ಡಾ. ರಾಜ್‌ಕುಮಾರ್ ರಸ್ತೆ

ವಿಕಿಪೀಡಿಯ ಇಂದ
Jump to navigation Jump to search

ಡಾ. ರಾಜ್‌ಕುಮಾರ್ ರಸ್ತೆ ಬೆಂಗಳೂರಿನ ರಾಜಾಜಿನಗರ ಬಡಾವಣೆಯಲ್ಲಿರುವ ರಸ್ತೆ. ಇದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ.ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಟ ಡಾ.ರಾಜ್‍ಕುಮಾರ್ ಅವರ ಹೆಸರನ್ನು ಈ ರಸ್ತೆಗೆ ಇಡಲಾಗಿದೆ. ಕರ್ನಾಟಕದ ದಕ್ಷಿಣದ ಆರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳ ವಾಹನಗಳು ಈ ರಸ್ತೆಯ ಮುಖಾಂತರವೇ ರಾಜಧಾನಿಗೆ ಸಂಚರಿಸುತ್ತವೆ.ಈ ರಸ್ತೆಯಲ್ಲ್ಲಿ ಡಾ.ರಾಜ್‍ಕುಮಾರ್‍‍ರವರ ಸ್ಮಾರಕವನ್ನು ಸ್ಥಾಪಿಸಲಾಗಿದೆ.ಅವರ ಹುಟ್ಟುಹಬ್ಬದಂದು ಈ ರಸ್ತೆಯಲ್ಲಿ ಜನಜಂಗುಳಿಯನ್ನು ಕಾಣಬಹುದು. ಈ ರಸ್ತೆಯು ರಾಜಾಜಿನಗರ ಎಂಟ್ರನ್ಸ್ ನಿಂದ ಪ್ರಾರಂಭಗೊಂಡು ರಾಜರಾಜೇಶ್ವರಿ ಕಲ್ಯಾಣ ಮಂದಿರ, ನವರಂಗ್ ಚಿತ್ರ ಮಂದಿರ, ವಿವೇಕಾನಂದ ಕಾಲೇಜು, ಓರಿಯನ್ ಮಾಲ್ ಮುಖಾಂತರ ಸಾಗಿ ರಾಣಿ ಚೆನ್ನಮ್ಮನು ಫಿರ್ಂಗಿಯೊಂದಿಗೆ ನಿಂತಿರುವ ಪ್ರತಿಮೆ ಇರುವ ವೃತ್ತವನ್ನು ಸೇರುವುದು. ಅಕ್ಷಾಂಶ ೧೨ ೫೯' ೦೦", ರೇಖಾಂಶ ೭೭° ೩೩′ ೩೭″ ನಿಂದ ಪ್ರಾರಂಭಗೊಂಡು ಅಕ್ಷಾಂಶ ೧೩ ೦೦' ೪೫", ರೇಖಾಂಶ ೭೭° ೩೩′ ೧೬″ ರಲ್ಲಿ ಅಂತ್ಯಗೊಳ್ಳುವ ಈ ರಸ್ತೆಯ ಉದ್ದ ೩.೫೦ ಕಿಮೀ