ಟ್ಯುಟೊರಿಯಲ್
ಟ್ಯುಟೋರಿಯಲ್ ಜ್ಞಾನವನ್ನು ವರ್ಗಾಯಿಸುವ ಒಂದು ವಿಧಾನ. ಅದನ್ನು ಕಲಿಕೆಯ ಪ್ರಕ್ರಿಯೆಯ ಒಂದು ಭಾಗವಾಗಿ ಬಳಸಬಹುದು. ಪುಸ್ತಕ ಅಥವಾ ಉಪನ್ಯಾಸ ಗಳಿಗಿಂತ ಹೆಚ್ಚು ಪರಸ್ಪರ ಸಂವಹನಾತ್ಮಕವೂ ಮತ್ತು ನಿರ್ದಿಷ್ಟವೂ ಆಗಿರುತ್ತದೆ; ಒಂದು ಟ್ಯುಟೋರಿಯಲ್ ಉದಾಹರಣೆಯ ಮೂಲಕ ಕಲಿಸಲು ಮತ್ತು ಒಂದು ನಿರ್ದಿಷ್ಟ ಕೆಲಸವನ್ನು ಪೂರ್ಣಗೊಳಿಸಲು ಅಗತ್ಯವಾದ ಮಾಹಿತಿಯನ್ನು ಪೂರೈಸಲು ಯತ್ನಿಸುತ್ತದೆ.
ಶಿಕ್ಷಣರಂಗದಲ್ಲಿ
[ಬದಲಾಯಿಸಿ]ಶಿಕ್ಷಣರಂಗದಲ್ಲಿ ಟ್ಯುಟೊರಿಯಲ್ ಎಂದರೆ ಶಿಕ್ಷಕನು ಅಥವಾ ಕಲಿಸುವಾತನು ಪ್ರತ್ಯೇಕ ವಿದ್ಯಾರ್ಥಿಗೂ ಗಮನ ಕೊಟ್ಟುಕಲಿಸುವ ವ್ಯವಸ್ಥೆಯಾಗಿದೆ. ಒಬ್ಬ ಶಿಕ್ಶಕನಿಗೆ ಒಬ್ಬನೇ ವಿದ್ಯಾರ್ಥಿ ಅಥವ ಕೆಲವೇ ವಿದ್ಯಾರ್ಧಿಗಳು ( ಐದಾರು ಅಥವ ಹೆಚ್ಚೆಂದರೆ ೨೦-೩೦) ಇರಬಹುದು.
ಟ್ಯುಟೋರಿಯಲ್ ಸಂಸ್ಥೆಗಳಲ್ಲಿ ಪ್ರಾತ್ಯಕ್ಷಿಕೆಗಳ(ಹ್ಯಾಂಡ್ಸ್ - ಆನ್) ಮೇಲೆ ಹೆಚ್ಚು ಒತ್ತು ಇರುತ್ತದೆ.
ಇಂಟರ್ನೆಟ್ / ಕಂಪ್ಯೂಟರ್ ಆಧಾರಿತ ಶಿಕ್ಷಣದಲ್ಲಿ
[ಬದಲಾಯಿಸಿ]ಇಂಟರ್ನೆಟ್ / ಕಂಪ್ಯೂಟರ್ ಆಧಾರಿತ ಟ್ಯುಟೋರಿಯಲ್ ದಲ್ಲಿ ಪ್ರತಿಯೊಂದೂ ಹಂತವನ್ನು ತೋರಿಸುವ ಕಂಪ್ಯೂಟರ್ ಪರದೆಯ ಚಿತ್ರ( ಸ್ರೀನ್-ಶಾಟ್ )ಗಳು ಅಥವಾ ವೀಡಿಯೋ ಕಡತಗಳನ್ನು ಬಳಸಿರುತ್ತಾರೆ.