ಜೋಷಿಮಠ
Jump to navigation
Jump to search
ಜೋಷಿಮಠ | |
ರಾಜ್ಯ - ಜಿಲ್ಲೆ |
ಉತ್ತರಾಖಂಡ - ಚಮೋಲಿ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
13,202 - /ಚದರ ಕಿ.ಮಿ. |
ಜೋಷಿಮಠ ಅಥವಾ ಜ್ಯೋತಿರ್ಮಠ ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಪಟ್ಟಣ. ಜೋಷಿಮಠವು ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮೂಲ ಪೀಠಗಳಲ್ಲಿ ಒಂದು. ಶೃಂಗೇರಿ, ಪುರಿ ಮತ್ತು ದ್ವಾರಕಾ ಉಳಿದ ಮೂರು ಪೀಠಗಳು. ಜೋಷಿಮಠವು ಉತ್ತರಾಮ್ನಾಯ ಪೀಠವೆನಿಸಿದೆ. ಶಂಕರಾಚಾರ್ಯರು ಜ್ಯೋತಿರ್ಮಠದ ಪೀಠಕ್ಕೆ ಅಥರ್ವ ವೇದದ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದರೆನ್ನಲಾಗಿದೆ. ಬದರಿನಾಥಕ್ಕೆ ಸಮೀಪದಲ್ಲಿರುವ ಜೋಷಿಮಠದಲ್ಲಿ ಪ್ರಸಿದ್ಧ ನರಸಿಂಹ ಸ್ವಾಮಿ ದೇವಾಲಯವಿದೆ. ಉತ್ತರಾಮ್ನಾಯ ಮಠವು ಬದರಿಕಾಶ್ರಮವೆಂದು ಸಾಮಾನ್ಯವಾಗಿ ಪ್ರಚಲಿತ ಮಾಹಿತಿ. ಆದರೆ ವಾಸ್ತವವಾಗಿ ಈ ಮಠವು ಜೋಷಿಮಠದಲ್ಲಿದೆ.