ವಿಷಯಕ್ಕೆ ಹೋಗು

ಜೇಬುಗಳ್ಳತನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೇಬುಗಳ್ಳತನವು ವ್ಯಕ್ತಿ ಅಥವಾ ಬಲಿಪಶುವು ಕಳ್ಳತನವನ್ನು ಗಮನಿಸದಂತೆ ಅವರಿಂದ ಹಣ ಅಥವಾ ಇತರ ಅಮೂಲ್ಯ ವಸ್ತುಗಳನ್ನು ಕದಿಯುವುದು ಸೇರಿರುವ ಅಪಹಾರದ ಒಂದು ರೂಪವಾಗಿದೆ. ಇದು ಗಣನೀಯ ಪ್ರಮಾಣದ ಕೌಶಲ್ಯ ಮತ್ತು ಗಮನಭಂಗಮಾಡುವ ಜಾಣ್ಮೆಯನ್ನು ಒಳಗೊಂಡಿರಬಹುದು. ಈ ರೀತಿಯಲ್ಲಿ ಕೆಲಸಮಾಡುವ ಕಳ್ಳನನ್ನು ಜೇಬುಗಳ್ಳ ಎಂದು ಕರೆಯಲಾಗುತ್ತದೆ. ಜೇಬುಗಳ್ಳರು ಮತ್ತು ಇತರ ಕಳ್ಳರು, ವಿಶೇಷವಾಗಿ ತಂಡಗಳಲ್ಲಿ ಕೆಲಸ ಮಾಡುವವರು, ಕೆಲವೊಮ್ಮೆ ಗಮನಭಂಗವನ್ನು ಬಳಕೆಮಾಡಿಕೊಳ್ಳುತ್ತಾರೆ, ಉದಾಹರಣೆಗೆ ಪ್ರಶ್ನೆಯನ್ನು ಕೇಳುವುದು ಅಥವಾ ಬಲಿಪಶುವಿಗೆ ಢಿಕ್ಕಿ ಹೊಡೆಯುತ್ತಾರೆ. ಈ ಗಮನಭಂಗಗಳಿಗೆ ಕೆಲವೊಮ್ಮೆ ಕೈಚಳಕ, ತಪ್ಪು ನಿರ್ದೇಶನ ಮತ್ತು ಇತರ ಬಗೆಯ ಕೌಶಲ್ಯಗಳು ಬೇಕಾಗುತ್ತದೆ.[೧]

ವಿಶ್ವದಾದ್ಯಂತ ಯಾವುದೇ ಕಿಕ್ಕಿರಿದ ಸ್ಥಳದಲ್ಲಿ ಜೇಬುಗಳ್ಳರು ಸಿಗುತ್ತಾರೆ. ಆದರೆ ಇತ್ತೀಚೆಗೆ, ಅಪಾಯಕಾರಿ ಜೇಬುಗಳ್ಳ ಆಶ್ರಯತಾಣಗಳಾಗಿ ವಿಶೇಷವಾಗಿ ಬಾರ್ಸೆಲೋನಾ ಮತ್ತು ರೋಮ್‍ನ್ನು ಆಯ್ಕೆಮಾಡಲಾಯಿತು. ಕಳ್ಳರು ಸಾಮೂಹಿಕ ಸಾಗಣೆ ನಿಲ್ದಾಣಗಳಂತಹ ಹೆಚ್ಚಿನ ಸಂಚಾರದ ಪ್ರದೇಶಗಳಲ್ಲಿ ಕಾರ್ಯವೆಸಗುವುದು ತಿಳಿದುಬಂದಿದೆ. ಸುರಂಗಮಾರ್ಗದ ರೈಲುಗಳನ್ನು ಕೂಡ ಹತ್ತುತ್ತಾರೆ ಮತ್ತು ಇತರರಿಂದ ಕದಿಯಲು ಜನಸಮೂಹದ ಗಮನಭಂಗಗಳು ಮತ್ತು ರೈಲಿನ ಹಠಾತ್ ನಿಲ್ಲು-ಹೋಗು ಚಲನೆಗಳನ್ನು ಬಳಸುತ್ತಾರೆ. ಕಳ್ಳರು ತಮಗೆ ಬೇಕಾದದ್ದು ಸಿಕ್ಕ ತಕ್ಷಣ, ಯಾರು ಅವರಿಂದ ಕಳ್ಳತನ ಮಾಡಿದರು ಮತ್ತು ಯಾವಾಗ ಎಂದು ಕಂಡುಹಿಡಿಯಲು ಬಲಿಪಶುವಿಗೆ ಸಾಧ್ಯವಾಗದಂತೆ ಸರಳವಾಗಿ ಮುಂದಿನ ನಿಲ್ದಾಣದಲ್ಲಿ ಇಳಿಯುತ್ತಾರೆ.

೧೮ನೇ ಶತಮಾನದಲ್ಲಿ ಗಂಡಸರು ಮತ್ತು ಹೆಂಗಸರು ಇಬ್ಬರೂ ಜೇಬುಗಳ್ಳತನ ಮಾಡುತ್ತಿದ್ದರು (ಕಟ್ಟಳೆ ಕೈಗೊಳ್ಳಲಾದ ಜೇಬುಗಳ್ಳತನದ ಪ್ರಕರಣಗಳನ್ನು ನೋಡಿದರೆ, ಪುರುಷರಿಗಿಂತ ಹೆಚ್ಚು ಮಹಿಳಾ ಆರೋಪಿಗಳಿದ್ದರು ಎಂದೂ ತೋರುತ್ತದೆ). ಅಂಗಡಿ ಕಳ್ಳತನದ ಜೊತೆಗೆ, ಜೇಬುಗಳ್ಳತನವು ಪುರುಷರಿಗಿಂತ ಮಹಿಳೆಯರು ಹೆಚ್ಚು ಎಸಗುವ ಏಕೈಕ ಪ್ರಕಾರದ ಅಪರಾಧವಾಗಿತ್ತು. ೧೮ನೇ ಶತಮಾನದಲ್ಲಿ, ಬಹುತೇಕ ಜೇಬುಗಳ್ಳರು ಆರ್ಥಿಕ ಅಗತ್ಯಗಳ ಕಾರಣ ಕದಿಯುತ್ತಿದ್ದರು ಎಂದು ತೋರುತ್ತದೆ: ಹಲವುವೇಳೆ ಅವರು ಬಡವರಾಗಿದ್ದು ಯಾವುದೇ ಆರ್ಥಿಕ ಆಧಾರವನ್ನು ಹೊಂದಿರಲಿಲ್ಲ, ಮತ್ತು ನಿರುದ್ಯೋಗವು ಬಡತನದ ಏಕೈಕ ಪ್ರಮುಖ ಕಾರಣವಾಗಿತ್ತು. ಪರಿಣಾಮವಾಗಿ ಅತ್ಯಂತ ಅಗತ್ಯವಿರುವವರು ಜೇಬುಗಳ್ಳತನ ಮಾಡುತ್ತಿದ್ದರು. ಬಹುತೇಕ ಸಂದರ್ಭಗಳಲ್ಲಿ, ಜೇಬುಗಳ್ಳರು ತಮಗೆ ಸಿಕ್ಕ ಅವಕಾಶಗಳನ್ನು ಅವಲಂಬಿಸಿ ಕೆಲಸ ಮಾಡುತ್ತಿದ್ದರು: ಯಾರಾದರೂ ಬೆಳ್ಳಿಯ ಗಡಿಯಾರ ಧರಿಸಿರುವುದನ್ನು ಅಥವಾ ಅವರ ಜೇಬಿನಿಂದ ಕರವಸ್ತ್ರವು ಹೊರಚಾಚಿದ್ದನ್ನು ಅವರು ನೋಡಿದರೆ, ಜೇಬುಗಳ್ಳರು ಆ ವಸ್ತುವನ್ನು ತೆಗೆದುಕೊಳ್ಳುತ್ತಿದ್ದರು. ಇದರರ್ಥ, ಅಂತಹ ಸಂದರ್ಭಗಳಲ್ಲಿ, ಕಳ್ಳತನವು ಪೂರ್ವಯೋಜಿತವಾಗಿರಲಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. Heap, Simon (1997). "Pickpocketing in Ibadan, 1930–60". Urban History. 24 (3): 324–43.