ವಿಷಯಕ್ಕೆ ಹೋಗು

ಟೆಲಿಟೆಕ್ಸ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೆಲಿಟೆಕ್ಸ್ಟ್

ಟೆಲಿಟೆಕ್ಸ್ಟ್ ನಲ್ಲಿ ದೂರದರ್ಶನ ಪ್ರಸಾರ ಕೇಂದ್ರದಲ್ಲಿ ಗಣಕಯಂತ್ರ ವ್ಯವಸ್ಥೆಯಿಂದ ಮಾಹಿತಿಯನ್ನು ಶೇಖರಿಸಲಾಗುತ್ತದೆ. ಇದಕ್ಕೆ ಅಂಕಿಅಂಶ ಮೂಲ ಅಥವಾ ಡಾಟಾಬೇಸ್ ಎಂದು ಹೆಸರು. ಈ ಅಂಶಗಳನ್ನು ಪುಟದಲ್ಲಿ ವ್ಯವಸ್ಥೆಗೊಳಿಸಿ ಪ್ರತಿಯೊಂದು ಪುಟವನ್ನು ಸಂಪೂರ್ಣವಾಗಿ ಸಂಪಾದಿಸಲಾಗುತ್ತದೆ. ಅದನ್ನು ಚಕ್ರೀಯ ರೀತಿಯಲ್ಲಿ ವಹನ ಮಾಡಿ, ಅಂಕಿಅಂಶ ಮೂಲದಲ್ಲಿ ಶೇಖರಿಸಲ್ಪಟ್ಟ ಪ್ರತಿಯೊಂದು ಪುಟವನ್ನು ಪ್ರತೀ ೧೫-೨೦ ಸೆಕೆಂಡುಗಳಲ್ಲಿ ಪುನರ್ ಪ್ರಸಾರ ಮಾಡಲಾಗುತ್ತದೆ. ವೀಕ್ಷಕನು ಪುಟವನ್ನು ಶೇಖರಿಸುವುದಕ್ಕೆ ಜ್ಞಾಪಕಶಕ್ತಿಯಿರುವ ಡಿಕೋಡರ್'ಅನ್ನು ಮತ್ತು ಟೆಕ್ಸ್ಟ್'ಗೆ ಅಥವಾ ರೇಖಾಕೃತಿ ರೂಪದೊಳಕ್ಕೆ ಪಡೆದ ಸಂಕೇತಗಳನ್ನು ಬದಲಾಯಿಸುವುದಕ್ಕೆ ಪ್ರೊಸೆಸರ್'ಅನ್ನು ಉಪಯೋಗಿಸಬೇಕು. ವೀಕ್ಷ್ಕನು ತನಗೆ ಆಸಕ್ತಿಯಿರುವ ಪುಟವನ್ನು ಆರಿಸಿಕೊಳ್ಳಲು ಕೈಯಲ್ಲಿ ಹಿಡಿದ ಸಂಖ್ಯೆಗಳ ಕೀಲಿ ಪ್ಯಾಡಿನ ಉಪಯೋಗವನ್ನು ಪಡೆಯುತ್ತಾನೆ. "ಡಿಕೋಡರ್" ಎಂಬುದು ಪರದೆಯ ಮೇಲೆ ಪ್ರದರ್ಶಿಸಲು ಪುಟವನ್ನು ತನ್ನ ನೆನಪಿನಲ್ಲಿ ಶೇಖರಿಸುತ್ತದೆ.

ಬ್ರಿಟಿಷ್ ಟೆಲಿಟೆಕ್ಸ್ಟ್ ಗುಣಮಟ್ಟದಲ್ಲಿ ಒಂದು ಸಾಲಿನಲ್ಲಿ ೪೦ ಅಕ್ಷರಗಳಿರುವ ೨೪ ಸಾಲುಗಳು ಒಂದು ಪುಟದಲ್ಲಿರುತ್ತದೆ. ಆಕರ್ಷಕ ಪರದೆ ರೂಪವನ್ನು ಕೊಡಲು ಕೆಲವು ಅಕ್ಷರಗಳು ಖಾಲಿ ಇರಬಹುದು.

ಟೆಲಿಟೆಕ್ಸ್ಟ್ ಪ್ರಸಾರವನ್ನು ದೂರದರ್ಶನ ಕಾರ್ಯಕ್ರಮದ ಜೊತೆಯಲ್ಲಿ ಮಿಶ್ರ ಮಾಡಬಹುದು. ವಹನದ ಸಮಯದಲ್ಲಿ ಸ್ವಿಚ್ ಅನ್ನು ಅದುಮಿದರೆ ಟಿ.ವಿ ಪರದೆಯ ಪ್ರತಿ ಎರಡು ಚಕ್ರಗಳಿಗೆ ೬೨೫ ಸಾಲುಗಳಂತೆ ಮಾಹಿತಿಗಳನ್ನು ಬಳಿಯುತ್ತದೆ. ಪರದೆಯ ಮೇಲಿನ ೬೨೫ ಸಾಲುಗಳಲ್ಲಿ ಪ್ರತಿ ಚಕ್ರದಲ್ಲಿ ೩೧೨ ಸಾಲುಗಳು ಸ್ಥಳ ಬಿಟ್ಟಿರುವ ರೀತಿಯಲ್ಲಿ ಬರೆದಿರುತ್ತದೆ. ಈ ೩೧೨ ಸಾಲುಗಳಲ್ಲಿ, ೨೮೦ ಮಾತ್ರ ವೀಕ್ಷಿಸಲ್ಪಡುತ್ತದೆ. ಉಳಿದವು ದೂರದರ್ಶನ ಪರದೆಯ ಮೇಲಿನ ಅಥವಾ ಕೆಳಗಿನ ಅಂಚುಗಳಲ್ಲಿ ಉಳಿಯುತ್ತದೆ.

ಟೆಲಿಟೆಕ್ಸ್ಟ್ ಎಂಬುದು ಇತ್ತೀಚಿನ ಮಾಹಿತಿಗಳನ್ನು ಪಡೆಯಲು ವರ್ತಮಾನ ಏಜೆನ್ಸಿಗಳಿಗೆ ಉಪಯುಕ್ತವಾಗಿದೆ. ಪ್ರಪಂಚದ ಘಟನೆಗಳನ್ನು ಟೆಲಿಟೆಕ್ಸ್ಟ್'ನ ಸಹಾಯದಿಂದ ವರ್ತಮಾನ ಏಜೆನ್ಸಿಜಳಿಗೆ ರವಾನಿಸಿ ಅಲ್ಲಿ ಅದನ್ನು ಸಂಗ್ರಹಿಸಿ, ಪರಿಷ್ಕರಿಸಲಾಗಿತ್ತದೆ. ವರ್ತಮಾನ ಏಜೆನ್ಸಿಯು, ಸಮಾಚಾರಗಳನ್ನು ಮುದ್ರಣಾಲಯಕ್ಕೆ ಕಳುಹಿಸುವುದರ ಮೂಲಕ ಪತ್ರಿಕೆಗಳ ರೂಪದಲ್ಲಿ ಮುದ್ರಿಸಲ್ಪಡುತ್ತದೆ. ಭಾರತದಲ್ಲಿ "ಹಿಂದೂಪತ್ರಿಕೆ"[೧] ಯನ್ನು ಟೆಲಿಟೆಕ್ಸ್ಟ್ ಸಹಾಯದಿಂದ ಮುದ್ರಿಸಲಾಗುತ್ತದೆ.

ಪ್ರಾರಂಭದಲ್ಲಿ ಸಮಾಚಾರ ತಲೆಬರಹಗಳನ್ನು ಉಪಶಿರೋನಾಮೆ(ಸಬ್ ಟೈಟಲ್ಸ್)ಯನ್ನು ಉಪಯೋಗಿಸಿ ಪ್ರದರ್ಶಿಸಲು ಟೆಲಿಟೆಕ್ಸ್ಟ್ ಅನ್ನು ಬಳಸಲಾಗುತ್ತಿತ್ತು. ಈಗ ರೈಲುಗಳ ಮತ್ತು ವಿಮಾನಗಳ ಹೊರಡುವ ಸಮಯಗಳ ಬಗ್ಗೆ ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಹವಾಮಾನ, ಕ್ರೀಡೆ, ಸಿನಿಮಾ ಮುಂತಾದವುಗಳ ಮಾಹಿತಿಗಳನ್ನು ಇದು ಕೊಡುತ್ತದೆ.

ಉಲ್ಲೇಖ[ಬದಲಾಯಿಸಿ]

  1. http://www.mapsofindia.com/on-this-day/20th-september-1878-the-hindu-is-published-for-the-first-time-as-a-weekly-newspaper-in-chennai