ) ನ ಅಗತ್ಯ ಹೊಂದಿರುತ್ತದೆ . ಇದು ಇತರ ಕಂಟೇನರ್ಸ್(ಧಾರಕ)ಗಳಿಗೆ ಎಡೆಮಾಡಿಕೊಡಲು ಬದಲಾಗುತ್ತದೆ.ಉದಾಹರಣೆಗೆ; ಆಡಿಯೋ ವಿಡಿಯೋ ಇಂಟರ್ ಲೀವ್ (AVI).[೬] ಅವನು ವಿಂಡೋಸ್ ಮೀಡಿಯ ಪ್ಲೇಯರ್ ನಲ್ಲಿ ಎನ್ ಕೋಡ್ (ಸಂಕೇತ ಬಾಷೆಯಲ್ಲಿ) ಮಾಡಿ ಇಟ್ಟಿದ್ದಂತಹ ಆತನ ವಿಡಿಯೋ ಪೊರ್ಟ್ ಫೋಲಿಯೊ (ಚಿತ್ರಣ) ಹಾಗು ರೆಸ್ಯೂಮ್(ವ್ಯಕ್ತಿ ಪರಿಚಯ ಪತ್ರ) ಅನ್ನು ವಿಂಡೋಸ್ ಮೀಡಿಯ ಪ್ಲೇಯರ್ ನ ಹೊಸ ಆವೃತ್ತಿ ಪ್ಲೇ ಮಾಡದ ಕಾರಣ ರೋಟಾ Microsoft codec (ಮೈಕ್ರೋಸಾಫ್ಟ್ ಕೊಡೆಕ್) ಅನ್ನು ಹ್ಯಾಕ್ (ಅಕ್ರಮವಾಗಿ ಪಡೆದ) ಮಾಡಿದ. ಅವನ ಪೊರ್ಟ್ ಫೋಲಿಯೊವನ್ನು ರೀ ಎನ್ ಕೋಡ್ ಮಾಡುವ ಬದಲು ರೋಟಾ ಮತ್ತು ಜರ್ಮನ್ ಹ್ಯಾಕರ್ ಮ್ಯಾಕ್ಸ್ ಮೊರೀಸ್ "ಒಂದು ವಾರದ ಕಾಲವನ್ನು ತೆಗೆದುಕೊಳ್ಳುವ" ಕೊಡೆಕ್ ನ ರಿವರ್ಸ್ ಎಂಜಿನಿಯರ್ ಪ್ರಕ್ರಿಯೆಯನ್ನು ಮಾಡಲು ನಿರ್ಧರಿಸಿದರು .[೭]
ನಂತರದ ಕೆಲಸಗಳು
[ಬದಲಾಯಿಸಿ]2000 ದ ಮೊದಲಿಗೆ , ಜೋರ್ಡನ್ ಗ್ರೀನ್ ಹಾಲ್ ಎಂಬಾತ ರೋಟಾನನ್ನು ಸ್ಕ್ರ್ಯಾಚ್ ನಿಂದ MPEG-4 ಕೊಡೆಕ್ ಅನ್ನು ಅಭಿವೃದ್ಧಿ ಪಡಿಸುವ ಕಂಪನಿಯನ್ನು (ಮೂಲತಃ DivXNetworks, Inc.ಎಂದು ಕರೆಯಲಾಗುತ್ತದೆ, ಡಿವ್ಎಕ್ಸ್, Inc. 2005ರಲ್ಲಿ ಮರು ಹೆಸರನ್ನು ಇಡಲಾಯಿತು) ರಚಿಸಲು ತೆಗೆದುಕೊಂಡನು.ಅದು ಈಗಲೂ - Microsoft MPEG-4 3ನೇ ಆವೃತ್ತಿಯ ಫಾರ್ಮೆಟ್ (ಕ್ರಮವ್ಯವಸ್ಥೆ)ನ ಜೊತೆಯಲ್ಲಿ ಹೊಂದಿಕೊಂಡಿಲ್ಲ . "OpenDivX" (ಒಪನ್ ಡಿವ್ಎಕ್ಸ್ ) ಕೊಡೆಕ್ ಮತ್ತು ಸೋರ್ಸ್(ಮೂಲ) ಕೋಡ್ ಅನ್ನು 2001 ರ ಜನವರಿ 15 ರಂದು ಬಿಡುಗಡೆ ಮಾಡಿದಾಗ ಈ ಪ್ರಯತ್ನಗಳು ಮೊದಲನೆ ಬಾರಿಗೆ ಫಲಿತಾಂಶವನ್ನು ನೀಡಿದವು. OpenDivX ಅನ್ನು projectmayo.com ನ ಪ್ರಜೆಕ್ಟ್ ಮಯೊ ವೆಬ್ ಸೈಟ್ ನಲ್ಲಿ ಒಪನ್ -ಸೋರ್ಸ್ ಯೋಜನೆ(ಪ್ರಾಜೆಕ್ಟ್ ) ಯಾಗಿ ಪ್ರಾರಂಭಿಸಲಾಯಿತು.[೮] ( "ಮಯೊ ನೈಸೆಯಿಂದ ಈ ಹೆಸರು ಬಂದಿದೆ", ಏಕೆಂದರೆ ರೋಟಾ ನ ಪ್ರಕಾರ , ಡಿವ್ಎಕ್ಸ್ ಮತ್ತು ಮಯೊನೈಸೆ ಎರಡೂ "ಫ್ರೆಂಚ್ ಆಗಿದ್ದು ಮಾಡಲು ತುಂಬ ಕಷ್ಟವಾಗಿವೆ." [೭]). ಕಂಪನಿಯ ಒಳಗಿನ ಅಭಿವರ್ಧಕರು(ಡೆವಲಪರ್ಸ್ ) ಮತ್ತು ಹೊರಗಿನ ಕೆಲವು ಅಭಿವರ್ಧಕರು ಮುಂದಿನ ಕೆಲವು ತಿಂಗಳುಗಳ ವರೆಗೆ OpenDivX ಯೋಜನೆಯ ಮೇಲೆ ಒಟ್ಟಿಗೆ ಕೆಲಸ ಮಾಡಿದರು, ಆದರೆ ಯೋಜನೆ ಮುಂದುವರೆಯದೆ ನಿಂತಲ್ಲೇ ನಿಂತಿತ್ತು. 2001ರ ಮೊದಲಿಗೆ , ಡಿವ್ಎಕ್ಸ್ ನ ಉದ್ಯೋಗಿ "ಸ್ಪಾರ್ಕಿ" ಎಂಬಾತ "encore2"(ಪುನರಾವೃತ್ತಿ2) ಎಂದು ಕರೆಯಲ್ಪಡುವ ಕೊಡೆಕ್ ನ ಎನ್ ಕೋಡಿಂಗ್ ಅಲ್ಗೊರಿದಮ್ ನ ಹೊಸದಾದ ಹಾಗು ಅಭಿವರ್ಧಿಸಿದ(ಮುಂದುವರೆದ) ಆವೃತ್ತಿಯನ್ನು ಬರೆದನು. ಈ ಕೋಡ್ ಅನ್ನು ದೀರ್ಘಕಾಲದ ವರೆಗೆ OpenDivX ಪಬ್ಲಿಕ್ ಸೋರ್ಸ್ ನಲ್ಲಿ ಸೇರಿಸಿಕೊಳ್ಳಲಾಗಿತ್ತು, ಆದರೆ ನಂತರ ಅದನ್ನು ಏಕಾಏಕಿ ತೆಗೆದುಹಾಕಲಾಯಿತು. ಆ ಸಮಯದಲ್ಲಿ ಡಿವ್ಎಕ್ಸ್ "ಸಮೂಹಕ್ಕೆ ಖಂಡಿತವಾಗಿ ಬೇಕಾಗಿರುವುದು Winamp ( ವಿನ್ ನ್ಯಾಪ್ ) ಹೊರತು Linux (ಲೈನಕ್ಸ್) ಅಲ್ಲ" ಎಂಬ ವಿವರಣೆಯನ್ನು ನೀಡಿತು. ಯೋಜನೆಇಬ್ಭಾಗವಾದ ಸಮಯವದು. ಆ ಬೇಸಿಗೆಯಲ್ಲಿ ರೋಟಾ "ಕೇವಲ ಒಂದು ಫ್ಯಾಕ್(ಕಟ್ಟು) ಸಿಗರೇಟ್ "[೯] ಅನ್ನು ಇಟ್ಟುಕೊಂಡು ಫ್ರೆಂಚ್ ರಿವೇರಾವನ್ನು ಬಿಟ್ಟು ಸ್ಯಾನ್ ಡಿಗೊ ಗೆ ಹೋದನು . ಅಲ್ಲಿ ಅವನು ಮತ್ತು ಗ್ರೀನ್ ಹಾಲ್ ಯಾವುದು ಅಂತಿಮವಾಗಿ DivX,, Inc. ಆಗಬೇಕಿದೆ ಎಂಬುದನ್ನು ಕಂಡುಕೊಂಡರು.[೭] ಡಿವ್ಎಕ್ಸ್ encore2 ( ಪುನರಾವೃತ್ತಿ2) ನ ಕೋಡ್ ಅನ್ನು ತೆಗೆದುಕೊಂಡು ಅದನ್ನು ಡಿವ್ಎಕ್ಸ್ 4.0 ವಾಗಿ ಅಭಿವರ್ಧಿಸಿತು ಹಾಗು ಇದನ್ನು ಮೊದಲಿಗೆ ಜುಲೈ 2001ರಲ್ಲಿ ಬಿಡುಗಡೆ ಮಾಡಿತು. OpenDivX ನಲ್ಲಿ ಪಾಲ್ಗೊಂಡ ಇತರ ಅಭಿವರ್ಧಕರು encore2 (ಪುನರಾವೃತ್ತಿ2) ಅನ್ನು ತೆಗೆದುಕೊಂಡರು.ಅಲ್ಲದೇ ಹೊಸ ಯೋಜನೆ—Xvid—ಅನ್ನು ಅದೇ ಎನ್ ಕೋಡಿಂಗ್ ಭಾಗದಿಂದ ಪ್ರಾರಂಭಿಸಿದರು. DivX 5.0 (ಡಿವ್ಎಕ್ಸ್ 5.00 ಮಾರ್ಚ್ 2002ರಲ್ಲಿ ಬಿಡುಗಡೆಮಾಡುವ ವರೆಗೂ DivX, Inc. ಡಿವ್ಎಕ್ಸ್ ಕೊಡೆಕ್ ನ ಅಭಿವರ್ಧಿಸುವಿಕೆಯನ್ನು ಮುಂದುವರೆಸಿತು . 5.2.1 ರ ಆವೃತ್ತಿಗಳನ್ನು 2004 ಸೆಪ್ಟೆಂಬರ್ 8 ರಂದು ಬಿಡುಗಡೆ ಮಾಡುವ ಹೊತ್ತಿಗೆ ಡಿವ್ಎಕ್ಸ್ ಕೊಡೆಕ್ ಒಟ್ಟಿನಲ್ಲಿ -ಮುಕ್ತಾಯವಾಯಿತು.[೧೦] ಬದಲಾವಣೆಯ ನಂತರ ಕಂಪನಿ ವೇಗದ ಕಡೆಗೆ ಹಾಗು ವೈಡರ್ ಹಾರ್ಡ್ ವೇರ್ ಪ್ಲೇಯರ್ ನನ್ನು ಉತ್ತೇಜಿಸುವುದರ ಕಡೆಗೆ ಗಮನಹರಿಸಿತು. ಅಲ್ಲದೇ ಅದರ ಸಮಯವನ್ನು ಫಾರ್ಮೆಟ್ ನ ಕಡೆ ಹಾಗು ಮುಂದಿನ ಪೀಳಿಗೆಯ ಕೊಡೆಕ್ ಗಳ ಕಡೆ ಕೇಂದ್ರಿಕರಿಸಿತು.
ಡಿವ್ಎಕ್ಸ್ ನ ಫಾರ್ಮೆಟ್ ಗಳು (ಕ್ರಮವ್ಯವಸ್ಥೆ ರೂಪಗಳು)
[ಬದಲಾಯಿಸಿ]ಡಿವ್ಎಕ್ಸ್ ಮೀಡಿಯ ಫಾರ್ಮೆಟ್ (DMF)
[ಬದಲಾಯಿಸಿ]Filename extension |
.divx |
---|---|
Type code | DIVX |
Developed by | DivX, Inc. |
Type of format | media container |
Container for | MPEG-4 Part 2–compliant video |
Extended from | AVI |
ಕೇವಲ ಕೊಡೆಕ್ ಮತ್ತು "ಡಿವ್ಎಕ್ಸ್ ಮೀಡಿಯ ಫಾರ್ಮೆಟ್" ಎಂದು ಕರೆಯಲ್ಪಡುವ ಐಚ್ಛಿಕ ಮೀಡಿಯ ಕಂಟೇನರ್ ಫಾರ್ಮೆಟ್ ("DMF") (ಡಿವ್ಎಕ್ಸ್ ವಿಸ್ತಾರದೊಂದಿಗೆ)ಅನ್ನು ಸೇರಿಸಿಕೊಳ್ಳುವ ಮೂಲಕ ಪ್ಲೇಯರ್ ಅನ್ನು ಒಳಗೊಂಡಂತೆ DivX 6 ಡಿವ್ಎಕ್ಸ್ ನ ಮಹತ್ವವನ್ನು ಹೆಚ್ಚಿಸುವುದು. ಇದು ಕೆಳಗಿರುವಂತಹ DVD-ವಿಡಿಯೋ ಮತ್ತು VOB ಕಂಟೇನರ್ ನಂತಹ ಗುಣಲಕ್ಷಣ ಇರುವಂತವುಗಳಿಗೆ ಬೆಂಬಲ ನೀಡುತ್ತದೆ. ಈ ಮೀಡಿಯ ಕಂಟೇನರ್ ಫಾರ್ಮೆಟ್ ಅನ್ನು MPEG-4 ಭಾಗ 2 ಕೊಡೆಕ್ ಗಾಗಿ ಉಪಯೋಗಿಸಲಾಗುವುದು.
- ಡಿವ್ಎಕ್ಸ್ ಮೀಡಿಯ ಫಾರ್ಮೆಟ್ (DMF)ನ ಗುಣಲಕ್ಷಣಗಳು:
- ಇಂಟ್ರ್ಯಾಕ್ಟಿವ್ ವಿಡಿಯೋ ಮೆನೂಸ್
- ವಿವಿಧ ಉಪನಾಮಗಳು (XSUB)
- ವಿವಿಧ ಆಡಿಯೋ ಹಾಡುಗಳು
- ವಿವಿಧ ವಿಡಿಯೋ ವರ್ಗೀಕರಣಗಳು (ವಿಶಿಷ್ಟ ಗುಣಲಕ್ಷಣಗಳಿಗೆ ಉದಾಹರಣೆಗೆ , ಬೋನಸ್/ಅಧಿಕ ವಿಷಯಗಳಿಗೆ, DVD-ವಿಡಿಯೋ ಚಲನಚಿತ್ರಗಳಂತೆ)
- ಚಾಪ್ಟರ್ ಪಾಯಿಂಟ್ಸ್
- ಇತರ ಮೆಟಡೇಟಾ (XTAG)
- ವಿವಿಧ ಫಾರ್ಮೆಟ್
- AVI ನ ಜೊತೆಯಲ್ಲಿ ಭಾಗಶಃ ಹಿಂದಿನ ಹೊಂದಾಣಿಕೆ
ಈ ಹೊಸ "ಡಿವ್ಎಕ್ಸ್ ಮೀಡಿಯ ಫಾರ್ಮೆಟ್" ಕೂಡ "ಡಿವ್ಎಕ್ಸ್ ಅಲ್ಟ್ರಾ ಸರ್ಟಿಫೈಡ್ "(ಡಿವ್ಎಕ್ಸ್ ಅಲ್ಟ್ರಾ ದಿಂದ ಪ್ರಾಮಾಣೀಕರಿಸಲ್ಪಟ್ಟ) ಫ್ರೋಫೈಲ್ ನ ಜೊತೆಯಲ್ಲಿಯೇ ಬಂದಿತು.ಅಲ್ಲದೇ ಎಲ್ಲಾ "ಅಲ್ಟ್ರಾ " ದಿಂದ ಪ್ರಮಾಣೀಕರಿಸಲ್ಪಟ್ಟ ಪ್ಲೇಯರ್ಸ್ ಗಳು "ಡಿವ್ಎಕ್ಸ್ ಮೀಡಿಯ ಫಾರ್ಮೆಟ್" ನ ಗುಣಲಕ್ಷಣಗಳಿಗೆ ಬೆಂಬಲವನ್ನು ನೀಡಬೇಕು. ವಿಡಿಯೋ ಡಿವ್ಎಕ್ಸ್ ಕೊಡೆಕ್ ನ ಜೊತೆಯಲ್ಲಿ ಎನ್ ಕೋಡ್ ಮಾಡಿದಾಗ ಅದು MPEG-4 ವಿಡಿಯೋ ಸ್ಟ್ರೀಮ್ ಆಗುತ್ತದೆ. ಆಗ ಡಿವ್ಎಕ್ಸ್ ಮೀಡಿಯ ಫಾರ್ಮೆಟ್, ಮೀಡಿಯ ಕಂಟೇನರ್ ಫಾರ್ಮೆಟ್ ಅನ್ನು ಹೋಲುತ್ತದೆ. ಉದಾಹರಣೆಗೆ; Apple's QuickTime (ಆಪಲ್ ನ ಕ್ವಿಕ್ ಟೈಮ್). ಹೆಚ್ಚು ಕಡಿಮೆ ಅದೇ ರೀತಿಯಲ್ಲಿ ಮೀಡಿಯ ಫಾರ್ಮೆಟ್ಸ್ ಉದಾಹರಣೆಗೆ , DVD ಸೂಚಿಸಿರುವ MPEG-2 ವಿಡಿಯೋ ಅವರು ನಿರ್ದಿಷ್ಟವಾಗಿ ಸೂಚಿಸಿರುವಂತೆ, ಡಿವ್ಎಕ್ಸ್ ಮೀಡಿಯ ಫಾರ್ಮೆಟ್ MPEG-4-ಹೋಲುವ ವಿಡಿಯೋವನ್ನು ಅದರ ಸೂಚಿಸುವಿಕೆಯ ಭಾಗವಾಗಿ ಸ್ಪಷ್ಟವಾಗಿ ವಿವರಿಸಿದೆ. "ಡಿವ್ಎಕ್ಸ್" ವಿಸ್ತರಣೆಯನ್ನು ಬಳಸಿದರು ಕೂಡ, ಈ ಫಾರ್ಮೆಟ್ AVI ಫೈಲ್ ಫಾರ್ಮೆಟ್ ನ ವಿಸ್ತರಣ ರೂಪವಾಗಿದೆ. ವಿವಿಧ ಆಡಿಯೋ ಮತ್ತು ಉಪ ಶೀರ್ಷಿಕೆಯ ಹಾಡುಗಳನ್ನು ಒಳಗೊ ಳ್ಳುವ ವಿಧಾನಗಳು , ಡೇಟಾವನ್ನು RIFF ಹೆಡರ್ ನಲ್ಲಿ ಹಾಗು ಇತರ AVI ಹ್ಯಾಕ್ಸ್ ನಂತಹವುಗಳಲ್ಲಿ ಸಂಗ್ರಹಮಾಡುವ ಕ್ರಿಯೆಯಲ್ಲಿ ಒಳಗೊಂಡಿರುತ್ತವೆ. ಉದಾಹರಣೆಗೆ ವರ್ಚ್ಯುಅಲ್ ಡಬ್ ಮೋಡ್(ಸಾಫ್ಟ್ ವೇರ್) ಅವುಗಳಿಗೆ ಪೂರಕ ಬೆಂಬಲ ನೀಡುತ್ತದೆ. ಭಾಗಶಃ ಇದನ್ನು AVI ನೊಡನೆ ಹಿಂದಿನ ಹೊಂದಾಣಿಕೆಯನ್ನು ಉಳಿಸುವ ಉದ್ದೇಶದಿಂದ DivX, Inc. ಇದನ್ನು ಮಾಡಿದೆ.ಇದರಿಂದ ಪ್ಲೇಯರ್ ಗಳು .divx container format (.ಡಿವ್ಎಕ್ಸ್ ಕಂಟೇನರ್ ಫಾರ್ಮೆಟ್) ನಲ್ಲಿರುವ ಹೊಸ ಗುಣಲಕ್ಷಣಗಳಿಗೆ ಕಾರ್ಯನಿರ್ವಹಿಸಲು ಸಹಾಯ ಮಾಡದಿದ್ದರೂ (ಉದಾಹರಣೆಗೆ ಇಂಟರ್ ಆಕ್ಟೀವ್ ಮೆನ್ಯೂಸ್, ಚಾಪ್ಟರ್ ಪಾಯಿಂಟ್ಸ್ ಮತ್ತು XSUB ಉಪನಾಮಗಳು), ಆ ವಿಡಿಯೋದ ಪ್ರಥಮ ಸ್ಟ್ರೀಮ್ ಅನ್ನಾದರೂ ಪ್ಲೇ ಮಾಡುತ್ತವೆ.(ಸಾಮಾನ್ಯವಾಗಿ ಪ್ರಮುಖ ಚಲನಚಿತ್ರ DMF ಫೈಲ್ಸ್ ವಿವಿಧ ವಿಡಿಯೋ ಸ್ಟ್ರೀಮ್ ಗಳನ್ನು ಒಳಗೊಂಡಿದ್ದರೆ ಉದಾಹರಣೆಗೆ, ಬೋನಸ್ ಮೆಟೀರಿಯಲ್ ನಂತಹ ವಿಶೇಷ ಗುಣಲಕ್ಷಣಗಳು). DivX codec (ಡಿವ್ಎಕ್ಸ್ ಕೊಡೆಕ್) ಮತ್ತು Dr. DivX ನಂತಹ ಟೂಲ್ಸ್ ಗಳು ಕಂಡಿತವಾಗಿ ಸ್ಟಾಂಡರ್ಡ್ AVI ಫೈಲ್ಸ್ ಗಳನ್ನು ರಚಿಸುವ ಹಳೆಯ ವಿಧಾನಕ್ಕೆ ಇನ್ನೂ ಸಾಹಯ ಮಾಡುತ್ತಲಿವೆ.
DivX Plus HD( ಡಿವ್ಎಕ್ಸ್ ಪ್ಲಸ್ HD)
[ಬದಲಾಯಿಸಿ]ಡಿವ್ಎಕ್ಸ್ ಪ್ಲಸ್ HD ಎಂಬುದು ಖಾಸಗಿ ಡಿವ್ಎಕ್ಸ್ ಮೀಡಿಯ ಫಾರ್ಮೆಟ್ ಗಿಂತ ಸ್ಟ್ಯಾಂಡರ್ಡ್ ಮ್ಯಾಟ್ರೋಸ್ಕ ಮೀಡಿಯ ಕಂಟೇನರ್ ಫಾರ್ಮೆಟ್ (.mkv) ಅನ್ನು ಉಪಯೋಗಿಸುವ ಫೈಲ್ ನ ವಿಧಕ್ಕೆ ಇರುವಂತಹ ಮಾರಾಟದ ಉದ್ದೇಶಕ್ಕಾಗಿ ಇಟ್ಟಿರುವ ಹೆಸರಾಗಿದೆ. ಡಿವ್ಎಕ್ಸ್ ಪ್ಲಸ್ HD ಫೈಲ್ ಗಳು , H.264 ವಿಡಿಯೋ ಬಿಟ್ ಸ್ಟ್ರೀಮ್, AAC ಸರೌಂಡ್ ಸೌಂಡ್ ಆಡಿಯೋ, ಹಾಗು ಅನೇಕ XML-ಆಧಾರಿತ ಅಟ್ಯಾಚ್ ಮೆಂಟ್ ಗಳನ್ನು ನಿರೂಪಿಸುವ ವಿಭಾಗಗಳನ್ನು , ಉಪಶೀರ್ಷಿಕೆಗಳನ್ನು ಮತ್ತು ಮೆಟಾ ಡೇಟಾಗಳನ್ನು ಒಳಗೊಂಡಿರುತ್ತದೆ.[೧೧] ಈ ಮೀಡಿಯ ಕಂಟೇನರ್ ಫಾರ್ಮೆಟ್ ಅನ್ನು H.264/MPEG-4 AVC ಕೊಡೆಕ್ ಗಳಿಗಾಗಿ ಬಳಸಲಾಗುತ್ತದೆ.
ಡಿವ್ಎಕ್ಸ್ ಫ್ರೋಫೈಲ್ಸ್ (ವಿವರಗಳು)
[ಬದಲಾಯಿಸಿ]This article is outdated.(December 2009) |
ಡಿವ್ಎಕ್ಸ್ ಅನೇಕ ಫ್ರೋಫೈಲ್ ಗಳನ್ನು ಹೊಂದಿದೆ,ಇವು ಡಿವ್ಎಕ್ಸ್ ನಿಂದ ಸ್ಪಷ್ಟ ಪಡಿಸಲಾಗಿರುವ MPEG-4 ಗುಣಲಕ್ಷಣಗಳನ್ನು ಹೆಚ್ಚಿಸುತ್ತವೆ. ಏಕೆಂದರೆ ವರ್ಗೀಕರಿಸುವುದು MPEG-4 ಸ್ಟ್ಯಾಂಡರ್ಡ್ ನಲ್ಲಿ ನಿರ್ದಿಷ್ಟ ಗೊಳಿಸಿರುವುದಕ್ಕಿಂತ ಭಿನ್ನವಾಗಿದೆ. ಡಿವೈಸ್ ಅನ್ನು ತಯಾರಿಸುವವರಿಗೆ ಡಿವ್ಎಕ್ಸ್-ಸ್ಪೆಸಿಫಿಕ್ ಡಿವೈಸ್ ಸರ್ಟಿಫಿಕೇಶನ್ ಪ್ರೋಸಸ್ (ಡಿವ್ಎಕ್ಸ್- ನಿರ್ದಿಷ್ಟ ಡಿವೈಸ್ ಪ್ರಮಾಣೀಕರಿಸಲಾದ ಪ್ರಕ್ರಿಯೆ) ಇದೆ .[೧೨] ಡಿವ್ಎಕ್ಸ್ ಫಾರ್ಮೆಟ್ ನ ವಿವರಗಳು ISO/IEC MPEG-4 ಅಂತರರಾಷ್ಟ್ರೀಯ ಸ್ಟ್ಯಾಂಡರ್ಡ್ ನ ಸ್ಟ್ಯಾಂಡರ್ಡೈಸ್ ವಿವರಗಳಿಗಿಂತ ಭಿನ್ನವಾಗಿವೆ.
! ಹ್ಯಾಂಡ್ ಹೆಲ್ಡ್ (ಅಸಮ್ಮತಿಸಿರುವ) !colspan (ಕೊಲ್ಸ್ ಪ್ಯಾನ್) ="2"| ಪೋರ್ಟೆಬಲ್ (ಅಸಮ್ಮತಿಸಿರುವ) ! qMobile (ಕ್ಯೂ ಮೊಬೈಲ್ ) ! ಮೊಬೈಲ್ ! ಹೋಮ್ ಥಿಯೇಟರ್ ! High Def (ಹೈ ಡೆಫ್) |- ! ಆವೃತ್ತಿ | ಸ್ಟೈಲ್="ವಿಡ್ತ್ (ವಿಸ್ತೀರಣ):16%;"| 5+ | ಸ್ಟೈಲ್="ವಿಡ್ತ್:16%;"| 3.11 || ಸ್ಟೈಲ್="ವಿಡ್ತ್:16%;"| 4+ | ಸ್ಟೈಲ್="ವಿಡ್ತ್:16%;"| 5+ | ಸ್ಟೈಲ್="ವಿಡ್ತ್:16%;"| 5+ | ಸ್ಟೈಲ್="ವಿಡ್ತ್:16%;"| 3.11+ | ಸ್ಟೈಲ್="ವಿಡ್ತ್:16%;"| 4+ |- ! Max. resolution (ಮ್ಯಾಕ್ಸ್. ರೆಸಲ್ಯೂಷನ್) || (px×px×Hz) | 176×144×15 | 352×240×30, 352×288×25 || 720×480×30, 720×576×25 | 177x144x15 | 320x240×30 | 720×480×30, 720×576×25 | 1280×720×30; 6.5 : 1920×1080×30 |- ! Macroblocks (ಮ್ಯಾಕ್ರೋಬ್ಲಾಕ್ಸ್) || (kHz) | 1.485 | 9.9 || 40.5 | | | 40.5 | 108 |- ! Max. average(ಮ್ಯಾಕ್ಸ್. ಸರಾಸರಿ) ಬಿಟ್ ರೇಟ್ || (Mbit/s) | 0.2 | 0.768 || 4 | 0.2 | 0.6 4. 4. |- ! Max. peak bitrate (ಮ್ಯಾಕ್ಸ್. ಹೆಚ್ಚು ಬಿಟ್ ರೇಟ್ ) || (Mbit/s) | 0.4 −2.8% | | | 8 20% |- ! Min. VBV buffer size (ಮಿನಿ(ಕನಿಷ್ಠ). VBV ಬಫರ್ (ದತ್ತಕೋಶ) ಸೈಸ್(ಗಾತ್ರ) || (KiB) | 33 | 128 || 384 | | 65 | 384 | 768 |}
ಡಿವ್ಎಕ್ಸ್ ವಿಡಿಯೋ ಆನ್ ಡಿಮಾಂಡ್ (ಬೇಡಿಕೆಯ ಮೇಲೆ ಡಿವ್ಎಕ್ಸ್ ವಿಡಿಯೋ)
[ಬದಲಾಯಿಸಿ]ಡಿವ್ಎಕ್ಸ್ ವಿಡಿಯೋದಾ (ಡಿವ್ಎಕ್ಸ್ VOD) , ಡಿಜಿಟಲ್ ರೈಟ್ಸ್ ಮ್ಯಾನೇಜ್ ಮೆಂಟ್ (DRM)ಬೇಡಿಕೆಯ ಮೇಲೆ ಡಿವ್ಎಕ್ಸ್ ನ ಆವೃತ್ತಿಯಾಗಿದೆ, ಇದು ಮಾಲೀಕನಿಗೆ ಅವನ ಮಾಹಿತಿಯನ್ನು ಬೇರೆಯವರು ಕದಿಯದಂತೆ ನಿಯಂತ್ರಿಸಬಹುದಾದ ಹಕ್ಕನ್ನು ನೀಡುತ್ತದೆ. DivX, Inc. ಸೋನಿ , ಪ್ಯಾರ ಮೌಂಟ್ , ಲಿಂಗ್ಸ್ ಗೇಟ್ ನನ್ನು ಒಳಗೊಂಡಂತೆ ಪ್ರಮುಖ ಹಾಲಿವುಡ್ ಸ್ಟೂಡಿಯೋ ಗಳಿಂದ ಪ್ರಮಾಣಿಕರಿಸಲ್ಪಟ್ಟಿರುವ ಫಾರ್ಮೆಟ್ ಅನ್ನು ಪಡೆದಿದೆ. ಇದು ಮಾರಾಟಗಾರರಿಗೆ ಹಿಂದಿನ ಪೀಳೆಗೆಯ ಹಾಗು ಪ್ರಸ್ತುತದ ಡಿವ್ಎಕ್ಸ್ ನ ಪ್ರಮಾಣೀಕರಿಸಲ್ಪಟ್ಟ ಡಿವೈಸ್ ನಲ್ಲಿ ಪ್ಲೇ ಆಗುವಂತಹ ಪ್ರೋಟೆಕ್ಟೆಡ್ (ನಕಲು ಮಾಡಲಾಗದ) ವಿಡಿಯೋಗಳನ್ನು ಮಾರಾಟ ಮಾಡುವ ಅವಕಾಶವನ್ನು ನೀಡಿದೆ.
ಡಿವ್ಎಕ್ಸ್ ಸಾಫ್ಟ್ ವೇರ್
[ಬದಲಾಯಿಸಿ]ವಿಂಡೋಸ್ ಗಳಿಗಾಗಿ ಡಿವ್ಎಕ್ಸ್ ಕೊಡೆಕ್, ಡಿವ್ಎಕ್ಸ್ ಪ್ಲಸ್ ಸಾಫ್ಟ್ ವೇರ್ ಅನ್ನು ಹಾಗು ಮ್ಯಾಕ್ ಗಾಗಿ ಡಿವ್ಎಕ್ಸ್ 7 ಸಾಫ್ಟ್ ವೇರ್ ಅನ್ನು ಡಿವ್ಎಕ್ಸ್ ವೆಬ್ ಸೈಟ್ ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. 2009 ಜನವರಿ 6 ರಂದು ಬಿಡುಗಡೆಯಾದ ಡಿವ್ಎಕ್ಸ್ 7 ಹಿಂದಿನ ಅಡೆತಡೆಗಳನ್ನು ಮೀರಿದಂತೆ H.264 ವಿಡಿಯೋ, AAC ಆಡಿಯೋ ಮತ್ತು ಮ್ಯಾಟ್ರೋಸ್ಕ್ ಕಂಟೇನರ್(ಧಾರಕದ) ಬೆಂಬಲವನ್ನು ಒಳಗೊಂಡಿದೆ.[೧೩]
DivX Plus Software for Windows (ವಿಂಡೋಸ್ ಗಳಿಗೆ ಡಿವ್ಎಕ್ಸ್ ಪ್ಲಸ್ ಸಾಫ್ಟ್ ವೇರ್)
[ಬದಲಾಯಿಸಿ]ವಿಂಡೋಸ್ ಗಳಿಗಾಗಿ ಡಿವ್ಎಕ್ಸ್ ಪ್ಲಸ್ ಸಾಫ್ಟ್ ವೇರ್ (ಆವೃತ್ತಿ 8) ಅನ್ನು 2010 ಮಾರ್ಚ್ 16 ರಂದು ಬಿಡುಗಡೆಮಾಡಲಾಯಿತು.ಇದು ಡಿವ್ಎಕ್ಸ್ ಪ್ಲಸ್ ಕೊಡೆಕ್ ಪ್ಯಾಕ್ ಹಾಗು ಡಿವ್ಎಕ್ಸ್ ಪ್ಲಸ್ ಪ್ಲೇಯರ್ ಡಿವ್ಎಕ್ಸ್ ಅನ್ನು ಒಳಗೊಂಡಿರುವುದನ್ನು ಪರಿಚಯಿಸಿತು.[೧೪]
ಡಿವ್ಎಕ್ಸ್ ಪ್ಲಸ್ ಪ್ಲೇಯರ್
[ಬದಲಾಯಿಸಿ]DivX Plus Player interface | |
ಅಭಿವೃದ್ಧಿಪಡಿಸಿದವರು | DivX, Inc. |
---|---|
Stable release | 8.0.1
/ 4 ಜೂನ್ 2010 |
ಕಾರ್ಯಾಚರಣಾ ವ್ಯವಸ್ಥೆ | Microsoft Windows |
ವಿಧ | Media player |
ಪರವಾನಗಿ | Freeware |
ಅಧೀಕೃತ ಜಾಲತಾಣ | http://www.divx.com/software/divx-plus/player |
ಡಿವ್ಎಕ್ಸ್ ಪ್ಲಸ್ ಪ್ಲೇಯರ್ (ಆವೃತ್ತಿ 8) ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಮೀಡಿಯ ಪ್ಲೇಯರ್ಆಗಿದೆ.[೧೫] ಈ ಪ್ಲೇಯರ್ ಡಿವ್ಎಕ್ಸ್ ಪ್ಲೇಯರ್ (ಆವೃತ್ತಿ 6 ಮತ್ತು 7) ನ ಹಾಗು ನಂತರ DivX, Inc. ಎಂಬ ಹೆಸರನ್ನು ಪಡೆದ ಪ್ರಾಜೆಕ್ಟ್ ಮಯೊ ತಂಡ ನಿರ್ಮಿಸಿದಪ್ಲಾಯ (ಆವೃತ್ತಿ8)ದ ಮಾಲೀಕ.[ಸೂಕ್ತ ಉಲ್ಲೇಖನ ಬೇಕು][ಸೂಕ್ತ ಉಲ್ಲೇಖನ ಬೇಕು] ಡಿವ್ಎಕ್ಸ್ ಪ್ಲಸ್ ಪ್ಲೇಯರ್ ಗ್ರಾಹಕರ ಎಲೆಕ್ಟ್ರಾನಿಕ್ ಡಿವೈಸ್ ಅನ್ನು ಲಕ್ಷವಾಗಿರಿಸಿಕೊಂಡು ಮಾಡಿರುವ ನಾಲ್ಕು ಬಟನ್ ಗಳ ಬಲಭಾಗದ ನಡುವೆ ಡಿವ್ಎಕ್ಸ್ ಹೆಚ್ಚಿನ ಪ್ಯಾನಲ್ ಆಗಿ ಹೋಗುವಂತೆ ಮಾಡುವ ಗುಣಲಕ್ಷಣವನ್ನೂ ಕೂಡ ಹೊಂದಿದೆ. ಬಳಕೆದಾರರು ವಿಡಿಯೋ ಫೈಲ್ ಅನ್ನು ಒಂದು ಐಕಾನ್ ನ ಮೇಲೆ ಎಳೆದಾಗ , ಟ್ರಾನ್ಸ್ ಫರ್ ವಿಸಾರ್ಡ್ ಬರುತ್ತದೆ.ಇದು ಅವರ ಡಿವ್ಎಕ್ಸ್ ಪ್ರಮಾಣೀಸಲ್ಪಟ್ಟ ಡಿವೈಸ್, USB ಅಥವಾ ಐಚ್ಛಿಕ ಡಿಸ್ಕ್ ನೊಡನೆ ಹೊಂದಿಕೆಯಾಗುವಂತೆ ಅವರ ವಿಡಿಯೋ ಫೈಲ್ ಅನ್ನು ಬದಲಾಯಿಸಲು ಹಾಗು ವರ್ಗಾಯಿಸಲು ಬೇಕಾದ ಮುಂದಿನ ಹೆಜ್ಜೆಯನ್ನು ಬಳಕೆದಾರ ತೆಗೆದುಕೊಳ್ಳುಹಾಗೆ ಮಾಡುತ್ತದೆ. ಡಿವ್ಎಕ್ಸ್ ಪ್ಲಸ್ ಪ್ಲೇಯರ್ ಮೀಡಿಯ ಸಂಗ್ರಹವನ್ನು ಅಥವಾ ಡಿಜಿಟಲ್ ರೈಟ್ಸ್ ಮ್ಯಾನೇಜ್ ಮೆಂಟ್ಅನ್ನು ಒಳಗೊಂಡಿರುವ ಗುಣಲಕ್ಷಣವನ್ನೂ ಕೂಡ ಹೊಂದಿದೆ. ಇದು ಗ್ರಾಹಕನ ಕಂಪ್ಯೂಟರ್ ಗೆ ಹಾಗು ಆತನ ಡಿವ್ಎಕ್ಸ್ ಪ್ರಾಮಾಣೀಕರಿಸಲ್ಪಟ್ಟ ಡಿವೈಸ್ ಗಾಗಿ ಕೊಂಡುಕೊಳ್ಳಲಾದ ವಾಣಿಜ್ಯ ವಿಷಯಗಳ ಮೇಲೆ ಗ್ರಾಹಕನಿಗೆ ಅವನ ಹಕ್ಕು ಪಡೆಯಲು ಸಾಹಯ ಮಾಡಿದೆ.[೧೫]
ಬೆಂಬಲ ನೀಡಿದ ಫಾರ್ಮೆಟ್ ಗಳು
[ಬದಲಾಯಿಸಿ]ಡಿವ್ಎಕ್ಸ್ ಪ್ಲಸ್ ಪ್ಲೇಯರ್ ಕೆಳಗೆಕೊಟ್ಟಿರುವ ಮೀಡಿಯ ಫಾರ್ಮೆಟ್ ಗಳಿಗೆ ಬೆಂಬಲವನ್ನು ನೀಡಿದೆ:[೧೫]
ಫೈಲ್ ಫಾರ್ಮೆಟ್ಸ್ (ಕ್ರಮವ್ಯವಸ್ಥೆ) | ವಿಡಿಯೋ ಕಂಪ್ರೆಷನ್ (ಸಂಕುಚಿತ) ಅಲ್ಗರಿದಮ್ಸ್ | ಆಡಿಯೋ ಕಂಪ್ರೆಷನ್ ಅಲ್ಗರಿದಮ್ಸ್ | |
---|---|---|---|
— ನೇಟಿವ್ ಸಪೋರ್ಟ್ — | |||
Advanced Systems Format | .wmv, .asf | H.264 | Advanced Audio Coding |
Audio Video Interleave | .avi | MPEG-4 ASP | MPEG-1 Audio Layer 3 |
DivX Format | .divx | Windows Media Video | Windows Media Audio |
Matroska | .mkv | Vorbis | |
MPEG-4 Part 14 | .mp4 | ||
QuickTime Format | .mov | ||
SubRip | .srt | ||
SubStation Alpha | .ssa, .ass | ||
— ಎಕ್ಸ್ ಟೆಂಡೆಡ್ (ವಿಸ್ತರಿಸಲ್ಪಟ್ಟ) ಸಪೋರ್ಟ್ (ಬೆಂಬಲ) — | |||
MPEG-1 | .mpg, .mpe, .mpeg, .m1v | MPEG-1 Video | MPEG-1 Audio Layer I |
MPEG-2 | .vob, .ts, .m2v | MPEG-2 Video | MPEG-1 Audio Layer II |
RMVB | .rmvb | RealVideo | RealAudio |
M2TS | .m2ts, .mts | Dolby Digital(AC-3) | |
DTS | |||
L-PCM |
- ಲೆಜೆಂಡ್ (ಚರಿತ್ರೆ)
ಡಿವ್ಎಕ್ಸ್ ಪ್ಲಸ್ ಪರಿವರ್ತಕ (ಕನ್ವರ್ಟರ್)
[ಬದಲಾಯಿಸಿ]DivX Plus Converter interface | |
ಅಭಿವೃದ್ಧಿಪಡಿಸಿದವರು | DivX, Inc. |
---|---|
Stable release | 8.0.1.49
/ 4 ಜೂನ್ 2010 |
ಕಾರ್ಯಾಚರಣಾ ವ್ಯವಸ್ಥೆ | Microsoft Windows |
ವಿಧ | Video converter |
ಪರವಾನಗಿ | Converter: Freeware Converter Pro: Proprietary commercial software |
ಅಧೀಕೃತ ಜಾಲತಾಣ | http://www.divx.com/software/divx-plus/converter |
ಡಿವ್ಎಕ್ಸ್ ಪ್ಲಸ್ ಪರಿವರ್ತಕ (ಆವೃತ್ತಿ 8) , ಅದರ ಪೂರ್ವವರ್ತಿಯಿಂದ ಬದಲಾಗುವಂತಹ ಇಂಟರ್ ಫೇಸ್ ಅನ್ನು ಪರಿಚಯಿಸಿದೆ. ಹಿಂದೆ ಇದ್ದ ಡಿವ್ಎಕ್ಸ್ ಪ್ಲಸ್ ಪರಿವರ್ತಕ ಪುಟ್ಟದಾದ ವೃತ್ತಾಕಾರವಾಗಿದ್ದ ಇಂಟರ್ ಫೇಸ್ ಅನ್ನು ಹೊಂದಿತ್ತು. ಈ ಇಂಟರ್ ಫೇಸ್ ವಿವಿಧ ಔಟ್ ಪುಟ್ ಅನ್ನು ಆಯ್ಕೆ ಮಾಡಿಕೊಳ್ಳವ ಹಾಗು ಸಾಲಿನಲ್ಲಿ ಅನೇಕ ವಿಡಿಯೋಗಳನ್ನು ಪ್ರದರ್ಶಿಸುವ ಅವಕಾಶವನ್ನು ನೀಡಿತ್ತು. ಡಿವ್ಎಕ್ಸ್ ಪ್ಲಸ್ ಪರಿವರ್ತಕದ ಇಂಟರ್ ಫೇಸ್ ದೊಡ್ಡದಾದ ವಿಂಡೋವನ್ನು ಒಳಗೊಂಡಿದೆ. ಸಾಲಿನಲ್ಲಿ ಸೇರಿಸಲಾದ ಪ್ರತಿಯೊಂದು ವಿಡಿಯೋವನ್ನು ತೋರಿಸುವುದರ ಜೊತೆಯಲ್ಲಿ ಗುಣಮಟ್ಟ, ಗಾತ್ರ, ಆಡಿಯೋ, ಉಪನಾಮಗಳು ಮತ್ತು ಹೆಚ್ಚಿನವುಗಳಿಗೆ ಡ್ರಾಪ್ -ಡೌನ್ (ಕೆಳಮುಖ ಪರಿವಿಡಿ) ಆಯ್ಕೆಗಳನ್ನು ನೀಡುತ್ತದೆ. ಮತ್ತೊಂದು ಗಮನಿಸಬೇಕಾದ ಬದಲಾವಣೆಯೆಂದರೆ ಹಿಂದಿನ ಮತ್ತು ಡಿವ್ಎಕ್ಸ್ ಪ್ಲಸ್ ಆವೃತ್ತಿಯಯನ್ನು 15-ದಿನಗಳ ಕಾಲ ಪರೀಕ್ಷಿಸಬಹುದು.ಡಿವ್ಎಕ್ಸ್ ಪ್ಲಸ್ ಪರಿವರ್ತಕವು ಪರೀಕ್ಷೆ ಮುಗಿದ ನಂತರ ಬಳಕೆದಾರರಿಗೆ ಉಚಿತವಾಗಿ ಡಿವ್ಎಕ್ಸ್ ಪ್ಲಸ್ HD ಫೈಲ್ ಗಳನ್ನು ರಚಿಸುವಂತಹ ಅವಕಾಶವನ್ನು ಇನ್ನೂ ನೀಡಿರುತ್ತದೆ.[೧೬] ಡಿವ್ಎಕ್ಸ್ ಪ್ಲಸ್ ಪರಿವರ್ತಕವು AVI ಫೈಲ್ ಗಳು (.avi), MP4 ಫೈಲ್ ಗಳು (.mp4), ಕ್ವಿಕ್ ಟೈಮ್ ವಿಡಿಯೋ ಫೈಲ್ ಗಳು (.mov), ವಿಂಡೋಸ್ ಮೀಡಿಯ ವಿಡಿಯೋ ಫೈಲ್ ಗಳು (.wmv), AVCHD ವಿಡಿಯೋ ಫೈಲ್ ಗಳನ್ನು (.mts ಮತ್ತು .m2ts) ಹಾಗು RMVB ಫೈಲ್ ಗಳನ್ನು (.rmvb) ಡಿವ್ಎಕ್ಸ್ ಪ್ಲಸ್ HD ಫಾರ್ಮೆಟ್ ಗೆ (.mkv ಫೈಲ್ ಗಳು ) ಪರಿವರ್ತಿಸಬಲ್ಲದು. ಡಿವ್ಎಕ್ಸ್ ಪ್ರೋ ಲೆಸೆನ್ಸ್ ಅನ್ನು ಕೊಂಡುಕೊಂಡಾಗ ಅದು ವಿಡಿಯೋ ಫೈಲ್ ಗಳನ್ನು ಡಿವ್ಎಕ್ಸ್ ಮೀಡಿಯ ಫಾರ್ಮೆಟ್ ಗಳಿಗೆ (.ಡಿವ್ಎಕ್ಸ್ ಫೈಲ್ ಗಳು ) ಕೂಡ ಪರಿವರ್ತಿಸಬಲ್ಲದು. "MPEG-2/DVD ಪ್ಲಗ್-ಇನ್",ಅನ್ನು ಕೊಂಡಾಗ ಅದರ ಜೊತೆಯಲ್ಲಿ ಡಿವ್ಎಕ್ಸ್ ಪ್ಲಸ್ ಪರಿವರ್ತಕದ ದತ್ತ ಮಾಹಿತಿಗೆ ಸಹಾಯ ಮಾಡುವ ಪ್ರಮಾಣ MPEG ವಿಡಿಯೋ, MPEG-2 ವಿಡಿಯೋ, DVD ವಿಡಿಯೋ and ವಿಡಿಯೋ CD ಗಳನ್ನು ವಿಸ್ತರಿಸಲು ಅದು ಸಹಾಯಮಾಡುತ್ತದೆ.[೧೬]
ಡಿವ್ಎಕ್ಸ್ ಪ್ಲಸ್ ಕೊಡೆಕ್ ಪ್ಯಾಕ್
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(April 2010) |
ಡಿವ್ಎಕ್ಸ್ ಪ್ಲಸ್ ಕೊಡೆಕ್ ಪ್ಯಾಕ್ ಎಂಬುದು ಹಿಂದಿನ ಡಿವ್ಎಕ್ಸ್ ಕಮ್ಯೂನಿಟಿ(ಸಮೂಹ) ಕೊಡೆಕ್ ನ ಮುಂದುವರೆದ ಭಾಗವಾಗಿದೆ.ಇದು MPEG-4 ASP ಮತ್ತು H.264 ವಿಡಿಯೋ (ಡಿವ್ಎಕ್ಸ್ ಪ್ಲಸ್ ಫೈಲ್ ಗಳು ) ನೇರಪ್ರದರ್ಶನ ಮತ್ತು ಮೀಡಿಯ ಫೌಂಡೇಷನ್ ಘಟಕಗಳ ಮೂಲಕ ಸಿಸ್ಟಮ್ -ವೈಡ್ ಪ್ಲೇಬ್ಯಾಕ್ ಅನ್ನು ಸಾಧ್ಯವಾಗಿಸುತ್ತದೆ. ಈ ಪ್ಯಾಕ್ ಉಚಿತ H.264 ಡಿಕೋಡರ್ (ವಿಸಂಕೇತಕ-ಸಂಕೇತ ಭಾಷೆಯಿಂದ ವಿಡಿಯೋ ಭಾಷೆಗೆ ತರುವವನು) ಅನ್ನು ಜೊತೆಯಲ್ಲಿ ಐಚ್ಛಿಕ DXVA ಹಾರ್ಡ್ ವೇರ್ ವೇಗವರ್ಧಕವನ್ನು ಒಳಗೊಂಡಿದೆ.ಇದನ್ನು ಕಂಟ್ರೋಲ್ ಪ್ಯಾನಲ್ ನಲ್ಲಿ ಸಕ್ರಿಯಗೊಳಿಸಬಹುದು. ಡಿವ್ಎಕ್ಸ್ ಪ್ರೋ ವನ್ನು ಕೊಂಡುಕೊಂಡ ಗ್ರಾಹಕರು ವಿಡಿಯೋನಲ್ಲಿ Windows ಅನ್ವಯಿಕೆಗಳಿಗೆ ಡಿವ್ಎಕ್ಸ್ ಕೊಡೆಕ್ ನ ಹೆಚ್ಚಿನ ಪ್ರಯೋಜನಗಳನ್ನು [which?] ಪಡೆಯಬಹುದು.
ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್
[ಬದಲಾಯಿಸಿ]DivX Plus Web Player interface | |
ಅಭಿವೃದ್ಧಿಪಡಿಸಿದವರು | DivX, Inc. |
---|---|
Stable release | 2.0.2
/ 16 ಮಾರ್ಚ್ 2010 |
ಕಾರ್ಯಾಚರಣಾ ವ್ಯವಸ್ಥೆ | Microsoft Windows / Mac OS X |
ವಿಧ | Media player |
ಪರವಾನಗಿ | Freeware |
ಅಧೀಕೃತ ಜಾಲತಾಣ | http://www.divx.com/software/divx-plus/web-player |
ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್ ಎಂಬುದು ( ಡಿವ್ಎಕ್ಸ್ ವೆಬ್ ಪ್ಲೇಯರ್ ಮತ್ತು ಡಿವ್ಎಕ್ಸ್ ಬ್ರೌಸರ್ ಪ್ಲಗ್-ಇನ್ ಎಂಬ ಹೆಸರಿನಲ್ಲಿ ಹಿಂದೆ ಕರೆಯಲ್ಪಡುತ್ತಿದ್ದ)HTTP ವೆಬ್ ಸರ್ವರ್ ನ ಪ್ರಕಾಶಕರು ನಿರ್ಮಿಸಲಾದ ಫೈಲ್ ಗಳನ್ನು ಪ್ಲೇ ಮಾಡುವ ವೆಬ್ ಬ್ರೌಸರ್ ಪ್ಲಗ್-ಇನ್ ಆಗಿದೆ.ಅಲ್ಲದೇ ಇದು Windows ಮತ್ತು Mac OS ಗಾಗಿ ಪ್ರಮುಖ ಬ್ರೌಸರ್ ನ ಒಳಗೆ HD ಮತ್ತು ಸರೌಂಡ್ ಸೌಂಡ್ ಪ್ಲೇಬ್ಯಾಕ್ ಅನ್ನು ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ[which?] .[೧೭]
ವೈಶಿಷ್ಟ್ಯಗಳು (ಗುಣಲಕ್ಷಣಗಳು)
[ಬದಲಾಯಿಸಿ]- Internet Explorer, Firefox ಹಾಗು Chrome ಗಳಿಗೆ ವಿಂಡೋಸ್ ಬ್ರೌಸರ್ ಪ್ಲಗ್-ಇನ್
- Safari (32-bit) ಹಾಗು Firefox ಗಳಿಗೆ Mac OS ಬ್ರೌಸರ್ ಪ್ಲಗ್-ಇನ್
- DivX/Xvid encoded .divx ಎಂಬೆಡ್ (ಹುದುಕಿಸಲಾಗಿರುವ) ಪ್ಲೇಗಳು ಅಥವಾ MP3 ಆಡಿಯೋ ನ ಜೊತೆಯಲ್ಲಿ .avi ಫೈಲ್ ಗಳು
- ಡಿವ್ಎಕ್ಸ್ ಪ್ಲಸ್ HD ಯನ್ನು ಎಂಬೆಡ್ ಮಾಡಲಾದ ,ಅಥವಾ H.264 ವಿಡಿಯೋ ಜೊತೆಯಲ್ಲಿ .mkv ನಲ್ಲಿ AAC ಆಡಿಯೋ ವನ್ನು ಕೂಡ ಪ್ಲೇ ಮಾಡಬಹುದು
- ವಿವಿಧ ಆಡಿಯೋ ಹಾಡುಗಳಿಗೆ ಹಾಗು ಮ್ಯುಕ್ಸೆಡ್ UTF-8 ಉಪನಾಮಗಳು ಗಳಿಗೆ ಬೆಂಬಲವನ್ನು ನೀಡುತ್ತದೆ
- ಸಂಪೂರ್ಣ ಉದ್ದವಿರುವ ದತ್ತ ಕೋಶದ ಮುಕ್ತಾಯದ ಮೇಲೆ ವಿಡಿಯೋ ಫೈಲ್ ಅನ್ನು ಪರಿಮಿತವಾಗಿ ರಕ್ಷಿಸಿಡಬಹುದು.
- ವೆಬ್ ಅಭಿವರ್ಧಕರಿಗೆ ಜಾವ ಸ್ಕ್ರಿಪ್ಟ್ ಇಂಟರ್ ಫೇಸ್ : ಡಿವ್ಎಕ್ಸ್ ಡೆವಲಪರ್ ಪೋರ್ಟಲ್ Archived 2010-01-26 ವೇಬ್ಯಾಕ್ ಮೆಷಿನ್ ನಲ್ಲಿ.
Mac (ಮ್ಯಾಕ್) ಗೆ ಡಿವ್ಎಕ್ಸ್ 7
[ಬದಲಾಯಿಸಿ]Mac ಗಾಗಿ ಡಿವ್ಎಕ್ಸ್ ಪ್ಲೇಯರ್
[ಬದಲಾಯಿಸಿ]DivX Player for Mac interface | |
ಅಭಿವೃದ್ಧಿಪಡಿಸಿದವರು | DivX, Inc. |
---|---|
Stable release | 7.2.3
/ 17 ನವೆಂಬರ್ 2009 |
ಕಾರ್ಯಾಚರಣಾ ವ್ಯವಸ್ಥೆ | Mac OS X |
ವಿಧ | Media player |
ಪರವಾನಗಿ | Freeware |
ಅಧೀಕೃತ ಜಾಲತಾಣ | http://www.divx.com/en/software/mac/ |
Mac ಗಾಗಿ ಡಿವ್ಎಕ್ಸ್ ಪ್ಲೇಯರ್ ಮೊಟ್ಟಮೊದಲನೆಯ ಬಾರಿಗೆ DivX 6 .5 ನ ಜೊತೆಯಲ್ಲಿ 2006 ಮೇ 25ರಂದು ಪರಿಚಯಿಸಲಾಯಿತು.ಇದು ಸ್ಟ್ಯಾಂಡ್ ಅಲೋನ್ ಪ್ಲೇಯರ್ ಆಗಿದ್ದು ಡಿವ್ಎಕ್ಸ್ ಎನ್ ಕೋಡೆಡ್ ಫೈಲ್ ಗಳನ್ನು ಹಾಗು ಡಿವ್ಎಕ್ಸ್ ಮೀಡಿಯ ಫಾರ್ಮೆಟ್ ಗುಣಲಕ್ಷಣಗಳನ್ನು ಪ್ಲೇ ಮಾಡುತ್ತದೆ . ಉದಾಹರಣೆಗೆ; ಉಪನಾಮಗಳು, ವಿವಿಧ ಆಡಿಯೋ ಹಾಡುಗಳು , ಮತ್ತು ಡಿವ್ಎಕ್ಸ್ VOD ಕಾಟೆಂಟ್ (ವಿಷಯ). Mac ಗಾಗಿ ಮಾಡಲಾದ ಡಿವ್ಎಕ್ಸ್ ಪ್ಲೇಯರ್ , ಡಿವ್ಎಕ್ಸ್ ಪ್ಲಸ್ HD ಹೋಲಿಕೆಯುಳ್ಳ ಫೈಲ್ ಗಳನ್ನು ಕೂಡ ಪ್ಲೇ ಮಾಡಬಲ್ಲದು — ಉದಾಹರಣೆಗೆ H.264 ವಿಡಿಯೋ ನ ಜೊತೆಯಲ್ಲಿ ಎನ್ ಕೋಡ್ ಆಗಿರುವ .mkv ಫೈಲ್ ಗಳು ಮತ್ತು AAC ಆಡಿಯೋ. ಡಿವ್ಎಕ್ಸ್ 7 ಮತ್ತು ಡಿವ್ಎಕ್ಸ್ ಪ್ಲಸ್ (ಆವೃತ್ತಿ 8) Windows ನ ಪ್ರತಿಯನ್ನು ಹೊರತುಪಡಿಸಿ , Mac ಗಾಗಿ ಮಾಡಲಾದ ಡಿವ್ಎಕ್ಸ್ ಪ್ಲೇಯರ್ , ಬರ್ನ್ ಇಂಜಿನ್ ಅಥವಾ ವಿಡಿಯೋಗಳನ್ನು USB ಗೆ ಕಳುಹಿಸುವ ಉಪಯುಕ್ತತೆಯನ್ನು ಒಳಗೊಂಡಿರುವುದಿಲ್ಲ .
ವೈಶಿಷ್ಟ್ಯಗಳು (ಗುಣಲಕ್ಷಣ)
[ಬದಲಾಯಿಸಿ]- MP3 ಆಡಿಯೋವನ್ನು (.ಡಿವ್ಎಕ್ಸ್/.avi) MPEG-4 ASP ವಿಡಿಯೋ ಜೊತೆಯಲ್ಲಿ ಮತ್ತು ಡಿವ್ಎಕ್ಸ್ ಪ್ಲಸ್ ಫೈಲ್ ಗಳನ್ನು ( H.264 ವಿಡಿಯೋ ಜೊತೆಯಲ್ಲಿ ಮ್ಯಾಟ್ರೊಸ್ಕ ಮತ್ತು AAC ಆಡಿಯೋ) ಸೇರಿಸಿರುವ ಪ್ಲೇಬ್ಯಾಕ್
- ವಿಡಿಯೋವನ್ನು ನಿಯಂತ್ರಿಸಲು ಮೌಸ್ ನ ಗೆಸ್ಚರ್ ( ವರ್ತನೆ)
- ಮೀಡಿಯ ಮ್ಯಾನೇಜರ್ (ನಿರ್ವಾಹಕ) ನ ಮೂಲಕ ವಿಡಿಯೋ ಸಂಗ್ರಹದ ವಿಂಡೋ
- ಕ್ವಿಕ್ ಟೈಮ್ ಅನ್ನು ಬೆಂಬಲಿಸುವ ಯಾವುದೇ ಫೈಲ್ ಅನ್ನು ಪ್ಲೇ ಮಾಡುವುದು
- ವಿಡಿಯೋವನ್ನು ಡೆಸ್ಕ್ ಟಾಪ್ ಬ್ಯಾಗ್ ಗ್ರೌಂಡ್ ನಲ್ಲಿ ಪ್ಲೇ ಮಾಡುವುದು
- ಕೊಂಡು ಕೊಂಡ ಪ್ಲೇಬ್ಯಾಕ್/ ಪ್ರೋಟೆಕ್ಟೆಡ್ (ನಕಲೂ ಮಾಡಲಾಗದ) ಕಾಂಟೆಂಟ್ (ವಿಷಯ) ಅನ್ನು ಪ್ರಮಾಣೀಕರಿಸಲ್ಪಟ್ಟ ಡಿವ್ಎಕ್ಸ್ ಡಿವೈಸ್ ಒದಗಿಸುವಂತೆ ನೋಡಿಕೊಳ್ಳುವುದು
- ಕೊಂಡು ಕೊಂಡ /ಪ್ರೋಟೆಕ್ಟೆಡ್ ವಿಡಿಯೋ ಕಾಟೆಂಟ್ ಗಳ ಪ್ಲೇಬ್ಯಾಕ್
Mac ಗಾಗಿ ಡಿವ್ಎಕ್ಸ್ ಪರಿವರ್ತಕ
[ಬದಲಾಯಿಸಿ]Mac ಗಾಗಿ DivX 6 ಬರುವವರೆಗು Mac ಗಾಗಿ ಮಾಡಲಾದ ಡಿವ್ಎಕ್ಸ್ ಪರಿವರ್ತಕ ಬದಲಾಗದೆ ಹಾಗೇಯೇ ಉಳಿದಿತ್ತು. Mac ಗಾಗಿ ಮಾಡಿರುವ DivX 6 ಅತ್ಯಂತ ಚಿಕ್ಕದಾದ ಹಾಗು ವೃತ್ತಾಕಾರವಾಗಿರುವ ಇಂಟರ್ ಫೇಸ್ ಅನ್ನು ಹೊಂದಿದ್ದು ,ಡಿವ್ಎಕ್ಸ್ ಪ್ಲಸ್ HD ಫೈಲ್ ಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ .
Mac ಗಾಗಿ ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್
[ಬದಲಾಯಿಸಿ]ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್ ಆವೃತ್ತಿ 2.0.2 ರಂತೆಯೇ ,Mac ಗಾಗಿ ಮಾಡಲಾದ ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್ ಕೂಡ Windows ಗಾಗಿ ಮಾಡಲಾದ ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್ ನ ಜೊತೆಯಲ್ಲಿ ಸಮಾನ ಗುಣಲಕ್ಷಣವನ್ನು ಹೊಂದಿದೆ.
ಕಮ್ಯೂನಿಟಿ ಅಪ್ಲೀಕೇಷನ್ಸ್ (ಸಮೂಹದ ಅನ್ವಯಿಸುವಿಕೆಗಳು)
[ಬದಲಾಯಿಸಿ]Dr. DivX OSS
[ಬದಲಾಯಿಸಿ]Dr. DivX ಎಂಬುದು DivX , Inc. ಸೃಷ್ಟಿಸಿರುವಂತಹ ಅನ್ವಯಿಕೆ (ಅಪ್ಲೀಕೇಷನ್) ಆಗಿದೆ . ಇದು ಅನೇಕ ವಿಡಿಯೋ ಫಾರ್ಮೆಟ್(ಕ್ರಮವ್ಯವಸ್ಥೆ)ಗಳನ್ನು ಡಿವ್ಎಕ್ಸ್ ಎನ್ ಕೋಡೆಡ್ ವಿಡಿಯೋ ಗೆ ಸಂಕೇತಿಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಮೂಲಕ್ಕೆ ಹತ್ತಿರವಾಗಿದ್ದ Dr. DivX ಅನ್ನು ಡಿವ್ಎಕ್ಸ್ 5.21 ಆವೃತ್ತಿಗಾಗಿ ಆವೃತ್ತಿ 1.06 ನಲ್ಲಿ ತೆಗೆದುಹಾಕಲಾಯಿತು. ಇದು Windows 9x/Me ನ ಮೂಲಕ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದ ಕೊನೆಯ ಡಿವ್ಎಕ್ಸ್ ನ ಆವೃತ್ತಿಯಾಗಿದೆ. DivX 6 ಗೆ ಬೆಂಬಲ ನೀಡುವಂತಹ ಓಪನ್ ಸೋರ್ಸ್ ಆವೃತ್ತಿಯನ್ನು ಮಾಡಲಾಯಿತು. Dr.DivX ಉಚಿತ ಡಿವ್ಎಕ್ಸ್ ಪರಿವರ್ತಕ ಅನ್ವಯಿಕೆಯ ಮೇಲೆ ಹೆಚ್ಚಾಗಿ ಮಾಡಲಾದ ಪ್ರಯೋಜನಗಳ ಅವಕಾಶವನ್ನು ನೀಡಿದೆ.ಅದು ಮುಂದೆ ಕೊಡೆಕ್ ನ ಜೊತೆಯಲ್ಲಿ ಆವೃತ್ತಿ 6 ರಿಂದ ತುಂಬಲಾಗಿದೆ .[೧೮] Dr. DivX , ಡಿವ್ಎಕ್ಸ್ ಪ್ಲಸ್ HD ಯೊಡನೆ ಹೊಂದಿಕೆಯಾಗುವುದಿಲ್ಲ.
ಡಿವ್ಎಕ್ಸ್ H.264 ಎನ್ ಕೋಡರ್
[ಬದಲಾಯಿಸಿ][೧೯] ಬೀಟಾ ದಂತೆ ಡಿವ್ಎಕ್ಸ್ ಪ್ಲಸ್ ಪರಿವರ್ತಕದಲ್ಲಿ ಬಳಸಲ್ಪಡುವ ಡಿವ್ಎಕ್ಸ್264 ಎನ್ ಕೋಡರ್ ಗಾಗಿ ,ಡಿವ್ಎಕ್ಸ್ ಕಮಾಂಡ್ ಲೈನ್ ಇಂಟರ್ ಫೇಸ್ (CLI) ಅನ್ನು ಬಿಡುಗಡೆ ಮಾಡಿತು. ಇದು ವಾಣಿಜ್ಯೇತರ ಬಳಕೆಗೆ ಉಚಿತವಾಗಿದೆ. ಮ್ಯಾಟ್ರೋಸ್ಕ ಮ್ಯೂಸರ್ ಬಳಸ ಬಹುದಾದ ಮೂಲ H.264 ಸ್ಟ್ರೀಮ್ ಅನ್ನು ಇದರಿಂದ ಮಾತ್ರ ಸೃಷ್ಟಿಸಲು ಸಾಧ್ಯ.
ಡಿವ್ಎಕ್ಸ್ AAC ಎನ್ ಕೋಡರ್
[ಬದಲಾಯಿಸಿ]ಡಿವ್ಎಕ್ಸ್ ಲ್ಯಾಬ್ಸ್ ನ ಮೇಲೆ ಬಿಡುಗಡೆ ಮಾಡಿದಂತಹ CLI ಡಿವ್ಎಕ್ಸ್264 ಎನ್ ಕೋಡರ್ ಗೆ ಪೂರಕವಾಗಿ ಡಿವ್ಎಕ್ಸ್ , Windows ಬೀಟಾ ಯುಗ್ಮಗಳಂತೆ ಡಿವ್ಎಕ್ಸ್ AAC ಎನ್ ಕೋಡರ್ CLI ಅನ್ನೂ ಕೂಡ ಬಿಡುಗಡೆ ಮಾಡಿತು.[೧೯] ಇದು ಮಾತ್ರ ಮ್ಯಾಟ್ರೋಸ್ಕೊ ಮ್ಯೂಸರ್ ಬಳಸುವಂತಹ ರಾ AAC ಸ್ಟ್ರೀಮ್ ಗಳನ್ನು ಸೃಷ್ಟಿಸಬಹುದು.
ಹಾರ್ಡ್ ವೇರ್ ಸಪೋರ್ಟ್(ಬೆಂಬಲ)
[ಬದಲಾಯಿಸಿ]ಡಿವ್ಎಕ್ಸ್ ವಿವರಗಳಲ್ಲಿರುವ ಹೊಂದಾಣಿಕೆಯ ಸ್ಪಷ್ಟತೆ ಹಾಗು ವಿಡಿಯೋ ಫೈಲ್ ಗಳ ಪ್ಲೇಬ್ಯಾಕ್ ನ ಉದ್ದೇಶದಿಂದ DivX, Inc. ಎಲೆಕ್ಟ್ರಾನಿಕ್ಸ್ ಗ್ರಾಹಕರಿಗೆ ಹಾಗು IC ತಯಾರಕರಿಗೆ ಸರ್ಟಿಫಿಕೇಷನ್ (ಪ್ರಮಾಣೀಕರಣ) ಪ್ರೋಗ್ರಾಂ ಅನ್ನು ನೀಡಿದೆ. ಡಿವ್ಎಕ್ಸ್ ನಿಂದ ದೃಢೀಕರಿಸಲ್ಪಟ್ಟಿರುವಂತಹ ಡಿವೈಸ್ ಗಳು ಸಾಮಾನ್ಯವಾಗಿ ಕೆಳಗಿರುವ ಗುರುತಿನಲ್ಲಿ ಒಂದು ಗುರುತನ್ನು ಹೊಂದಿರುತ್ತವೆ:[೨೦]
- ಡಿವ್ಎಕ್ಸ್ ದೃಢಪಡಿಸಿರುವ
- HD 720p ಮತ್ತು 1080p ಯನ್ನು ಡಿವ್ಎಕ್ಸ್ ಪ್ರಮಾಣೀಕರಿಸಿದೆ
- ಡಿವ್ಎಕ್ಸ್ ಪ್ಲಸ್ HD ಯನ್ನು ಡಿವ್ಎಕ್ಸ್ ಪ್ರಮಾಣೀಕರಿಸಿದೆ
- ಡಿವ್ಎಕ್ಸ್ ಅನ್ನು ಸೇರಿಸಲಾಗಿದೆ
- ಡಿವ್ಎಕ್ಸ್ ಅಲ್ಟ್ರಾ ವನ್ನು ಡಿವ್ಎಕ್ಸ್ ಪ್ರಮಾಣೀಕರಿಸಿದೆ
ಡಿವ್ಎಕ್ಸ್ ಪ್ರಮಾಣೀಕರಿಸಿರುವ ಡಿವೈಸ್ ಗಳು , DVD ಪ್ಲೇಯರ್ಸ್, ಕಾರ್ ಸ್ಟೀರಿಯೊ, ಮೊಬೈಲ್ ಫೋನ್, ದೂರದರ್ಶಕ, ಬ್ಲ್ಯೂ-ರೇ ಪ್ಲೇಯರ್ಸ್, ಮತ್ತು ಕರೆ ಘಂಟೆಯನ್ನೂ ಕೂಡ ಒಳಗೊಂಡಿದೆ.[೨೧] ಸರಿಯಾಗಿ ಡೀಕೋಡ್ ಮಾಡಿರುವ ಡಿವ್ಎಕ್ಸ್ ಫೈಲ್ ಗಳ ಪರೀಕ್ಷೆಯ ಹೊರತಾಗಿ , ದೃಢಿಕರಣವು ಬೇಡಿಕೆಯ ವಿಷಯದ ಮೇಲೆ ಡಿವ್ಎಕ್ಸ್ ವಿಡಿಯೋ ವನ್ನು ಡಿವೈಸ್ ಪ್ಲೇ ಬ್ಲ್ಯಾಕ್ ಮಾಡಬಲ್ಲದು ಎಂಬುದನ್ನೂ ಕೂಡ ಇದು ದೃಢಪಡಿಸುತ್ತದೆ. ಅದು ಇಂಟರ್ ನೆಟ್ ಗ್ರಾಹಕರು ಕೊಂಡು ಕೊಂಡಿರುವ ಹಾಲಿವುಡ್ ವಿಷಯಗಳನ್ನು ಕೂಡ ಒಳಗೊಂಡಿರುತ್ತದೆ.[೨೨]
ಗೇಮಿಂಗ್ ಸಿಸ್ಟಮ್ ಗಳೊಡನೆ ಹೊಂದಾಣಿಕೆ
[ಬದಲಾಯಿಸಿ]2007 ಡಿಸೆಂಬರ್ 4 ರಂದು ನೇಟಿವ್ MPEG-4 ASP ಪ್ಲೇಬ್ಯಾಕ್ ಬೆಂಬಲ (ಸಪೋರ್ಟ್) ವನ್ನು Xbox 360ಗೆ ಸೇರಿಸಲಾಯಿತು,[೨೩] ಇದು ಡಿವ್ಎಕ್ಸ್ ಮತ್ತು ಇತರ MPEG-4 ASP ಕೊಡೆಕ್ ಗಳಿಂದ ಎನ್ ಕೋಡ್ ಮಾಡಲಾಗಿರುವ ವಿಡಿಯೋವನ್ನು ಪ್ಲೇ ಮಾಡಲು ಅವಕಾಶವನ್ನು ನೀಡುತ್ತದೆ.[೨೪] ಫರ್ಮ್ ವೇರ್ ನ ಮುಂದಿನ ಭಾಗವಾದ 2.10 ಅನ್ನು ಸೋನಿ ಪ್ಲೇಸ್ಟೇಷನ್ 3 ಗಾಗಿ 2007 ಡಿಸೆಂಬರ್ 17 ರಂದು ಬಿಡುಗಡೆಮಾಡಲಾಯಿತು. ಇದು ಡಿವ್ಎಕ್ಸ್ ನ ಅಧಿಕೃತ ದೃಢೀಕರಣವನ್ನು ಒಳಗೊಂಡಿದೆ. ಫರ್ಮ್ ವೇರ್ ಆವೃತ್ತಿ 2.50 (2008 ಅಕ್ಟೋಬರ್ 15 ರಂದು ಬಿಡುಗಡೆಯಾದ) ಬೇಡಿಕೆಯ (ಡಿವ್ಎಕ್ಸ್ VOD) ಸೇವೆಗಳಲ್ಲಿ ಡಿವ್ಎಕ್ಸ್ ವಿಡಿಯೋ ಗೆ ನೀಡುವ ಬೆಂಬಲವನ್ನು ಒಳಗೊಂಡಿದೆ, ಹಾಗು ಫರ್ಮ್ ವೇರ್ ಆವೃತ್ತಿ 2.60 (2009 ಜನವರಿ20 ರಂದು ಬಿಡುಗಡೆಯಾದ) ಅಧಿಕೃತ ಡಿವ್ಎಕ್ಸ್ ದೃಢೀಕರಣ ಮತ್ತು ಆವೃತ್ತಿ 3.11. ಗೆ ಬೆಂಬಲ ನೀಡುವಂತಹ ಅಪ್ ಡೇಟೆಡ್ (ನವೀಕರಿಸಿರುವ) ಪ್ರೋಫೈಲ್ ಅನ್ನು ಒಳಗೊಂಡಿರುತ್ತದೆ[೨೫] ವಿಂಡೋಸ್ ಗಾಗಿ ಡಿವ್ಎಕ್ಸ್ ಪ್ಲಸ್ ಪ್ಲೇಯರ್ ನೊಳಗೆ ಹೋಗಲು ಡಿವ್ಎಕ್ಸ್ ನ ಪರಿಚಯದೊಂದಿಗೆ, ಪ್ಲೇಸ್ಟೇಷನ್ 3 ಐಕಾನ್ ಇಂಟರ್ ಫೇಸ್ ನಲ್ಲಿ ತಕ್ಷಣವೇ ದೊರೆಯುತ್ತದೆ. ಇದು ಉಚಿತವಾಗಿ ಬದಲಾಯಿಸುವ ಹಾಗು ಐಚ್ಛಿಕ ಡಿಸ್ಕ್ ಅಥವಾ USB ಯ ಮೂಲಕ ವಿಡಿಯೋ ಫೈಲ್ ಗಳನ್ನು ಡಿವ್ಎಕ್ಸ್ ಫಾರ್ಮೆಟ್ ನಲ್ಲಿ ಕಾಫಿ(ನಕಲು) ಮಾಡಲು, ಟ್ರಾನ್ಸ್ ಫರ್ ವಿಸಾರ್ಡ್ ಅನ್ನು ಆಹ್ವಾನಿಸುತ್ತದೆ.[೨೬] ಡಿವ್ಎಕ್ಸ್ ನಿಂದ ಪ್ಲೇಸ್ಟೇಷನ್ 3 ಗೆ ಹೋಗುವ ಔಟ್ ಪುಟ್ ಪ್ರಿಸೆಟ್ Xbox 360 ನಲ್ಲೂ ಕೂಡ ಪ್ಲೇಯಾಗಬಲ್ಲದು .
ಪ್ರತಿಸ್ಪರ್ಧಿಗಳು
[ಬದಲಾಯಿಸಿ]ವಾಣೀಜ್ಯ ವಿಡಿಯೋ ಸಂಕುಚಿತ ಸಾಫ್ಟ್ ವೇರ್ ಮಾರುಕಟ್ಟೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳೆಂದರೆ Microsoft ನ Windows Media Video series,ಮತ್ತು Apple Inc.'s QuickTime ಡಿವ್ಎಕ್ಸ್ ಕೊಡೆಕ್ ಅದರ ಅತ್ಯತ್ತಮ ವಿಡಿಯೋ ಗುಣಮಟ್ಟಕ್ಕಾಗಿ ಜನಪ್ರಿಯವಾಗಿದೆ.ಉಚಿತಮತ್ತು ಒಪನ್ ಸೋರ್ಸ್ Xvid ಕೊಡೆಕ್ ತುಲನಾತ್ಮಕ ಗುಣಮಟ್ಟವನ್ನು ನೀಡುತ್ತದೆ. ಡಿವ್ಎಕ್ಸ್ ಎನ್ ಕೋಡರ್ ಮತ್ತು Xvid ಎನ್ ಕೋಡರ್ ಎರಡು MPEG-4 Part 2 (MPEG-4 ASP) ನನ್ನು ಅನುಸರಿಸುತ್ತವೆ. ಸಾಮಾನ್ಯವಾಗಿ ಬಳಸಲಾಗಿರುವ ಡಿವ್ಎಕ್ಸ್ ಎನ್ ಕೋಡಿಂಗ್ ಪ್ರೋಫೈಲ್ (ಹೋಮ್ ಥಿಯೇಟರ್ )[೨೭] ಸಾಮಾನ್ಯವಾಗಿ ಬಳಸಲಾಗಿರುವ Xvid ಎನ್ ಕೋಡಿಂಗ್ ಪ್ರೋಫೈಲ್ (ಹೋಮ್ ) ನಲ್ಲಿ ಇರುವ ಅದೇ ರೀತಿಯ MPEG-4 ASP ಗುಣಲಕ್ಷಣಗಳನ್ನು ಉಪಯೋಗಿಸುವುದಿಲ್ಲ.[೨೮] . Doom9.org ನಲ್ಲಿ 2003 ರಿಂದ 2005ರ ವರೆಗೆ ಮಾಡಲಾದ ವಸ್ತುನಿಷ್ಠ ಗುಣಮಟ್ಟದ ಪರೀಕ್ಷೆಗಳ ಸರಣಿಯಲ್ಲಿ ಡಿವ್ಎಕ್ಸ್ ಎನ್ ಕೋಡರ್ ಪ್ರತಿವರ್ಷ the Xvid ಎನ್ ಕೋಡರ್ ನಿಂದ ಸೋಲಲ್ಪಟ್ಟಿದೆ .[೨೯] ಇದೇ ರೀತಿಯ ಪರೀಕ್ಷೆಗಳನ್ನು ಹೊಸ ಆವೃತ್ತಿಗಳಿಗೆ ಮಾಡಲಾಗಿಲ್ಲ. ಒಪನ್ ಸೋರ್ಸ್ ಸಂಗ್ರಹವಾದ ಲಿಬಾವ್ ಕೊಡೆಕ್ , MPEG-4 ವಿಡಿಯೋವನ್ನು ಡೀಕೋಡ್ ಮತ್ತು ಎನ್ ಕೋಡ್ ಮಾಡಬಲ್ಲದು. ಇದು ಡಿವ್ಎಕ್ಸ್ ನ ಜೊತೆಯಲ್ಲಿ (ಮತ್ತು ಇತರ MPEG-4 ಕೊಡೆಕ್ ಗಳು, ಉದಾಹರಣೆಗೆ Xvid ಅಥವಾ ಲಿಬಾವ್ ಕೊಡೆಕ್ MPEG-4) ಎನ್ ಕೋಡ್ ಮತ್ತು ಡೀಕೋಡ್ ಮಾಡಬಲ್ಲದು. ಇದು MPlayer ಯೋಜನೆಯಿಂದ ಇಮೇಜ್ ಪೋಸ್ಟ್ ಪ್ರೋಸಸಿಂಗ್ ಕೋಡ್ ನ ಜೊತೆಯಲ್ಲಿ ಸೇರಿಕೊಳ್ಳುತ್ತದೆ. ಇದನ್ನು ffdshow(ffd ಶೋ) ಎಂದು ಕರೆಯಲ್ಪಡುವ ಡೈರೆಕ್ಟ್ ಶೋ ಫಿಲ್ಟರ್ ನ ರೀತಿಯಲ್ಲಿ ರೂಪಿಸಲಾಗಿದೆ. ಅಲ್ಲದೇ ಇದನ್ನು Windows ವಿಡಿಯೋ ಪ್ಲೇಯರ್ಸ್ ನ ಜೊತೆಯಲ್ಲಿ ಅನೇಕ ಪ್ಲೇಬ್ಯಾಕ್ ಗಳಿಗೆ ಬಳಸಬಹುದು. ಈ ಸಂಗ್ರಹವನ್ನು ನಿಮಗೆ ಹೊಂದುವ ರೀತಿಯಲ್ಲಿ ಮಾಡಿಕೊಳ್ಳಬಹುದು, ಅಲ್ಲದೆ ಇದು ಬಳಕೆದಾರರಿಗೆ ಉನ್ನತ ಮಾಹಿತಿಯನ್ನು ನೀಡುವ ಅನೇಕ ಗುಣಲಕ್ಷಣವನ್ನು(ವೈಶಿಷ್ಟ್ಯ) ಹೊಂದಿದೆ.
ಇವನ್ನೂ ನೋಡಿ
[ಬದಲಾಯಿಸಿ]- ಸಂಬಂಧಿಸಿದ ತಂತ್ರಜ್ಞಾನ
- ಆಡಿಯೋ ವಿಡಿಯೋ ಇಂಟರ್ ಲೀವ್ (.AVI)
- ಮ್ಯಾಟ್ರೋಸ್ಕ (.MKV)
- MPEG-4 ಭಾಗ 2
- H.264/MPEG-4 AVC
- Xvid
- FFmpeg
- ffdshow
- ಸಾಮಾನ್ಯ ವಿಷಯಗಳು
ಆಕರಗಳು
[ಬದಲಾಯಿಸಿ]- ↑ "The 25 Worst Tech Products of All Time". 26 May 2006. Archived from the original on 3 ಜುಲೈ 2008. Retrieved 5 April 2010.
- ↑ "DivX Trademarks". Archived from the original on 2010-05-26. Retrieved 2010-06-25.
- ↑ "An Intellectual Property Case Study" (PDF). Archived from the original (PDF) on 2011-01-11. Retrieved 2010-06-25.
- ↑ "VirtualDub documentation: codecs". www.virtualdub.org. Retrieved 8 August 2009.
- ↑ "Video Codec Definitions". www.FOURCC.ofg. Archived from the original on 23 ಮೇ 2009. Retrieved 8 August 2009.
- ↑ "DivX ;-)". AfterDawn. Retrieved 7 April 2010.
- ↑ ೭.೦ ೭.೧ ೭.೨ "Escaping the Napster trap". Archived from the original on 15 ಡಿಸೆಂಬರ್ 2002. Retrieved 15 March 2001.
- ↑ "Project Mayo". Archive.org. 20 March 2003. Archived from the original on 2003-03-20. Retrieved 19 January 2010.
- ↑ "DivX CEO on Video, YouTube, iPod". Archived from the original on 5 ಫೆಬ್ರವರಿ 2008. Retrieved 8 December 2006.
- ↑ ಉತ್ತರ
- ↑ "DivX Plus HD". DivX Developer Portal. DivX, Inc. Archived from the original on 27 ಜನವರಿ 2010. Retrieved 29 March 2010.
- ↑ "DivX Profiles from support forums".
- ↑ "DivX Announces Release of Next-Generation, H.264 Based DivX(R) 7 Software". DivX, Inc. 6 January 2009. Archived from the original on 26 ಮಾರ್ಚ್ 2010. Retrieved 1 April 2010.
- ↑ "DivX Plus software". DivX Labs Blog. DivX, Inc. 16 March 2010.
{{cite web}}
: Text "accessdate 29 March 2010" ignored (help) - ↑ ೧೫.೦ ೧೫.೧ ೧೫.೨ "DivX Plus Player – Video player for DivX, AVI, MKV, MP4 & MOV". DivX, Inc. Retrieved 29 March 2010.
{{cite web}}
: Text "DivX.com" ignored (help) - ↑ ೧೬.೦ ೧೬.೧ "DivX Plus Converter". www.divx.com. DivX, Inc. Retrieved 5 April 2010.
- ↑ {0/labs.divx.com: {1} Web Player's blog.
- ↑ "DivX Video Converter". DivX, Inc. Retrieved 11 April 2010.
- ↑ ೧೯.೦ ೧೯.೧ "DivX H.264 Encoder Beta 1 & Tutorial". DivX Labs blog. DivX, Inc. 29 April 2009. Archived from the original on 12 ಫೆಬ್ರವರಿ 2010. Retrieved 29 March 2010.
- ↑ "Program Details". Partner Solutions: Certified Programs. DivX, Inc. Archived from the original on 25 ಜನವರಿ 2010. Retrieved 1 April 2010.
- ↑ "Philips Digital Photo Frame Alarm Clock". UK Gadgeteer Website. 23 November 2007. Archived from the original on 22 ಜೂನ್ 2009. Retrieved 1 April 2010.
{{cite web}}
: External link in
(help)|publisher=
- ↑ Bond, Paul (26 August 2009). "Film Fresh, DivX sign DVD agreement – Deal allows users to back up their downloads". www.hollywoodreporter.com. Retrieved 1 April 2010.
- ↑ Xbox.com | Personalities - A Fistful of Features ಡಿಸೆಂಬರ್ 2007 ಸಿಸ್ಟಮ್ ಅಪ್ ಡೇಟ್ಸ್ ನಲ್ಲಿ Archived 2008-10-13 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Xbox 360 DivX/XviD Playback Tested (Verdict: It's Almost Perfect)". Gizmodo. Archived from the original on 4 ಮಾರ್ಚ್ 2009. Retrieved 19 December 2007.
- ↑ "Firmware 2.60 brings photo gallery, Divx 3.11". PS3Fanboy. Archived from the original on 21 ಜನವರಿ 2009. Retrieved 20 January 2009.
- ↑ "New DivX Plus Software Update Targets PS3 via MKV Conversion - PS3 NEWS". ps3news.com. 26 March 2010. Retrieved 1 April 2010.
- ↑ "Home Theater". Dr. DivX User Guide: DivX Certified Profiles. DivX, Inc. 22 February 2007. Archived from the original on 19 ಫೆಬ್ರವರಿ 2010. Retrieved 1 April 2010.
- ↑ "Xvid Solutions Product Certification". XvidSolutions.com. 2009. Archived from the original on 26 ಸೆಪ್ಟೆಂಬರ್ 2009. Retrieved 1 April 2010.
- ↑ "Codec comparisons". Doom9. Retrieved 1 April 2010.
Very Useful Article! Thank you very much for Sharing this Information!Luck..Luck...Luck... With DivX Video Converter, you can do what? The answer is various. First, you can use this DivX file converter to convert DivX to AVI, DVD, MP4, MPEG, WMV, FLV, MOV, 3GP, RM, Blu-ray, SWF, MKV, DPG, AMV format. Second, you can edit the video and audio effects like landscape transform, fade for your output files. Third, you can set the video/audio codec like frame rate, frame size, channels, sample size, sample rate, bitrate and save it as your own for your future use. Fourth, You can check all the detailed input and output information in the same window. Other functions like batch mode, splitting, aspect correction are also supported by this DivX movie converter [೧] ಘುಇದೆ; http://www.divxvideoconverter.com/ Archived 2010-11-15 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಡಿವ್ಎಕ್ಸ್ ಲ್ಯಾಬ್ಸ್ Archived 2010-01-06 ವೇಬ್ಯಾಕ್ ಮೆಷಿನ್ ನಲ್ಲಿ. ಡಿವ್ಎಕ್ಸ್ ನ ಸಮೂಹ ವೆಬ್ ಸೈಟ್ , ಬೀಟಾಸ್ ಮತ್ತು ನಡೆಯುತ್ತಿರುವ ಯೋಜನೆಗಳ ಜೊತೆಯಲ್ಲಿ
- DivX resources ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- ↑ "ಆರ್ಕೈವ್ ನಕಲು". Archived from the original on 2011-02-02. Retrieved 2010-12-20.
- Pages using the JsonConfig extension
- CS1 errors: unrecognized parameter
- CS1 errors: external links
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- Wikipedia articles in need of updating from December 2009
- Articles with invalid date parameter in template
- All Wikipedia articles in need of updating
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from April 2010
- Articles needing additional references from April 2010
- All articles needing additional references
- All articles with specifically marked weasel-worded phrases
- Articles with specifically marked weasel-worded phrases from April 2010
- Articles with Open Directory Project links
- ವಿಡಿಯೋ ಕೊಡೆಕ್ ಗಳು
- ವಿಂಡೋಸ್ ಮೀಡಿಯ ಪ್ಲೇಯರ್ಸ್
- ಕಂಟೇನರ್ ಫಾರ್ಮೆಟ್ಸ್(ಕ್ರಮವ್ಯವಸ್ಥೆ)
- ಉದ್ಯಮ