ಜೇನ್ಸ್ ಕ್ರಿಸ್ಚಿಯನ್ ಸ್ಕೌ
ಜೇನ್ಸ್ ಕ್ರಿಸ್ಚಿಯನ್ ಸ್ಕೌ | |
---|---|
ಜನನ | Lemvig, Denmark | ೮ ಅಕ್ಟೋಬರ್ ೧೯೧೮
ಮರಣ | 28 May 2018 Risskov, Aarhus, Denmark | (aged 99)
ರಾಷ್ಟ್ರೀಯತೆ | Danish |
ಕಾರ್ಯಕ್ಷೇತ್ರ | Physiology, Biophysics, Biochemistry |
ಪ್ರಸಿದ್ಧಿಗೆ ಕಾರಣ | Na+,K+-ATPase |
ಗಮನಾರ್ಹ ಪ್ರಶಸ್ತಿಗಳು | 1997, Nobel Prize in Chemistry |
ಹಸ್ತಾಕ್ಷರ |
ಜೇನ್ಸ್ ಕ್ರಿಸ್ಚಿಯನ್ ಸ್ಕೌ ಅವರು ಡ್ಯಾನಿಶ್ನ ಜೈವಿಕತಜ್ಞ. ಸ್ಕೌ ಅವರು 8 ಅಕ್ಟೋಬರ್ 1918ರಂದು ಡೆನ್ಮಾರ್ಕ್ನ ಲೆಮ್ವಿಗ್ನಲ್ಲಿ ಜನಿಸಿದರು.
ಬಾಲ್ಯ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಸ್ಕೌ ಅವರು ಡೆನ್ಮಾರ್ಕ್ನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಮ್ಯಾಗ್ನಸ್ ಮಾರ್ಟಿನಸ್ ಸ್ಕೌ ಮತ್ತು ಅವರು ಮರದ ಹಾಗೂ ಕಲ್ಲಿದ್ದಲಿನ ವ್ಯಾಪಾರಿಯಾಗಿದ್ದರು. ಸ್ಕೌ ಅವರ ತಾಯಿ ತನ್ನ ಗಂಡನ ಮರಣದ ನಂತರ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಂಡರು. 15 ನೇ ವಯಸ್ಸಿನಲ್ಲಿ, ಸ್ಕೌ ಅವರು ಜಿಲ್ಯಾಂಡ್ನ ಹಸ್ಲೆವ್ನಲ್ಲಿ ಬೋರ್ಡಿಂಗ್ ಶಾಲೆಗೆ ಸೇರಿಕೊಂಡರು. ಅವರು 1944 ರಲ್ಲಿ ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿ ಪಡೆದರು ಮತ್ತು 1954ರಲ್ಲಿ ತಮ್ಮ ಡಾಕ್ಟರೇಟ್ ಪದವಿಯನ್ನು ಪಡೆದರು. 1947ರಲ್ಲಿ ಆರ್ಹಸ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು 1977ರಲ್ಲಿ ಬಯೋಫಿಸಿಕ್ಸ್ ಪ್ರೊಫೆಸರ್ ಆಗಿ ನೇಮಕಗೊಂಡರು.[೧]
ವೃತ್ತಿಜೀವನ
[ಬದಲಾಯಿಸಿ]1997ರಲ್ಲಿ ಸ್ಕೌ ಅವರು ಪೌಲ್ ಡಿ ಬೊಯರ್ ಮತ್ತು ಜಾನ್ ಇ ವಾಕರ್ ಅವರ ಜೊತೆಗೆ ಮಾಡಿದ ಸೋಡಿಯಂ,ಪೊಟ್ಯಾಶಿಯಮ್ ಮತ್ತು ಎಟಿಪೇಸ್ ಶೋಧನೆಗಾಗಿ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. 1950ರ ದಶಕದ ಆರಂಭದಲ್ಲಿ ಸ್ಥಳೀಯ ಅರಿವಳಿಕೆಗಳ ಕ್ರಿಯೆಯನ್ನು ಸ್ಕೌ ಅವರು ಅಧ್ಯಯನಮಾಡಿದರು. ಒಂದು ವಸ್ತುವಿನ ಅರಿವಳಿಕೆ ಕ್ರಿಯೆಯು ಪ್ಲಾಸ್ಮಾ ಮೆಂಬರೇನ್ನ ಲಿಪಿಡ್ ಭಾಗವನ್ನು ಕರಗಿಸುವ ಸಾಮರ್ಥ್ಯಕ್ಕೆ ಸಂಬಂಧಿಸಿದೆ ಎಂದು ಅವರು ಕಂಡುಹಿಡಿದಿದ್ದಾರೆ.ಅರಿವಳಿಕೆ ಅಣುಗಳು ಸೋಡಿಯಂ ಚಾನಲ್ಗಳ ಮೇಲೆ ಪ್ರಭಾವ ಬೀರಿದರ ಕಾರಣ ಅದನ್ನು ಪ್ರೋಟೀನ್ ಎಂದು ಭಾವಿಸಿದರು.1958ರಲ್ಲಿ ಸ್ಕೋಯಿ ವಿಯೆನ್ನಾದಲ್ಲಿ ನಡೆದ ಸಭೆಗೆ ಸ್ಕೌ ಅವರು ಹೋದರು. ಅಲ್ಲಿ ಅವರು ಕೆಂಪು ರಕ್ತ ಕಣಗಳಲ್ಲಿ ಸೋಡಿಯಂ ಮತ್ತು ಪೊಟ್ಯಾಶಿಯಮ್ ಪಂಪ್ ಮಾಡುವಿಕೆಯನ್ನು ಅಧ್ಯಯನ ಮಾಡುತ್ತಿದ್ದ ರಾಬರ್ಟ್ ಪೋಸ್ಟ್ ಅವರನ್ನು ಭೇಟಿಯಾದರು. ಪೊಟ್ಯಾಸಿಯಮ್ ಅಯಾನ್ಗಳ ಪ್ರತಿ ಮೂರು ಸೋಡಿಯಂ ಅಯಾನುಗಳನ್ನು ಕೋಶದಿಂದ ಹೊರಗೆ ಪಂಪ್ ಮಾಡಲಾಗಿದೆಯೆಂದು ಪೋಸ್ಟ್ ಅವರು ಇತ್ತೀಚೆಗೆ ಕಂಡುಹಿಡಿದಿದ್ದಾರೆ.[೨]
ನಿಧನ
[ಬದಲಾಯಿಸಿ]ಸ್ಕೌ ಅವರು 28,ಮೇ 2018ರಂದು ತಮ್ಮ 99ನೇ ವಯಸ್ಸಿನಲ್ಲಿ ಡೆನ್ಮಾರ್ಕ್ನಲ್ಲಿ ನಿಧನರಾದರು.[೩]
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://www-nytimes-com.cdn.ampproject.org/v/s/www.nytimes.com/2018/06/01/obituaries/skou-nobel-chemistry-obituary.amp.html?amp_js_v=a2&_gsa=1&usqp=mq331AQECAFYAQ%3D%3D#referrer=https%3A%2F%2Fwww.google.com&_tf=From%20%251%24s&share=https%3A%2F%2Fwww.nytimes.com%2F2018%2F06%2F01%2Fobituaries%2Fskou-nobel-chemistry-obituary.html
- ↑ https://www.britannica.com/biography/Jens-C-Skou
- ↑ https://www-nytimes-com.cdn.ampproject.org/v/s/www.nytimes.com/2018/06/01/obituaries/skou-nobel-chemistry-obituary.amp.html?amp_js_v=a2&_gsa=1&usqp=mq331AQECAFYAQ%3D%3D#referrer=https%3A%2F%2Fwww.google.com&_tf=From%20%251%24s&share=https%3A%2F%2Fwww.nytimes.com%2F2018%2F06%2F01%2Fobituaries%2Fskou-nobel-chemistry-obituary.html