ಡಿಗ್ಗಿ ಪ್ಯಾಲೇಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿಗ್ಗಿ ಪ್ಯಾಲೇಸ್ ರಾಜಸ್ಥಾನದ ಜೈಪುರದಲ್ಲಿರುವ ಒಂದು ಅರಮನೆ. [೧] [೨] ಇದನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದ್ದು ರಾಜಮನೆತನದವರು ಈಗಲೂ ಅರಮನೆಯ ಒಂದು ಭಾಗದಲ್ಲಿ ವಾಸವಾಗಿದ್ದಾರೆ. ೨೦೦೬ ರಿಂದ, ಇಲ್ಲಿ ಪ್ರತಿ ವರ್ಷವೂ ಜೈಪುರ ಸಾಹಿತ್ಯ ಉತ್ಸವವನ್ನು ನಡೆಯುತ್ತದೆ. [೩] [೪]

ಇತಿಹಾಸ[ಬದಲಾಯಿಸಿ]

ಡಿಗ್ಗಿ ಒಂದು ಕಾಲದಲ್ಲಿ ಠಾಕುರ್ (ಖಂಗರಾತ್ ರಜಪೂತ) ಅವರಿಗೆ ಸೇರಿದ ಹವೇಲಿ ಆಗಿತ್ತು. ಜೈಪುರದ ನೈರುತ್ಯ ಭಾಗಕ್ಕೆ ೪೦ ಕಿ.ಮೀ. ದೂರದಲ್ಲಿರುವ ಒಂದು ಠಿಕಾನಾ ಅಥವಾ ಎಸ್ಟೇಟ್ ಆಗಿದೆ.[೫] ಈಗಿನ ಮಾಲೀಕರಾದ ಠಾಕೂರ್ ರಾಮ್ ಪ್ರತಾಪ್ ಸಿಂಗ್ ಡಿಗ್ಗಿ ಮತ್ತು ಅವರ ಪತ್ನಿ ಜ್ಯೋತಿಕಾ ಕುಮಾರಿ ಡಿಗ್ಗಿ ಅವರು ೧೯೯೧ ರಲ್ಲಿ ಇದನ್ನು ಭಾಗಶಃ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಿದರು. [೬] ೧೮೬೦ ರಲ್ಲಿ ನಿರ್ಮಾಣಗೊಂಡಿರುವ ಈ ಅರಮನೆಯನ್ನು ಆಯಾಯಾ ಕಾಲ ಘಟ್ಟದಲ್ಲಿ ಪ್ರತಿಯೊಬ್ಬ ಠಾಕೂರ್‌ರು ತಮಗೆ ಬೇಕಾದ ರೀತಿಯಲ್ಲಿ ವಿಸ್ತರಿಸುತ್ತಾ ಬಂದಿದ್ದಾರೆ. ಡಿಗ್ಗಿ ಅರಮನೆಯ ಇತಿಹಾಸವು ನಮ್ಮನ್ನು ೧೯ ನೇ ಶತಮಾನದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಈ ಅರಮನೆಯನ್ನು ೧೮೬೦ ರಲ್ಲಿ ಶ್ರೀ ಠಾಕೂರ್ ಸಾಹೇಬ್ ಪ್ರತಾಪ್ ಸಿಂಗ್ ಡಿಗ್ಗಿ ಅವರು ನಿರ್ಮಿಸಿದರು. ಇದಕ್ಕೂ ಕೆಲವು ವರ್ಷಗಳ ಮೊದಲು ಜೈಪುರ ಪಟ್ಟಣವನ್ನು 9 ಚೌಕಗಳಲ್ಲಿ ನಿರ್ಮಿಸಿದ್ದರು. ಮೊದಲು ಈ ಡಿಗ್ಗಿ ಅರಮನೆಯು ಇಂದಿನ 'ಆಲ್ಬರ್ಟ್ ಹಾಲ್ ಮ್ಯೂಸಿಯಂ' ನ ಸ್ಥಳದಲ್ಲಿತ್ತು. ನಂತರ ಅದನ್ನು ಈಗಿರುವ ಸ್ಥಳಕ್ಕೆ ವರ್ಗಾಯಿಸಲಾಯಿತು. ೧೯೯೧ ರಲ್ಲಿ, ಅರಮನೆಯನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಿ, ಅದನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Not being at Diggi Palace". The Week. Retrieved 28 January 2012.
  2. "Review:Diggi Palace". The New York Times. Archived from the original on 2010-04-29.
  3. "Rushdie gag order highlights India's battle for free speech". Sydney Morning Herald. Retrieved 28 January 2012.
  4. "Jaipur Literature Festival: Literati glitterati weekend in India". CNNGo. 18 January 2010.
  5. George Michell; Aman Nath (2005). Palaces of Rajasthan. Frances Lincoln. p. 55.
  6. "History". Archived from the original on 2012-01-05.