ವಿಷಯಕ್ಕೆ ಹೋಗು

ಜೂಲಿಯಸ್ ಪ್ಲುಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೂಲಿಯಸ್ ಪ್ಲುಕರ್

ಜೂಲಿಯಸ್ ಪ್ಲುಕರ್ (1801-68) ಜರ್ಮನಿ ದೇಶದ ಗಣಿತಜ್ಞ ಮತ್ತು ಭೌತವಿಜ್ಞಾನಿ.

ಜೀವನ[ಬದಲಾಯಿಸಿ]

1801 ಜೂನ್ 16ರಂದು ಜನನ. ಶುದ್ಧ ಗಣಿತಾಧ್ಯಯನದಲ್ಲಿ ಅರ್ಧಾಯುಷ್ಯ ಕಳೆದ. ಆ ವೇಳೆಗೆ ಗಿಸ್ಲರ್ ಕೊಳವೆಗಳು ಬಳಕೆಗೆ ಬಂದು ನಿರ್ವಾತದಲ್ಲಿ ವಿದ್ಯುದ್ವಿಸರ್ಜನೆಯ ಅಧ್ಯಯನ ಫಲಪ್ರದವಾಗಿತ್ತು. ಆಧುನಿಕ ಭೌತವಿಜ್ಞಾನದ ಉದಯವಾದದ್ದೇ ಈ ಕ್ಷೇತ್ರದಲ್ಲಿ. ನಿರ್ವಾತ ಕೊಳವೆಗಳಲ್ಲಿ ವಿದ್ಯುತ್ತು ಪ್ರವಹಿಸಿದಾಗ ಪ್ರತಿದೀಪ್ತಿ (ಫ್ಲೂರೆಸನ್ಸ್) ಕಾಣಿಸಿಕೊಳ್ಳುತ್ತದೆ. ಪ್ಲುಕರ್ ನಿರ್ವಾತ ಕೊಳವೆಯೊಂದನ್ನು ವಿದ್ಯುತ್ಕಾಂತದ ಧ್ರುವಗಳ ನಡುವೆ ಇಟ್ಟು ಪರೀಕ್ಷಿಸಿದ. ಆಗ ಪ್ರತಿದೀಪ್ತಿಯ ಆಕರ ಬೇರೆಯಾಯಿತು. ಧ್ರುವಗಳನ್ನು ಅದಲುಬದಲು ಮಾಡಿದಾಗ ಸ್ಥಾನಾಂತರ ದಿಕ್ಕು ಬದಲಾಯಿತು.[೧] ಅಂದಮೇಲೆ ವಿದ್ಯುದಾವೇಶಕ್ಕೂ ಪ್ರತಿದೀಪ್ತಿಗೂ ಸಂಬಂಧವಿದೆ ಎಂದಾಯಿತು. ಕ್ರಮೇಣ ಈ ದಿಶೆಯಲ್ಲಿ ವ್ಯವಸ್ಥಿತ ಸಂಶೋಧನೆಗಳು ನಡೆದು ಪ್ರತಿದೀಪ್ತಿಗೆ ಕಾರಣವಾದ ಎಲೆಕ್ಟ್ರಾನುಗಳ ಅವಿಷ್ಕಾರವಾಯಿತು.[೨]: 67  ಟಾರೀಚೆಲೀಯ (1608-47) ಸಂಶೋಧನೆಯಿಂದ ನಿರ್ವಾತದ ಪತ್ತೆಯಾಯಿತು. ಗಿಸ್ಲರ್ (1814-79) ಅದನ್ನು ಕೃತಕವಾಗಿ ಸೃಷ್ಟಿಸಿದ. ಪ್ಲುಕರ್ ಅದರ ಉಪಯೋಗ ಪಡೆದುಕೊಂಡ. 1868 ಮೇ 22 ರಂದು ಬಾನ್ ನಗರದಲ್ಲಿ ನಿಧನನಾದ.

ಉಲ್ಲೇಖಗಳು[ಬದಲಾಯಿಸಿ]

  1. "Julius Plucker". chemed.chem.purdue.edu.
  2. Pais, Abraham (2002). Inward bound: of matter and forces in the physical world (Reprint ed.). Oxford: Clarendon Press [u.a.] ISBN 978-0-19-851997-3.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: