ಟಾಟಾ ಕುಟುಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಾಟಾ ಕುಟುಂಬ ಭಾರತದ ಒಂದು ಪ್ರಮುಖ ಪಾರ್ಸಿ ಕುಟುಂಬ. [೧] ಭಾರತದ ಬೃಹತ್ ಉದ್ಯಮಗಳ ರುವಾರಿಗಳಾಗಿ, ಟಾಟಾ ಉದ್ಯಮವನ್ನು ಸ್ಥಾಪಿಸಿದ ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ ಈ ಕುಟುಂಬದ ಮೊದಲ ಪ್ರಮುಖರು.

ಪ್ರಮುಖ ಸದಸ್ಯರು[ಬದಲಾಯಿಸಿ]

  • Ratan Naval Tata, Chairman of Tata Group
    ರತನ್ ನೇವಲ್ ಟಾಟಾ, ಟಾಟಾ ಸಮೂಹದ ಅಧ್ಯಕ್ಷರು
    ನುಝರ್ ವಾನ್ ಜಿಯವರು ಟಾಟ ವಂಶದ ಮೂಲ ಪುರುಶರು. ಪಾರ್ಸಿ ಅಗ್ನಿ ದೇವಾಲಯದಲ್ಲಿ ಅರ್ಚಕರು. ಸ್ವತಃ ಒಂದು ಚಿಕ್ಕ ಉದ್ಯೋಗವನ್ನೂ ಗುಜರಾತಿನ ನವಸಾರಿ ಊರಿನಲ್ಲಿ ನಡೆಸುತ್ತಿದ್ದರು. ಸ್ವಲ್ಪ ಸಮಯದ ನಂತರ ಬೊಂಬಾಯಿಗೆ ಪರಿವಾರಸಮೇತ ಬಂದು ನೆಲಸಿದರು. ಇವರು ಭಾರತದ ಕೈಗಾರಿಕೋದ್ಯಮದ ಪಿತಾಮಹ.
  • ಜೆಮ್ ಶೆಟ್ ಜಿ ನುಝರ್ ವಾನ್ ಜಿ ಟಾಟಾರವರಿಗೆ ಒಬ್ಬ ಮಗ, ಹಾಗೂ ೪ ಜನ ಹೆಣ್ಣು ಮಕ್ಕಳು ಇದ್ದಾರೆ.
  • ರತನ್ ಬಾಯಿ ಟಾಟಾರವರು 'ಎಡುಲ್ ಜಿ ಬಾಮಾಜಿ'ಯವರನ್ನು ಮದುವೆಯಾದರು. ಈ ದಂಪತಿಗಳಿಗೆ ಮಕ್ಕಳಿಲ್ಲ.
  • ಮಾನೆಕ್ ಬಾಯಿ ಟಾಟಾರವರು 'ಖುರ್ ಸೆಟ್ ಜಿ'ಯವರನ್ನು ಮದುವೆಯಾದರು. ಈ ದಂಪತಿಗಳಿಗೆ ಮಕ್ಕಳಿಲ್ಲ.
  • ಜೆರ್ ಬಾಯಿ ಟಾಟಾರವರು 'ದೊರಾಬ್ ಸಕ್ಲಾತ್ ವಾಲಾ' ರವರ ಜೊತೆಮದುವೆಯಾದರು. ಈ ದಂಪತಿಗಳಿಗೆ ಮಕ್ಕಳಿಲ್ಲ
  • ವೀರ್ ಬಾಯಿ ಟಾಟಾರವರು 'ಬಾಪೂಜಿ ಸಕ್ಲಾತ್ ವಾಲ'ರನ್ನು ಮದುವೆಯಾದರು. ಇವರಿಗೆ ಇಬ್ಬರು ಗಂಡು ಮಕ್ಕಳು.
  • ಕೈಕೂಬಾದ್ ಸಕ್ಲಾತ್ ವಾಲರವರುಸೆಹ್ರಾ ಬರ್ಡಿಯವರನ್ನು ಮದುವೆಯಾದರು. ಮಗ, ಮಿನೋಚಕ್ (ಮಿನೂ),ಟಾಟಾ. ಪಿಲೂ ದುಸ್ತೂರ್ ರವರನ್ನು ಮದುವೆಯಾದರು.
  • ಸರ್ ನವ್ರೋಜಿ ಸಕ್ಲಾಟ್ ವಾಲರವರು 'ವೀರ್ ಬಾಯಿ ಟಾಟಾ'ರವರ ಮತ್ತೊಬ್ಬ ಮಗ, ಗೂಲ್ ಬಾಯಿ ಬಾಟ್ಲಿವಾಲ ರನ್ನು ಮದುವೆಯಾದರು.
  • ಜಮ್ಸೆಟ್ ಜಿ ನುಝರ್ ವಾನ್ ಜಿ ಟಾಟಾರವರು ಹೀರಾಬಾಯಿಯವರನ್ನು ಮದುವೆಯಾದರು. ಇವರಿಗೆ ೨ ಜನ ಗಂಡುಮಕ್ಕಳು ಹಾಗೂ ಒಬ್ಬ ಮಗಳು
  • ದೊರಾಬ್ ಜಿ ಟಾಟಾರವರಿಗೆ ಮಕ್ಕಳಿಲ್ಲ.
  • ರತನ್ ಟಾಟಾರವರಿಗೆ ಮಕ್ಕಳಿಲ್ಲ.
  • ಧುನ್ ಬಾಯಿ ಟಾಟಾರವರ ಬಗ್ಗೆ ಹೆಚ್ಚಿಗೆ ಮಾಹಿತಿ ತಿಳಿದಿಲ್ಲ.
  • ಜೀವನ್ ಬಾಯಿಯವರ ಸಹೋದರಿಯರಿಂದ ಟಾಟಾ ಪರಿವಾರ ಬೆಳೆಯಿತು.'ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾರವರ ಪತ್ನಿ, ಹೀರಾಬಾಯಿ ಟಾಟಾರವರ ಸೋದರಿ, ಕೂವರ್ ಬಾಯಿ ಡಾಬೂ, ಶಾಪುರ್ಜಿ ರಾವ್ ಜೊತೆ ಮದುವೆಯಾದರು. ಇವರ ಮಗಳು ರತನ್ ಬಾಯಿ ರಾವ್ ಟಾಟಾ, ಹರ್ಮುಸ್ ಜಿ ಟಾಟರೊಂದಿಗೆ ಮದುವೆಮಾಡಿಕೊಂಡರು. ಈ ದಂಪತಿಗಳ ಒಬ್ಬನೆ ಮಗ- 'ನಾವಲ್ ಹರ್ಮುಸ್ ಜಿ ಟಾಟಾ'. ಮಕ್ಕಳಿಲ್ಲದ ಕಾರಣ, ಸರ್. ರತನ್ ಟಾಟ ಹಾಗೂ ನವಜ್ ಬಾಯಿ ಟಾಟಾ, ನಾವಲ್ ಹರ್ಮುಸ್ ಜಿ ಟಾಟಾರವರನ್ನು ದತ್ತು ತೆಗೆದುಕೊಂಡರು.
  • ದಾದಾಭಾಯ್ ಟಾಟಾ, ಲೇಡಿ ಭಿಖಿಬಾಯಿ ಯವರನ್ನು ಮದುವೆಯಾದರು. ಶ್ರೀ.ದಾದಾಭಾಯ್ ಟಾಟಾ, ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾರವರ ಪತ್ನಿ, ಜೀವನ್ ಬಾಯಿ ಟಾಟಾರವರ ಸೋದರ. ದಾದಾಭಾಯ್ ಟಾಟಾ,ಹಾಗೂ ಭಿಖಿಬಾಯಿದಂಪತಿಗಳಿಗೆ ಒಬ್ಬನೇ ಮಗ ರತನ್ ದಾದಾಭಾಯ್ ಟಾಟಾ(ಆರ್. ಡಿ ಟಾಟಾ). ರತನ್ ದಾದಾಭಾಯ್ ಟಾಟಾ.(ಆರ್. ಡಿ ಟಾಟಾ) ಸೂನಿ ಬ್ರೈರೆಯವರನ್ನು ಮದುವೆಯಾದರು. ಇವರಿಗೆ ೫ ಜನ ಮಕ್ಕಳು. ಮಗಳು ಸಿಲ್ಲ, 'ಸರ್. ದಿನ್ ಶ ಪೆಟಿಟ್' ರವರನ್ನು ಮದುವೆಯಾದರು. ಮಗ ಜೆಹಾಂಗೀರ್ ರತನ್ ಭಾಯ್ ದಾದಾಭಾಯ್ ಟಾಟಾರವರು'ಥೆಲ್ಮ ವಿಕಾಜಿ'ಯವರನ್ನು ಮದುವೆಯಾದರು. ಈ ದಂಪತಿಗಳಿಗೆ ಮಕ್ಕಳಿಲ್ಲ. ಮತ್ತೋಬ್ಬ ಮಗಳು ರೊಢಬೆರವರು 'ಲೆಸ್ಲಿ ಸಾಹ್ನಿ'ಯವರನ್ನು ಮದುವೆಯಾದರು. ಮಗ ದೊರಾಬ್ ರವರು, ಮದುವೆಯಾಗಿ ಟಾಟ ಕಂಪೆನಿಯ ಡೈರೆಕ್ಟರ್ ಆಗಿದ್ದರು. ಮಗ ಜಿಮ್ಮಿ ೩೧ ನೇ ವರ್ಷದಲ್ಲಿ ವಿಮಾನದ ಹಾರಾಟದಲ್ಲಿ ಮಡಿದರು.
  • ನಾವಲ್ ಹರ್ಮುಸ್ ಜಿ ಟಾಟಾರವರಿಗೆ, ಇಬ್ಬರು ಹೆಂಡತಿಯರು. ಇವರು ಸರ್. ರತನ್ ಟಾಟಾರವರ ದತ್ತು ಪುತ್ರ. ಟಾಟಾ ಪರಿವಾರದವರೇ. ಹೊರಗಿನವರಲ್ಲ.
  • ರತನ್ ನಾವಲ್ ಟಾಟಾ, ನಾವಲ್ ಹರ್ಮುಸ್ ಜಿ ಟಾಟಾ ಅವರ ಮೊದಲ ಹೆಂಡತಿ. ಸೂನು ಕಮ್ ಸಾರಿಯೆಟ್ ಟಾಟಾರವರ ಮೊದಲ ಮಗ. ರತನ್ರವರು ಟಾಟಾ ಸನ್ಸ್ ಕಂಪೆನಿಯ, ಪ್ರಧಾನ ನಿರ್ದೇಶಕರು. ಅವರು ಮದುವೆ ಮಾಡಿಕೊಂಡಿಲ್ಲ.
  • 'ಜಮ್ ಸೆಟ್, 'ನಾವಲ್ ಹರ್ಮುಸ್ ಜಿ ಟಾಟಾ'ರವರ, ಎರಡನೆಯ ಮಗ.
  • ಸಿಮೊನ್ ಡುನಾಯೋರ್ ಟಾಟಾರವರು ನಾವೆಲ್ ಟಾಟರವರ, ಎರಡನೆಯ ಹೆಂಡತಿ. ಆಕೆಗೆ ನೋಯಲ್ ಟಾಟಾಯೆಂಬ ಮಗನಿದ್ದಾನೆ. ನೋಯಲ್ ಟಾಟ, ಟ್ರೆಂಟ್, ಟೈಟಾನ್ ಇಂಡಸ್ಟ್ರೀಸ್ ಮತ್ತು ಇತರ ೩ ಟಾಟ ಕಂಪೆನಿಗಳಿಗೆ ಡೈರೆಕ್ಟರ್ ಆಗಿ ದುಡಿಯುತ್ತಿದ್ದಾರೆ. ನೋಯೆಲ್ ಟಾಟ, ಆಲೂ ಮಿಸ್ತ್ರಿಯವರನ್ನು ಮದುವೆಯಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. Scribd, A section of the Tata family tree