ಅಪಹಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಪಹರಣ[ಬದಲಾಯಿಸಿ]

ಅಪಹಾರ ಮತ್ತೊಬ್ಬ ವ್ಯಕ್ತಿ ಅಥವಾ ವ್ಯವಹಾರದ ವೈಯಕ್ತಿಕ ಆಸ್ತಿಯನ್ನು ಕಾನೂನುಬಾಹಿರವಾಗಿ ತೆಗೆದುಕೊಳ್ಳುವುದನ್ನು ಒಳಗೊಂಡಿರುವ ಒಂದು ಅಪರಾಧ. ಇದು ಇಂಗ್ಲಂಡ್‍ನ ಸಾಮಾನ್ಯ ಕಾನೂನಿನ ಅಡಿಯಲ್ಲಿ ಒಂದು ಅಪರಾಧವಾಗಿತ್ತು ಮತ್ತು ಇಂಗ್ಲಂಡ್‍ನ ಸಾಮಾನ್ಯ ಕಾನೂನನ್ನು ತಮ್ಮ ಸ್ವಂತ ಕಾನೂನಿನಲ್ಲಿ ಏಕೀಕರಿಸಿಕೊಂಡ ನ್ಯಾಯವ್ಯಾಪ್ತಿಗಳಲ್ಲಿ ಅಪರಾಧವಾಯಿತು.

ಅಪಹಾರದ ಸಾಮಾನ್ಯೀಕರಿಸಿದ ಅಪರಾಧವನ್ನು ಕನ್ನಗಳ್ಳತನ, ದರೋಡೆ, ವಂಚನೆ, ಕಳ್ಳತನ, ಮತ್ತು ಸಂಬಂಧಿತ ಅಪರಾಧಗಳೆಂಬ ನಿರ್ದಿಷ್ಟ ಅಪರಾಧಗಳಾಗಿ ಒಡೆದ ಕಾರಣ, ಅಪಹಾರವನ್ನು ಇಂಗ್ಲಂಡ್, ಉತ್ತರ ಆಯರ್ಲಂಡ್, ಆಯರ್ಲಂಡ್ ಗಣರಾಜ್ಯದಲ್ಲಿ ರದ್ದುಗೊಳಿಸಲಾಗಿದೆ. ಆದರೆ, ಅಪಹಾರವು ಅಮೇರಿಕದ ಭಾಗಗಳಲ್ಲಿ ಮತ್ತು ನ್ಯೂ ಸೌತ್ ವೇಲ್ಸ್, ಆಸ್ಟ್ರೇಲಿಯಾದಲ್ಲಿ ಒಂದು ಅಪರಾಧವಾಗಿ ಉಳಿದಿದೆ, ಮತ್ತು ವೈಯಕ್ತಿಕ ಆಸ್ತಿಯ ಮುಟ್ಟುಗೋಲು ಹಾಗೂ ಒಯ್ಯುವಿಕೆಯನ್ನು ಒಳಗೊಂಡಿದೆ.

ಅಪಹಾರವು ಸ್ವಾಧೀನದ ವಿರುದ್ಧದ ಒಂದು ಅಪರಾಧ. ಇದಲ್ಲದೆ, ಪೂರೈಸಬೇಕಾದ ಎರಡು ಅಂಶಗಳಿವೆ, ಆಸ್ತಿಯ ವಾಸ್ತವಿಕ ತೆಗೆದುಕೊಳ್ಳುವಿಕೆ, ಕ್ಷಣಿಕವಾದರೂ ಸಹ ಮತ್ತು ಮತ್ತೊಬ್ಬರಿಗೆ ಅವರ ಸ್ವತ್ತನ್ನು ಇಲ್ಲದಂತೆ ಮಾಡುವ ದೋಷಪೂರಿತ ಉದ್ದೇಶ. ಅಪಹಾರವು ಆ ಸ್ವತ್ತಿನ ಮಾಲೀಕನ ಬಳಿ ಶಾಶ್ವತವಾಗಿ ಅದನ್ನು ಇಲ್ಲದಂತೆ ಮಾಡುವ ಉದ್ದೇಶದಿಂದ, ಮತ್ತೊಬ್ಬರ ಸ್ವಾಧೀನದಿಂದ ಸ್ವತ್ತಿನ ಅತಿಕ್ರಮಣಿಕ ತೆಗೆದುಕೊಳ್ಳುವಿಕೆಯನ್ನು ಒಳಗೊಂಡಿದೆ. ಅಪಹಾರವನ್ನು ಅರ್ಥಮಾಡಿಕೊಳ್ಳಲು, ಒಬ್ಬರು ಸುಪರ್ದು ಮತ್ತು ಸ್ವಾಧೀನದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು.[೧] ಒಬ್ಬ ವ್ಯಕ್ತಿಯು ಆಸ್ತಿಯ ಮೇಲೆ ವಾಸ್ತವಿಕ ಭೌತಿಕ ಹತೋಟಿಯನ್ನು ಹೊಂದಿದಾಗ ಅಥವಾ ಸ್ವತ್ತಿನ ಮಾರಾಟ ಅಥವಾ ಬಳಕೆ ಮೇಲೆ ಗಣನೀಯ ನಿಯಂತ್ರಣವನ್ನು ಚಲಾಯಿಸುವ ಹಕ್ಕನ್ನು ಹೊಂದಿದಾಗ, ಆ ವ್ಯಕ್ತಿಯು ಸ್ವತ್ತಿನ ಒಡೆತನ ಹೊಂದಿರುತ್ತಾನೆ. ಒಬ್ಬ ವ್ಯಕ್ತಿಯು ಸ್ವತ್ತಿನ ವಾಸ್ತವಿಕ ಭೌತಿಕ ನಿಯಂತ್ರಣವನ್ನು ಹೊಂದಿದ್ದರೆ ಆದರೆ ರಚನಾತ್ಮಕ ಒಡೆತನವನ್ನು ಹೊಂದಿದ ವ್ಯಕ್ತಿಯು ಸ್ವತ್ತನ್ನು ಬಳಸುವ ಸುಪರ್ದುದಾರನ ಹಕ್ಕನ್ನು ಗಣನೀಯವಾಗಿ ನಿರ್ಬಂಧಿಸಿದಾಗ, ಒಬ್ಬನು ಸುಪರ್ದು ಹೊಂದಿರುತ್ತಾನೆ. ಅಂಗಡಿಯ ಗ್ರಾಹಕನು ವ್ಯಾಪಾರಿಯ ಸರಕುಗಳನ್ನು ಪರೀಕ್ಷಿಸುವುದು, ಅಥವಾ ಉದ್ಯೋಗದಾತನು ತನ್ನ ಸ್ವತ್ತನ್ನು ಉದ್ಯೋಗಿಗೆ ಅವನ ಉದ್ಯೋಗದಲ್ಲಿ ಬಳಸಲು ಕೊಡುವುದು, ಸುಪರ್ದಿನ ಉದಾಹರಣೆಗಳು ಆಗಿವೆ. ಒಬ್ಬ ವ್ಯಕ್ತಿಯು ಮೋಸದಿಂದ ಸ್ವತ್ತಿನ ವಾಸ್ತವಿಕ ಸ್ವಾಧೀನ ಪಡೆದುಕೊಂಡಿರುವುದು, ಇದಕ್ಕೆ ವಿರುದ್ಧವಾದ ಉದಾಹರಣೆ.

ತೆಗೆದುಕೊಳ್ಳುವಿಕೆ ಅಥವಾ ಮುಟ್ಟುಗೋಲು ಅಂಶಕ್ಕೆ ಅಪರಾಧಿಯು ಸ್ವತ್ತಿನ ವಾಸ್ತವಿಕ ಭೌತಿಕ ನಿಯಂತ್ರಣವನ್ನು ತೆಗೆದುಕೊಳ್ಳುವುದು, ಕ್ಷಣಿಕವಾದರೂ ಸರಿ, ಅಗತ್ಯವಾಗಿರುತ್ತದೆ. ಸಾಮಾನ್ಯ ಕಾನೂನಿನ ಅಡಿಯಲ್ಲಿ, ಅಪರಾಧಿಯು ಬಲಿಪಶು ಬಳಿ ಸ್ವತ್ತಿನ ಸ್ವಾಧೀನವನ್ನು ಕೇವಲ ಇಲ್ಲದಂತೆ ಮಾಡುವುದು ಸಾಕಾಗಿರಲಿಲ್ಲ; ಅಪರಾಧಿಯು ಸ್ವತ್ತಿನ ಮೇಲೆ ಹತೋಟಿ ಪಡೆದುಕೊಂಡಿರಬೇಕಾಗಿತ್ತು. ಹಾಗಾಗಿ ಕೇವಲ ಒಂದು ವಸ್ತುವನ್ನು ಒಬ್ಬ ವ್ಯಕ್ತಿಯ ಕೈಯಿಂದ ಹೊಡೆದುರುಳಿಸುವುದು, ಆದರೆ ನಂತರ ಅದನ್ನು ತೆಗೆದುಕೊಳ್ಳದಿದ್ದರೆ ಅದು ಅಪಹಾರವಾಗಿರಲಿಲ್ಲ. ಹತೋಟಿಯು ಸಂಪೂರ್ಣವಾಗಿರಬೇಕು.

ಉಲ್ಲೇಖಗಳು[ಬದಲಾಯಿಸಿ]

  1. Joshua Dressler, Understanding Criminal Law, 3rd ed. (Lexis 2001) ISBN 0-8205-5027-2
"https://kn.wikipedia.org/w/index.php?title=ಅಪಹಾರ&oldid=1158751" ಇಂದ ಪಡೆಯಲ್ಪಟ್ಟಿದೆ