ಬಾಪ್ಸ್ ಸ್ವಾಮಿನಾರಾಯಣ್ ಮಂದಿರ್, ಟೊರಾಂಟೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:APS6348.JPG
'ಬಾಪ್ಸ್ ಸ್ವಾಮಿನಾರಾಯಣ್ ಮಂದಿರ್, ಟೊರಾಂಟೋ, ಮಹಾದ್ವಾರ'(೨೦೧೨)

ಕೆನಡಾರಾಷ್ಟ್ರದ ರಾಜಧಾನಿ, ಟೊರಾಂಟೋನಗರದ ಹತ್ತಿರದ ಎಟೊಬಿಕಾಕ್(Etobicoke)ನಲ್ಲಿರುವ,[೧] BAPS '(ಬೋಚಸನ್),'ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥ'(Bochasanwasi Shree Akshar Purushottam Swaminarayan Sanstha),ಸ್ವಾಮಿತ್ವದ 'ಶ್ರೀ.ಪ್ರಮುಖ ಸ್ವಾಮಿ ಮಹಾರಾಜ್' ರವರ ಕರಕಮಲಗಳಿಂದ ೨೦೦೭ ರ, ಜುಲೈ, ೨೨ ರಂದು. (೧೦ ವರ್ಷಗಳನಂತರ),'ಅಕ್ಷರಧಾಮ' ದ ಸ್ಥಾಪನೆಮಾಡಲಾಯಿತು. ಶ್ರೀ.ಪ್ರಮುಖ ಸ್ವಾಮಿಗಳು ಬಾಪ್ಸ್ ಸಂಸ್ಥೆಯ ರುವಾರಿಗಳಾಗಿ ತಮ್ಮ ಜೀವನದ ಬಹುಮೂಲ್ಯ ಸಮಯವನ್ನು ಮುಡಿಪಾಗಿಟ್ಟಿದ್ದಾರೆ. ಈ 'ಅಕ್ಷರಧಾಮ'ದ ಆರಂಭೋತ್ಸವದ ಸಂಧರ್ಭದಲ್ಲಿ ಕೆನಡಾ ರಾಷ್ಟ್ರದ ಪ್ರಧಾನಿ, 'ಮಿ.ಸ್ಟೀಫನ್ ಹಾಪರ್', ಹಾಗೂ ಆಂಟೇರಿಯೋ ರಾಜ್ಯದ ಮುಖ್ಯಮಂತ್ರಿ, 'ಮಿ. ಡಾಲ್ಟನ್ ಮ್ಯಾಗಿಂಟಿ', ಫೆಡರಲ್ ವಿರೋಧ ಪಕ್ಷದ ನಾಯಕ, ಮಿ. ಸ್ಟೀಫನ್ ಡಿಯನ್, ಮತ್ತು ಭಾರತದ ರಾಯಭಾರಿ, ಶ್ರೀ.'ರಾಜಮಣಿ ಲಕ್ಷ್ಮೀನಾರಾಯಣ್', ಪಾಲ್ಗೊಂಡಿದ್ದರು. ೨ ಸಾವಿರಜನ ಕಾರೀಗರ್ ಗಳು ಪ್ರಾಚೀನ ವಾಸ್ತುಶಿಲ್ಪದ ಪರಂಪರಾಗತ ತತ್ವಗಳನ್ನು ಶ್ರದ್ಧೆಯಿಂದ ಪರಿಪಾಲಿಸುತ್ತಾ, ತಮ್ಮ ಶಿಲ್ಪದಲ್ಲಿ ಪ್ರಾವೀಣ್ಯತೆಯನ್ನು ಸ್ಥಾಪಿಸಿ, ಕೆನಡಾದೇಶದಲ್ಲಿ ಭಾರತೀಯ ಕಲೆ, ಸಂಸ್ಕೃತಿಯ ವೈಭವಗಳನ್ನು ಪ್ರದರ್ಶಿಸಿದರು. 'ಟರ್ಕಿಯ ಲೈಮ್ ಸ್ಟೋನ್,' ಮತ್ತು ಇಟಲಿಯ ಅಮೃತಶಿಲೆಗಳ ಬಳಕೆಯನ್ನು ಸಂಧರ್ಬೋಚಿತವಾಗಿ ಬಳಸಿ, ಕಟ್ಟಡನಿರ್ಮಾಣದ ಹಿರಿಮೆಯನ್ನು ಸ್ಥಾನೀಯಜನರು ಕೊಂಡಾಡುವಂತೆ ತಮ್ಮ ಯೋಗದಾನ ಮಾಡಿದ್ದಾರೆ. ಕಲಾಕೃತಿಯ ದೃಷ್ಟಿಯಿಂದ ಈಗಿನವರೆಗೆ ವಿಶ್ವದ ವಿವಿಧ ಭಾಗಗಳಲ್ಲಿ ನಿರ್ಮಾಣಗೊಂಡ ಅಕ್ಷರಧಾಮಗಳೆಲ್ಲಾ [೨] ವಿಭಿನ್ನವಾಗಿಯೂ, ವೈಶಿಷ್ಟ್ಯಪೂರ್ಣವಾಗಿಯೂ ಇದೆ. ಅದರಲ್ಲೂ ಟೊರಾಂಟೋನಗರದ ದೇಗುಲ ಅತ್ಯಂತ ನಯನಮನೋಹರವಾಗಿದೆ.

ಚಿತ್ರ:APS6335.JPG
'ಬಾಪ್ಸ್ ಸ್ವಾಮಿನಾರಾಯಣ್ ಮಂದಿರ್ ಕ್ಯಾಂಪಸ್ ನ ಪ್ರಮುಖ ದ್ವಾರ'

ಹವೇಲಿ[ಬದಲಾಯಿಸಿ]

ಚಿತ್ರ:APB6327.JPG
'ಹವೇಲಿ' ಹಾಗೂ 'ಬಾಪ್ಸ್ ಅಕ್ಷರ ಪುರುಷೋತ್ತಮ್ ಮಂದಿರ್'

ಗುಜರಾತ್ ನಲ್ಲಿ ಹಳೆಯ ಒಟ್ಟು ಕುಟುಂಬಗಳು ಜೊತೆಯಲ್ಲೇ ವಾಸಿಸುವ ಪುರಾತನ ಸಂಪ್ರದಾಯದ ಅವಿಭಾಜ್ಯಕುಟುಂಬದ ಮನೆಗಳು ಬಹಳ. ಅವನ್ನು 'ಹವೇಲಿಗಳು' ಎನ್ನುತ್ತಾರೆ. ಇವು ದೇಶದಾದ್ಯಂತ, ತಮಿಳುನಾಡು, ಕೇರಳ, ದಕ್ಷಿಣ ಕನ್ನಡ, ಆಂಧ್ರ, ಮಹಾರಾಷ್ಟ್ರ, ಉತ್ತರ ಭಾರತ, ಕಾಣಲು ಸಿಗುತ್ತವೆ. ಈ ಮಾದರಿಯ ಅತ್ಯುತ್ತಮ ಮರ-ಮುಟ್ಟುಗಳಿಂದ ನಿರ್ಮಿಸಿದ ಹವೇಲಿಯನ್ನು ಅಕ್ಷರಧಾಮದ ಆಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ ಎಡ ಪಾರ್ಷ್ವದಲ್ಲಿ ಕಾಣುತ್ತೇವೆ. ಇದು ಬಹು ಮಹತ್ವದ ಕುಸರಿಕೆಲಸಗಳನ್ನು ಒಳಗೊಂಡ 'ಮಬ್ಬು ಕಪ್ಪು ಕಮರಿಮರ'ದ ಬಹುಸುಂದರ ಕಲೆಯ ಗೂಡಾಗಿದೆ. ಟೀಕ್ ವುಡ್ ನಿಂದ ಕೊರೆದು ಕೆತ್ತಿದ ರಾಜಗೃಹಗಳು, ಹಲವಾರು ಸುಂದರ ನರ್ತಕಿಯರ ಅದ್ಭುತ ನರ್ತನ ಭಂಗಿಗಳು, ನರ್ತಿಸುವ ನವಿಲುಗಳು, ರಾಜಮುದ್ರೆಯಿಂದ ಗಂಭೀರವಾಗಿ ನಡೆಯುವ ಆನೆಗಳ ಸಾಲು, ಕಮಲ,ಸಂಪಿಗೆ,ಜಾಜಿ,ಮಲ್ಲಿಗೆ, ಮೊದಲಾದ ಸುಂದರ ಪುಷ್ಪಗಳು, ಮೊದಲಾದ ಪರಿಪರಿಯ ಮಾದರಿಯ ಪುತಳಿಗಳನ್ನು ಒಟ್ಟುಗೂಡಿಸಿ ರಚಿಸಿದ ಚಿತ್ತಾರ ಮನಮೋಹಕ.

ಭಾರತದಹೊರಗೆ, ಎರಡನೆಯದು[ಬದಲಾಯಿಸಿ]

ಟೊರಾಂಟೋನಗರದಲ್ಲಿ ನಿರ್ಮಾಣಗೊಂಡ ಅಕ್ಷರಧಾಮವು, ಭಾರತದ ಹೊರಗೆ ನಿರ್ಮಿಸಿರುವ ಭಾರಿ ಪ್ರಮಾಣದ ಸ್ವಾಮಿನಾರಾಯಣ ಮಂದಿರಗಳಲ್ಲಿ ಎರಡನೆಯದು. ಅಟ್ಲಾಂಟಾನಗರದ ದೇವಾಲಯ ಇದಕ್ಕಿಂತಾ ದೊಡ್ಡದಾಗಿದೆ. ಕೆನಡಾದೇಶದ ಮಂದಿರದ ವಿಸ್ತೀರ್ಣ, ೩೨ ಸಾವಿರ ಚದರ ಅಡಿಗಳ ವಿಸ್ತೀರ್ಣದ ಈ ಭವ್ಯ ದೇವಾಲಯ ಕೆನಡಾದೇಶದಲ್ಲೇ ಅತಿ ದೊಡ್ಡಮಂದಿರವೆಂದು ಹೆಸರಾಗಿದೆ. ೪೦ ಮಿಲಿಯನ್ ಕೆನಡಿಯನ್ ಡಾಲರ್ ವ್ಯಯದಿಂದ ಕೇವಲ ೧೮ ತಿಂಗಳುಗಳಲ್ಲಿಯೇ ನಿರ್ಮಾಣವಾದ ದೇವಾಲಯನಿರ್ಮಾಣ ಕಾರ್ಯದಲ್ಲಿ ಬೇರೆ ಸ್ವಾಮಿನಾರಾಯಣದೇವಾಲಯಗಳ ನಿರ್ಮಾಣಕಾರ್ಯದಲ್ಲಿ ಸಹಕಾರನೀಡಿದಂತೆ, ಸುಮಾರು ೪೦೦ ಜನಕ್ಕಿಂತಾ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರುಗಳು ಭಾಗವಹಿಸಿ ತಮ್ಮ ಅಮೂಲ್ಯ ಯೋಗದಾನಮಾಡಿದ್ದಾರೆ. 'ಇಂಡೋಕೆನೆಡಿಯನ್ ಹೆರಿಟೇಜ್ ಸಾಂಸ್ಕೃತಿಕ ವೈಭವ'ದ ಜೊತೆಗೂಡಿರುವ ಕಾರ್ಯ,ಟೊರಾಂಟೋನಗರದ 'ರಾಯಲ್ ಆಂಟೇರಿಯೋದ ವಸ್ತುಸಂಗ್ರಹಾಲಯ' (ROM)ದ ಭಾಗವಾಗಿ ಪರಿಗಣಿಸಲ್ಪಟ್ಟಿದೆ.

ಹಬ್ಬಹರಿದಿನಗಳ ಆಚರಣೆ[ಬದಲಾಯಿಸಿ]

ಚಿತ್ರ:64.jpg
'ಪ್ರಮುಖ ಸ್ವಾಮಿನಾರಾಯಣ ಮಂದಿರ್'

'ಸ್ವಾಮಿನಾರಾಯಣ ದೇವಾಲಯ'ದಲ್ಲಿ[೩] ಸ್ವಾಮಿನಾರಾಯಣ ಜಯಂತಿ,ರಾಮನವಮಿ, ಕೃಷ್ಣ ಜನ್ಮಾಷ್ಟಮಿ,ಶಿವರಾತ್ರಿ, ಹೋಳಿ, ಹನುಮದ್ಜಯಂತಿ,ಗಣೇಶ್ ಚತುರ್ಥಿ,ಮೊದಲಾದ ಹಬ್ಬಗಳನ್ನು ನಿಯಮಿತವಾಗಿ ಆಚರಿಸಲಾಗುತ್ತದೆ.

ಸ್ವಾಮಿನಾರಾಯಣ ಮಂದಿರ ತಲುಪಲು[ಬದಲಾಯಿಸಿ]

'ಸಬ್ ವೇ' ನಲ್ಲಿ ಹೋಗುವುದಾದರೆ, 'ಕಿಪ್ಲಿಂಗ್ ಸ್ಟೇಷನ್' ತಲುಪಿ, ಅಲ್ಲಿಂದ ೧೯೧ ಬಸ್ ನಲ್ಲಿ 'ನ್ಯಾಷನಲ್ ಹೈವೇ ೨೭' ರಲ್ಲಿ ನೇರವಾಗಿ ಪ್ರಯಾಣಿಸಿ,'ಹಂಬರ್ ಕಾಲೇಜ್ ಬುಲೆವಾರ್ಡ್ ನಿಲ್ದಾಣ' ದಲ್ಲಿ ಇಳಿಯಬೇಕು. ಅದೇ ಜಾಗದಲ್ಲಿ ೯೬-ಬಿ ಬಸ್ ಹತ್ತಿ,'ಹಂಬರ್ ಲೈನ್ ಮತ್ತು ಆಲ್ಬಿಯನ್ ಮಾರ್ಗದ ಬಸ್', ನಲ್ಲಿ ಪ್ರಯಾಣಿಸಬೇಕು. ಈ ಬಸ್, 'ಸ್ವಾಮಿನಾರಾಯಣ್ ಮಂದಿರ್' ನ ಮುಂದೆ ನಿಲ್ಲುತ್ತದೆ. ಎದುರಿಗೇ 'ಲೆವಿಸ್ ಸ್ಟ್ರಾಸ್' ಕೆನಡಾ (ಶಾಖೆ) ಯಿದೆ. 'ಫಿಂಚ್ ರೈಲ್ವೇ ಸ್ಟೇಷನ್' ನಲ್ಲಿ ಇಳಿದು ಬಸ್ ನಲ್ಲೂ ಬರಬಹುದು.

Visiting Hours[ಬದಲಾಯಿಸಿ]

  • 9.00 am-6.30pm. daily

Sacred Shrines remain closed[ಬದಲಾಯಿಸಿ]

  • 10.30am-11.30am,
  • 12noon-4pm
  • 5.30pm-6.30pm

Arti Ritual(ಆರತಿ)[ಬದಲಾಯಿಸಿ]

  • Shangar Arti : 7:am
  • Rajbhog Arti: 11:30am
  • Sandhya Arti: 6.30pm

Abhishek mandapam(ಅಭಿಷೇಕ ಮಂಟಪ)[ಬದಲಾಯಿಸಿ]

Mon -Fri :

  • 9:00am -12noon
  • 4:pm -7:pm

Sat and Sun :

  • 9:00am -7pm

ದೇವಾಲಯದೊಳಗೆ ನಡೆದುಕೊಳ್ಳುವ ಬಗ್ಗೆ[ಬದಲಾಯಿಸಿ]

  • ಪ್ರಮುಖ ಮಂದಿರ ಹಾಗೂ ಹವೇಲಿಯನ್ನು ಸಂದರ್ಶಿಸಲು ಹಣ ಕೊಡಬೇಕಿಲ್ಲ. ಮೊದಲು ಹವೇಲಿಯನ್ನು ನೋಡಿಬನ್ನಿ. ಇಲ್ಲಿ ಟೀಕ್ ವುಡ್ ಮತ್ತು ಮಾರ್ಬಲ್ ಬಳಸಿ ಸುಂದರ ಶಿಲ್ಪಕಲೆಯನ್ನು ಪ್ರದರ್ಶಿಸಿರುವುದರಿಂದ ಅಲ್ಲಿನ ವಸ್ತುಗಳನ್ನು ಮುಟ್ಟಬೇಡಿ * ಮೆಟ್ಟಿಲುಗಳನ್ನು ಹತ್ತುವಾಗ ಎಚ್ಚರದಿಂದಿರಿ.
  • ಪಾದರಕ್ಷೆಗಳನ್ನು ನಿಯಮಿತ ಜಾಗದಲ್ಲಿ ಬಿಡಿ.
  • ದೇವಸ್ಥಾನದ ಗೋಡೆಯ ಒಳಗೆ ಹೊರಗಡೆಯಿಂದ ತಂದ ಆಹಾರವಸ್ತುಗಳು, ತಂಬಾಕು, ಚ್ಯೂಯಿಂಗ್ ಗಮ್, ಡ್ರಿಂಕ್ಸ್, ನಿಶೇಧ.
  • ಹೆಣ್ಣುಮಕ್ಕಳು ಕಾಲುಗಳು ಹಾಗೂ ಭುಜವನ್ನು ಮುಚ್ಚಿರುವ ಹಾಗೆ ಉಡುಪು ಧರಿಸಿ.
  • ಮ್ಯೂಸಿಯೆಮ್ ಮತ್ತು ಮಂದಿರದಲ್ಲಿ ಗದ್ದಲ ಮಾಡಬೇಡಿ.
  • ಕಂಭಗಳು ಮತ್ತು ಗೋಡೆಗಳಮೇಲೆ ವಾಲಿ ಭಾರಬಿಡಬೇಡಿ.
  • ಸಾಕುಪ್ರಾಣಿಗಳನ್ನು ದೇವಸ್ಥಾನದಗೋಡೆಯ ಒಳಗೆ ತರಕೂಡದು.
  • ಧೂಮಪಾನ, ಸಿಗರೆಟ್, ಶರಾಬ್, ಎಲೆಅಡಿಕೆ, ದೇವಸ್ಥಾನದ ಗೋಡೆಯ ಒಳಗೆ ತರುವಂತಿಲ್ಲ.
  • ದೇವಸ್ಥಾನದ ಗೋಡೆಯ ಒಳಗೆ ವೀಡಿಯೋ, ಫೋಟೋ ತೆಗೆಯುವಂತಿಲ್ಲ.
  • ದೇವಸ್ಥಾನದ ಗೋಡೆಯ ಒಳಗೆ ಬಂದಕೂಡಲೆ ಮೊಬೈಲ್ ಆರಿಸಬೇಕು.
  • ದೇವಾಲಯಕ್ಕೆ ಬರುವ ಶ್ರದ್ಧಾಳುಗಳು ಪೂಜಾವಿಧಿಗಳ ಸಮಯದಲ್ಲಿ ಸ್ತ್ರೀಯರ ಹಾಗೂ ಪುರುಷರಿಗೆ ಮೀಸಲಾಗಿಟ್ಟ ಪ್ರತ್ಯೇಕ ಸ್ಥಳಗಳಲ್ಲೇ ಕುಳಿತುಕೊಳ್ಳಲು ಕೋರಿದೆ.
  • ಗುಂಪಿನಲ್ಲಿ ಬರುವಹಾಗಿದ್ದರೆ, ಮೊದಲೇ ಸಂಪರ್ಕಿಸಿ. ಐ.ಡಿ :[೪]
  • ಪಾರ್ಕಿಂಗ್ ಉಚಿತ. ಎಲಿವೇಟರ್, ವ್ಹೀಲ್ ಛೇರ್, ರೆಸ್ಟ್ ರೂಂಸ್ ಲಭ್ಯವಿವೆ.

ಪ್ರಮುಖ ಸ್ವಾಮಿಗಳ ಆಶೀರ್ವಾದ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. BAPS Swaminaryayan temple
  2. 'Global network of BAPS'
  3. "Darshan of Swaminaryan Live". Archived from the original on 2013-07-29. Retrieved 2014-07-07.
  4. ಬಾಪ್ಸ್ ಸ್ವಾಮಿನಾರಾಯಣ್ ಮಂದಿರ್, ಟೊರಾಂಟೋ