ವಿಷಯಕ್ಕೆ ಹೋಗು

ಟೋಕ್ಯೋ ಸ್ಟಾಕ್ ಎಕ್ಸ್‌ಚೇಂಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೋಕ್ಯೋ ಸ್ಟಾಕ್ ಎಕ್ಸ್‌ಚೇಂಜ್
東京証券取引所
ಟಿ‌ಎಸ್‌ಇ ತನ್ನ ಮೂಲ ಕಂಪನಿಯಾದ ಜಪಾನ್ ಎಕ್ಸ್ಚೇಂಜ್ ಗ್ರೂಪ್‌ನ ಲೋಗೋವನ್ನು ಬಳಸುತ್ತದೆ.
ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್‌ನ ಮುಂಭಾಗ
ಪ್ರಕಾರಷೇರು ವಿನಿಮಯ
ಸ್ಥಳಟೋಕ್ಯೋ, ಜಪಾನ್
ನಿರ್ದೇಶಾಂಕಗಳು35°40′53″N 139°46′40″E / 35.68139°N 139.77778°E / 35.68139; 139.77778
ಸ್ಥಾಪನೆಮೇ 15, 1878; 53449 ದಿನ ಗಳ ಹಿಂದೆ (1878-೦೫-15) (ಟೋಕಿಯೋ ಕಬುಶಿಕಿ ಟೋರಿಹಿಕಿಜೋ ಆಗಿ)
ಮೇ 16, 1949 (1949-05-16) (as Tokyo Stock Exchange)
ಮಾಲೀಕಜಪಾನ್ ಎಕ್ಸ್‌ಚೇಂಜ್ ಗ್ರೂಪ್
ಮುಖ್ಯ ವ್ಯಕ್ತಿಗಳು
  • ತೈಜೊ ನಿಶಿಮುರೊ (ಅಧ್ಯಕ್ಷರು)
  • ಅತ್ಸುಶಿ ಸೈಟೊ (ಅಧ್ಯಕ್ಷ ಮತ್ತು ಸಿ‌ಇ‌ಒ)
  • ಯಸುವೊ ಟೊಬಿಯಾಮಾ (ಎಂ‌ಡಿ, ಸಿ‌ಒ‌ಒ & ಸಿ‌ಎಫ್‌ಒ)
ಚಲಾವಣೆಯ ನಾಣ್ಯ/ಹಣಜಪಾನೀಸ್ ಯೆನ್
No. of listings೩, ೮೯೯(೨೧ ಆಗಸ್ಟ್ ೨೦೨೩)
ಮಾರುಕಟ್ಟೆ ಬಂಡವಾಳಯು‌ಎಸ್ $ ೫.೯೦೪ ಟ್ರಿಲಿಯನ್ (ನವೆಂಬರ್ ೨೦೨೩)[]
ಸೂಚ್ಯಂಕಗಳುNikkei ೨೨೫
TOPIX
ಜಾಲತಾಣjpx.co.jp

ಟೋಕ್ಯೋ ಸ್ಟಾಕ್ ಎಕ್ಸ್‌ಚೇಂಜ್ ಆನ್ನು ಸಂಕ್ಷಿಪ್ತವಾಗಿ ತೋಶೊ ಅಥವಾ ಟಿಎಸ್ಇ ಎಂದು ಕರೆಯಲಾಗುತ್ತದೆ. ಇದು ಜಪಾನ್‌ನ ಟೋಕಿಯೊದಲ್ಲಿರುವ ಒಂದು ಷೇರು ವಿನಿಮಯ ಕೇಂದ್ರವಾಗಿದೆ. ಇದರ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳದಿಂದ ಈ ಸ್ಟಾಕ್ ಎಕ್ಸ್‌ಚೇಂಜ್ ಜಗತ್ತಿನ ನಾಲ್ಕನೆಯ ದೊಡ್ಡದ್ದಾದ ಸ್ಟಾಕ್ ಎಕ್ಸ್‌ಚೇಂಜ್ ಎಂದು ಹೆಸರುವಾಸಿಯಾಗಿದೆ. ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್, ಪೂರ್ವ ಏಷ್ಯಾ ಮತ್ತು ಏಷ್ಯಾದ ದೊಡ್ಡ ಸ್ಟಾಕ್ ಎಕ್ಸ್‌ಚೇಂಜ್ ಆಗಿದೆ.[]

ಈ ವಿನಿಮಯವು ಜಪಾನ್ ಎಕ್ಸ್‌ಚೇಂಜ್ ಗ್ರೂಪ್ (ಜೆಪಿಎಕ್ಸ್)ನ ಒಡೆತನದಲ್ಲಿದೆ. ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್‌ಅನ್ನು ಒಸಾಕಾ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಕಂ, ಲಿಮಿಟೆಡ್‌ನೊಂದಿಗೆ ವಿಲೀನಗೊಳಿಸುವುದರಿಂದ ಜೆಪಿಎಕ್ಸ್ ರೂಪುಗೊಂಡಿತು.[] ವಿಲೀನ ಪ್ರಕ್ರಿಯೆಯು ಜುಲೈ ೨೦೧೨ ರಲ್ಲಿ ಪ್ರಾರಂಭವಾಯಿತು.[][] ಜೆಪಿಎಕ್ಸ್ ಅನ್ನು ಜನವರಿ ೧, ೨೦೧೩ ರಂದು ಪ್ರಾರಂಭಿಸಲಾಯಿತು.[][]

ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್‌ ಅನ್ನು ಒಂಬತ್ತು ನಿರ್ದೇಶಕರು, ನಾಲ್ಕು ಆಡಿಟರ್‌ಗಳು ಮತ್ತು ಎಂಟು ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಕಬುಶಿಕಿ ಗೈಷಾ (ಜಂಟಿ ಷೇರು ವಿನಿಮಯ ಕಂಪನಿ) ಎಂದು ಸಂಯೋಜಿಸಲಾಗಿದೆ. ಇದರ ಪ್ರದಾನ ಕಛೇರಿ ಕಬುಟೋಛೊ ಎಂಬ ಜಪಾನಿನಲ್ಲಿನ ಅತೀ ದೊಡ್ಡ ಆರ್ಥಿಕ ಜಿಲ್ಲೆಯಲ್ಲಿ ಸ್ಥಾಪನೆಯಾಗಿದೆ.

ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿನ ಷೇರುಗಳನ್ನು ಹೀಗೆ ಬೇರ್ಪಡಿಸಲಾಗಿದೆ: ಮೊದಲ ವಿಭಾಗವನ್ನು ದೊಡ್ಡ ಕಂಪನಿಗಳಿಗೆ, ಎರಡನೆಯ ವಿಭಾಗವನ್ನು ಮಧ್ಯಮ-ಗಾತ್ರದ ಕಂಪನಿಗಳಿಗೆ ಮತ್ತು ಮದರ್ಸ್ ಎಂಬ ವಿಭಾಗವನ್ನು ಉನ್ನತ ಬೆಳವಣಿಗೆಯ ಆರಂಭಿಕ ಕಂಪನಿಗಳಿಗೆ. ೯೪ ದೇಶೀಯ ಮತ್ತು ೧೦ ವಿದೇಶೀ ಭದ್ರತಾ ಕಂಪನಿಗಳು ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್ ವ್ಯಾಪಾರದಲ್ಲಿ ಭಾಗವಹಿಸುತ್ತಿದೆ.

ಪ್ರೆಸ್ ಕ್ಲಬ್

[ಬದಲಾಯಿಸಿ]

ಈ ವಿನಿಮಯದ ಪ್ರೆಸ್ ಕ್ಲಬ್, ಕಬುಟೊ ಕ್ಲಬ್ (兜倶楽部, ಕಬುಟೊ ಕುರಾಬು ) ಎಂದು ಕರೆಯಲ್ಪಡುತ್ತದೆ. ಇದು ಟಿಎಸ್‌ಇ ಕಟ್ಟಡದ ಮೂರನೇ ಮಹಡಿಯಲ್ಲಿದೆ. ಹೆಚ್ಚಿನ ಕಬುಟೊ ಕ್ಲಬ್ ಸದಸ್ಯರು ನಿಹಾನ್ ಕೀಜೈ ಶಿಂಬನ್ , ಕ್ಯೋಡೋ ನ್ಯೂಸ್ , ಜಿಜಿ ಪ್ರೆಸ್ , ಅಥವಾ ಬ್ಲೂಮ್‌ಬರ್ಗ್ ಎಲ್‌ಪಿ ಮತ್ತು ಸಿ‌ಎನ್‌ಬಿ‌ಸಿ ಯಂತಹ ವ್ಯಾಪಾರ ದೂರದರ್ಶನ ಪ್ರಸಾರಕರೊಂದಿಗೆ ಸಂಯೋಜಿತರಾಗಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾರ್ವಜನಿಕ ಕಂಪನಿಗಳು ತಮ್ಮ ವಾರ್ಷಿಕ ಖಾತೆಗಳನ್ನು ಬಿಡುಗಡೆ ಮಾಡಿದಾಗ ಕಬುಟೊ ಕ್ಲಬ್ ಹೆಚ್ಚು ಜನನಿಬಿಡವಾಗಿರುತ್ತದೆ.

ಗಂಟೆಗಳು

[ಬದಲಾಯಿಸಿ]

ವಿನಿಮಯದ ಸಾಮಾನ್ಯ ವ್ಯಾಪಾರ ಅವಧಿಗಳು ಶನಿವಾರ, ಭಾನುವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ ೯:೦೦ ರಿಂದ ೧೧:೩೦ ರವರೆಗೆ ಮತ್ತು ೧೨:೩೦ ರಿಂದ ೩:೦೦ ರವರೆಗೆ ತೆರೆದಿರುತ್ತದೆ.[] ಈ ರಜಾದಿನಗಳಲ್ಲಿ ವಿನಿಮಯವು ಲಭ್ಯವಿರುವುದಿಲ್ಲ: ಹೊಸ ವರ್ಷದ ದಿನ , ಕಮಿಂಗ್ ಆಫ್ ಏಜ್ ಡೇ, ರಾಷ್ಟ್ರೀಯ ಸಂಸ್ಥಾಪನಾ ದಿನ , ವರ್ನಲ್ ವಿಷುವತ್ ಸಂಕ್ರಾಂತಿ ದಿನ , ಶೋವಾ ದಿನ , ಸಂವಿಧಾನದ ಸ್ಮಾರಕ ದಿನ , ಹಸಿರು ದಿನ , ಮಕ್ಕಳ ದಿನ , ಸಾಗರ ದಿನ , ವಯೋವೃದ್ಧರ ದಿನ ಗೌರವ , ಶರತ್ಕಾಲದ ವಿಷುವತ್ ಸಂಕ್ರಾಂತಿ , ಆರೋಗ್ಯ ಮತ್ತು ಕ್ರೀಡಾ ದಿನ , ಸಂಸ್ಕೃತಿ ದಿನ , ಕಾರ್ಮಿಕ ಥ್ಯಾಂಕ್ಸ್ಗಿವಿಂಗ್ ದಿನ , ಮತ್ತು ಅಲ್ಲಿನ ಚಕ್ರವರ್ತಿಯ ಜನ್ಮದಿನ.[]

ಷೇರು ಮಾರುಕಟ್ಟೆ

[ಬದಲಾಯಿಸಿ]

ಮೊದಲ, ಎರಡನೆಯ ಮತ್ತು ಇತರ ವಿಭಾಗಗಳು (ಏಪ್ರಿಲ್ ೪, ೨೦೨೨ ರವರೆಗೆ)

[ಬದಲಾಯಿಸಿ]
ಏಪ್ರಿಲ್ ೨೦೨೨ ರವರೆಗಿನ ಹಳೆಯ ಮಾರುಕಟ್ಟೆ ವಿಭಾಗಗಳು (ಜಪಾನೀಸ್‌ನಲ್ಲಿ)

ಏಪ್ರಿಲ್ ೪, ೨೦೨೨ ರವರೆಗೆ, ಕಾರ್ಪೊರೇಟ್ ಷೇರುಗಳನ್ನು ಐದು ಮಾರುಕಟ್ಟೆ ವಿಭಾಗಗಳಲ್ಲಿ ಟೋಕಿಯೊ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿಮಾಡಲಾಗಿದೆ : ಮೊದಲ ವಿಭಾಗವು ೧೯೪೯ ರಲ್ಲಿ ಟೋಕಿಯೊ ಸ್ಟಾಕ್ ಎಕ್ಸ್‌ಚೇಂಜ್ ಮರು-ಸ್ಥಾಪಿತವಾದಾಗ ಪ್ರಾರಂಭವಾಯಿತು ಮತ್ತು ಮುಖ್ಯವಾಗಿ ದೊಡ್ಡ ಕಂಪನಿಗಳನ್ನು ಒಳಗೊಂಡಿದೆ.[] ಎರಡನೇ ವಿಭಾಗವು ೧೯೬೧ ರಲ್ಲಿ ಪ್ರಾರಂಭವಾಯಿತು ಮತ್ತು ಮುಖ್ಯವಾಗಿ ಮಧ್ಯಮ ಗಾತ್ರದ ಕಂಪನಿಗಳನ್ನು ಒಳಗೊಂಡಿದೆ. ಜಾಸ್‌ಡಾಕ್‌ (೧೯೯೧ ರಲ್ಲಿ ಸ್ಥಾಪಿಸಲಾಯಿತು. ೨೦೧೦ ರಲ್ಲಿ ಒಸಾಕಾ ಸ್ಟಾಕ್ ಎಕ್ಸ್ಚೇಂಜ್ ಸ್ವಾಧೀನಪಡಿಸಿಕೊಂಡಿತು ಮತ್ತು ೨೦೧೩ ರಲ್ಲಿ ಟಿಎಸ್‌ಇಗೆ ಸೇರಿತು) ಮತ್ತು ಮದರ್ಸ್ (ಉನ್ನತ ಬೆಳವಣಿಗೆಯ ಮತ್ತು ಉದಯೋನ್ಮುಖ ಷೇರುಗಳ ಮಾರುಕಟ್ಟೆ, ೧೯೯೯ ರಲ್ಲಿ ಟಿಎಸ್‌ಇ ನಲ್ಲಿ ಸ್ಥಾಪಿಸಲಾಯಿತು) ಎಂಬ ಎರಡು ಉದಯೋನ್ಮುಖ ಕಂಪನಿಗಳನ್ನು ಮತ್ತು ಟೋಕಿಯೋ ಪ್ರೊ ಮಾರುಕಟ್ಟೆಯನ್ನು ೨೦೦೯ ರಲ್ಲಿ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಜೊತೆಗೆ ಸಣ್ಣ ಕಂಪನಿಗಳಿಗೆ ಪರ್ಯಾಯ ಹೂಡಿಕೆ ಮಾರುಕಟ್ಟೆಯಾಗಿ ( ಟೋಕಿಯೋ ಎ‌ಐ‌ಎಂ) ಸ್ಥಾಪಿಸಲಾಯಿತು .

ಮಾರ್ಚ್ ೩೧, ೨೦೨೨ ರಂತೆ ಟೋಕಿಯೊ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಒಟ್ಟು ೩,೮೨೧ ಕಂಪನಿಗಳು ಪಟ್ಟಿಮಾಡಲ್ಪಟ್ಟಿವೆ.[೧೦]

ಟಿಎಸ್‌ಇ ನಲ್ಲಿ ಮಾಡಲಾದ ಪಟ್ಟಿ (ಮಾರ್ಚ್ ೩೧, ೨೦೨೨ ರಂತೆ)
ವ್ಯಾಪಾರದ ಗಾತ್ರ ಮಾರುಕಟ್ಟೆಯ ಹೆಸರು ಒಟ್ಟು (ಸಾಗರೋತ್ತರ

ಕಂಪನಿಗಳು)

ದೊಡ್ಡದು ಮುಖ್ಯ ಮಾರುಕಟ್ಟೆ

(本則市場)

ಮೊದಲನೇ ವಿಭಾಗ(市場第一部) ೨,೧೭೬ (೧)
ಮಧ್ಯಮ ಗಾತ್ರ ಎರಡನೇ ವಿಭಾಗ (市場第二部) ೪೭೫ (೧)
ಬೆಳಯುತ್ತಿರುವವು ಮದರ್ಸ್ (マザーズ) ೪೩೨ (೩)
ಜಸ್‌ಡಾಕ್ ಸ್ಟಾಂಡರ್ಡ್ (スタンダード) ೬೫೨ (೧)
ಬೆಳವಣಿಗೆ (グロース) ೩೪ (೦)
ಸಣ್ಣದು ಟೋಕ್ಯೋ ಪ್ರೊ ಮಾರ್ಕೆಟ್ ೫೨ (೦)
ಒಟ್ಟು ೩,೮೨೧ (೬)

ಏಪ್ರಿಲ್ ೪, ೨೦೨೨ ರಿಂದ ಪ್ರೈಮ್, ಸ್ಟ್ಯಾಂಡರ್ಡ್ ಮತ್ತು ಗ್ರೋತ್ ಮಾರುಕಟ್ಟೆಗಳು

[ಬದಲಾಯಿಸಿ]
ಏಪ್ರಿಲ್ ೪, ೨೦೨೨ ರಂದು ಹೊಸ ಮಾರುಕಟ್ಟೆ ವಿಭಾಗದ ರಚನೆಗೆ ಪರಿವರ್ತನೆಗೊಳ್ಳುವ ಕಂಪನಿಗಳ ಸಂಖ್ಯೆ (ಜಪಾನೀಸ್‌ನಲ್ಲಿ)

ಏಪ್ರಿಲ್ ೪, ೨೦೨೨ ರಿಂದ, ಮಾರುಕಟ್ಟೆಯ ವಿಭಾಗಗಳನ್ನು ಪ್ರೈಮ್ , ಸ್ಟ್ಯಾಂಡರ್ಡ್ ಮತ್ತು ಗ್ರೋತ್ ಮಾರುಕಟ್ಟೆ ಎಂಬ ವಿಭಾಗಗಳಾಗಿ ಪುನರ್ರಚಿಸಲಾಗಿದೆ. ಮಾರುಕಟ್ಟೆ ದ್ರವ್ಯತೆ , ಕಾರ್ಪೊರೇಟ್ ಆಡಳಿತ ಮತ್ತು ಇತರ ಮಾನದಂಡಗಳಿಂದ ಪ್ರತ್ಯೇಕಿಸಲಾಗಿದೆ. ಕಂಪನಿಗಳು ತಮ್ಮ ಹೊಸ ವಿಭಾಗವನ್ನು ಸೆಪ್ಟೆಂಬರ್ ಮತ್ತು ಡಿಸೆಂಬರ್ ೨೦೨೧ ರ ನಡುವೆ ಸ್ವಯಂಪ್ರೇರಣೆಯಿಂದ ಆಯ್ಕೆ ಮಾಡಿಕೊಂಡವು ಮತ್ತು ಫಲಿತಾಂಶಗಳನ್ನು ಜನವರಿ ೧೧, ೨೦೨೨ ರಂದು ಪ್ರಕಟಿಸಲಾಯಿತು. ಮೊದಲ ವಿಭಾಗದಿಂದ, ೧೮೪೧ ಕಂಪನಿಗಳು ಪ್ರಧಾನ ಮಾರುಕಟ್ಟೆಗೆ ಪರಿವರ್ತನೆಗೊಂಡವು ಮತ್ತು ೩೪೪ ಕಂಪನಿಗಳು ಸ್ಟ್ಯಾಂಡರ್ಡ್‌ಗೆ ಪರಿವರ್ತನೆಗೊಂಡವು. ಎರಡನೇ ವಿಭಾಗದಲ್ಲಿ ಎಲ್ಲಾ ೪೭೪ ಕಂಪನಿಗಳು ಸಹ ಸ್ಟ್ಯಾಂಡರ್ಡ್ ಮಾರುಕಟ್ಟೆಗೆ ಪರಿವರ್ತನೆಗೊಂಡವು. ಜಾಸ್‌ಡಾಕ್ ನಿಂದ , ಅದರ ಸ್ಟ್ಯಾಂಡರ್ಡ್ ಉಪವಿಭಾಗದಲ್ಲಿರುವ ಎಲ್ಲಾ ೬೫೮ ಕಂಪನಿಗಳನ್ನು ಸ್ಟ್ಯಾಂಡರ್ಡ್ ಮಾರುಕಟ್ಟೆಗೆ ಪರಿವರ್ತಿಸಲಾಯಿತು ಮತ್ತು ಗ್ರೋತ್ ಉಪವಿಭಾಗದಲ್ಲಿರುವ ಎಲ್ಲಾ ೩೬ ಕಂಪನಿಗಳು ಮದರ್ಸ್ ವಿಭಾಗದಲ್ಲಿ ಎಲ್ಲಾ ೪೨೪ ಕಂಪನಿಗಳೊಂದಿಗೆ ಬೆಳವಣಿಗೆಯ ಮಾರುಕಟ್ಟೆಗೆ ಪರಿವರ್ತನೆಗೊಂಡವು .

೨೧ ಆಗಸ್ಟ್ ೨೦೨೩ ರಂತೆ ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಒಟ್ಟು ೩,೮೯೯ ಕಂಪನಿಗಳು ಪಟ್ಟಿಮಾಡಲ್ಪಟ್ಟಿವೆ.

ಟಿಎಸ್‌ಇ ನಲ್ಲಿ ಮಾಡಲಾದ ಪಟ್ಟಿ (೨೧ ಆಗಸ್ಟ್ ೨೦೨೩ ರಂತೆ)
ವ್ಯಾಪಾರದ ಗಾತ್ರ ಮಾರುಕಟ್ಟೆಯ ಹೆಸರು ಒಟ್ಟು (ಸಾಗರೋತ್ತರ
ಕಂಪನಿಗಳು)
ದೊಡ್ಡ ಪ್ರೈಮ್ ಮಾರುಕಟ್ಟೆ(プライム市場) ೧,೮೩೪ (೧)
ಮಧ್ಯಮ ಗಾತ್ರ ಸ್ಟಾಂಡರ್ಡ್ ಮಾರುಕಟ್ಟೆ (スタンダード市場) ೧,೪೪೦ (೨)
ಬೆಳೆಯುತ್ತಿರುವವು ಗ್ರೋವ್ತ್ ಮಾರ್ಕೆಟ್ (グロース市場) ೫೪೬ (೩)
ಸಣ್ಣ ಟೋಕ್ಯೋ ಪ್ರೊ ಮಾರುಕಟ್ಟೆ ೭೯ (೦)
ಒಟ್ಟು ೩,೮೯೯ (೬)

ಯುದ್ಧಪೂರ್ವ ಇತಿಹಾಸ

[ಬದಲಾಯಿಸಿ]

ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್ ಅನ್ನು ಮೇ ೧೫, ೧೮೭೮ ರಂದು ಟೋಕಿಯೋ ಕಬುಷಿಕಿ ಟೊರಿಹಿಕಿಜೊ ಎಂದು ಆಗಿನ ಹಣಕಾಸು ಸಚಿವ ಒಕುಮಾ ಶಿಗೆನೊಬು ಮತ್ತು ಬಂಡವಾಳಶಾಹಿ ವಕೀಲ ಶಿಬುಸಾವ ಎಇಚಿ ನಿರ್ದೇಶನದಲ್ಲಿ ಸ್ಥಾಪಿಸಲಾಯಿತು.[೧೧] ಈ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವ್ಯಾಪಾರ ಜೂನ್ ೧, ೧೮೭೮ ರಂದು ಪ್ರಾರಂಭವಾಯಿತು. ೧೯೪೩ರಲ್ಲಿ, ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಜಪಾನಿ ಸಿಟಿಗಳಲ್ಲಿದ್ದ ಇತರೆ ಸ್ಟಾಕ್ ಎಕ್ಸ್‌ಚೇಂಜ್‌ಗಳೊಂದಿಗೆ ಸಂಯೋಜನೆಗೊಂಡು ಒಂದು ಸ್ಟಾಕ್ ಎಕ್ಸ್‌ಚೇಂಜ್ಅನ್ನು ರೂಪಿಸಲಾಯಿತ್ತು. ನಾಗಸಾಕಿ ಬಾಂಬ್ ಘಟನೆಯ ನಂತರ ಸಂಯೋಜಿತ ಸ್ಟಾಕ್ ಎಕ್ಸ್‌ಚೇಂಜ್‌ಗಳನ್ನು ಮುಚ್ಚಲಾಯಿತು ಮತ್ತು ಸ್ವಲ್ಪ ದಿನಗಳ ನಂತರ ಮರುಸಂಘಟನೆಯಾಯಿತು.

ಯುದ್ಧಾನಂತರದ ಇತಿಹಾಸ

[ಬದಲಾಯಿಸಿ]
JPX ವಿಲೀನದ ಮೊದಲು ಬಳಸಲಾದ ಲೋಗೋ


ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್ ಮೇ ೧೬, ೧೯೪೯ ರಂದು ಹೊಸ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಕಾಯಿದೆಗೆ ಅನುಸಾರವಾಗಿ ತನ್ನ ಪ್ರಸ್ತುತ ಜಪಾನಿನ ಹೆಸರಿನಲ್ಲಿ ಪುನಃ ತೆರೆದಿತ್ತು.[೧೨] ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್‌ನ ವ್ಯಾಪಾರ ೧೯೮೩ ರಿಂದ ೧೯೯೦ ರ ವರೆಗೂ ಅಭೂತಪೂರ್ವವಾಗಿತ್ತು. ೧೯೯೦ ರಲ್ಲಿ ವಿಶ್ವದ ೬೦% ಸ್ಟಾಕ್ ಮಾರುಕಟ್ಟೆ ಬಂಡವಾಳದ ಪಾಲಿಗೆ ಕಾರಣವಾಗಿತ್ತು. ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್‌ ೧೯೩೧ ರಲ್ಲಿ ಕಟ್ಟಿದ್ದ ಕಟ್ಟಡದ ಬದಲಿಗೆ ಹೊಸ ಕಟ್ಟಡವನ್ನು ಮೇ ೨೩, ೧೯೮೮ ರಂದು ತೆರೆಯಲಾಯಿತು ಮತ್ತು ಇದರ ವ್ಯಾಪಾರಿ ಮಹಡಿಯನ್ನು ಎಪ್ರಿಲ್ ೩೦, ೧೯೯೯ ರಂದು ಮುಚ್ಚಲಾಯಿತು. ಕಾರಣ ಆಗಿನ ಎಲ್ಲಾ ಎಕ್ಸ್‌ಚೇಂಜ್‌ನ ವ್ಯವಹಾರಗಳನ್ನು ಎಲೆಕ್ಟ್ರಾನಿಕ್ ವ್ಯಾಪಾರಗಳಿಗೆ ಬದಲಾಯಿಸುವುದಾಗಿತ್ತು.[೧೩] ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಟಿಎಸ್‌ಇ ಏರೋಸ್ ಎಂಬ ಹೊಸ ಸೌಲಭ್ಯವನ್ನು ಮೇ ೯, ೨೦೦೦ ರಂದು ಪ್ರಾರಂಭಿಸಿದರು. ೨೦೧೦ ರಲ್ಲಿ, ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್ ಅದರ ಟಿಎಸ್‌ಇ ಏರೋಸ್ ವ್ಯಾಪಾರಿ ಕೇಂದ್ರವನ್ನು ಪ್ರಾರಂಭಿಸಿತು. ೨೦೦೧ ರಲ್ಲಿ, ಟೋಕಿಯೋ ಸ್ಟಾಕ್ ಎಕ್ಸ್‌ಚೆಂಜ್ ಸ್ಟಾಕ್ ಕಂಪನಿಯಾಗಿ ಪುನರ್ರಚನೆಯಾಗಿತ್ತು. ಈ ಮೊದಲು ಇದು ಸಂಘಟಿತ ಸಂಸ್ಥೆಯಾಗಿ ರಚನೆಯಾಗಿತ್ತು ಮತ್ತು ಅದರ ಸದಸ್ಯರೇ ಅದರ ಷೇರುದಾರರಾಗಿದ್ದರು.[೧೪]

ತಂತ್ರಜ್ಞಾನ ಸಮಸ್ಯೆಗಳು

[ಬದಲಾಯಿಸಿ]

ನವೆಂಬರ್ ೧, ೨೦೦೫ ರಂದು ಈ ಸ್ಟಾಕ್ ಎಕ್ಸ್‌ಚೇಂಜ್ ಕೇವಲ ೯೦ ನಿಮಿಷಗಳ ಕಾಲ ಕೆಲಸ ಮಾಡಿತ್ತು.[೧೫] ಆಗ ಹೊಸದಾಗಿ ಅಳವಡಿಸಲಾಗಿದ್ದ ವ್ಯವಹಾರ ವ್ಯವಸ್ಥೆಯ ದೋಷಗಳೇ ಅದಕ್ಕೆ ಕಾರಣವಾಗಿತ್ತು.[೧೬] ಈ ಹೊಸದಾಗಿ ಅಳವಡಿಸಲಾಗಿದ್ದ ವ್ಯವಹಾರ ವ್ಯವಸ್ಥೆಯನ್ನು ಫುಜಿತ್ಸು ಎಂಬ ಒಂದು ಕಂಪನಿಯು ತಯಾರಿಸಿತ್ತು.[೧೭] ಆದರೆ ಈ ವ್ಯವಹಾರ ವ್ಯವಸ್ಥೆಯು ಹೆಚ್ಚಿನ ವ್ಯಾಪಾರ ಸಂಪುಟಗಳನ್ನು ನಿಭಾಯಿಸಲು ಸಹಾಯ ಮಾಡುವಂತಹ ವ್ಯವಸ್ಥೆಯಾಗಿತ್ತು. ಈ ವ್ಯಪಾರದಲ್ಲಿನ ತಡೆ ಇಡಿ ಇತಿಹಾಸದಲ್ಲೆ ಟೋಕಿಯೋ ಕಂಡ ಕೆಟ್ಟ ದಿನಗಳಾಗಿತ್ತು.[೧೮] ವ್ಯಾಪಾರವನ್ನು ನಾಲ್ಕು ಗಂಟೆಗಳ ಕಾಲದವರೆಗೆ ಸ್ಥಗಿತಗೊಳಿಸಲಾಯಿತು.[೧೬][೧೯][೨೦][೨೧][೨೨][೨೩][೨೪][೨೫]

ಮೈತ್ರಿಗಳು

[ಬದಲಾಯಿಸಿ]

ಲಂಡನ್ ಸ್ಟಾಕ್ ಎಕ್ಸ್ಚೇಂಜ್ (ಎಲ್ಎಸ್ಇ) ಮತ್ತು ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಜಂಟಿಯಾಗಿ ವ್ಯಾಪಾರ ಉತ್ಪನ್ನಗಳು ಮತ್ತು ಪಾಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರಲ್ಲಿ ಮುಂದುವರೆದಿದ್ದಾರೆ.[೨೬][೨೭] ಇದು ಅಂತರಾಷ್ಟ್ರಿಯ ಮಟ್ಟದಲ್ಲಿ ಸ್ಪರ್ಧೆಯನ್ನು ಹುಟ್ಟುಹಾಕಿದೆ. ಜುಲೈ ೨೦೦೮ ರಲ್ಲಿ ಲಂಡನ ಸ್ಟಾಕ್ ಎಕ್ಸ್ಚೇಂಜ್ ಮತ್ತು ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಒಂದು ಹೊಸ ಜಂಟಿಯನ್ನು ಘೋಷಿಸಿತು. ಈ ಜಂಟಿಯು ಎಲ್ಎಸ್ಇ ರವರ ಪರ್ಯಾಯ ಹೂಡಿಕಾ ಮಾರುಕಟ್ಟೆಯ ಮೇಲೆ ಆಧಾರಿತವಾಗಿರುತ್ತದೆ.[೨೮][೨೯] [೩೦]

ಉಲ್ಲೇಖಗಳು

[ಬದಲಾಯಿಸಿ]
  1. "Market Statistics – January 2024 – World Federation of Exchanges". Focus.world-exchanges.org.
  2. ೨.೦ ೨.೧ "News from OSE". Japan Exchange Group (in ಇಂಗ್ಲಿಷ್). Archived from the original on 2023-08-25. Retrieved 2023-08-25.
  3. "Company Profile - Tokyo Stock Exchange". Japan Exchange Group (in ಇಂಗ್ಲಿಷ್). Retrieved 2023-08-25.
  4. "Japan approves merger of Tokyo and Osaka exchanges". BBC News. ಜುಲೈ 5, 2012. Archived from the original on ಜುಲೈ 6, 2012. Retrieved ಜುಲೈ 7, 2012.
  5. "Company Profile - Osaka Exchange". Japan Exchange Group (in ಇಂಗ್ಲಿಷ್). Retrieved 2023-08-25.
  6. Fukuyama, A. (ಜನವರಿ 14, 2012). "Tokyo Commodity Exchange to defer merger with Japan Exchange". The Asahi Shimbun. The Asahi Shimbun Company. Archived from the original on ನವೆಂಬರ್ 1, 2012. Retrieved ನವೆಂಬರ್ 8, 2012.
  7. Market Hours, Tokyo Securities Exchange via Wikinvest
  8. "TSE : Calendar". Archived from the original on 2010-12-26. Retrieved 2010-10-07.
  9. www.jpx.co.jp/english/equities/market-restructure/market-segments/index.html
  10. "Number of Listed Companies/Shares". Japan Exchange Group (in ಇಂಗ್ಲಿಷ್). Retrieved 2023-08-25.
  11. "History".
  12. Launch of "arrowhead", the Next-Generation Equity/CB Trading System -The Tokyo Market enters the Millisecond World with "arrowhead", Jan. 2, 2010 Archived March 19, 2011, ವೇಬ್ಯಾಕ್ ಮೆಷಿನ್ ನಲ್ಲಿ.
  13. Yasu, Mariko (2007-06-15). "Tokyo Stock Exchange Buys 4.99% of Singapore Exchange (Update2)". Bloomberg. Retrieved 2010-07-10.
  14. Ku, Daisy (July 29, 2008). "London bourse outlines framework for Tokyo JV | Reuters". Uk.reuters.com. Archived from the original on 2009-01-13. Retrieved 2010-07-10.
  15. "Tokyo stock exchange halts trading in worst outage since 1999". Financial Times. October 1, 2020. Archived from the original on 2022-12-10. Retrieved October 1, 2020.
  16. ೧೬.೦ ೧೬.೧ Fujitsu execs take pay cut after Tokyo exchange crash, 25th November 2005
  17. Fat fingered typing costs a trader's bosses £128m
  18. After Panic, Tokyo Market Rebounds, The New York Times, January 19, 2006
  19. Tokyo Exchange Struggles With Snarls in Electronics NY Times, December 13, 2005
  20. "What's Going on at the Tokyo Stock Exchange - Seeking Alpha". Seeking Alpha. December 15, 2005. Retrieved 2010-07-10.
  21. Tokyo Stock Exchange admits error in Mizuho trade botch-up, 12 December 2005
  22. Mizuho Says Trader Error to Cost It at Least $224 Mln (Update5), Bloomberg, December 9, 2005
  23. "archives". Taipei Times. 2005-12-10. Retrieved 2010-07-31.
  24. "Tokyo Stock Exchange plans cash settlement in Mizuho fiasco - report". Forbes.com. November 12, 2005. Archived from the original on March 11, 2007. Retrieved 2010-07-10.
  25. "Botched stock trade costs Japan firm $225M - Business - World business - NBC News". NBC News. 2005-12-14. Retrieved 2010-07-10.
  26. "Japan's Tokyo Stock Exchange suffers its worst outage ever". CNN. October 1, 2020. Retrieved October 1, 2020.
  27. "Tokyo Stock Exchange halts trading for the entire day in its biggest glitch ever as hardware outage freezes buying and selling". South China Morning Post. October 1, 2020. Retrieved October 1, 2020.
  28. "Tokyo stock exchange trading halted for the day due to technical problem". The Guardian. October 1, 2020. Retrieved October 1, 2020.
  29. "Tokyo trading halted for rest of Thursday due to hardware failure". The Japan Times. October 1, 2020. Retrieved October 1, 2020.
  30. "Tokyo Stock Exchange Resumes Trading After Daylong Shutdown". The Wall Street Journal. October 2, 2020. Retrieved February 13, 2022.