ಟೂರ್ ಡೆ ಫ್ರಾನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಅಲ್ಪೆ ಡೆ ಹುಯೆಜ್ ನ ಪರ್ವತ ದಾರಿ
ಸ್ಪರ್ಧೆಯನ್ನು ಏಳು ಬಾರಿ ಗೆದ್ದಿರುವ ಅಮೆರಿಕದ ಲಾನ್ಸ್ ಆರ್ಮ್‌ಸ್ಟ್ರಾಂಗ್

ಟೂರ್ ಡೆ ಫ್ರಾನ್ಸ್ ಪ್ರಪಂಚದ ಅತ್ಯಂತ ಪ್ರತಿಷ್ಠಿತ ಸೈಕಲ್ ಸ್ಪರ್ಧೆಗಳಲ್ಲಿ ಒಂದು. ಈ ಸ್ಪರ್ಧೆಯಲ್ಲಿ ದಿನಕ್ಕೆ ಒಂದರಂತೆ ೨೧ ಹಂತಗಳಿದ್ದು ಸುಮಾರು ೩,೫೦೦ ಕಿಮೀ ದೂರ ಸೈಕಲ್ ಸವಾರರು ಚಲಿಸುತ್ತಾರೆ. ಸಾಮಾನ್ಯವಾಗಿ ಮಧ್ಯೆ ಎರಡು ವಿಶ್ರಾಂತಿ ದಿನಗಳಿರುತ್ತವೆ. ಈ ಪಂದ್ಯಾವಳಿ ೧೯೦೩ ರಿಂದ ಪ್ರತಿ ವರ್ಷ ನಡೆಯುತ್ತಾ ಬಂದಿದೆ. ೨೦೦೮ ರಲ್ಲಿ ಜುಲೈ ೫ ರಿಂದ ಜುಲೈ ೨೭ ರ ವರೆಗೆ ನಡೆಯುತ್ತದೆ.

ಸ್ಪರ್ಧೆ[ಬದಲಾಯಿಸಿ]

ಟೂರ್ ಡೆ ಫ್ರಾನ್ಸ್ ಸ್ಪರ್ಧೆಯಲ್ಲಿ ಅನೇಕ ಹಂತಗಳಿರುತ್ತವೆ. ಪ್ರತಿ ಹಂತವೆಂದರೆ ಒಂದು ದಿನದಲ್ಲಿ ಪೂರ್ಣಗೊಳ್ಳುವ ರೇಸ್. ಸ್ಪರ್ಧಿಗಳು ಪ್ರತಿ ಹಂತವನ್ನು ಪೂರ್ಣಗೊಳ್ಳಿಸಲು ತೆಗೆದುಕೊಳ್ಳುವ ಸಮಯವನ್ನು ದಾಖಲಿಸಿಕೊಳ್ಳಲಾಗುತ್ತದೆ. ಎಲ್ಲ ಹಂತಗಳು ಮುಗಿಯುವ ವೇಳೆಗೆ ಅತ್ಯಂತ ಕಡಿಮೆ ಸಮಯವನ್ನು ತೆಗೆದುಕೊಂಡಿರುವ ಸ್ಪರ್ಧಿಯನ್ನು ವಿಜಯಿಯಾಗಿ ಘೋಷಿಸಲಾಗುತ್ತದೆ.

ಸ್ಪರ್ಧೆಯಲ್ಲಿರುವ ಹಂತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಸರಾಸರಿ ೨೦ ಹಂತಗಳಿದ್ದು ಒಟ್ಟು ದೂರ ೩,೦೦೦ ದಿಂದ ೪,೦೦೦ ಕಿಮೀ ಇರುತ್ತದೆ. ಅತ್ಯಂತ ಸಣ್ಣ ಸ್ಪರ್ಧೆ ನಡೆದದ್ದು ೧೯೦೪ ರಲ್ಲಿ (೨,೪೨೦ ಕಿಮೀ. ಅತ್ಯಂತ ದೊಡ್ಡ ಸ್ಪರ್ಧೆ ನಡೆದದ್ದು ೧೯೨೬ ರಲ್ಲಿ (೫,೭೪೫ ಕಿಮೀ). ಕೆಲವು ಹಂತಗಳು ಚಪ್ಪಟೆ ರಸ್ತೆಗಳ ಮೇಲೆ ಸಾಗಿದರೆ ಇನ್ನು ಕೆಲವು ಪರ್ವತಗಳ ಮೂಲಕ ಸಾಗುತ್ತವೆ. ಟೂರ್ ಡೆ ಫ್ರಾನ್ಸ್ ನಲ್ಲಿ ಏರಬೇಕಾಗುವ ಕೆಲವು ಕಷ್ಟದ ಪರ್ವತಗಳೆಎಂದರೆ ಟೂರ್ಮಲೆ, ವೆಂಟೂ, ಗಲೀಬಿಯೆ ಮತ್ತು ಅಲ್ಪೆ ಡೆ ಹುಯೆಜ್. ಬಹುಪಾಲು ಹಂತಗಳು ಫ್ರಾನ್ಸ್ ದೇಶದಲ್ಲಿದ್ದರೆ ಕೆಲವು ಹಂತಗಳಲ್ಲಿ ಪಕ್ಕದ ದೇಶಗಳಿಗೆ ಸಾಗಬೇಕಾಗುವುದೂ ಉಂಟು.

ಟೂರ್ ಡೆ ಫ್ರಾನ್ಸ್ ಅತ್ಯಂತ ದೈಹಿಕ ಶಕ್ತಿ ಮತ್ತು ಸಹಿಷ್ಣುತೆ ಬೇಕಾಗಿರುವ ಸ್ಪರ್ಧೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]