ಜೊಹನ್ನಾಸ್ ವಿ. ಜೆನ್ಸೆನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೊಹನ್ನಾಸ್ ವಿ. ಜೆನ್ಸೆನ್
ಜನನJohannes Vilhelm Jensen
(೧೮೭೩-೦೧-೨೦)೨೦ ಜನವರಿ ೧೮೭೩
Farsø, Jutland, Denmark
ಮರಣ25 November 1950(1950-11-25) (aged 77)
Østerbro, Copenhagen, Denmark
ವೃತ್ತಿಲೇಖಕ
ರಾಷ್ಟ್ರೀಯತೆDanish
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1944

ಜೊಹನ್ನಾಸ್ ವಿ. ಜೆನ್ಸೆನ್(20 ಜನವರಿ 1873 – 25 ನವೆಂಬರ್ 1950)ಡೆನ್ಮಾರ್ಕ್ ದೇಶದ ಲೇಖಕ. ಇವರನ್ನು ೨೦ನೆಯ ಶತಮಾನದ ಶ್ರೇಷ್ಠ ಡಾನಿಶ್ ಲೇಖಕ ಎಂದು ಪರಿಗಣಿಸುತ್ತಾರೆ. ಇವರಿಗೆ ೧೯೪೪ರ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ದೊರೆತಿದೆ.ಇವರ ಸೋದರಿ ಥಿಟ್ ಜೆನ್ಸೆನ್ ಕೂಡಾ ಬರಹಗಾರ್ತಿಯಾಗಿದ್ದು ಪ್ರಾರಂಭದ ಸ್ತ್ರೀವಾದಿಗಳಲ್ಲಿ ಒಬ್ಬರು.

ಬಾಲ್ಯ[ಬದಲಾಯಿಸಿ]

ಇವರು ಡೆನ್ಮಾರ್ಕ್‍ನ ಒಂದು ಹಳ್ಳಿಯಲ್ಲಿ ಒಬ್ಬ ಪಶುವೈದ್ಯನ ಮಗನಾಗಿ ಜನಿಸಿದರು.[೧] ಅದೇ ಹಳ್ಳಿಯ ವಾತಾವರಣದಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ವೈದ್ಯಕೀಯ ಉನ್ನತ ವ್ಯಾಸಂಗಕ್ಕಾಗಿ ಇವರು ಕೊಪೆನ್‍ಹೇಗನ್ನ ವಿಶ್ವವಿದ್ಯಾಲಯಕ್ಕೆ ಸೇರಿದರು. ವಿದ್ಯಾಭ್ಯಾಸದ ಖರ್ಚಿಗೆ ಲೇಖಕರಾಗಿ ದುಡಿದರು.ಮೂರು ವರ್ಷ ವೈದ್ಯಕೀಯ ವ್ಯಾಸಂಗದ ಬಳಿಕ ವ್ಯಾಸಂಗವನ್ನು ತೊರೆದು ಪೂರ್ಣಕಾಲಿಕ ಲೇಖಕನಾಗಿ ಸಾಹಿತ್ಯಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟರು.

ಉಲ್ಲೇಖಗಳು[ಬದಲಾಯಿಸಿ]

  1. Jensen, Johannes V. (c. 1945). "Johannes V. Jensen – Autobiography". The Official Web Site of the Nobel Foundation. Sweden: Nobel Web AB. Archived from the original on 17 ಡಿಸೆಂಬರ್ 2012. Retrieved 24 November 2009.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]