ಟೊರಾಂಟೋನಗರದ ಸ್ಟ್ರೀಟ್ ಕಾರ್ ಗಳು

ವಿಕಿಪೀಡಿಯ ಇಂದ
Jump to navigation Jump to search
'ಡಂಡಾಸ್ ವೆಸ್ಟ್ ಸ್ಟ್ರೀಟ್ ಕಾರ್ ತಾಣ,ಹಾಗೂ,ಸಬ್ವೇ ರೈಲ್ವೆ ಸ್ಟೇಷನ್'

ಪಶ್ಚಿಮ ಭೂವಲಯದ ಉತ್ತರ ಅಮೆರಿಕದ ಉತ್ತರಭಾಗದಲ್ಲಿ ವಿರಾಜಮಾನವಾಗಿರುವ ಸ್ವಚ್ಛ ಪರಿಸರದ ಕೆನಡಾದೇಶದ ಅತಿ ಬಿಡುವಿಲ್ಲದ ಉದ್ಯಮಗಳ ರಾಜನೆಂದು ಕರೆಸಿಕೊಳ್ಳುವ ಟೊರಾಂಟೋ ನಗರದ ಜನರ ಅತಿ ಮೆಚ್ಚ್ಚಿನ ಭೇಟಿಯ ಸ್ಥಳಗಳಲ್ಲೊಂದು. ಅತ್ಯಂತ ಸ್ವಚ್ಛಪರಿಸರದ ಟೊರಂಟೋನಗರದ 'ಸ್ಟ್ರೀಟ್ ಕಾರ್ ವಾಹನ ಸಂಚಾರ ವ್ಯವಸ್ಥೆ' ಬಲು ಜನರಿಗೆ ಮುದಕೊಡುವ ತಾಣ. ಒಟ್ಟು ೧೧ ರಸ್ತೆ ದಾರಿಯಲ್ಲಿ ಕ್ರಮಿಸುವ ವಾಹನಗಳು ಚಾಲ್ತಿಯಲ್ಲಿವೆ. ಇದರ ಹೆಸರು, 'ಟೊರಾಂಟೋ ಟ್ರಾನ್ಸಿಟ್ ಕಮೀಶನ್'.(TTC) ಎಂದು. [೧]ಉತ್ತರ ಅಮೆರಿಕದ ಅತಿ ದೊಡ್ಡ ಬಸ್ ಸಾರಿಗೆ ಕಂಪೆನಿಯೆಂದು ಪ್ರಸಿದ್ಧಿಪಡೆದ 'ಸ್ಟ್ರೀಟ್ ಕಾರ್ ಸಾರಿಗೆವ್ಯವಸ್ಥೆ' ಯಲ್ಲಿ ತೊಡಗಿರುವ ಗಾಡಿಗಳ ಸಂಖ್ಯೆ ಮತ್ತು ಪ್ರಯಾಣದ ದೂರ,ಮುಂತಾದ ಸೂಕ್ಷ್ಮಾತಿ ಸೂಕ್ಷ್ಮವಿವರಗಳನ್ನೂ ಗಣನೆಗೆ ತೆಗೆದುಕೊಂಡಿದ್ದಾರೆ. ಇವೆಲ್ಲಾ ಹೆಚ್ಚಾಗಿ ಜಲಾಶಯಗಳ, ಅಥವಾ ತೊರೆಗಳ ಹತ್ತಿರದಲ್ಲೇ ಯಾನಮಾಡುತ್ತವೆ ಅಂದರೆ, ಡೌನ್ ಟೌನ್ ಗಳ ಸಮೀಪದಲ್ಲಿ. ೧೯ ನೆಯ ಶತಮಾನದಲ್ಲೇ 'ಟೊರಾಂಟೋ ನಗರ ಪಿತೃಗಳು' ಅತ್ಯಂತ ಸುವ್ಯವಸ್ಥಿತವಾಗಿ 'ಸ್ಟ್ರೀಟ್ ಕಾರ್ ಗಳ ಮಾರ್ಗ'ಗಳನ್ನು ನಿಗದಿಮಾಡಿ ಚೆನ್ನಾಗಿ ಸ್ಥಾಪಿಸಿದ್ದಾರೆ. ಇವು ಕೇವಲ ರಸ್ತೆಯಲ್ಲಿ ಓಡುವ ಸ್ಟ್ರೀಟ್ ಕಾರ್ ವಾಹನಗಳಲ್ಲದೆ ನಗರದ ಸೌಂದರ್ಯಕ್ಕೆ ಕಳಸಪ್ರಾಯವಾಗಿವೆ. ಪ್ರಯಾಣಿಕರ ಮನಸ್ಸಿಗೆ ಮುದಕೊಡುವ, ಅವರ ಆದ್ಯತೆಯಂತೆ ತಕ್ಕ ಸ್ಥಳಗಳಲ್ಲಿ ನಿಲ್ಲಿಸುವ, ವೇಗ ಕಡಿಮೆಗೊಳಿಸಿ ಸುಲಭವಾಗಿ ಕೆಳಗಿಳಿಯಲುಇಳಿಯಲು ಅನುಕೂಲಮಾಡ್ಕೊಡುವ, ಹಲವು ವ್ಯವಸ್ಥೆಗಳು ಸ್ಟ್ರೀಟ್ ಕಾರ್ ಮಾದರಿಯಾಗಿವೆ.

ಟೊರಾಂಟೋ ಸಿಟಿ ಪಾಸ್[ಬದಲಾಯಿಸಿ]

'ಸ್ಟ್ರೀಟ್ ಕಾರ್ ನಿಲ್ದಾಣಕ್ಕೆ ಬಂದಿದೆ'

ಒಂದು ದಿನದ ಪಾಸ್ ಹಗ್ಗೆ ವಿವರಗಳು ಹೀಗಿವೆ : ರಜದ ದಿನಗಳು ಮತ್ತು ಹಬ್ಬದ ರಜದದಿನವೆಲ್ಲಾ ಸುತ್ತಾಡಬಹುದು ಒಬ್ಬ ವಯಸ್ಕರು, ಇಲ್ಲವೇ ಇಬ್ಬರು ದೊಡ್ಡವರ ಒಟ್ಟಿಗೆ ಇದ್ದು, ಮಕ್ಕಳ ಜೊತೆಗೆ ಸೇರಿಕೊಂಡು, ೧೯ ವರ್ಷಕ್ಕೆ ಮೀರಿರದ ಹುಡುಗರ ಜೊತೆ ಒಟ್ಟಿಗೆ ೬ ಜನಕ್ಕಿಂತಾ ಹೆಚ್ಛಿಗೆ ಇರದ ತರಹ ಮಾಡಿಕೊಂಡರೆ ೧೦.೫ ಡಾಲರ್ ಕ್ರಯದಲ್ಲಿ ದಿನಪೂರ್ತಿ ನಗರ ಪ್ರದಕ್ಷಿಣೆ ಮಾಡಬಹುದು.

ವಿಹಾರ ಸ್ಥಳಗಳು[ಬದಲಾಯಿಸಿ]

'ಟೊರಾಂಟೋನಗರ' ದ ಆಜುಬಾಜುಗಳ ಪ್ರೇಕ್ಷಣೀಯ ಸ್ಥಳಗಳಾದ, ಕಾಸಲೋಮ ಕ್ಯಾಸಲ್, ಟೊರಾಂಟೋ, ಸಿ. ಎನ್. ಟವರ್, ರಾಯಲ್ ಆಂಟೇರಿಯೊ ಮ್ಯೂಸಿಯೆಮ್, ಆಂಟೇರಿಯೊ ಸೈನ್ಸ್ ಸೆಂಟರ್, ಮತ್ತು ಟೊರಾಂಟೋ ಝೂ ಗಳಲ್ಲಿ, 'ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ', ಮತ್ತು, 'ಬಾಪ್ಸ್ ಸ್ವಾಮಿನಾರಾಯಣ್ ಮಂದಿರ್, ಟೊರಾಂಟೋ' ಗಳನ್ನು ಬಿಟ್ಟು ಬೇರೆ ಜಾಗಗಳು ಸುಮಾರಾಗಿ ಪೂರ್ವದಿಕ್ಕಿನಲ್ಲಿವೆ. ಲೇಕ್ ಆಂಟೇರಿಯೋ ನಗರದ ಹತ್ತಿರದಲ್ಲಿದೆ. ಅಟ್ಲಾಂಟ, ಕಾಲ್ಗರಿ, ವಿಕ್ಟೋರಿಯ, ಕ್ವಿಬೆಕ್, ನಯಾಗರ, ಮಾಂಟ್ರಿಯೆಲ್, ವ್ಯಾಂಕೂವರ್ ಮೊದಲಾದ ದೊಡ್ಡನಗರಗಳಿವೆ. ಹೊಸ ಆಧುನಿಕ ಸ್ಟ್ರೀಟ್ ಕಾರ್ ಗಳ ಓಡಾಟದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ೨೦೧೪ ರ ಆಗಸ್ಟ್ ತಿಂಗಳಿನಲ್ಲಿ ಅವು ಪ್ರಯಾಣಕ್ಕೆ ಸಿಗುತ್ತವೆ.[೨]

ವಿಶ್ವದ ಅನೇಕ ನಗರಗಳಲ್ಲಿ ಈ ವ್ಯವಸ್ಥೆಯಿದೆ[ಬದಲಾಯಿಸಿ]

  • ಅಟ್ಲಾಂಟಾ,
  • ಬಾಸ್ಟನ್
  • ಚಿಕಾಗೋ
  • ಹಾಲಿವುಡ್
  • ಹೂಸ್ಟನ್
  • ನ್ಯೂಯಾರ್ಕ್
  • ಫಿಲಡೆಲ್ಫಿಯಾ
  • ಸ್ಯಾನ್ ಫ್ರಾನ್ಸಿಸ್ ಕೋ
  • ಸಿಯಾಟಲ್
  • ದ. ಕ್ಯಾಲಿಫೋರ್ನಿಯಾ
  • ಟೊರಾಂಟೋ

ಉಲ್ಲೇಖಗಳು[ಬದಲಾಯಿಸಿ]

  1. TTC Street cars
  2. VIDEO TTC's new streetcars raise concerns with riders CBS News, Jun 11, 2014
  • ಸಿಟಿ ಪಾಸ್ ಬಗ್ಗೆ ಪೂರ್ಣ ಮಾಹಿತಿ :

Fares & Passes