ವಿಷಯಕ್ಕೆ ಹೋಗು

ಕರ್ನಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಲ್: ಸೈನ್ಯದಲ್ಲಿ ಒಂದು ಉನ್ನತ ದರ್ಜೆ. ಇದು ಲೆಫ್ಟೆನೆಂಟ್ ಕರ್ನಲ್ ದರ್ಜೆಗಿಂತ ಮೇಲಿನದು ಮತ್ತು ಬ್ರಿಗೇಡಿಯರ್ ದರ್ಜೆಗಿಂತ ಕೆಳಗಿನದು. ಲೆಫ್ಟೆನೆಂಟ್ ಕರ್ನಲ್ ಆದವನು ಪದಾತಿ ಸೈನ್ಯದ ಒಂದು ಬಟಾಲಿಯನ್ನಿಗೆ ಅಧಿನಾಯಕ. ಕರ್ನಲುಗಳನ್ನು ರೆಜಿಮೆಂಟಿಗೆ ಹೊರತಾಗಿರುವಂತೆ ಸೇನಾಕೇಂದ್ರದ ಸಹಾಯಕ ವರ್ಗದಲ್ಲಾಗಲಿ ಬ್ರಿಗೇಡಿನಲ್ಲಾಗಲಿ ಕಮ್ಯಾಂಡಿನಲ್ಲಾಗಲಿ ಕಾರ್ಯಕ್ಷೇತ್ರದಲ್ಲಿ ನಿಯೋಜಿಸುತ್ತಾರೆ. ಕರ್ನಲ್ ಜನರಲ್ ಎಂಬ ಪದವನ್ನು ಹಿಂದೆ ಅನೇಕ ಸೈನ್ಯಗಳಲ್ಲಿ ಈಗಲೂ ಜರ್ಮನ್ ಸೇನೆಯಲ್ಲಿ ಆ ದರ್ಜೆಯ ಶ್ರೇಷ್ಠತೆಯ ಸಲುವಾಗಿ ಬಳಸುತ್ತಾರೆ. ಸಂಯಕ್ತ ರಾಷ್ಟ್ರಗಳ ಸೇನೆಯಲ್ಲಿ ಅಧಿಕಾರಿಗಳು ಜ್ಯೇಷ್ಠಾನುಕ್ರಮದಲ್ಲಿ ಬಡತಿಯನ್ನು ಪಡೆಯಬಹುದಾದ ಶ್ರೇಷ್ಠತಮ ದರ್ಜೆ ಕರ್ನಲ್ ಪದವಿ. ಭಾರತ ದೇಶದಲ್ಲಿ ಲೆಫ್ಟೆನೆಂಟ್ ಕರ್ನಲುಗಳನ್ನು ಮೇಜರುಗಳಿಂದಲೂ ಕರ್ನಲಗಳನ್ನು ಲೆಫ್ಟೆನೆಂಟ್ ಕರ್ನಲುಗಳಿಂದಲೂ ಆರಿಸಿಕೊಳ್ಳುತ್ತಾರೆ. ಮೇಜರುಗಳು ತಮ್ಮ ದರ್ಜೆಗೆ ಜ್ಯೇಷ್ಠಾನುಕ್ರಮದಿಂದ ಏರುತ್ತಾರೆ. ಕೆಲವು ರೆಜಿಮೆಂಟುಗಳು ತಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಕೋರಿದಾಗ ಜನರಲ್ ಪದವೀಧರರಲ್ಲಿ ಕೆಲವರನ್ನು ಕರ್ನಲ್ ಕಮಾಂಡಂಟರನ್ನಾಗಿ ನೇಮಕಮಾಡುತ್ತಾರೆ.

"https://kn.wikipedia.org/w/index.php?title=ಕರ್ನಲ್&oldid=1032927" ಇಂದ ಪಡೆಯಲ್ಪಟ್ಟಿದೆ