ಟೊಮೆಟೊ ಬಟಾಣಿ ಭಾತ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಟೊಮೆಟೊ ಬಟಾಣಿ ಭಾತ್ :
ಬೇಕಾಗುವ ಸಾಮಗ್ರಿಗಳು: 1 ಕಪ್ ಅಕ್ಕಿ 4-5 ಚೆನ್ನಾಗಿ ಹಣ್ಣಾಗಿರುವ ಟೊಮೆಟೊ 1/2 ಕಪ್ ಹಸಿ ಬಟಾಣಿ 2 ಈರುಳ್ಳಿ 2-3 ಹಸಿ ಮೆಣಸಿನಕಾಯಿ 1 ಚೆಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆಎಣ್ಣೆ ಸಾಸಿವೆ, ಜೀರಿಗೆ, ಕರಿಬೇವುಇಂಗು ( ಬೇಕಿದ್ದರೆ) ಬೆಳ್ಳುಳ್ಳಿ ಮತ್ತು ಶುಂಠಿಪೇಸ್ಟ್ 1/4 ಚಮಚ ಕಾರದ ಪುಡಿ 1/2 ಚಮಚ ಧನಿಯಾ ಪುಡಿ 1/4 ಚಮಚ ಗರಮ್ ಮಸಾಲ, ಉಪ್ಪು 2 ಕಪ್ ನೀರು, ಹೆಚ್ಚಿದ ಕೊತ್ತಂಬರಿ ಸೊಪ್ಪು ಕಾಯಿ ಅಥವಾ ಕೊಬ್ರಿ 1 ಚಮಚ ನಿಂಬೆರಸ
ಮಾಡುವ ವಿಧಾನ : ಅಕ್ಕಿ ತೊಳೆದು ನೆನೆಹಾಕಿ. ಟೊಮೆಟೊ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹೆಚ್ಚಿಕೊಳ್ಳಿ. ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಚೆಕ್ಕೆ, ಲವಂಗ, ಏಲಕ್ಕಿ, ಎಲೆ ಹಾಕಿ, ಕರಿಬೇವು, ಇಂಗು ಹಾಕಿ ಆಮೇಲೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಬೇಕು. ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿದ ನಂತರ 2 ನಿಮಿಷ ಬಿಟ್ಟು ಅರಿಶಿನ, ಟೊಮೆಟೊ ಹಾಕಿ ಚೆನ್ನಾಗಿ ಬೆರೆಸಿ. ಬಟಾಣಿ ಬೆರೆಸಿ 5 ನಿಮಿಷದ ನಂತರ ನೀರು ಮತ್ತು ಉಪ್ಪು ಹಾಕಿ ಜೊತೆಯಲ್ಲಿಯೇ ಪುಡಿಗಳನ್ನೆಲ್ಲ ಹಾಕಿ ಕೈಯಾಡಿಸಿ. ನೀರು ಕುದಿ ಬಂದ ನಂತರ ನೆನೆಸಿಟ್ಟುಕೊಂಡ ಅಕ್ಕಿ ಹಾಕಿ, ಬೇಕಾದರೆ ನಿಂಬೆರಸ ಹಿಂಡಿ. ಕಾಯಿತುರಿ ಹಾಕಿ ಮುಚ್ಚಳ ಮುಚ್ಚಿ. ಅಡುಗೆ ತಯಾರಾಗುತ್ತೆ.