ವಿಷಯಕ್ಕೆ ಹೋಗು

ಜುನೋ (ಗಗನನೌಕೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರಗ್ರಹ ಅಧ್ಯಯನ ಗಗನ ನೌಕೆ (Juno Transparent)

ನಾಸಾದ ಜುನೋ (ಬಾಹ್ಯಾಕಾಶ ನೌಕೆ)[ಬದಲಾಯಿಸಿ]

 • (NASA-New Frontiers program[೧])
 • ಜುನೋ ಒಂದು ನಾಸಾದ ನ್ಯೂ ಫ್ರಾಂಟಿಯರ್ಸ್ ಸರ್ವೇಕ್ಷಣಾಗ್ರಹ. ಪ್ರಸ್ತುತ ಅದು ಗುರು ಗ್ರಹ ಅಭಿಮುಖವಾಗಿ ಚಲನೆಯಲ್ಲಿದೆ. ಜುನೋ ಆಗಸ್ಟ್ 5, 2011 ಕನವರೆಲ್ ಏರ್ ಫೋರ್ಸ್ ಸ್ಟೇಷನ್ ನಿಂದ ಉಡಾವಣೆಯಾಯಿತು; ಮತ್ತು 2016 ಜುಲೈ 4 ರಂದು ಗುರು ವಲಯ ಪ್ರವೇಶದ ಯೋಜನೆ ಹೋದಿದೆ. ಅದರ ಉದ್ದೇಶ ಬಾಹ್ಯಾಕಾಶದ ಗುರುಗ್ರಹದ ರಚನೆಯ ಅಧ್ಯಯನ, ಧ್ರುವದ ಕಕ್ಷೆ, ಕಾಂತೀಯ ಧ್ರುವ ಕ್ಷೇತ್ರದಲ್ಲಿ ಗುರುತ್ವ, ಇವುಗಳನ್ನು ಅಧ್ಯಯನ ಮಾಡವುದಾಗಿದೆ; ಮತ್ತು ಗ್ರಹವು ರೂಪುಗೊಂಡದ್ದು ಹೇಗೆ ಎಂಬ ಸುಳಿವುಗಳನ್ನು ಹುಡುಕುವ ಉದ್ದೇಶ ಹೊಂದಿದೆ. ಗ್ರಹ ಬೀಜ (ಕೇಂದ್ರ) ಕಲ್ಲುಬಂಡೆಗಳಿಂದ ಕೂಡಿದೆಯೋ ಎಂಬುದರ ಪರಿಶೀಲನೆ ಮಾಡುವುದು, ಅದರ ಆಳವಾದ ವಾತಾವರಣದಲ್ಲಿ ನೀರಿನ ಪ್ರಮಾಣವನ್ನು ಮತ್ತು ಅದರ ದ್ರವ್ಯರಾಶಿಯ ಸಾಮೂಹಿಕ ವಿತರಣೆ, ಮತ್ತು ಅದರ ಗಾಳಿಯು ಆಳ ತಿಳಿಯುವುದು. ಜುನೋ ಗಂಟೆಗೆ 618 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ(384ಮೈಲಿ ).
 • 1995-2003 ರಿಂದ ಸುತ್ತುತ್ತಿದ್ದ ಗೆಲಿಲಿಯೋ ತನಿಖೆ-ನೌಕೆಯ ನಂತರ, ಜುನೋ ಗುರುವನ್ನು ಪರಿಭ್ರಮಿಸುವ ಎರಡನೇ ಬಾಹ್ಯಾಕಾಶ ನೌಕೆ.
ಮುಖ್ಯಾಂಶಗಳು
 • ಗೆಲಿಲಿಯೊ: 1995–2003ರ ಅವಧಿಯಲ್ಲಿ ಗುರುಗ್ರಹ ಪ್ರವೇಶಿಸಿ ಅಧ್ಯಯನ ನಡೆಸಿದ ಮೊದಲ ನೌಕೆ
 • ನೈಕೆಯು ಒಟ್ಟು ಸಂಚರಿಸಿದ ಅವಧಿ: 4 ವರ್ಷ,10 ತಿಂಗಳು ಮತ್ತು 29 ದಿನ
  ನೌಕೆಯ ಉದ್ದೇಶಗಳು
 • ಗುರುಗ್ರಹದ ರಚನೆ * ಗ್ರಹದಲ್ಲಿನ ನೀರು* ಕಲ್ಲು ಗಾಳಿಯ ಕುರುಹುಗಳ ಹುಡುಕಾಟ* ಗುರುತ್ವ ವಲಯ ಕಾಂತ ವಲಯ* ಧ್ರುವ ಕಾಂತ ವಲಯಗಳ ಅಧ್ಯಯನ
 • 618 ಕಿ.ಮೀ. ಪ್ರತಿ ಗಂಟೆಗೆ ನೌಕೆ ಚಲಿಸಬಲ್ಲ ವೇಗ
 • 280 ಕೋಟಿ ಕಿ.ಮೀನೌಕೆ ಪ್ರಯಾಣಿಸಿದ ಅಂದಾಜು ದೂರ
 • ರೂ.7400: ಕೋಟಿಯೋಜನಾ ವೆಚ್ಚ
 • 37: 20 ತಿಂಗಳ ಅವಧಿಯಲ್ಲಿ ನೌಕೆಯು ಜುಪಿಟರ್‌ ಕಕ್ಷೆಯಲ್ಲಿ ಹಾಕುವ ಸುತ್ತು.
.
Juno's interplanetary trajectory; tick marks at 30-day intervals.ಚಿತ್ರದ ಮೇಲೆಕ್ಲಿಕ್ ಮಾಡಿ; ಪ್ರತಿ ತಿಂಗಳ ಜುನೋ ಪಯಣದ ಗುರುತು ಕಾಣುವುದು.
Juno spacecraft trajectory animation ಜುನೋ ಪಯಣದ ವೀಡಿಯೂ.
 • ಜುನೋ ಬಾಹ್ಯಾಕಾಶ ನೌಕೆಯು ಸೌರ ದ್ಯುತಿವಿದ್ಯುಜ್ಜನಕ ಬಳಸುತ್ತದೆ. ಸಾಮಾನ್ಯವಾಗಿ ಭೂಮಿಯ ಸುತ್ತ ಸುತ್ತುವ ಉಪಗ್ರಹಗಳ ಮತ್ತು ಒಳ ಸೌರವ್ಯೂಹದಲ್ಲಿ ಬಳಸುವ ಉಪಗ್ರಹಗಳು(ನೌಕೆ) ಸೌರ ಶಕ್ತಿಯನ್ನೇ ಬಳಸುತ್ತವೆ. ಸಾಮಾನ್ಯವಾಗಿ ಹೊರ ಸೌರವ್ಯೂಹದ ಮತ್ತು ಅದನ್ನು ಮೀರಿದ ಯಾತ್ರೆಗೆ 'ರೇಡಿಯೋ ಐಸೋಟೋಪ್ ಥರ್ಮೋಎಲೆಕ್ಟ್ರಿಕ್ ಜನರೇಟರ್' ಬಳಸಲಾಗುತ್ತದೆ. ಆದಾಗ್ಯೂ ಜುನೋ,ಮೂರು ಸೌರ ದ್ಯುತಿವಿದ್ಯುಜ್ಜನಕ ರೆಕ್ಕೆಗಳನ್ನು ಹೊಂದಿದೆ, ಇದು ಇದುವರೆಗೆ ಕಳಹಿಸಿದ ತನಿಖೆ ಉಪಗ್ರಹಗಳಿಗೆ ಅಳವಡಿಸಿದ್ದಕ್ಕಿಂತ ದೊಡ್ಡದು.ಈ ದ್ಯುತಿವಿದ್ಯುಜ್ಜನಕವು ಬಾಹ್ಯಾಕಾಶದಲ್ಲಿ ಉಪಗ್ರಹವನ್ನು ಸ್ಥಿರಗೊಳಿಸುವ ಮತ್ತು ವಿದ್ಯುತ್ ಉತ್ಪಾದಿಸುವ ಒಂದು ಅವಿಭಾಜ್ಯಕಾರ್ಯವನ್ನು ನಿರ್ವಹಿಸುತ್ತದೆ.

ದಿ.4-7-2016 ರಲ್ಲಿ ಜುನೋ[ಬದಲಾಯಿಸಿ]

 • ನಾಸಾದ ಬಾಹ್ಯಾಕಾಶ ನೌಕೆ ‘ಜುನೊ’ ಜುಲೈ 4ರಂದು (ಭಾರತೀಯ ಕಾಲಮಾನ ಬೆಳಿಗ್ಗೆ 8.23ಕ್ಕೆ) ಗುರು ಗ್ರಹದ ಕಕ್ಷೆ ಪ್ರವೇಶಿಸುತ್ತಿದೆ.
 • ಜುಲೈ 5ರಂದು ಗುರು ಗ್ರಹದ ವಾಯುಮಣಡಲ ಪ್ರವೇಶಿಸಲಿರುವ ‘ಜುನೊ’ (ಜುಪಿಟರ್ ನಿಯರ್‌ ಪೋಲಾರ್‌ ಆರ್ಬಿಟ್‌) ಅಂತರಿಕ್ಷ ನೌಕೆಯು, 20 ತಿಂಗಳ ಕಾಲ ಗ್ರಹದ ರಚನೆ ಮತ್ತು ಇತಿಹಾಸವನ್ನು ಅಧ್ಯಯನ ಮಾಡಲಿದೆ. ಬಳಿಕ 2018ರಲ್ಲಿ ಗುರುಗ್ರಹದ ವಾಯುಮಂಡಲದಲ್ಲಿ ನಾಶವಾಗಲಿದೆ.
 • ಗೆಲಿಲಿಯೊ: 1995–2003ರ ಅವಧಿಯಲ್ಲಿ ಗುರುಗ್ರಹ ಪ್ರವೇಶಿಸಿ ಅಧ್ಯಯನ ನಡೆಸಿದ ಮೊದಲ ನೌಕೆ[೧][೨][೩]

ಜುನೋ ಫಲಪ್ರದ[ಬದಲಾಯಿಸಿ]

ದಿ.4-7-2016 ಸೋಮವಾರ ನಾಸಾದ ಮಾನವರಹಿತ ಜುನೋ ಸೌರವ್ಯೂಹದ ದೊಡ್ಡ ಗ್ರಹ ಗುರುಗ್ರಹದ ನಿಗದಿತ ಕಕ್ಷೆಯನ್ನು ತಲುಪಿ,ಅದನ್ನು ಸುತ್ತಲು ಆರಂಭಿಸಿತ್ತು. ಅದರ ಮೂಲಗಳನ್ನು ಅರಿಯುವ ಗುರಿಹೊಂದಿದೆ. $ 1.1 ಶತಕೋಟಿ ಮಿಷನ್ ಒಂದು ಪ್ರಮುಖ ಗೆಲುವುಪಡೆದಿದೆ. [೪]

 • ಭಾರತೀಯ ಕಾಲಮಾನ ಮಂಗಳವಾರ ಬೆಳಿಗ್ಗೆ 8.48ಕ್ಕೆ ನೌಕೆಯ ಪ್ರಧಾನ ಎಂಜಿನ್‌ ಉರಿಯಲು ಆರಂಭಿಸಿತು. 35 ನಿಮಿಷಗಳ ನಂತರ ಕಕ್ಷೆಯನ್ನು ಯಶಸ್ವಿಯಾಗಿ ಸೇರಿತು. ನೌಕೆಯ ವೇಗವನ್ನು ಪ್ರತಿ ಸೆಕೆಂಡ್‌ಗೆ 542 ಮೀಟರ್‌ಗೆ ಕುಗ್ಗಿಸುವುದಕ್ಕಾಗಿ ಎಂಜಿನ್‌ ಉರಿಸಲಾಯಿತು.
 • 9ನೌಕೆಯಲ್ಲಿರುವ ವೈಜ್ಞಾನಿಕ ಉಪಕರಣಗಳು
 • 18,698 ಸೌರ ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಜುನೊದಲ್ಲಿ ಅಳವಡಿಸಲಾಗಿರುವ ಸೌರ ಕೋಶಗಳು
ನೌಕೆ ವಿವರ
 • 11.5 ಅಡಿ ಎತ್ತರ
 • 11.5ಅಡಿ ವ್ಯಾಸ
 • ಮೂರು ಸೌರ ಫಲಕಗಳು 66 ಅಡಿ ವ್ಯಾಪ್ತಿಯಲ್ಲಿ ಹರಡಿಕೊಳ್ಳುತ್ತವೆ
 • ನೌಕೆಯು 20 ತಿಂಗಳು ಕಾರ್ಯ ನಿರ್ವಹಿಸಲಿದೆ. ಗುರುಗ್ರಹದಿಂದ 4,100 ಕಿ.ಮೀ ಎತ್ತರದಲ್ಲಿ ಬುಗುರಿಯಂತೆ ತಿರುಗುತ್ತ 37 ಸಲ ಪ್ರದಕ್ಷಿಣೆ ಬರಲಿದೆ.
 • 4 ವರ್ಷ 11 ತಿಂಗಳು ಭೂಮಿಯಿಂದ ಗುರುಗ್ರಹಕ್ಕೆ ಜುನೊ ನೌಕೆ ಪ್ರಯಾಣಿಸಿದ ಅವಧಿ
 • 2011 ಆಗಸ್ಟ್‌ 5 ಫ್ಲಾರಿಡಾದ ಕೇಪ್‌ ಕ್ಯಾನ್‌ವೆರಾಲ್‌ ನೆಲೆಯಿಂದ ನೌಕೆಯನ್ನು ಉಡಾವಣೆ ಮಾಡಿದ ದಿನ
 • 280 ಕೋಟಿ ಕಿ.ಮೀ ಕ್ರಮಿಸಿದ ದೂರ
 • 2018, ಫೆಬ್ರುವರಿ 20 ಜುನೊ ತನ್ನ ಕಾರ್ಯ ಸ್ಥಗಿತಗೊಳಿಸುವ ದಿನ. ಗುರುಗ್ರಹಕ್ಕೆ ಅಪ್ಪಳಿಸಿ ನೌಕೆ ಧ್ವಂಸವಾಗಲಿದೆ.
 • ರೂ.7,480 ಕೋಟಿ (110 ಕೋಟಿ ಡಾಲರ್‌) ಜುನೊ ಯೋಜನಾ ವೆಚ್ಚ
ಜುನೊದ ಕ್ರಿಯಾಯೋಜನೆ
 • ಗುರುಗ್ರಹದ ಗರ್ಭದ (ತಿರುಳು) ಅಧ್ಯಯನ
 • ಕಾಂತ ಕ್ಷೇತ್ರದ ವಿಶ್ಲೇಷಣೆ
 • ಗ್ರಹದ ಆಳ ವಾತಾವರಣದಲ್ಲಿ ಇರಬಹುದಾದ ನೀರು ಮತ್ತು ಅಮೋನಿಯಾ ಪ್ರಮಾಣ ಅಳೆಯುವುದು
 • ಗ್ರಹದ ಧ್ರುವ ಪ್ರಭೆಗಳ ಅಧ್ಯಯನ

[೫]

ಫೊಟೊ ಮತ್ತು ವೀಡಿಯೋ ಗ್ಯಾಲರಿ[ಬದಲಾಯಿಸಿ]

 • ಜುನೋ ಉಡಾವಣೆಯ ೧ನಿ.೨೫ ಸೆ. ವೀಡಿಯೋ:

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. "ಇಂದು 'ಜುನೊ' ಗುರು ಪ್ರವೇಶ:Mon,04/07/201ಪ್ರಜಾವಾಣಿ". Archived from the original on 2016-11-12. Retrieved 2016-07-04.
 2. "ಆರ್ಕೈವ್ ನಕಲು". Archived from the original (PDF) on 2018-12-25. Retrieved 2021-07-21.
 3. http://spaceflight101.com/juno/spacecraft-information/
 4. http://www.hindustantimes.com/world-news/main-engine-burn-is-go-nasa-s-juno-spacecraft-begins-bid-to-orbit-jupiter/story-KSq7A0dyX2KezuCTDC54GK.html
 5. "ಗುರು-ಕಕ್ಷೆಗೆ-ಸೇರಿದ-'ಜುನೊ'prajavani". Archived from the original on 2016-07-06. Retrieved 2016-07-06.