ವಿಷಯಕ್ಕೆ ಹೋಗು

ಟಿ. ಎಸ್. ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಟಿ.ಎಸ್.ಭಟ್'[೧] ದಿವಂಗತ ಎಂ. ಸಿ. ವೀರ್ ರವರ ಬಳಿ ಕಥಕ್ ಮತ್ತುಕಥಕ್ಕಳಿ ನೃತ್ಯಪ್ರಾಕಾರಗಳನ್ನು ಕಲಿತು ಅಭ್ಯಾಸಮಾಡಿದರು. ಮುಂದೆ ಕರಾವಳಿಯ ಪ್ರಮುಖ ಭರತನಾಟ್ಯ ದಂಪತಿಗಳಾದ ಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾ ದೇವಿ ಯವರ ಹತ್ತಿರ 'ಭರತನಾಟ್ಯ'ವನ್ನು ಕಲಿತರು. ಮೈಸೂರು ಅರಮನೆ ಮತ್ತು ಮೈಸೂರಿನ ಹಲವು ಕಲಾ ಕೇಂದ್ರಗಳಲ್ಲಿ, ಹಾಗೂ ರಾಷ್ಟ್ರದಾದ್ಯಂತ ತಮ್ಮ ನೃತ್ಯಕಾರ್ಯಕ್ರಮಗಳನ್ನು ಕೊಡುತ್ತಿದ್ದರು. ವೃತ್ತಿಯಿಂದ ಭಟ್ಟರು, 'ಕಮರ್ಶಿಯಲ್ ಟ್ಯಾಕ್ಸ್ ಆಫೀಸರ್' ಆಗಿ ಸೇವೆ ಸಲ್ಲಿಸುತ್ತಿದ್ದರು.

ಜನನ ಹಾಗೂ ನೃತ್ಯಕಲೆಯಲ್ಲಿ ಸಾಗಿದ ದಾರಿ[ಬದಲಾಯಿಸಿ]

ಟಿ. ಎಸ್. ಭಟ್ಟರು, ೧೯೨೭ ರ, ಅಕ್ಟೋಬರ್, ೬ ರಂದು, ಮನೆನಾಡಿನ ತವರುಮನೆಯಾದ ತೀರ್ಥಹಳ್ಳಿ ಯಲ್ಲಿ ಜನಿಸಿದರು.

ಮೇನಕಾ ನೃತ್ಯಶಾಲೆ, ಬೆಂಗಳೂರು[ಬದಲಾಯಿಸಿ]

೧೯೫೭ ರಲ್ಲೇ, ಬೆಂಗಳೂರಿನಲ್ಲಿ ನೃತ್ಯಾಸಕ್ತರಿಗೆ ಕಲಿಸಲು ಒಂದು ನರ್ತನ ಶಾಲೆಯನ್ನು ಸ್ಥಾಪಿಸಿ ಶಿಕ್ಷಣ ನೀಡುತ್ತಿದ್ದಾರೆ. ಕರ್ನಾಟಕ ನೃತ್ಯಕಲಾ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ೮ ವರ್ಷಗಳ ಕಾಲ ಸೇವೆ ಸಲ್ಲಿಸಿದರು. 'ಭರತ ಬಾಹುಬಲಿ' ಮತ್ತು 'ಕಾಮದಹನ' ಎಂಬ ಮ್ಯೂಸಿಕಲ್ ಬ್ಯಾಲೆ ನೃತ್ಯಗಳು ಅಂದಿನ ದಿನಗಳಲ್ಲಿ ಬಹಳ ಜನಪ್ರಿಯತೆಯನ್ನು ಗಳಿಸಿದವು.

ಪ್ರಶಸ್ತಿಗಳು[ಬದಲಾಯಿಸಿ]

  • ೧೯೯೦-೯೧ ನೆಯ ಸಾಲಿನ 'ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ಪ್ರಶಸ್ತಿ', ಹಾಗೂ 'ಕರ್ನಾಟಕ ಕಲಾತಿಲಕ' ಬಿರುದನ್ನು ನೀಡಿ ಗೌರವಿಸಿದೆ.
  • ಶಾಂತಲ ನಾಟ್ಯ ಪ್ರಶಸ್ತಿ. ಈ ಪ್ರಶಸ್ತಿಯ ಜೊತೆಗೆ ೧ ಲಕ್ಷರೂಪಾಯಿ ನಗದು ಹಣ, ಸ್ಮರಣಿಕೆ, ಶಾಲು ಮತ್ತು ಪುಷ್ಪ ಗುಚ್ಛವನ್ನು ಕೊಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

<References >/

  1. "ಆರ್ಕೈವ್ ನಕಲು". Archived from the original on 2008-10-11. Retrieved 2014-03-19.