ಜೇನ್ ಆಸ್ಟಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೇನ್ ಆಸ್ಟಿನ್
Jane Austen (1775 - 1817) by Cassandra Austen, close up
ಜನನ
ಜೇನ್ ಆಸ್ಟಿನ್

16 December 1775
Steventon Rectory, Hampshire, England

ಜೇನ್ ಆಸ್ಟಿನ್(೧೬ ಡಿಸೆಂಬರ್ ೧೭೭೫-೧೮ ಜುಲೈ ೧೮೧೭)ರವರು ಆಂಗ್ಲ ಕಾದಂಬರಿಗಾರ್ತಿ. ಆಕೆಯ ಪ್ರಣಯಭರಿತ ಕಾದಂಬರಿಗಳು ಆಕೆಯನ್ನು ಇಂಗ್ಲೀಷ್ ಸಾಹಿತ್ಯದ ಶ್ರೇಷ್ಠ ಕಾದಂಬರಿಗಾರ್ತಿಯನ್ನಾಗಿಸಿದೆ. ಅವರ ಕಾದಂಬರಿಗಳಲ್ಲಿನ ವಾಸ್ತವಿಕತೆ, ವ್ಯಂಗ್ಯ, ಸಾಮಾಜಿಕ ವಿವರಣೆ ಅವರನ್ನು ಉತ್ತಮ ವಿದ್ವಾಂಸರೊಂದಿಗೆ ಸೇರಿಸಲಾಗುತ್ತದೆ.


ಆಸ್ಟಿನ್ ರವರು ತಮ್ಮ ಇಡೀ ಜೀವನವನ್ನು ತಮ್ಮ ಕುಟುಂಬದವರೊಂದಿಗೆ ಕಳೆದರು. ಆಕೆಯ ಮೊದಲ ಗುರು ಆಕೆಯ ತಂದೆ. ಆಕೆಯ ಅಣ್ಣಂದಿರು ಮತ್ತು ಸ್ವಪ್ರಯತ್ನ ಆಕೆಯ ವಿದ್ಯಭ್ಯಾಸದಲ್ಲಿ ಪ್ರಮುಖ ಪಾತ್ರವಹಿಸಿದ್ದೆ. ಆಕೆಯ ಕುಟುಂಬದವರ ಸಹಕಾರ ಆಕೆಯನ್ನು ಒರ್ವ ಒಳ್ಳೆಯ ಬರಹಗಾರ್ತಿಯನ್ನಾಗಿಸಿತು. ಆಕೆಯ ಕಲಾತ್ಮಕ ಶಿಷ್ಯವೃತ್ತಿ ಹದಿಮೂರರಿಂದ ಮೂವತ್ತರವರೆಗೆ ಮುಂದುವರಿಯಿತು. ಈ ಅವಧಿಯಲ್ಲಿ ಅವರು ವಿವಿಧ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನೇ ತೊಡಗಿಸಿಕೊಂಡರು. ೧೮೧೧ರಿಂದ ೧೮೧೬ರರವರೆಗೆ ಪ್ರಕಟಗೊಂಡ ಆಕೆಯ ಕಾದಂಬರಿಗಳಾದ Sense and Sensibility (೧೮೧೧), Pride and Prejudice (೧೮೧೩),Mansfield Park (೧೮೧೪), Emma (೧೮೧೬). ಆಕೆಯನ್ನು ಒಬ್ಬ ಉತ್ತಮ ಲೇಖಕಿಯ ಸ್ಥಾನ ತಂದುಕೊಟ್ಟಿತು. Northanger Abbey ಮತ್ತು Persuasion ಕಾದಂಬರಿಗಳು ಆಕೆಯ ಮರಣಾನಂತರ ಪ್ರಕಟಗೊಂಡವು. Sanditon ಕಾದಂಬರಿಯನ್ನು ಬರೆಯಲು ಆರಂಭಿಸಿದರೂ, ಅದನ್ನು ಮುಗಿಸುವ ಮುನ್ನವೆ ಆಕೆ ಇಹಲೋಕ ತ್ಯಜಿಸಿದರು.

ಆಸ್ಟಿನ್ ರ ಕಾದಂಬರಿಗಳಲ್ಲಿ ೧೮ ಮತ್ತು ೧೯ನೇ ಶತಮಾನದ ಜೀವನ ಶೈಲಿ, ಸಾಮಾಜಿಕ ವ್ಯವಸ್ಥೆಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಆಕೆಯ ಕಾದಂಬರಿಗಳು ಹಾಸ್ಯಭರಿತವಾಗಿದ್ದರೂ ಮಹಿಳೆ ವಿವಾಹದ ಚೌಕಟ್ಟಿನಲ್ಲಿ ಯಾವ ರೀತಿಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸುರಕ್ಷಿತಳು ಎಂಬುದಕ್ಕೆ ಒತ್ತು ನೀಡಿದ್ದಾರೆ. ಆಕೆಯ ಕಾದಂಬರಿಗಳು ಅನಾಮಿಕವಾಗಿ ಪ್ರಕಟಗೊಂಡರೂ, ಆಕೆಗೆ ಪ್ರಖ್ಯಾತಿಯನ್ನು ತಂದುಕೊಟ್ಟಿತ್ತು. ೧೮೬೯ರಲ್ಲಿ ಆಕೆಯ ಸೋದರಳಿಯ ಬರೆದ A Memoir of Jane Austen ಆಕೆಗೆ ಮಾನ್ಯತೆ ತಂದುಕೊಟ್ಟಿತಲ್ಲದೆ ಆಕೆಯನ್ನು ಇಂಗ್ಲೀಷ್ ಸಾಹಿತ್ಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿಸಿತು. ೨೦ನೇ ಶತಮಾನದಲ್ಲಿ ಆಕೆಯ ಕಾದಂಬರಿಗಳಿಗೆ ಅಭಿಮಾನಿಗಳ ದಂಡು ಬೆಳೆಯಿತು.

ಜೀವನ ಮತ್ತು ವೃತ್ತಿ[ಬದಲಾಯಿಸಿ]

ಆಸ್ಟಿನ್ ರವರ ವಯಕ್ತಿಕ ಜೀವನದ ಬಗೆಗಿನ ವಿವರಗಳು ಬಹಳ ಕಡಿಮೆ. ಅವರ ೩೦೦೦ ವಯಕ್ತಿಕ ಪತ್ರಗಳಲ್ಲಿ ಕೇವಲ ೧೬೦ ಪತ್ರಗಳು ಮಾತ್ರ ಬಹಿರಂಗ ಪಡಿಸಲಾಗಿದೆ. ಅವರ ಮರಣಾನಂತರ ಅವರ ಸಂಬಂಧಿಕರು ಹೊದಗಿಸಿದ ಮಹಿತಿಗಳೇ ಮೂಲಾಧಾರ.

ಕುಟುಂಬ[ಬದಲಾಯಿಸಿ]

ಆಸ್ಟಿನ್ ರ ತಂದೆ ಜಾರ್ಜ್ ಆಸ್ಟಿನ್ ಹಾಗೂ ತಾಯಿ ಕಸಾಂದ್ರ ಕುಲೀನ ಮನತನಕ್ಕೆ ಸೇರಿದವರು. ಜಾರ್ಜ್ ರವರು ಉಣೆ ಬಟ್ಟೆಗಳ ತಯರಕರಾಗಿದ್ದರು. ಅವರು Steventon, Hampshireನಲ್ಲಿ ಆಂಗ್ಲಿಕನ್ ಸಭೆಯ ಪಾದ್ರಿಯಗಿದ್ದರು. ೨೬ ಏಪ್ರಿಲ್ ೧೭೬೪ರಲ್ಲಿ ಅವರು ಕಸಾಂದ್ರರೊಂದಿಗೆ ವಿವಾಹವಾದರು. ಜೀವನೊಪಯಕಾಗಿ ಕೃಷಿ ಮತ್ತು ಮೂರು-ನಾಲ್ಕು ವಿದ್ಯಾರ್ಥಿಗಳಿಗೆ ಮನೆಯಲ್ಲಿ ಉಳಿಸಿಕೊಂಡು ಪಾಠ ಹೇಳಿಕೊಡುತ್ತಿದ್ದರು.

ಆಸ್ಟಿನ್ ರ ಕುಟುಂಬ ದೊಡ್ದದು. ಆರು ಸೋದರರು- ಜೇಮ್ಸ್(೧೭೬೫-೧೮೧೯), ಜಾರ್ಜ್(೧೭೬೬-೧೮೩೮), ಎಡ್ವರ್ಡ್(೧೭೬೮-೧೮೫೨), ಹೆನ್ರಿ ಥಾಮಸ್(೧೭೭೧-೧೮೫೦), ಫ್ರಾನ್ಸಿಸ್ ವಿಲಿಯಂ(೧೭೭೪-೧೮೬೫), ಚಾರ್ಲ್ಸ ಜಾನ್(೧೭೭೯-೧೮೫೨) ಮತ್ತು ಒರ್ವ ಸೋದರಿ ಕಸಾಂದ್ರ ಎಲಿಜಬೆತ್(೧೭೭೩-೧೮೪೫) ಅವರು ಕೂಡ ಅವಿವಾಹಿತರು. ಕಸಾಂದ್ರರವರೇ ಜೇನ್ ಆಸ್ಟಿನ್ ರವರ ಜೀವನದಲ್ಲಿ ಆಪ್ತಗೆಳತಿಯಾಗಿದ್ದರು. ಹೆನ್ರಿರವರು ಬ್ಯಾಂಕ್ ನ ಮಲೀಕರಾಗಿದ್ದರು, ಬ್ಯಾಂಕ್ ವ್ಯವಹಾರ ಪರಜಯಪಟ್ಟನಂತರ ಅವರು ಪಾದ್ರಿಯಾಗಿ ಸೇವೆಸಲ್ಲಿಸಿದ್ದರು. ಹೆನ್ರಿರವರು ಜೇನ್ ರವರ ಸಾಹಿತ್ಯ ಚಟುವಟಿಕೆಗಳ ಕಾರ್ಯಕರ್ತರಾಗಿದ್ದರು. ಜೇನ್ ಆಸ್ಟಿನ್ ರವರು ೧೦ ಹೆನ್ರೀಟ್ಟಾ ರಸ್ತೆಯಲ್ಲಿ ವಾಸವಾಗಿದ್ದಾಗ ಅವರ ಜೀವನದ ಉತ್ತಮ ಪತ್ರಗಳನ್ನು ಬರೆದರು. ಹೆನ್ರಿರವರ ಸ್ನೇಹಿತರ ಬಳಗದಲ್ಲಿ ಬ್ಯಾಂಕ್ ಮಾಲೀಕರು, ವ್ಯಾಪಾರಿಗಳು, ಪ್ರಕಾಶಕರು,ಚಿತ್ರಕಾರರು ಮತ್ತು ನಟರು ಇದ್ದರು. ಹೆನ್ರಿರವರು ಅವಳಿಗೆ ನಗರದ ಹೊರ ಊರುಗಳ ಸಾಮಾಜಿಕ ವ್ಯವಸ್ಥೆಯ ಕುರಿತು ಮಾಹಿತಿ ಕೊಡುತ್ತಿದ್ದರು.

ಬಾಲ್ಯ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಜೇನ್ ಆಸ್ಟಿನ್ ೧೬ನೇ ಡಿಸೆಂಬರ್ ೧೭೭೫ರಲ್ಲಿ Steventonನಲ್ಲಿ ಜನಿಸಿದರು. ಅವಳ ಜ್ಞಾನಸ್ನಾನ ೫ನೇ ಏಪ್ರಿಲ್ ೧೭೭೬ರಲ್ಲಿ ನಡೆಯಿತು. ೧೭೮೩ರಲ್ಲಿ ಆಸ್ಟಿನ್ ಮತ್ತು ಕಸಾಂದ್ರ ಆಕ್ಸ್ಫರ್ಡ್ ನಲ್ಲಿ ವಿದ್ಯಾಭ್ಯಾಸಕ್ಕೆ ಶ್ರೀಮತಿ ಆನ್ ಬಳಿ ಸೇರಿಕೊಂಡರು. ಅವರ ಜೊತೆಗೆ ಸೌತಾಂಪ್ಟನ್ ಗೆ ವಲಸೆ ಹೋದರು. ಅನಾರೋಗ್ಯ ನಿಮಿತ್ತ, ಮನೆಗೆ ಬಂದ ಅವರ ವಿದ್ಯಾಭ್ಯಾಸ ಮನೆಯಲ್ಲೇ ಮುಂದುವರೆಯಿತು. ೧೭೮೫ರಲ್ಲಿ ವಸತಿ ಶಾಲೆಗೆ ಸೇರಿದರು. ಅಲ್ಲಿ ಫ್ರೆಂಚ್, ಕಾಗುಣಿತ, ಕಸೂತಿ, ನೃತ್ಯ, ಸಂಗೀತ, ನಾಟಕಗಳಲ್ಲಿ ತರಬೇತಿ ಹೊಂದಿದರು. ಡಿಸೆಂಬರ್ ೧೭೮೬ರ ಹೊತ್ತಿಗೆ ಅವರಿಬ್ಬರೂ ಮನೆಗೆ ವಾಪಾಸಾದರು-ಕಾರಣ ಆರ್ಥಿಕವಾಗಿ ಅವರನ್ನು ಓದಿಸಲು ಸಾಧ್ಯವಾಗದೆ ಹೋದದ್ದು.

ಆಸ್ಟಿನ್ ತಮ್ಮ ಮುಂದಿನ ವಿದ್ಯಾಭ್ಯಾಸ ಸ್ವಪರಿಶ್ರಮ, ಸಹೋದರ ಮತ್ತು ತಂದೆಯ ಮಾರ್ಗದರ್ಶನದಲ್ಲಿ ಮುಂದುವರೆಸಿದರು. ಜಾರ್ಜ್ ಆಸ್ಟಿನ್ ತಮ್ಮ ವಾಚನಾಲಯವನ್ನು ಮಕ್ಕಳು ಸದುಪಯೋಗ ಪಡಿಸಿಕೊಳ್ಳಲು ನೆರವಾದರು. ಅವರ ಬರವಣಿಗೆಗೆ, ಕಲೆಗೆ ಬೇಕಾದ ದುಬಾರಿ ಕಾಗದ ಸಾಮಗ್ರಿಗಳನ್ನು ಒದಗಿಸಿದರು. Park Honnanರ ಪ್ರಕಾರ ಅವರ ಮನೆಯ ವಾತಾವರಣದಲ್ಲಿ ಅಂದಿನ ಸಾಮಾಜಿಕ, ರಾಜಕೀಯ ವಿಷಯಗಳ ಚರ್ಚೆ, ಆಸ್ಟಿನ್ ಕಾದಂಬರಿಗಳಲ್ಲಿ ಪ್ರಮುಖ ಪಾತ್ರವಹಿಸಿತು. ೧೭೮೬ರಲ್ಲಿ ಅವರ ಮನೆಯ ಗಡಿ ಬಿಟ್ಟು ಅವರು ಹೊರ ಹೋಗುವ ಸಂದರ್ಭ ಒದಗಿ ಬರಲಿಲ್ಲ. ಖಾಸಗಿ ನಾಟಕಗಳು ಅವರ ವಿದ್ಯಾಭ್ಯಾಸದ ಒಂದು ಭಾಗವಾಗಿತ್ತು.

ಹರೆಯ[ಬದಲಾಯಿಸಿ]

೧೭೮೭ರಲ್ಲಿಯೇ ಆಸ್ಟಿನ್ ಕವಿತೆ ಬರೆಯಲು ಆರಂಭಿಸಿದರು. ಈ ಕವಿತೆಗಳಲ್ಲಿ ಮೂರು ಗ್ರಂಥಗಳಲ್ಲಿ ಸಂಗ್ರಹಿಸಿದರು- ಅದೇ ಈಗ Juvenilia(೧೭೮೭-೧೭೯೩) ಎಂದು ಪ್ರಸಿದ್ಧವಾದ ಕೃತಿ.

ಪ್ರೌಢಾವಸ್ಥೆ[ಬದಲಾಯಿಸಿ]

ಆಸ್ಟಿನ್ ಪ್ರೌಢಾವಸ್ಥೆಯಲ್ಲಿ ತಮ್ಮ ಮನೆಯಲ್ಲೇ, ಪೋಷಕರ ಜೊತಯಲೇ ಇದ್ದರು. ತಮ್ಮ ವಯಸ್ಸಿನ ಹೆಣ್ಣುಮಕ್ಕಳ ರೀತಿಯಲ್ಲೇ ಬೆಳೆದು ಬಂದರು. ಅವಳು fortepiano ಕಲಿತಳು. ಅವರ ತಾಯಿ ಮತ್ತು ಸಹೋದರಿಯ ಜೊತೆ ಮನೆಗೆಲಸ ಮತ್ತು ಕೆಲಸಗಾರರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.

ಆಸ್ಟಿನ್ ತನ್ನ ಕೃತಿಗಳನ್ನು ತನ್ನ ಸಹೋದರರ ಮಕ್ಕಳಿಗೆ ಕಳುಹಿಸಿಕೊಟ್ಟರು. ತನ್ನ ಕೆಲಸದ ಬಗ್ಗೆ ಆಕೆಗೆ ಬಹಳ ಹೆಮ್ಮೆ ಇತ್ತು. ಚರ್ಚ್ ಗೆ ತಪ್ಪದೆ ಹೋಗುತ್ತಿದ್ದರು. ಎಲ್ಲರೊಂದಿಗೂ ಬೆರೆಯುತ್ತಿದ್ದರು. ತಾನು ಬರೆದ ಕಾದಂಬರಿಗಳನ್ನು ಮನೆಯವರೆಲ್ಲಾರು ಒಟ್ಟಿಗೆ ಸೇರುವಾಗ ಜೋರಾಗಿ ಎಲ್ಲರ ಮುಂದೆ ಓದಿ ಹೇಳುತ್ತಿದ್ದರು.

ಜೇನ್ 'ಉತ್ತಮ ನೃತ್ಯಗಾರ್ತಿ' ಎಂದು ಹೆನ್ರಿರವರು ಹೊಗಳುತ್ತಾರೆ. ೧೭೯೩ರಲ್ಲಿ ಪ್ರಾರಂಭಿಸಿದ Sir. Charles Grandison ಅಥವಾ The Happy Man ಎಂಬ ಕಿರುನಾಟಕವನ್ನು ೧೮೦೦ರಲ್ಲಿ ಪೂರ್ಣಗೊಳಿಸಿದರು. ೧೭೮೯ರಲ್ಲಿ Love and Friendship ಎಂಬ ಕೃತಿಯನ್ನು ಬರೆದ ನಂತರ, ತಮ್ಮ ಸಾಹಿತ್ಯಕ ಜೀವನವನ್ನು ವೃತ್ತಿಪರಗೊಳಿಸಲು ನಿರ್ಧರಿಸಿದರು.

೧೭೯೩ರ ವೇಳೆಗೆ, ಆಕೆ ಅತ್ಯಾಧುನಿಕ ಕಾದಂಬರಿಗಳ ಬರವಣಿಗೆಯಲ್ಲಿ ತನ್ನನ್ನೇ ತೊಡಗಿಸಿಕೊಂಡರು.Lady Susan (೧೭೯೩-೧೭೯೫) ಆಕೆಯ ಪತ್ರಗಳ ಕಾದಂಬರಿ.

ಕೃತಿಗಳು[ಬದಲಾಯಿಸಿ]

Elinor and Marianne ಎಂಬ ಕಾದಂಬರಿಯನ್ನು ಬರೆಯಲು ಆರಂಭಿಸಿದಳು. ಈ ಕಾದಂಬರಿಯನ್ನು ಅವಳು ಮೊದಲೇ ತನ್ನ ಕುಟುಂಬದವರಿಗೆ ಓದಿ ತಿಳಿಸಿದ್ದಳು ಮತ್ತು ಪತ್ರಗಳ ಮೂಲಕ ಬರೆದು ತಿಳಿಸಿದ್ದಳು. ಈ ಕಾದಂಬರಿಯ ಮೂಲ ಇದೇ. ಅದರೆ ಇದು Sense and Sensibility ಎಂಬ ಹೆಸರಿನಲ್ಲಿ ೧೮೧೧ರಲ್ಲಿ ಪ್ರಕಟಗೊಂಡರೂ, ಮೂಲ ಕಾದಂಬರಿಯು ಯಥಾವತ್ತಾಗಿ ಚಿತ್ರಿತವಾಗಿರುವ ಬಗ್ಗೆ ಸಂಶಯವಿದೆ.

೧೭೯೬ರಲ್ಲಿ ಎರಡನೇ ಕಾದಂಬರಿ First Impressionsನ ಕಾರ್ಯ ಆರಂಭಿಸಿದರು. ಮುಂದೆ ಇದೇ Pride and Prejudice ಎಂಬ ಹೆಸರಿನಲ್ಲಿ ಪ್ರಕಟಗೊಂಡಿತು. ಮೂರನೇ ಕಾದಂಬರಿ Susan ಮುಂದೆ Northanger Abbey ಎಂದು ಪ್ರಸಿದ್ಧವಾದ ಕಾದಂಬರಿಯ ಕಾರ್ಯ ಆರಂಭಿಸಿದರು.

ಅಸ್ವಸ್ಥತೆ ಮತ್ತು ಸಾವು[ಬದಲಾಯಿಸಿ]

೧೮೧೬ರಲ್ಲಿ ಆಕೆಯ ಆರೋಗ್ಯ ಹದೆಗೆಟ್ಟಿತು. ಆದರೆ ಆಸ್ಟಿನ್ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿಲ್ಲ. ೧೮ ಜುಲ್ಯೆ ೧೮೧೭ರ ವೇಳೆಗೆ ಆಕೆಯ ಆರೋಗ್ಯ ಪೂರ್ಣ ಹದೆಗೆಟ್ಟಿತು, Winchesterನಲ್ಲಿ ೪೧ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಜೇನ್ ಆಸ್ಟಿನ್, ಇಂಗ್ಲೀಷ್ ಸಾಹಿತ್ಯ ಲೋಕ ಕಂಡ ಪ್ರಸಿದ್ಧ ಲೇಖಕಿ, ಕಾದಂಬರಿಗಾರ್ತಿಯರಲ್ಲಿ ಒಬ್ಬರಗಿದ್ದಾರೆ.