ವಿಷಯಕ್ಕೆ ಹೋಗು

ಟಿ.ಸಿ.ಪೂರ್ಣಿಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿ.ಸಿ.ಪೂರ್ಣಿಮಾ ಇವರು ೧೯೬೩ ಜೂನ್ ೩ರಂದು ಮೈಸೂರಿನಲ್ಲಿ ಜನಿಸಿದರು. ಬಿ.ಎಸ್.ಸಿ. ಬಳಿಕ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪಡೆದರು. ಸದ್ಯದಲ್ಲಿ ಭಾರತ ಸರಕಾರದ “ಯೋಜನಾ” ಮಾಸಪತ್ರಿಕೆಯ ಸಂಪಾದಕಿಯಾಗಿದ್ದಾರೆ. ಇವರ ಮೊದಲ ಕವನಸಂಗ್ರಹ “ಮೌನ ಗೀತೆ”ಗೆ ೧೯೯೦ರ ಅಂಬರೀಶ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಡಾ:ಟಿ.ಸಿ.ಪೂರ್ಣಿಮಾ ಭಾರತೀಯ ಸಮಾಚಾರ ಸೇವೆಯ ಅಧಿಕಾರಿಣಿಯಾಗಿ 25ಕ್ಕೂ ಹೆಚ್ಚು ವರ್ಷಗಳ ಸೇವಾನುಭವ ಹೊಂದಿದ್ದಾರೆ. ಮೊದಲು ಯೋಜನಾ ಪತ್ರಿಕೆಯಲ್ಲಿ ಕೆಲಸಮಾಡಿದ ನಂತರ ಭಾರತ ಸರ್ಕಾರದ ಜಾಹಿರಾತು ವಿಭಾಗ, ದೂರದರ್ಶನದ ಸುದ್ದಿ ವಿಭಾಗ ಮತ್ತು ಆಕಾಶವಾಣಿಯ ಸುದ್ದಿ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದ ರಾಜ್ಯ ಸರ್ಕಾರಕ್ಕೆ ಎರವಲು ಸೇವೆ ಮೇಲೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ವಿಶೇಷಾಧಿಕಾರಿಯಾಗಿದ್ದವರು.