ಜೈ ಸಿಂಗ್ ನೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೆಫ್ಟಿನೆಂಟ್ ಜನರಲ್

ಜೈ ಸಿಂಗ್ ನೈನ್

ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ
ವ್ಯಾಪ್ತಿಪ್ರದೇಶ ಭಾರತ
ಶಾಖೆ ಭಾರತೀಯ ಭೂಸೇನೆ
ಸೇವಾವಧಿಜೂನ್‌ ೧೮, ೧೯೮೩ – ಅಕ್ಟೋಬರ್‌ ೩೧, ೨೦೨೨
ಶ್ರೇಣಿ(ದರ್ಜೆ) ಲೆಫ್ಟಿನೆಂಟ್ ಜನರಲ್
ಸೇವಾ ಸಂಖ್ಯೆIC-41067N
ಅಧೀನ ಕಮಾಂಡ್ ಸದರನ್‌ ಆರ್ಮಿ
IX ಕಾರ್ಪ್ಸ್
ಪ್ರಶಸ್ತಿ(ಗಳು) ಪರಮ ವಿಶಿಷ್ಟ ಸೇವಾ ಪದಕ
ಅತಿ ವಿಶಿಷ್ಟ ಸೇವಾ ಪದಕ
ಸೇನಾ ಪದಕ

ಲೆಫ್ಟಿನೆಂಟ್ ಜನರಲ್ ಜೈ ಸಿಂಗ್ ನೈನ್ ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ಸೇನಾ ಪದಕ ಪುರಸ್ಕೃತರು. ಇವರು ಭಾರತೀಯ ಸೇನೆಯ ದಕ್ಷಿಣ ಕಮಾಂಡ್‌ನ ಮಾಜಿ ಜನರಲ್ ಆಫೀಸರ್-ಕಮಾಂಡಿಂಗ್-ಇನ್-ಚೀಫ್ (ಜಿಒಸಿ-ಇನ್-ಸಿ) ಆಗಿದ್ದಾರೆ. ಅವರು ಲೆಫ್ಟಿನೆಂಟ್ ಜನರಲ್ ಚಂಡಿ ಪ್ರಸಾದ್ ಮೊಹಂತಿ ಅವರ ನಂತರ ಈ ಹುದ್ದೆಯನ್ನು ವಹಿಸಿಕೊಂಡರು.[೧] ಅವರು ತಮ್ಮ ಶಾಲಾ ಶಿಕ್ಷಣವನ್ನು ಕುಂಜ್ಪುರದ ಸೈನಿಕ ಶಾಲೆಯಿಂದ ಪಡೆದಿದ್ದರು.

ವೃತ್ತಿ[ಬದಲಾಯಿಸಿ]

ಜೂನ್ ೧೯೮೩ರಲ್ಲಿ ನೈನ್ ಅವರನ್ನು ಡೋಗ್ರಾ ರೆಜಿಮೆಂಟ್‌ನ ೨ ನೇ ಬೆಟಾಲಿಯನ್‌ಗೆ ನಿಯೋಜಿಸಲಾಯಿತು.[೨] ಅವರು ವೆಲ್ಲಿಂಗ್ಟನ್ ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್, ಸಿಕಂದರಾಬಾದ್‌ನ ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ ಹಾಗೂ ನ್ಯಾಷನಲ್ ಡಿಫೆನ್ಸ್ ಕಾಲೇಜ್ (ಬಾಂಗ್ಲಾದೇಶ)ಗಳಲ್ಲಿ ಪದವಿಗಳನ್ನು ಪಡೆದಿದ್ದರು. [೩]

ನೈನ್ ಇರಾಕ್ ಮತ್ತು ಕುವೈತ್‌ನಲ್ಲಿ ಯುಎನ್ ಮಿಷನ್‌ನೊಂದಿಗೆ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. [೩] ಇವರು ಹರ್ಯಾಣದ ಕರ್ನಾಲ್ ಕುಂಜ್‌ಪುರದ ಸೈನಿಕ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಖಡಕ್ವಾಸ್ಲಾ ಪುಣೆಯ ೬೨ನೇ ಕೋರ್ಸ್ ಹಂಟರ್ ಸ್ಕ್ವಾಡ್ರನ್‌ಗೆ ಸೇರಿದವರಾಗಿದ್ದರು.

ಪ್ರಶಸ್ತಿಗಳು[ಬದಲಾಯಿಸಿ]

ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ಸೇನಾ ಪದಕ
ವಿಶೇಷ ಸೇವಾ ಪದಕ ಸಿಯಾಚಿನ್ ಗ್ಲೇಸಿಯರ್ ಪದಕ ಆಪರೇಷನ್ ವಿಜಯ್ ಪದಕ ಆಪರೇಷನ್ ಪರಾಕ್ರಮ್ ಪದಕ
ಸೈನ್ಯ ಸೇವಾ ಪದಕ ಹೈ ಆಲ್ಟಿಟ್ಯೂಡ್ ಸೇವಾ ಪದಕ ವಿದೇಶ್ ಸೇವಾ ಪದಕ ೫೦ನೇ ಸ್ವಾತಂತ್ರ್ಯೋತ್ಸವ ಪದಕ
೩೦ ವರ್ಷದ ದೀರ್ಘ ಸೇವಾವಧಿಪದಕ ೨೦ ವರ್ಷದ ದೀರ್ಘ ಸೇವಾವಧಿಪದಕ ೯ ವರ್ಷದ ದೀರ್ಘ ಸೇವಾವಧಿಪದಕ ಯುನಿಕೊಮ್

ಶ್ರೇಣಿಯ ದಿನಾಂಕಗಳು[ಬದಲಾಯಿಸಿ]

ಲಾಂಛನ ಶ್ರೇಣಿ ಘಟಕ ಶ್ರೇಣಿಯ ದಿನಾಂಕ
ಸೆಕೆಂಡ್ ಲೆಫ್ಟಿನೆಂಟ್ ಭಾರತೀಯ ಸೇನೆ ಜೂನ್ ‌೧೮, ೧೯೮೩ [೪]
ಲೆಫ್ಟಿನೆಂಟ್ ಭಾರತೀಯ ಸೇನೆ ಜೂನ್ ೧೮, ೧೯೮೫ [೫]
ಕ್ಯಾಪ್ಟನ್ ಭಾರತೀಯ ಸೇನೆ ಜೂನ್ ೧೮, ೧೯೮೮ [೬]
ಮೇಜರ್ ಭಾರತೀಯ ಸೇನೆ ಜೂನ್ ೧೮, ೧೯೯೪ [೭]
ಲೆಫ್ಟಿನೆಂಟ್-ಕರ್ನಲ್ ಭಾರತೀಯ ಸೇನೆ ಡಿಸೆಂಬರ್ ೧೬, ೨೦೦೪ [೮]
ಕರ್ನಲ್ ಭಾರತೀಯ ಸೇನೆ ಮಾರ್ಚ್ ೧೫, ೨೦೦೬ [೯]
ಬ್ರಿಗೇಡಿಯರ್ ಭಾರತೀಯ ಸೇನೆ ಆಗಸ್ಟ್ ೯, ೨೦೧೦ (ಆಗಸ್ಟ್ ೧೪, ೨೦೦೯ ರಿಂದ ಹಿರಿತನದ ಮೇರೆಗೆ)[೧೦]
ಮೇಜರ್ ಜನರಲ್ ಭಾರತೀಯ ಸೇನೆ ನವೆಂಬರ್ ೧೮, ೨೦೧೫ (ಆಗಸ್ಟ್ ೨೩, ೨೦೧೪ ರಿಂದ ಹಿರಿತನದ ಮೇರೆಗೆ) [೧೧]
ಲೆಫ್ಟಿನೆಂಟ್-ಜನರಲ್ ಭಾರತೀಯ ಸೇನೆ ಫೆಬ್ರವರಿ ೨೩, ೨೦೧೮ [೧೨]

ಉಲ್ಲೇಖಗಳು[ಬದಲಾಯಿಸಿ]

  1. "Lt Gen JS Nain assumes command of Southern Army in Pune". Devdiscourse. 1 February 2021. Retrieved 1 February 2021.
  2. "Lt Gen JS Nain takes over as Commander of Army's Rising Star Corps". Times of India. 12 January 2019. Retrieved 1 February 2021.
  3. ೩.೦ ೩.೧ "Lt Gen JS Nain assumes command of Southern Army in Pune". Devdiscourse. 1 February 2021. Retrieved 1 February 2021."Lt Gen JS Nain assumes command of Southern Army in Pune". Devdiscourse. 1 February 2021. Retrieved 1 February 2021.
  4. "Part I-Section 4: Ministry of Defence (Army Branch)" (PDF). The Gazette of India. 30 March 1985. p. 414.
  5. "Part I-Section 4: Ministry of Defence (Army Branch)" (PDF). The Gazette of India. 28 March 1987. p. 452.
  6. "Part I-Section 4: Ministry of Defence (Army Branch)" (PDF). The Gazette of India. 22 April 1989. p. 589.
  7. "Part I-Section 4: Ministry of Defence (Army Branch)" (PDF). The Gazette of India. 15 October 1994. p. 1894.
  8. "Part I-Section 4: Ministry of Defence (Army Branch)" (PDF). The Gazette of India. 15 October 2005. p. 1896.
  9. "Part I-Section 4: Ministry of Defence (Army Branch)" (PDF). The Gazette of India. 20 December 2008. p. 2179.
  10. "Part I-Section 4: Ministry of Defence (Army Branch)" (PDF). The Gazette of India. 22 March 2014. p. 430.
  11. "Part I-Section 4: Ministry of Defence (Army Branch)" (PDF). The Gazette of India. 16 April 2022. p. 755.
  12. "Part I-Section 4: Ministry of Defence (Army Branch)" (PDF). The Gazette of India. 9 February 2019. p. 393.
Military offices
ಪೂರ್ವಾಧಿಕಾರಿ
ಚಂಡಿ ಪ್ರಸಾದ್ ಮೊಹಂತಿ
ಜನರಲ್ ಆಫೀಸರ್-ಕಮಾಂಡಿಂಗ್-ಇನ್-ಚೀಫ್ ಸದರನ್ ಕಮಾಂಡ್
ಫೆಬ್ರವರಿ ೧, ೨೦೨೧ – ನವೆಂಬರ್‌ ೧, ೨೦೨೨
ಉತ್ತರಾಧಿಕಾರಿ
ಅಜಯ್ ಕುಮಾರ್ ಸಿಂಗ್
ಪೂರ್ವಾಧಿಕಾರಿ
ಯೆಂದೂರು ವೆಂಕಟ ಕೃಷ್ಣ ಮೋಹನ್
ಜನರಲ್ ಆಫೀಸರ್‌ ಕಮಾಂಡಿಂಗ್ IX ಕಾರ್ಪ್ಸ್
ಜನವರಿ ೧೨, ೨೦೧೯ – ಫೆಬ್ರವರಿ ೧೬, ೨೦೨೦
ಉತ್ತರಾಧಿಕಾರಿ
ಉಪೇಂದ್ರ ದ್ವಿವೇದಿ