ವಿಷಯಕ್ಕೆ ಹೋಗು

ಟ್ಯಾಪ್ ಡ್ಯಾನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟ್ಯಾಪ್‌ ಡ್ಯಾನ್ಸ್‌ ಎಂದರೆ ನುಣುಪಾದ ನೆಲದ ಮೇಲೆ ಎರಡು ಕಾಲುಗಳ ಆಧಾರದ ಮೇಲೆ ಒಬ್ಬರನ್ನೊಬ್ಬರು ತಟ್ಟುವ ರೀತಿಯಲ್ಲಿ ಇಬ್ಬರು ಮಾಡುವ ನೃತ್ಯಪ್ರಕಾರವಾಗಿದೆ. ಇದನ್ನು ಒಂದು ಸಂಗೀತ ಪ್ರಕಾರವೆಂತಲೂ ಪರಿಗಣಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಎರಡು ಪ್ರಕಾರಗಳಿದ್ದು ಅವರುಗಳೆಂದರೆ: ರಿದಮ್‌(ಸ್ವರತಂರಂಗ)(Jazz)ಟ್ಯಾಪ್‌ ಮತ್ತು ಬೋರ್ಡ್‌‌ವೇ ಟ್ಯಾಪ್‌ಗಳಾಗಿವೆ. ಬ್ರಾಡ್‌ವೇ ಟ್ಯಾಪ್‌ ಹೆಚ್ಚಾಗಿ ನೃತ್ಯದ ಕಡೆಗೆ ಗಮನವನ್ನು ಹರಿಸುತ್ತದೆ. ಮತ್ತು ಸಂಗೀತ ರಂಗಮಂದಿರದ ಭಾಗವಾಗಿ ವ್ಯಾಪಕವಾದ ಪ್ರದರ್ಶನವನ್ನು ಹೊಂದಿದೆ. ರಿದಮ್‌ ಟ್ಯಾಪ್‌ ಇದು ಹೆಚ್ಚಾಗಿ ಸಂಗೀತದ ಕಡೆ ತನ್ನ ಒಲವನ್ನು ತೋರಿಸುತ್ತದೆ. ಮತ್ತು ಇದರ ವೃತ್ತಿಗಾರರು ತಮ್ಮನ್ನು ಜಾಜ್ ಸಂಗೀತ ಪ್ರಕಾರ ಸಂಪ್ರದಾಯದ ಇನ್ನೊಂದು ಭಾಗವೆಂದು ಭಾವಿಸುತ್ತಾರೆ.

ಇತಿಹಾಸ

[ಬದಲಾಯಿಸಿ]

ಜುಬಾದಂತೆಯೇ ಟ್ಯಾಪ್‌ ಡ್ಯಾನ್ಸ್‌ ಕೂಡ ಇರಿಶ್‌ ಹೆ‌ಜ್ಜೆಯ ನೃತ್ಯ ಮತ್ತು ಬ್ಲ್ಯಾಕ್‌ ಸ್ಲೇವ್‌ ನೃತ್ಯ ಇವೆರಡರ ಮೂಲವನ್ನೂ ಹೊಂದಿದೆ. ಈ ನೃತ್ಯ ಪ್ರಕಾರವು ಸಂಚಾರಿ ನೃತ್ಯ ಪ್ರದರ್ಶನದ ಪ್ರಾರಂಭದೊಂದಿಗೆ ಸುಮಾರು ೧೮೦೦ರಲ್ಲಿ ಪ್ರಾರಂಭವಾಯಿತೆಂದು ನಂಬಲಾಗುತ್ತದೆ. ಇರಿಶ್‌ ವೃತ್ತಿಗಾರರು ದಕ್ಷಿಣದ ಬ್ಲ್ಯಾಕ್ಸ್‌ ಮತ್ತು ನೃತ್ಯಮಾಡುವಾಗಿನ ಅವರ ಏಕೀಕೃತವಾದ ಹೆಜ್ಜೆ ಇಡುವ ಕ್ರಮವನ್ನು ವಿಡಂಬನೆ ಮಾಡುತ್ತಿದ್ದರು. ನಂತರದ ದಿನಗಳಲ್ಲಿನ ಸಂಚಾರ ಪ್ರದರ್ಶನಗಳಲ್ಲಿ ಕಪ್ಪು ವೃತ್ತಿಕಾರರು ತಮ್ಮ ಮುಖಕ್ಕೆ ಕಪ್ಪು ಬಣ್ಣವನ್ನು ಬಳಿದುಕೊಂಡು ಪ್ರದರ್ಶನವನ್ನು ನೀಡುತ್ತಾ ಇರಿಷ್‌ ಪದ್ದತಿಯಾದ ಬ್ಲಾಕ್‌ನೃತ್ಯವನ್ನು ವಿಡಂಬನೆ ಮಾಡತೊಡಗಿದರು ಮತ್ತು ನಂತರ ಎರಡೂ ಬಗೆಯನ್ನೂ ಸಹ ಸೇರಿಸಿಕೊಂಡು ಪ್ರದರ್ಶನ ನೀಡತೊಡಗಿದರು. "ಮಾಸ್ಟರ್‌ ಜುಬಾ" ಎಂದೇ ಪ್ರಸಿದ್ದರಾದ ವಿಲಿಯಂ ಹೆನ್ರಿ ಲಾನೆಯವರು ಕಪ್ಪು ಪ್ರದರ್ಶನಕಾರರಾಗಿ ನಂತರ ಬಿಳಿ ಪ್ರದರ್ಶನಕಾರರ ತಂಡಕ್ಕೆ ಸೇರಲ್ಪಟ್ಟ ಎಕೈಕ ಸಂಚಾರಿ ಪ್ರದರ್ಶನಕಾರರಾಗಿದ್ದಾರೆ. ಮತ್ತು ಇವರನ್ನು ವ್ಯಾಪಕವಾಗಿ ಟ್ಯಾಪ್‌ಡ್ಯಾನ್ಸ್‌ನ ಮೂಲ ಪುರುಷ ಎಂತಲೇ ಕರೆಯುತ್ತಾರೆ.

೧೯೩೦, ೧೯೪೦, ಮತ್ತು ೧೯೫೦ರ ದಶಕದಲ್ಲಿ ಒಳ್ಳೆಯ ಟ್ಯಾಪ್‌ಡ್ಯಾನ್‌ಗಾರರು ಹಲವಾರು ವಿವಿಧ ವಿನೋದಾವಳಿಗಳ ರಂಗದಿಂದ ಚಲನಚಿತ್ರ ರಂಗಕ್ಕೆ ಮತ್ತು ದೂರದರ್ಶನಕ್ಕೆ ಆಯ್ಕೆಯಾಗಿ ಕಾರ್ಯನಿರ್ವಹಿಸತೊಡಗಿದರು. ಸ್ಟೀವ್‌ ಕೊಂಡೊಸ್‌ ಅವರು ಅವರೇ ಕಂಡುಹಿಡಿದ ಹೊಸಬಗೆಯ ನೃತ್ಯಪ್ರಕಾರದೊಂದಿಗೆ ವಿವಿಧ ವಿನೋದಾವಳಿಗಳಲ್ಲಿ ತಮ್ಮ ವೀಕ್ಷಕರಿಗೆ, ನಂತರ ಚಲನಚಿತ್ರಗಳಲ್ಲಿ ಮತ್ತು ಬೀದಿಗಳಲ್ಲಿ ಸಂಪೂರ್ಣ ಹೊಸಬಗೆಯ ಪ್ರದರ್ಶನವನ್ನು ನೀಡಿದರು. ಆಗಿನ ಕಾಲದ ಪ್ರಸಿದ್ದ ಟ್ಯಾಪ್‌ ಡ್ಯಾನ್ಸ್‌ರ್‌ಗಳಲ್ಲಿ ಫ್ರೆಡ್‌ ಟಸ್ಟಾರಿ, ಗಿಂಜರ್‌ ರೊಜರ್ಸ್‌, ಎಲೆನೊರ್‌ ಪೋವೆಲ್‌, ಶಿರ್ಲಿ ಟೆಂಪಲ್‌, ಜಾನ್‌ ಡಬ್ಲೂ ಬಬಲ್ಸ್‌, ಚಾರ್ಲ್ಸ್‌ "ಹೊನಿ" ಕೊಲ್ಸ್‌, ವೆರಾ ಎಲ್ಲೆನ್‌, ರುಬಿ ಕೀಲರ್‌, ಗಿನೆ ಕೆಲ್ಲಿ, ಅನ್‌ ಮಿಲ್ಲರ್‌, ಜೆನಿ ಲೆಗಾನ್‌,[] ನಿಕೊಲೊಸ್‌ ಬ್ರದರ್ಸ್‌ ಎಂದು ಪ್ರಖ್ಯಾತರಾದ ಫರಿಯಾದ್‌ ಮತ್ತು ಹರ್ಲಾಡ್‌ ನಿಕೊಲೊಸ್‌, ಕ್ಲಾರ್ಕ್‌ ಬ್ರದರ್ಸ್‌, ಡೊನಾಲ್ಡ್‌ ಓ ಕೊನ್ನೊರ್‌, ರಿತಾ ಹೆವರ್ಥ, ಬೆಟ್ಟಿ ಗ್ರೆಬಲ್‌, ಪ್ರಿನ್ಸ್‌ ಸ್ಪೆನ್ಸ್‌ರ್‌,[] ಬಿಲ್‌ ಬೊಜಾಂಗಲ್‌, ರಾಬಿನ್‌ಸನ್‌ ಮತ್ತು ಜಿಮ್ಮಿ ಸ್ಲೈಡ್‌ ಸೇರಿದ್ದಾರೆ.

೧೯೩೦ರ ದಶಕದಲ್ಲಿ ಟ್ಯಾಪ್‌ ಡ್ಯಾನ್ಸ್‌ ಲಿಂಡಿ ಹೊಪ್‌ನೊಂದಿಗೆ ಮಿಶ್ರಿತವಾಯಿತು. "ಫ್ಲೈಯಿಂಗ್‌ ಸ್ವಿಂಗ್‌ ಔಟ್ಸ್‌" ಮತ್ತು "ಫ್ಲೈಯಿಂಗ್‌ ಸರ್ಕಲ್ಸ್‌" ಇವೆರಡು ಮೊದಲ ಬಾರಿಗೆ ಲಿಂಡಿಹೊಪ್‌ ನೊಂದಿಗೆ ಮಿಶ್ರಿತವಾಗಿ ಮಾಡಿದ ಕೃತಿಗಳಾಗಿವೆ. ೧೯೫೦ರ ದಶಕದಲ್ಲಿ ವಿನೋದಾವಳಿಗಳ ಪ್ರಕಾರಗಳು ಬದಲಾವಣೆಯನ್ನು ಪಡೆದುಕೊಂಡವು. ಜಾಜ್ ಸಂಗೀತ ಮತ್ತು ಟ್ಯಾಪ್‌ ಡ್ಯಾನ್ಸ್‌ಗಳೆರಡೂ ಪ್ರಕಾರಗಳು ತಮ್ಮ ಪ್ರಸಿದ್ದತೆಯಲ್ಲಿ ಇಳಿಮುಖವನ್ನು ಕಂಡವು ಮತ್ತು ಟ್ಯಾಪ್ ಡ್ಯಾನ್ಸ್ ಎಂದು ಕರೆಯಲ್ಪಡುವ ಈ ನೃತ್ಯವು ರಾಕ್‌ ಎಂಡ್‌ ರೊಲ್‌ ಮತ್ತು ಪಾಪ್‌ ಸಂಗೀತಗಳು ಮತ್ತು ನೂತನ ಜಾಜ್ ಡ್ಯಾನ್ಸ್‌ ಗಳು ಒಂದಾಗುವುದರೊಂದಿಗೆ ಎರಡೂ ಪ್ರಕಾರಗಳ ಬಹಳಷ್ಟು ನಡಾವಳಿಗಳು ಒಂದೇ ತೆರನಾಗಿದ್ದಂತಾಯಿತು. ಆದರೆ ಜಾಜ್‌ ಪ್ರಕಾರವು ಟ್ಯಾಪ್‌ ಡ್ಯಾನ್ಸ್‌ಗಿಂತಲೂ ಪ್ರತ್ಯೇಕವಾದ ವಿಧಾನದಲ್ಲಿ ತನ್ನದೇ ಆದ ಶೈಲಿಯಲ್ಲಿ ಹೊರಹೊಮ್ಮಿತು. ೧೯೬೦ ಮತ್ತು ೧೯೭೦ರ ದಶಕದಲ್ಲಿನ ಪ್ರಖ್ಯಾತ ನೃತ್ಯಪಟುಗಳಲ್ಲಿ ಅರ್ಥರ್‌ ಡಕ್ಕನ್‌ ಟೊಮ್ಮಿ ಟ್ಯೂನ್‌ ಇವರುಗಳನ್ನು ಒಳಗೊಂಡಿದೆ.

ನೋ ಮ್ಯಾಪ್ಸ್‌ ಆನ್‌ ಮೈ ಟ್ಯಾಪ್ಸ್‌ , ೧೯೭೯ರಲ್ಲಿ ದಿ ಎಮ್ಮಿ ಅವಾರ್ಡ್‌ ಪ್ರಶಸ್ತಿ ಗಳಿಸಿದ PBSಸಾಕ್ಷಚಿತ್ರ,ಗಳು ಟ್ಯಾಪ್‌ಡ್ಯಾನ್ಸ್‌ನ ಮರುಹುಟ್ಟಿಗೆ ಕಾರಣೀಭೂತವಾದವು. ಅತ್ಯಂತ ಪ್ರಸಿದ್ದಿ ಪಡೆದ ಎನಿಮೆಶನ್‌ ಚಿತ್ರಗಳಾದ, ಹ್ಯಾಪಿ ಪೀಟ್‌ , ಇದು ಟ್ಯಾಪ್‌ ಡ್ಯಾನ್ಸ್‌ಗೆ ಪ್ರಸಿದ್ದತೆಯ ಮಹಾಪೂರವನ್ನೇ ಹರಿಸಿತು.[] ಅಮೆರಿಕಾದ ನ್ಯಾಶನಲ್‌ ಟ್ಯಾಪ್‌ ಡೇಯನ್ನು ಮೇ ೨೫,ರಂದು ಆಚರಿಸಬೇಕೆಂದು ಕಾನೂನು ಹೊರಡಿಸಿ ಜಾರ್ಜ್‌ ಬುಷ್‌ ಅವರು ನವೆಂಬರ್‌ ೭, ೧೯೮೯ರಂದು ಸಹಿ ಮಾಡಿದರು. (ಮೇ ೨೫ರಂದೇ ಈ ದಿನವನ್ನು ಆರಿಸಿಕೊಳ್ಳಲು ಕಾರಣವೆಂದರೆ ಈ ದಿನವು ಪ್ರಸಿದ್ದ ಟ್ಯಾಪ್‌ ಡ್ಯಾನ್ಸರ್‌ ಆದ ಬಿಲ್‌"ಬೊಜಾಂಗಲ್ಸ್‌" ರಾಬಿನ್‌ಸನ್‌ ಇವರ ಹುಟ್ಟುಹಬ್ಬವಾಗಿದೆ). ಪ್ರಖ್ಯಾತ ನೂತನ ಟ್ಯಾಪ್‌ ಡ್ಯಾನ್ಸ್‌ರ್‌ಗಳಲ್ಲಿ ಬ್ರೆಂಡಾ ಬಫಾಲಿನೋ, ಸಾವಿಯೋನ್‌ ಗ್ಲೋವರ್‌,, ಗ್ರೆಗೊರಿ ಮತ್ತು ಮೌರಿಸ್‌ ಹಿನ್ಸ್‌, ಲಾವಾಂಗ್‌ ರಾಬಿನ್‌ಸನ್‌, ಜಾಸನ್‌ ಸಾಮ್ಯುಯಲ್‌ ಸ್ಮಿತ್‌, ಕ್ಲೋ ಅರ್ನಾಡ್‌ ಮತ್ತು ಡೈನಿ"ಲೆಡಿ ದಿ"ಗಳನ್ನು[] ಒಳಗೊಂಡಿದೆ. ವಾಕರ್‌[][] ಇಂಡಿ-ಪಾಪ್‌ ಬ್ಯಾಂಡ್‌ ಟಿಲ್ಲಿ ಮತ್ತು ದಿ ವಾಲ್‌ ಕೂಡ ಟ್ಯಾಪ್‌ ಡ್ಯಾನ್ಸ್‌ಗೆ ಹೆಮ್ಮೆಯನ್ನು ತಂದುಕೊಟ್ಟ ಕಲಾವಿದರಾಗಿದ್ದಾರೆ. ಜೆಮ್ಮಿ ಪ್ರೆಸ್ನಾಲ್‌ ಅವರು ಸಂಘರ್ಷಣಾತ್ಮಕ ಟ್ಯಾಪ್‌ನಲ್ಲಿ ಪ್ರಸಿದ್ದರಾಗಿದ್ದಾರೆ.

ಟ್ಯಾಪ್ ಡ್ಯಾನ್ಸ್ ಗುಣಲಕ್ಷಣಗಳು

[ಬದಲಾಯಿಸಿ]
ಲೊವಾ ಸ್ಟೇಟ್ ಕಾಲೇಜ್‌ನ ಜಿಮ್ನಾಸಿಯಮ್‌ನಲ್ಲಿ ಟ್ಯಾಪ್ ಡ್ಯಾನ್ಸಿಂಗ್ ಕ್ಲಾಸ್.ಏಮ್ಸ್, ಲೊವಾ, 1942

ಟ್ಯಾಪ್‌ ನೃತ್ಯಗಾರರು ಪದ ಸಂಕ್ಷೇಪಣ(ವಾಕ್ಯಗಳನ್ನು ಸರಿಯಾಗಿ ಉಚ್ಚರಿಸದೇ ಇರುವುದು)ವನ್ನು ಹೆಚ್ಚಾಗಿ ತಮ್ಮ ಕೃತಿಗಳಲ್ಲಿ ಬಳಸಿಕೊಳ್ಳುತ್ತಾರೆ. ಬ್ಯಾಲೆ ನೃತ್ಯವು ಸಾಮಾನ್ಯವಾಗಿ ಎಂಟನೆಯ ಅಥವಾ ಒಂದನೆ ತಾಳದ ಗಣನೆಯಿಂದ ಪ್ರಾರಂಭವಾಗುತ್ತದೆ. ಟ್ಯಾಪ್‌ ಡ್ಯಾನ್ಸ್‌ನ ಇನ್ನೊಂದು ವಿಷೇಶವೆಂದರೆ ಆಶುರಚನೆಯನ್ನು ಒಳಗೊಂಡಿರುವುದಾಗಿದೆ. ಇದನ್ನು ಸಂಗೀತದೊಂದಿಗೆ ಬೆರೆಸಿ ಹೇಳಬಹುದಾಗಿದೆ ಅಥವಾ ಇತರ ಪರಿಕರಗಳೊಂದಿಗೂ ಹೇಳಬಹುದಾಗಿದೆ. ಇದನ್ನು ಅಕಾಪೆಲ್ಲಾ ನೃತ್ಯವೆಂತಲೂ ಕರೆಯಲಾಗುತ್ತದೆ.

ವೃತ್ತಿನಿರತ ನೃತ್ಯಗಾರರು ಒಂದು ಬಗೆಯ ಟ್ಯಾಪ್‌ ನೃತ್ಯಗಾರರಾಗಿದ್ದು ಅವರು ಮೂಲತಹ ಕಾಲಿನಿಂದ ನೃತ್ಯವನ್ನು ಮಾಡುತ್ತಾರೆ ಮತ್ತು ನೆಲದ ಮೇಲೆ ತಮ್ಮ ಕಾಲು ಬಡಿಯುತ್ತಾ ಹೆಚ್ಚು ಶಬ್ದವನ್ನು ಸೃಷ್ಠಿಸುತ್ತಾ ನೃತ್ಯವನ್ನು ಮಾಡುತ್ತಾರೆ. ಈ ಪ್ರಕಾರದ ಟ್ಯಾಪ್‌ ಡ್ಯಾನ್ಸಿಂಗ್‌ನ್ನು ರಿದಮ್‌ ಟ್ಯಾಪ್‌ ಎಂತಲೂ ಕರೆಯುತ್ತಾರೆ. ಮತ್ತು ಇದು ಅಮೆರಿಕಾದ ಜೀತದಾಳುಗಳು ಮಾಡುವ ನೃತ್ಯದಿಂದ ಬಂದ ಪ್ರಕಾರವಾಗಿದೆ. ಅಮೆರಿಕಾದಲ್ಲಿ ಜೀತದಾಳುಗಳಿಗೆ ತಮ್ಮ ಸಂಸ್ಕ್ರತಿಯನ್ನು ಪಾಲಿಸಲು ಅನುಮತಿ ಇರಲಿಲ್ಲ ಆದಕಾರಣ ಅವು ಅಲ್ಲಿನ ನೃತ್ಯ ಪ್ರಕಾರದೊಂದಿಗೆ ತಮ್ಮ ಸಾಂಪ್ರದಾಯಿಕ ನೃತ್ಯ ಪ್ರಕಾರವನ್ನು ಬೆರಕೆ ಮಾಡಿದವು. ಅವರು ಈ ಪ್ರಕಾರವನ್ನು ತಮ್ಮ ಯಜಮಾನರಿಗೆ ತಿಳಿಯದಂತೆಯೇ ಸಂರಕ್ಷಿಸಿಕೊಂಡು ಬಂದರು. ಇದು ಟ್ಯಾಪ್‌ ನೃತ್ಯದ ಮೂಲವಾಗಿದ್ದು (ಈಗ ಹೆಚ್ಚಿನ ಜನರು ಟ್ಯಾಪ್‌ ಅಂದರೆ ಯಾವುದು ಎಂದು ಭಾವಿಸಿದ್ದಾರೋ ಅದು.) ಅದೇ ನಂತರದ ದಿನಗಳಲ್ಲಿ ಪ್ರವಾಸಿ ಪ್ರದರ್ಶನದ ಭಾಗವಾಯಿತು ಏಕೆಂದರೆ ಇದರಲ್ಲಿ ಹೆಚ್ಚಾಗಿ ಯುಕ್ತಿಯನ್ನು ಉಪಯೋಗಿಸದೇ ತೋಳ್ಬಲ ಮತ್ತು ಪರಿಶ್ರಮವನ್ನು ಬಳಸಿಕೊಳ್ಳಲಾಗುತ್ತದೆ. ಈ ರೀತಿ ಮಾರ್ಪಾಡು ಹೊಂದಿರುವ ಪ್ರಕಾರವು ಹೆಚ್ಚು ಜನಪ್ರೀಯವಾಗುತ್ತಾ ಸಾಗಿತು ಏಕೆಂದರೆ ಈ ಪ್ರಕಾರವನ್ನು ಬೀದಿ ಬಿದಿಗಳಲ್ಲಿ ಪ್ರದರ್ಶನವನ್ನು ಮಾಡಿದ ಕಾರಣವೇ ಆಗಿತ್ತು. ರಿದಮ್‌ ಟ್ಯಾಪ್‌ ಇದು ಹೆಚ್ಚಾಗಿ ಪ್ರಚಲಿತದಲ್ಲಿಲ್ಲವಾದರೂ ತಿಳಿದುಕೊಳ್ಳಬೇಕಾದ ಅಂಶವೆಂದರೆ ಟ್ಯಾಪ್‌ ಡ್ಯಾನ್ಸ್‌ನ ಹುಟ್ಟಿಗೆ ಕಾರಣವೇ ರಿದಮ್‌ ಟ್ಯಾಪ್‌ ಆಗಿದೆ. ಸ್ಟೀವ್‌ ಕೊಂಡೊಸ್‌ ಅವರು ತಮ್ಮ ಮಹತ್ವಾಕಾಂಕ್ಷಿ ಆಶಯವನ್ನು ಪಿಟ್ಸ್‌ಬರ್ಗ್‌‌ನಲ್ಲಿ ಪ್ರಾರಂಭಿಸಿದರು, ನಂತರ ಸಹಾಯಕರಾಗಿದ್ದ ಅವರು ರಿದಮ್‌ ಟ್ಯಾಪ್‌ನ ಪ್ರಸಿದ್ದ ಕಲಾವಿದರೂ ಆದರು. ಅವರ ಸೃಜನಾತ್ಮಕ ರಚನೆಯು ಪ್ರಭಾವಳಿಗೆ ಒಳಗಾದವರೆಂದರೆ, ಗ್ರೆಗೊರಿ ಹಿನ್ಸ್‌, ಸಾವಿಯೊನ್‌ ಗ್ಲೊವರ್‍, ಮತ್ತು ಮಾರ್ಶಲ್‌ ಡೆವಿಸ್‌, ಹೆಚ್ಚಾಗಿ ಎಲ್ಲ’ಹೂಪರ್‌’ ಕಲಾವಿದರಲ್ಲಿ ಪ್ರಸಿದ್ದರೆಂದರೆ ಸಮ್ಮಿ ಡೆವಿಸ್‌, ಜ್ಯೂನಿಯರ್‌ ಸಾವಿಯೋನ್‌ ಗ್ಲೋವರ್‌, ಗ್ರೆಗೊರಿ ಹಿನ್ಸ್‌, ಮತ್ತು ಲಾವಾಂಗ್‌ ರಾಬಿನ್ಸ್‌ನ್‌ ಇವರುಗಳು ಆಫ್ರಿಕಾ ಮೂಲದ ಅಮೆರಿಕಾದ ಪ್ರಜೆಗಳಾಗಿದ್ದಾರೆ. ಆದರೂ ಕೂಡ ಈ ಕಲೆಯು ಟ್ರಾನ್ಸೆಂಡ್‌ ಜನಾಂಗದ ಸ್ಟೀರಿಯೊ ಪ್ರಭೆದದವರಿಂದಲೇ ಹೆಚ್ಚಾಗಿ ನಡೆಸಲ್ಪಡುತ್ತಿದೆ. ಈಗಿರುವ ಅತ್ಯಂತ ಪ್ರಸಿದ್ದ ವೃತ್ತಿನಿರತ ನರ್ತಕನೆಂದರೆ ಸೆವಿಯಾನ್ ಗ್ಲೋವರ್‌ ಆಗಿದ್ದಾರೆ. ಅವರು ಟ್ಯಾಪ್‌ ಡ್ಯಾನ್ಸ್‌ನ್ನು ಮುಖ್ಯ ವಾಹಿನಿಗೆ ತರುವ ಸಲುವಾಗಿ ಚಲನ ಪ್ರಧಾನ ಚಿತ್ರವಾದ ಹ್ಯಾಪಿ ಪೀಟ್‌‌ ನಲ್ಲಿ ತಂದು ಉದಾತವಾದ ಕೊಡುಗೆಯನ್ನು ನೀಡಿದ್ದಾರೆ. ಮತ್ತು ಈ ಚಿತ್ರವು ಪ್ರಧಾನವಾಗಿ ಟ್ಯಾಪ್‌ ಡ್ಯಾನ್ಸ್‌ನ ಚಿತ್ರಣವನ್ನು ಹೊಂದಿದೆ. ಇನ್ನೊಂದು ಟ್ಯಾಪ್‌ ಡ್ಯಾನ್ಸ್‌ ಸಲುವಾಗಿನ ಪ್ರಸಿದ್ದ ಚಿತ್ರವೆಂದರೆ "೧೯೮೯'s Tap" ಆಗಿದೆ ಇದನ್ನು ಗ್ರೆಗೊರಿ ಹೆನ್ಸ್‌ ಮತ್ತು ಹಲವಾರು ಹಳೆಯ ವೃತ್ತಿನಿರತ ಕಲಾವಿದರನ್ನು ಬಳಸಿಕೊಂಡು ಮಾಡಲಾಗಿದೆ.

ಮೂಲದಲ್ಲಿನ ಟ್ಯಾಪ್‌ ನೃತ್ಯಗಾರರಾದ ಫ್ರೆಡ್‌ ಅಸ್ಟೆಯರ್‌ರಂತಹ ಕಲಾವಿದರು ನೃತ್ಯ ಶಾಲೆಗಳಿಗೆ ಹೊಸದಾದ ಆಯಾಮವನ್ನು ಬರೆದಿದ್ದಾರೆ. ಗಿನೆ ಕೆಲ್ಲಿಯವರಂತೂ ಟ್ಯಾ‌ಪ್‌ ನೃತ್ಯವನ್ನು ಪ್ರಸಿದ್ದಗೊಳಿಸುವುದಕ್ಕಾಗಿ ತನ್ನ ಅತ್ಯಂತ ಅಮೂಲ್ಯವಾದ ಕಲಾ ಕೌಶಲ್ಯವನ್ನು ಬಳಸಿಕೊಂಡು ತರಬೇತಿಯನ್ನು ನೀಡಿದ್ದಾರೆ. ಇದೇ ಟ್ಯಾಪ್‌ ಮಾದರಿಯು ಮುಂದುವರಿದುಕೊಂಡು ಬಂದು ಈಗಿನ "ಬ್ರಾಡ್‌ವೇ ಸ್ಟೈಲ್‌" ಆಗಿದೆ ಮತ್ತು ಇದು ಅಮೆರಿಕಾದ ಸಂಸ್ಕ್ರತಿಯ ಪ್ರಚಲಿತ ಪ್ರವೃತ್ತಿಯಾಗಿದೆ. ಇದು ಸಾಮಾನ್ಯವಾಗಿ ಹೆಚ್ಚು ಎತ್ತರದ ಹಿಮ್ಮಡಿಯುಳ್ಳ ಬೂಟುಗಳನ್ನು ದರಿಸುವ ನೃತ್ಯ ಮತ್ತು ಸಂಗೀತಗಳನ್ನು ಒಳಗೊಂಡಿದ್ದು ಇದನ್ನೇ ಪುರಾತನ ಮಾದರಿಯ ಟ್ಯಾಪ್‌ ಡ್ಯಾನ್ಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ೪೨ನೇ ರಸ್ತೆಯಲ್ಲಿ ನಡೆಯುತ್ತಿರುವ ಬಾರ್ಡರ್‌ವೇ ಮಾದರಿಯ ನೃತ್ಯ ಕಾರ್ಯಕ್ರಮಗಳೇ ಆಗಿದೆ.

ಸಾಮಾನ್ಯವಾಗಿ ಟ್ಯಾಪ್‌ ನೃತ್ಯವು ಪ್ರಯಾಸದಿಂದ ಕಾಲೆಳೆಯುವ, ಕಾಲೆಳೆಯುತ್ತಾ ಹೆಜ್ಜೆಗಳನ್ನು ಬದಲಾಯಿಸುವ, ಜೋಲಾಡುವ, ಕಾಲುಗಳನ್ನು ಎತ್ತಿ ಜೋಲಾಡಿಸುವ, ದಿಗ್ಬ್ರಮೆಗೊಳಿಸುವ, ದೊಡ್ಡನೆಯ ಕೋಟನ್ನು ಧರಿಸಿದ ಒಬ್ಬರಿಂದ ಮತ್ತು ಇಬ್ಬರಿಂದ ಹಿಂದಕ್ಕೆ ಬಗ್ಗಲ್ಪಡುವ ಹಾರಾಡಿದಂತೆ ಮಾಡುವ, ಚಿಂನ್ಸಿನ್ನತಿ, ದಿ ಶಿಮ್‌ ಶಾಮ್‌ ಶಿಮ್ಮಿ(ಲಿಂಡಿ ಎಂತಲೂ ಕರೆಯುತ್ತಾರೆ.) ಇರಿಶ್‌, ವಾಜ್‌ಕ್ಲೋಗ್‌, ಕಾಲಿನಿಂದ ಪ್ಯಾಡಲ್‌ನಂತೆ ತುಳಿದಂತೆ ಮಾಡುವ , ನಗಾರಿಯನ್ನು ಬಡಿಯುವಾದ ಒಂದಾದ ಮೇಲೊಂದರಂತೆ ಮೊಳಗುವ ಶಬ್ದದಂತಹ, ಭಾರವಾದ ಹೆಜ್ಜೆ ಹಾಕುವ, ವರೆಸುವ, ಉಜ್ಜಿಕೊಂಡು ಹೋಗುವ, ಮತ್ತು ಒಬ್ಬರಿಂದ ಅಥವಾ ಇಬ್ಬರಿಂದ ಕಾಲಿನಿಂದ ಒದೆಯುವ, ಮಾದಕ ಹೆಜ್ಜೆಗಳನ್ನು ಹಾಕುವ, ಕಾಲಿನ ಮಣಿಕಟ್ಟನ್ನು ತಿರುಗಿಸುವ , ಒಂದು, ಎರಡು, ಮತ್ತು ಮೂರು ಬಾರಿ ಹೆಜ್ಜೆ ಹಾಕುವ, ಪುನರಾವರ್ತಿಸುವ, ಕಾಲನ್ನು ಮೇಲೆತ್ತಿ ಇಡುವ, ಸೈನಿಕರಂತೆ ಹೆಜ್ಜೆ ಹಾಕುವ, ಹೊಸದಾಗಿ ಪುಟಿದೇಳುವ, ಮತ್ತು ನಿಧಾನವಾಗಿ ಓಡುಪ ಪ್ರಕಾರಗಳನ್ನು ಒಳಗೊಂಡಿರುತ್ತದೆ. ಇನ್ನೂ ಮುಂದುವರಿದ ಟ್ಯಾಪ್‌ ಡ್ಯಾನ್ಸ್‌ಗಳಲ್ಲಿ ಮೂಲ ಹೆಜ್ಜೆಗಳನ್ನೆ ಹೊಸದೊಂದು ಹೆಜ್ಜೆಯನ್ನು ರೂಪಿಸುವ ಸಲುವಾಗಿ ಬಳಸಿಕೊಳ್ಳಲಾಗುತ್ತದೆ. ಸಮಯಕ್ಕೆ ಸರಿಯಾಗಿ ಹೆಜ್ಜೆ ಹಾಕುವುದನ್ನು ಟ್ಯಾಪ್‌ ನೃತ್ಯದಲ್ಲಿ ಪಾಲಿಸಿಕೊಂಡು ಬರಲಾಗುತ್ತದೆ ಆದರೆ ಇದು ಸ್ಥಳದಿಂದ ಸ್ಥಳಕ್ಕೆ ಬೇರೆ ರೀತಿಯಲ್ಲಿರುತ್ತವೆ. ಇದು ನಾದತರಂಗದ ಮೇಲೆ ನಿರ್ಧರಿಸಲ್ಪಡುತ್ತದೆ ಮತ್ತು ಅದರಿಂದಲೇ ಹೆಜ್ಜೆಗಳನ್ನು ಹೆಚ್ಚುಗೊಳಿಸುವ ಮತ್ತು ಕಡಿಮೆಗೊಳಿಸುವ ಕ್ರಿಯೆಯನ್ನು ಮಾಡಲಾಗುತ್ತದೆ. ಟ್ಯಾಪ್‌ ಡ್ಯಾನ್ಸ್‌ನ್ನು ಅಸಾಪೆಲ್ಲಾ ಪ್ರಕಾರವನ್ನು ಬಳಸಿಕೊಂಡೂ ಸಹ ಮಾಡಬಹುದಾಗಿದೆ. ಇದರಲ್ಲಿ ಸಂಗೀತ ಪರಿಕರಗಳನ್ನು ಹೊರತುಪಡಿಸಿ ಅದರಂತೆಯೇ ಹಾಡಲಾಗುತ್ತದೆ. ಟ್ಯಾಪ್‌ ನೃತ್ಯಗಾರರು ಯಾವುದೇ ಸಂಗೀತಕ್ಕೆ ಕುಣಿಯದೇ ಹೊದರೂ ಅದೇ ವೇಳೆಯಲ್ಲಿ ಸಂಗೀತಕ್ಕೊಂದು ಲಹರಿಬರುವಂತೆ ಹೆಜ್ಜೆಗಳನ್ನು ಹಾಕುತ್ತಾರೆ. ಅಸಾಪೆಲ್ಲಾ ಟ್ಯಾಪ್‌ನಲ್ಲಿ, ಸಾಮಾನ್ಯವಾಗಿ ಸರಳ ಹೆಜ್ಜೆಗಳನ್ನು ಇರಿಸಲಾಗುತ್ತದೆ(ಮೇಲೆ ಪಟ್ಟಿಮಾಡಿದವುಗಳಲ್ಲಿ ಅತ್ಯಂತ ಸಾಮಾನ್ಯವಾದವುಗಳು) ಮತ್ತು ತಮ್ಮ ಸ್ವಾಮ್ಯತ್ವದಲ್ಲಿ ಇರಿಸಿಕೊಳ್ಳುವಂತೆ ಸರಳವಾದ ಹೆಜ್ಜೆಗಳನ್ನು ಇಡುತ್ತಾರೆ. ಆದರೆ ಗುಂಪು ನೃತ್ಯಗಾರರು ಲಹರಿ ಬರುವಂತೆ ತಮ್ಮ ಹೆಜ್ಜೆಗಳನ್ನು ಒಂದೇ ವೇಗದಲ್ಲಿ ಇರಿಸುವುದು ಅನಿವಾರ್ಯವಾಗಿದೆ.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಕಾನ್ಸ್ಟನ್ಸ್ ವ್ಯಾಲಿಸ್ ಹಿಲ್ ಟ್ಯಾಪ್ ಡ್ಯಾನ್ಸಿಂಗ್ ಅಮೇರಿಕಾ:ಎ ಕಲ್ಚರಲ್ ಹಿಸ್ಟರಿ (ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್; ೨೦೧೦), ೪೦೦ ಪುಟಗಳು; ಇದು ಟ್ಯಾಪ್ ಡ್ಯಾನ್ಸ್‌ನ ಇತಿಹಾಸವನ್ನು ಆಫ್ರಿಕನ್ ಅಮೇರಿಕನ್ ಮತ್ತು ಐರಿಷ್ ಪ್ರಕಾರಗಳಲ್ಲೂ ಹುಡುಕುವ ಪ್ರಯತ್ನ ಮಾಡುತ್ತದೆ.

ಉಲ್ಲೇಖಗಳು‌‌

[ಬದಲಾಯಿಸಿ]
  1. "Jeni LeGon". American Tap Dance Foundation Hall of Fame. Archived from the original on ಜುಲೈ 20, 2011. Retrieved December 16, 2007.
  2. ಪ್ರಿನ್ಸ್ ಸ್ಪೆನ್ಸರ್ Archived 2007-10-09 ವೇಬ್ಯಾಕ್ ಮೆಷಿನ್ ನಲ್ಲಿ., ಚಿಕಾಗೊ ಹ್ಯೂಮನ್ ರಿದಮ್ ಪ್ರೊಜೆಕ್ಟ್ ೨೦೦೭. ೨೦೦೭ರ ಡಿಸೆಂಬರ್‌‌ ೧೬ರಂದು ಸಂಪರ್ಕಿಸಲಾಯಿತು.
  3. Sarah Kaufman (December 17, 2006). "Tapping a Gold Mine of Motion". Washington Post. Retrieved December 16, 2007.
  4. ೪.೦ ೪.೧ "Grant Swift homepage". Archived from the original on 14 ಅಕ್ಟೋಬರ್ 2010. Retrieved 16 September 2010.
  5. "Dance: The rhythm of truth". March 21, 2007. Archived from the original on November 5, 2007. Retrieved December 16, 2007.

ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]