ವಿಷಯಕ್ಕೆ ಹೋಗು

ಜೀವಾಧಾರಕ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವ ಅಂತರಿಕ್ಷ ಯಾನದಲ್ಲಿ, ಒಂದು ಜೀವಾಧಾರಕ ವ್ಯವಸ್ಥೆ ಅಂದರೆ ಒಬ್ಬ ಮಾನವ ಅಂತರಿಕ್ಷದಲ್ಲಿ ಬದುಕಿರಲು ಎಡೆಗೊಡುವ ಸಲಕರಣೆಗಳ ಒಂದು ಗುಂಪು. U.S. ಸರ್ಕಾರದ ಅಂತರಿಕ್ಷ ಕಾರ್ಯಾಲಯ NASA,[೧] ಹಾಗೂ ಖಾಸಗಿ ಅಂತರಿಕ್ಷ ಯಾನದ ಕಂಪನಿಗಳು ಪರಿಸರದ ನಿಯಂತ್ರಣ ಹಾಗೂ ಜೀವಾಧಾರಕ ವ್ಯವಸ್ಥೆ ಅಥವಾ ಸಂಕ್ಷಿಪ್ತರೂಪದ ECLSS ಪದವನ್ನು ಈ ವ್ಯವಸ್ಥೆಗಳ ತಮ್ಮ ಮಾನವ ಅಂತರಿಕ್ಷ ಯಾನದ ಜೀವಿತೋದ್ದೇಶವನ್ನು ವಿವರಿಸುವಾಗ ಬಳಸುತ್ತಾರೆ.[೨] ಈ ಜೀವಾಧಾರಕ ವ್ಯವಸ್ಥೆ ಗಾಳಿ, ನೀರು ಹಾಗೂ ಆಹಾರವನ್ನು ಒದಗಿಸಬಹುದು. ಅದು ದೇಹದ ಸರಿಯಾದ ತಾಪಮಾನವನ್ನು ಹಾಗೂ ದೇಹದ ಮೇಲೆ ಸ್ವೀಕರಿಸಬಲ್ಲ ಒತ್ತಡವನ್ನು ನಿಯಂತ್ರಿಸಬೇಕು ಮತ್ತು ದೇಹದ ವ್ಯರ್ಥ ಉತ್ಪನ್ನದ ಬಗೆಹರಿಸುವಿಕೆಯ ವ್ಯವಸ್ಥೆ ಮಾಡಬೇಕು. ವಿಕಿರಣ ಹಾಗೂ ಸೂಕ್ಷ್ಮ-ಉಲ್ಕಾಶಿಲೆಗಳಂತಹ ಅಪಾಯಕಾರಿ ಬಾಹ್ಯ ಪ್ರಭಾವಗಳಿಂದ ರಕ್ಷಿಸುವುದು ಅಗತ್ಯವಾಗಿರುತ್ತದೆ. ಜೀವಾಧಾರಕ ವ್ಯವಸ್ಥೆಯ ಘಟಕಗಳು ಜೀವ-ವಿಮರ್ಶಾತ್ಮಕವಾಗಿರುತ್ತವೆ, ಮತ್ತು ಸುರಕ್ಷೆಯ ಯಾಂತ್ರಿಕತೆ ತಂತ್ರಜ್ಞಗಳನ್ನು ಬಳಸಿ ವಿನ್ಯಾಸಗೊಳಿಸಲಾಗುತ್ತದೆ ಹಾಗೂ ನಿರ್ಮಿಸಲಾಗುತ್ತದೆ.

ಮಾನವ ಶರೀರ ವಿಜ್ಞಾನದ ಹಾಗೂ ಜೀವರಾಸಾಯನಿಕ ಕ್ರಿಯೆಯ ಅಗತ್ಯೆಗಳು[ಬದಲಾಯಿಸಿ]

ಅಂತರಿಕ್ಷ ಜೀವಿತೋದ್ದೇಶದಲ್ಲಿರುವ ಒಬ್ಬ ಪ್ರಾತಿನಿಧಿಕ ಗಾತ್ರದ ತಂಡ ಸದಸ್ಯನಿಗೆ ಒಂದು ದಿನಕ್ಕೆ ರೂಢಿಯಲ್ಲಿರುವ ಚಟುವಟಿಕೆಗಳನ್ನು ನಿರ್ವಹಿಸಲು ಸರಿಸುಮಾರು 5 kg (ಒಟ್ಟು) ಆಹಾರ, ನೀರು, ಹಾಗೂ ಆಮ್ಲಜನಕದ ಅಗತ್ಯೆವಿರುತ್ತದೆ, ಮತ್ತು ಅಷ್ಟೆ ಮೊತ್ತದ ವ್ಯರ್ಥ ಘನ, ವ್ಯರ್ಥ ದ್ರವ ಹಾಗೂ ಇಂಗಾಲನ್ನು ಹೊರಹಾಕುತ್ತಾನೆ.[೩] ಈ ಜೀವರಾಸಾಯನಿಕ ಮಾನದಂಡಗಳ ಸಮೂಹ ವಿಂಗಡನೆ ಈ ರೀತಿ ಇವೆ: 0.84 kg ಆಮ್ಲಜನಕ, 0.62 kg ಆಹಾರ ಹಾಗೂ 3.52 kg ಸೇವಿಸಿದ ನೀರು, ಇವು ಶರೀರ ವಿಜ್ಞಾನದ ಕ್ರಿಯೆಗಳ ಪ್ರಕ್ರಿಯೆಯ ಮೂಲಕ 0.11 kg ಘನ ವ್ಯರ್ಥಗಳು, 3.87 kg ದ್ರವ ವ್ಯರ್ಥಗಳು ಹಾಗೂ 1.00 kg ಇಂಗಾಲು ಡೈಆಕ್ಸೈಡ್ ಅನ್ನು ಉತ್ಪತ್ತಿಸುತ್ತವೆ. ಜೀವಿತೋದ್ದೇಶದ ನೇಮಕಾತಿಯ ನಿರ್ಧಿಷ್ಟತೆಗೆ, ಈ ಮಟ್ಟಗಳು ಚಟುವಟಿಕೆಗಳ ಮಟ್ಟದ ಕಾರಣ ಬದಲಾಗಬಹುದು, ಆದರೆ ಸಮೂಹ ಸಮತೋಲನದ ಸಿದ್ಧಾಂತಗಳಿಗೆ ಸಹ ಸಂಬಂಧಿಸುತ್ತವೆ. ಅಂತರಿಕ್ಷ ಜೀವಿತೊದ್ದೇಶಗಳಲ್ಲಿ ವಾಸ್ತವವಾಗಿ ನೀರಿನ ಬಳಕೆ ನಿರ್ಧಿಷ್ಟ ಪಡಿಸಿದ ಮೌಲ್ಯಗಳಿಗಿಂತ ವಿಶಿಷ್ಟವಾಗಿ ದುಪ್ಪಟ್ಟಾಗಿರುತ್ತದೆ, ಕಾರಣ ಪ್ರಮುಖವಾಗಿ ಜೀವವಿಜ್ಞಾನವಲ್ಲದ ಬಳಕೆಗಾಗಿ (ಅಂದರೆ ಸ್ವಯಂ ಸ್ವಚ್ಛತೆಯ ಕಾರ್ಯಗಳು). ಹೆಚ್ಚಾಗಿ, ಒಂದು ವಾರವನ್ನು ಮೀರಿದ ಜೀವಿತೋದ್ದೇಶಗಳಲ್ಲಿ, ವ್ಯರ್ಥ ಉತ್ಪನ್ನಗಳ ಪ್ರಮಾಣ ಹಾಗೂ ಬಗೆ ಕೂಡ ಜೀವಿತೋದ್ದೇಶದ ಅವಧಿಯ ಅನುಸಾರ ಬದಲಾಗಬಹುದು, ಅದರಲ್ಲಿ ಕೂದಲು, ಉಗುರುಗಳು, ಚರ್ಮದ ತೆಳುಚಕ್ಕೆಗಳು, ಹಾಗೂ ಇತರ ಜೀವವಿಜ್ಞಾನದ ವ್ಯರ್ಥಗಳು ಒಳಗೊಳ್ಳುತ್ತವೆ. ಅಂತರಿಕ್ಷದಲ್ಲಿ ಮಾನವ ಶರೀರ ವಿಜ್ಞಾನದ ಪ್ರತಿಕ್ರಿಯೆಗೆ ವಿಕಿರಣ, ಗುರುತ್ವಾಕರ್ಷಣೆ, ಗದ್ದಲ, ಕಂಪನ, ಹಾಗೂ ಬೆಳಕಿನ ವ್ಯವಸ್ಥೆಗಳಂತಹ ಇತರ ಪರಿಸರದ ಪರಿಶೀಲನೆಗಳು ಕೂಡ ಪರಿಣಾಮ ಬೀರುವ ಅಂಶಗಳಾಗುತ್ತಾವೆ, ಹೇಗಿದ್ದರೂ ಇವು ಜೀವರಾಸಾಯನಿಕ ಮಾನದಂಡಗಳಂತೆ ಹೆಚ್ಚು ತಕ್ಷಣ ಪ್ರಭಾವ ಬೀರುವುದಿಲ್ಲ.

ವಾಯುಮಂಡಲ[ಬದಲಾಯಿಸಿ]

ಆಮ್ಲಜನಕ, ನೀರಿನ ಹಬೆ ಹಾಗೂ ಇಂಗಾಲು ಡೈಆಕ್ಸೈಡ್‌ನ ಕನಿಷ್ಠ ಪ್ರಮಾಣಗಳಲ್ಲಿ, ಅಂತರಿಕ್ಷ ಜೀವಾಧಾರಕ ವ್ಯವಸ್ಥೆಗಳು ವಾಯುಮಂಡಲವನ್ನು ಸಂಯೋಜಿತವಾಗಿ ನಿಯಂತ್ರಿಸುತ್ತದೆ. ಪ್ರತಿಯೊಂದು ಘಟಕ ಅನಿಲದ ಆಂಶಿಕ ಒತ್ತಡವು ಒಟ್ಟು ಬ್ಯಾರೊಮೆಟ್ರಿಕ್ ಒತ್ತಡಕ್ಕೆ ಸೇರುತ್ತದೆ.

ತನೂಕಾರಕಗಳ ಕಡಿಮೆಗೊಳಿಸುವಿಕೆ ಅಥವಾ ತ್ಯಜಿಸುವಿಕೆಯಿಂದ (ಆಮ್ಲಜನಕವಲ್ಲದ ಇತರ ಅಂಶಗಳು, ಉದಾ, ನೈಟ್ರೊಜನ್ ಹಾಗೂ ಆರ್ಗೊನ್) ಒಟ್ಟು ಒತ್ತಡವನ್ನು ಕನಿಷ್ಠ 21 kpaಗೆ ಇಳಿಸಬಹುದು, ಭೂಮಿಯ ವಾಯುಮಂಡಲದ ಆಮ್ಲಜನಕದ ಆಂಶಿಕ ಒತ್ತಡ ಸಮುದ್ರ ಮಟ್ಟದಲ್ಲಿ. ಇದು ಗಗನನೌಕೆ ನಿರ್ಮಿತಿಗಳನ್ನು ಹಗೂರವಾಗಿಸಬಹುದು, ಸೋರಿಕೆಯನ್ನು ಕಡಿಮೆಗೊಳಿಸಬಹುದು ಹಾಗೂ ಜೀವರಾಸಾಯನಿಕ ವ್ಯವಸ್ಥೆಯನ್ನು ಸರಳಗೊಳಿಸಬಹುದು.

ಹೇಗಿದ್ದರೂ, ತನೂಕಾರಕ ಅನಿಲಗಳ ಹೊರಹಾಕುವಿಕೆ ಬೃಹತ್ ಪ್ರಮಾಣದಲ್ಲಿ ಬೆಂಕಿಯ ಅಪಾಯಗಳನ್ನು ಹೆಚ್ಚಿಸಬಹುದು, ವಿಶೇಷವಾಗಿ ನೆಲದ ಕಾರ್ಯನಿರ್ವಹಣೆಗಳಲ್ಲಿ, ಇಲ್ಲಿ ನಿರ್ಮಾಣದ ಕಾರಣಗಳಿಗಾಗಿ ಒಟ್ಟು ಚಿಕ್ಕಕೋಣೆಯ ಒತ್ತಡ ಬಾಹ್ಯ ವಾಯುಮಂಡಲದ ಒತ್ತಡವನ್ನು ಮೀರಿಸಿರಬೇಕು; ನೋಡಿ ಅಪೊಲೊ 1. ಈ ಕಾರಣಕ್ಕಾಗಿ, ಹೆಚ್ಚು ಆಧುನಿಕ ತಂಡಗಳ ಗಗನನೌಕೆಗಳು ಸಂಪ್ರದಾಯಿಕ ಗಾಳಿ (ನೈಟ್ರೊಜನ್/ಆಮ್ಲಜನಕ) ವಾಯುಮಂಡಲವನ್ನು ಬಳಸುತ್ತವೆ ಮತ್ತು ಬಾಹ್ಯವಾಹನ ಚಟುವಟಿಕೆಗಳ ಸಮಯದಲ್ಲಿ ಪ್ರೆಷರ್ ಸೂಟ್‌ಗಳಲ್ಲಿ ಮಾತ್ರ ಶುದ್ಧ ಆಮ್ಲಜನಕವನ್ನು ಬಳಸುತ್ತಾರೆ, ಇಲ್ಲಿ ಸೂಟಿನ ಹೊಂದಿಕೊಳ್ಳವಿಕೆ ಸಾಧ್ಯವಾದಷ್ಟು ಕನಿಷ್ಠ ಒತ್ತಡದ ಉಬ್ಬಿಸಿಕೆಯನ್ನು ನಿಯೋಗಿಸುತ್ತದೆ.

ಜಲ[ಬದಲಾಯಿಸಿ]

ಕುಡಿಯುವುದು, ಸ್ವಚ್ಛತೆಯ ಚಟುವಟಿಕೆಗಳು, ಇ.ವಿ.ಎ ಉಷ್ಣದ ನಿಯಂತ್ರಣ, ಹಾಗೂ ತುರ್ತುಪರಿಸ್ಥಿತಿಯ ಬಳಕೆಗಳ ಮೂಲಕ ತಂಡದ ಸದಸ್ಯರು ನೀರನ್ನು ಬಳಸುತ್ತಾರೆ. ಮನುಷ್ಯ ವಾಸಿಸುವ ಇನ್ನೊಂದು ಪ್ರದೇಶವನ್ನು ಇನ್ನುವರೆವಿಗೂ ಕಂಡುಹಿಡಿದಿಲ್ಲವಾದ್ದರಿಂದ ನೀರನ್ನು ಕಾಯ್ದಿಟ್ಟುಕೊಳ್ಳಬೇಕು. ಅಲ್ಲದೆ ಉಪಯೋಗಿಸಿದ ನೀರನ್ನು ಪುನಃ ಶುದ್ಧಿಗೊಳಿಸುವ ಮೂಲಕ ಕಾಯ್ದುಕೊಳ್ಳುವ ಕೆಲಸವಾಗಬೇಕು.

ಆಹಾರ[ಬದಲಾಯಿಸಿ]

ಜೀವಾಧಾರಕ ವ್ಯವಸ್ಥೆಗಳು ಹಲವು ಬಾರಿ ಒಳಾಂಗಣ ಗಿಡಗಳ ಕೃಷಿ ಪದ್ಧತಿಯನ್ನು ಹಮ್ಮಿಕೊಳ್ಳುತ್ತವೆ, ಇದರಲ್ಲಿ ಆಹಾರವನ್ನು ಕಟ್ಟದೊಳಗೆ ಹಾಗೂ/ಅಥವಾ ಪಾತ್ರೆಗಳಲ್ಲಿ ಬೆಳೆಸಬಹುದು. ಹಲವುಬಾರಿ, ಈ ಪದ್ಧತಿಯನ್ನು ಅದು ಎಲ್ಲ (ಇಲ್ಲದಿದ್ದಲ್ಲಿ ಕಳೆದು ಹೋದ) ಪೌಷ್ಟಿಕಾಂಶಗಳನ್ನು ಪುನಃ ಬಳಸುವಂತೆ ವಿನ್ಯಾಸಗೊಳಿಸಲಾಗುತ್ತದೆ. ಇದನ್ನು ಹೀಗೆ ಮಾಡಲಾಗುತ್ತದೆ, ಉದಾಹರಣೆಗೆ, ಶೌಚಗಳ ಮಿಶ್ರಗೊಬ್ಬರವಾಗಿಸುವಿಕೆ, ಇದು ವ್ಯರ್ಥ ಪದಾರ್ಥಗಳನ್ನು (ಮಲಮೂತ್ರಗಳು) ಮತ್ತೆ ಪದ್ಧತಿಯಲ್ಲಿ ಪುನಃ ಸಂಯೋಜಿಸುತ್ತದೆ, ಹೀಗೆ ಆಹಾರ ಬೆಳೆಗಳು ಪೌಷ್ಟಿಕಾಂಶಗಳನ್ನು ತೆಗೆದುಕೊಳಲ್ಲು ಅನುಮತಿಸುತ್ತದೆ. ಬೆಳೆಗಳಿಂದ ಬಂದ ಆಹಾರವನ್ನು ಪುನಃ ಪದ್ಧತಿಯ ಬಳಕೆದಾರರು ಸೇವಿಸುತ್ತಾರೆ ಹಾಗೂ ಆವೃತ್ತಿ ಮುಂದುವರೆಯುತ್ತದೆ.

ಸೂಕ್ಷ್ಮಜೀವಿ ಪತ್ತೆ ಹಚ್ಚುವಿಕೆ ಹಾಗೂ ನಿಯಂತ್ರಣ[ಬದಲಾಯಿಸಿ]

NASA LOCAD (ಲ್ಯಾಬ್-ಆನ್-ಅ-ಚಿಪ್ ಅಪ್ಲಿಕೇಷನ್ಸ್ ಡೆವೆಲಪ್‌ಮೆಂಟ್) ಯೋಜನೆ ಬಹು-ಕಾಲದವರೆಗೆ ಬಳಸುವ ಗಗನನೌಕೆಯಲ್ಲಿ ಸೂಕ್ಷ್ಮಕ್ರಿಮಿಗಳು ಹಾಗು ಅಣಬೆ ಬೆಳವಣಿಗೆಗಳನ್ನು ಪತ್ತೆ ಹಚ್ಚಲು ಕೆಲವು ಪದ್ಧತಿಗಳ ಮೇಲಿನ ಕಾರ್ಯಗಳಿಗೆ ಸಹಾಯ ನೀಡುತ್ತಿದೆ.[೪]

ಅಂತರಿಕ್ಷ ವಾಹನ ಪದ್ಧತಿಗಳು[ಬದಲಾಯಿಸಿ]

ಜೆಮಿನಿ, ಮರ್ಕ್ಯುರಿ, ಹಾಗೂ ಅಪೊಲೊ[ಬದಲಾಯಿಸಿ]

ಬಾಹ್ಯಾಕಾಶ ನೌಕೆ[ಬದಲಾಯಿಸಿ]

ಬಾಹ್ಯಾಕಾಶ ನೌಕೆಗೆ, ECLSS ಶ್ರೇಣಿಯ ಪದ್ಧತಿಗಳಲ್ಲಿ ತಂಡ ಹಾಗೂ ಪರಿಸರ ನಿಯಂತ್ರಣ ಇರಡಕ್ಕೂ ವಿಮಾನದ ಸರಕಿನ ಭಾಗದಲ್ಲಿ ಜೀವಾಧಾರಕಗಳನ್ನು NASA ಒಳಗೊಂಡಿದೆ. ಅಂತರಿಕ್ಷ ಉಲ್ಲೇಖ ಕೈಪಿಡಿ ECLSS ನ ವಿಭಾಗಗಳನ್ನು ಈ ಮುಂದಿನ ವಿಷಯಗಳ ಮೇಲೆ ಒಳಗೊಂಡಿದೆ: ತಂಡ ವಿಭಾಗದ ಚಿಕ್ಕ ಕೋಣೆಯ ಒತ್ತಡಿಕೆ, ಚಿಕ್ಕ ಕೊಣೆಯ ವಾಯು ಪುನರುಜ್ಜೀವನ, ಜಲ ತಣಿಚ ಕುಣಿಕೆ ಪದ್ಧತಿ, ಸಕ್ರೀಯ ಉಷ್ಣದ ನಿಯಂತ್ರಣ ಪದ್ಧತಿ, ಪೂರೈಕೆ ಹಾಗೂ ವ್ಯರ್ಥ ನೀರು, ವ್ಯರ್ಥ ಸಂಗ್ರಹ ಪದ್ಧತಿ, ವ್ಯರ್ಥ ಜಲದ ತೊಟ್ಟಿ, ಗಾಳಿತಡೆ ಬೆಂಬಲ, ಬಾಹ್ಯಾವಾಹನದ ಸಂಚಾರ ಘಟಕಗಳು, ತಂಡದ ಮೇಲ್ಮಟ್ಟ ಸುರಕ್ಷತೆಯ ಪದ್ಧತಿ, ಹಾಗೂ ವಿಕಿರಣಶೀಲ ಐಸೋಟೋಪು ಉಷ್ಣವಿದ್ಯುತ್ತಿನ ಉತ್ಪಾದಕ ತಂಪುಗೊಳಿಸುವಿಕೆ ಹಾಗೂ ವಿಮಾನದ ಸರಕಿನ ಭಾಗಗಳಿಗೆ ಅನಿಲರೂಪದ ನೈಟ್ರೊಜನ್ ಶುದ್ಧಿಗೊಳಿಸುವುದು.[೫]

ಒರಿಯನ್ ತಂಡದ ಪ್ರಮಾಣ ಮಾದರಿ[ಬದಲಾಯಿಸಿ]

ಟೆಕ್ಸಾಸ್‌ನ ಹೌಸ್ಟನ್‌‌ನಲ್ಲಿ ಲೊಕ್‌ಹೀಡ್ ಮಾರ್ಟಿನ್ ಅವರಿಂದ ಒರಿಯನ್ ತಂಡ ಪ್ರಮಾಣ ಮಾದರಿಯ ಜೀವಾಧಾರಕ ವ್ಯವಸ್ಥೆ ವಿನ್ಯಾಸಗೊಳ್ಳುತ್ತಿದೆ.[ಸೂಕ್ತ ಉಲ್ಲೇಖನ ಬೇಕು]

ಸೊಯುಸ್[ಬದಲಾಯಿಸಿ]

ಸೊಯುಸ್ ಗಗನನೌಕೆಯ ಜೀವಾಧಾರಕ ವ್ಯವಸ್ಥೆಯನ್ನು ಕೊಂಪ್ಲೆಕ್ಸ್ ಸ್ರೆಡ್‌ಸ್ಟ್ವ್ ಒಬೆಸ್ಪೆಚೆನಿಯ ಜಿಜ್ನಿಡೆಯೆಟೆಲ್ನೊಸ್ಟಿ (KSOZh).[ಸೂಕ್ತ ಉಲ್ಲೇಖನ ಬೇಕು]

ಪ್ಲಗ್ ಆಂಡ್ ಪ್ಲೆ[ಬದಲಾಯಿಸಿ]

ಪ್ಯಾರಗನ್ ಸ್ಪೇಸ್ ಡೆವೆಲಪ್ಮೆಂಟ್ ಕಾರ್ಪೋರೆಷನ್ ಕಮರ್ಷಿಯಲ್ ಕ್ರ್ಯು ಟ್ರಾಂನ್ಸ್‌ಪೋರ್ಟ್-ಏರ್ ರಿವೈಟಲೈಸೆಷನ್ ಪದ್ಧತಿಯೆಂದು ಕರೆಯಲಾದ (CCT-ARS) ಒಂದು ಪ್ಲಗ್ ಆಂಡ್ ಪ್ಲೆ ECLSS ಅನ್ನು ಅಭಿವೃದ್ಧಿಗೊಳಿಸುತ್ತಿದೆ[೬], ಇದು ಭವಿಷ್ಯದ ಅಂತರಿಕ್ಷಯಾನಕ್ಕಾಗಿ ನಿರ್ಮಿಸಲಾಗಿದ್ದು NASA ದ ಕಮರ್ಷಿಯಲ್ ಕ್ರ್ಯು ಡೆವೆಲಪ್ಮೆಂಟ್ (CCDev) ಹಣವನ್ನು ಬಳಸಲು ಭಾಗಷಃ ಪಾವತಿ ಮಾಡಿದ.[೭]

ಅಂತರಿಕ್ಷ ನಿಲ್ದಾಣ ಪದ್ಧತಿ[ಬದಲಾಯಿಸಿ]

ಅಂತರಿಕ್ಷ ಪ್ರಯೋಗಾಲಯ[ಬದಲಾಯಿಸಿ]

Mir[ಬದಲಾಯಿಸಿ]

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ[ಬದಲಾಯಿಸಿ]

ಬಿಗೆಲಾ ವಾಣಿಜ್ಯ ಬಾಹ್ಯಾಕಾಶ ನಿಲ್ದಾಣ[ಬದಲಾಯಿಸಿ]

ಬಿಗೆಲೋ ಕಮರ್ಶಿಯಲ್ ಸ್ಪೇಸ್ ಸ್ಟೇಷನ್‌ನ ಜೀವಾಧಾರಕ ವ್ಯವಸ್ಥೆಯನ್ನು ಬಿಗೆಲೋ ಏರೋಸ್ಪೇಸ್ ಎಂಬ ಲಾಸ್‌ ವೇಗಾಸ್, ನೇವಾಡಾದ ಸಂಸ್ಥೆ ರೂಪಿಸುತ್ತಿದೆ. ವಾಸಯೋಗ್ಯ ಸನ್‌ಡ್ಯಾನ್ಸರ್ ಮತ್ತು ಬಿಎ 330 ವಿಸ್ತಾರವಾಗಬಲ್ಲ ಗಗನನೌಕಾ ಮಾದರಿಗಳಿಂದ ಸ್ಪೇಸ್ ಸ್ಟೇಶನ್‌ ಅನ್ನು ನಿರ್ಮಿಸಲಾಗುತ್ತದೆ. As of October 2010[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".]], "ಪರಿಸರ ಹಿಡಿತ ಮತ್ತು ಜೀವಾಧಾರಕ ವ್ಯವಸ್ಥೆಯ(ECLSS) ಕುರಿತಾದ ಪರೀಕ್ಷೆಯಲ್ಲಿ ಅಪಾಯದಲ್ಲಿ ಮಾನವ ಎಂಬ ವರದಿಯನ್ನು ಸನ್‌ಡ್ಯಾನ್ಸರ್‌ ಗಾಗಿ ಪ್ರಾರಂಭಿಸಲಾಗಿದೆ.[೮]

ಇ.ವಿ.ಎ ಪದ್ಧತಿಗಳು[ಬದಲಾಯಿಸಿ]

ಗಗನ ನೌಕಾ ಚಟುವಟಿಕೆಗಳ (ಇ.ವಿ.ಎ) ವ್ಯವಸ್ಥೆಗಳು ಪ್ರಾಥಮಿಕವಾಗಿ ಸಾಂಪ್ರದಾಯಿಕ ಸ್ಪೇಸ್ ಸ್ಯೂಟ್‌ ಅನ್ನು ಹೊಂದಿರುತ್ತವೆ, ಆದರೆ ಅವುಗಳು ಸ್ವಯಂಪೂರ್ಣವಾದ ಗಗನನೌಕೆಯನ್ನೂ ಸಹಾ ಹೊಂದಿರಬಹುದು.[ಸೂಕ್ತ ಉಲ್ಲೇಖನ ಬೇಕು]

ಸ್ಪೇಸ್ ಸ್ಯೂಟ್‌ಗಳು[ಬದಲಾಯಿಸಿ]

ಪ್ರಸ್ತುತವಾಗಿ ಬಳಕೆಯಲ್ಲಿರುವ ಎಲ್ಲಾ ಸ್ಪೇಸ್ ಸ್ಯೂಟ್‌ ಮಾದರಿಗಳೂ, ಯು.ಎಸ್. ಇಎಂಯು ಮತ್ತು ರಷ್ಯಾದ ಓರ್ಲಾನ್‌, ಪ್ರಾಥಮಿಕ ಜೀವಾಧಾರಕ ವ್ಯವಸ್ಥೆಗಳನ್ನು ಹೊಂದಿದ್ದು (PLSSs), ಬಳಕೆದಾರರಿಗೆ ಒಂದು ಗಗನ ನೌಕೆಯ ನಾಭಿಯಿಂದ ಸಂಪರ್ಕವನ್ನು ಪಡೆಯದೇ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಒಂದು ಸ್ಪೇಸ್ ಸ್ಯೂಟ್‌ ಜೀವಾಧಾರಕವಾಗಿರಲೇಬೇಕು, ಅದು ನಾಭಿಯ ಸಂಪರ್ಕದಿಂದಾಗಿರಬಹುದು ಅಥವಾ ಒಂದು ಸ್ವತಂತ್ರ PLSS ನಿಂದಾಗಿರಬಹುದು.[ಸೂಕ್ತ ಉಲ್ಲೇಖನ ಬೇಕು]

ಇವನ್ನೂ ಗಮನಿಸಿ‌[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

 • ನಿರ್ಬಂಧಿತ ಪರಿಸರ ವ್ಯವಸ್ಥೆ
 • ಪ್ರಾಥಮಿಕ ಜೀವಾಧಾರಕ ವ್ಯವಸ್ಥೆ
 • ಕಾಸ್ಮಿಕ್ ಕಿರಣಗಳಿಂದ ಇರುವ ಆರೋಗ್ಯ ಸಂಬಂಧೀ ಅಪಾಯಗಳು

ಉಲ್ಲೇಖಗಳು‌[ಬದಲಾಯಿಸಿ]

 1. "International Space Station Environmental Control and Life Support System" (PDF). NASA. Archived from the original (PDF) on 24 ನವೆಂಬರ್ 2010. Retrieved 11 ಡಿಸೆಂಬರ್ 2010.
 2. "Breathing Easy on the Space Station". NASA. Archived from the original on 21 ಸೆಪ್ಟೆಂಬರ್ 2008. Retrieved 10 ಮಾರ್ಚ್ 2011.
 3. F.M. Sulzman & A.M. Genin (1994), Space, Biology, and Medicine, vol. II: Life Support and Habitability, American Institute of Aeronautics and Astronautics
 4. "Preventing "Sick" Spaceships". NASA. Archived from the original on 20 ಜುಲೈ 2012. Retrieved 10 ಮಾರ್ಚ್ 2011.
 5. "HSF - The Shuttle: Environmental Control and Life Support System". NASA. Archived from the original on 5 ಜೂನ್ 2011. Retrieved 10 ಮಾರ್ಚ್ 2011.
 6. "Paragon Projects". Paragon. ಜನವರಿ 2011. Archived from the original on 24 ಜೂನ್ 2011. Retrieved 10 ಮಾರ್ಚ್ 2011.
 7. "Commercial Crew and Cargo Paragon CCDev". NASA. 30 ನವೆಂಬರ್ 2010. Archived from the original on 4 ಜೂನ್ 2021. Retrieved 21 ಜುಲೈ 2021.
 8. ವಾಲಂಟಿಯರ್ ಟೆಸ್ಟ್‌ ಬೈಜ್‌ಲೊ ಲೈಫ್‌ ಸಪೋರ್ಟ್ ಗೀಯರ್‌ [ಶಾಶ್ವತವಾಗಿ ಮಡಿದ ಕೊಂಡಿ], ಏವಿಯೇಷನ್ ವೀಕ್ , 2010-10-22, ದೊರಕಿದ್ದು 2010-10-23.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • ಎಕಾರ್ಟ್‌, ಪೀಟರ್‌. ಸ್ಫೇಸ್‌ ಫ್ಲೈಟ್‌ ಲೈಫ್‌ ಸಪೋರ್ಟ್ ಆಂಡ್ ಬಯೋಸ್ಪೆರಿಕ್ಸ್ . ಟೊರಾನ್ಸ್, ಸಿಎ:ಮೈಕ್ರೊಕಾಸಮ್ ಪ್ರೆಸ್; 1996. ಐಎಸ್‌ಬಿಎನ್‌ 0688168949
 • ಲಾರ್ಸನ್, ವೈಲಿ ಜೆ. ಮತ್ತು ಪ್ರಾಂಕ್, ಲಿಂಡಾ ಕೆ. ಹ್ಯೂಮನ್ ಸ್ಪೇಸ್‌ಫ್ಲೈಟ್‌: ಮಿಷನ್ ಅನಾಲಿಸಿಸ್ ಆಂಡ್ ಡಿಸೈನ್‌ . ನ್ಯೂಯಾರ್ಕ್‌: ಮೆಕ್‌ಗ್ರಾ-ಹಿಲ್‌:1. ಐಎಸ್‌ಬಿಎನ್‌ 0688168949
 • ರೀಡ್, ರೊನಾಲ್ಡ್ ಡಿ. ಆಂಡ್ ಕೌಲ್ಟರ್, ಗ್ರೆ ಆರ್.ಫಿಸಿಯಾಲಜಿ ಆಫ್ ಸ್ಪೇಸ್ ಫ್ಲೈಟ್‌ -ಚಾಪ್ಟರ್ 5: 103-132
 • ಎಕಾರ್ಟ್‌, ಪೀಟರ್ ಮತ್ತು ಡಾಲ್, ಸುಸಾನ್. ಎನ್ವಿರಾನ್‌ಮೆಂಟ್‌ ಕಂಟ್ರೋಲ್ ಆಂಡ್ ಲೈಫ್‌ ಸಪೋರ್ಟ್ ಸಿಸ್ಟಮ್(ECLSS) - ಚಾಪ್ಟರ್ 17: 539-572.
 • ಗ್ರಿಫಿನ್, ಬ್ರಾಂಡ್‌ ಎನ್, ಸ್ಪಾಂಪಿನಾಟೊ, ಪಿಲ್, ಆಂಡ್ ವೈಲ್ಡ್, ರಿಚರ್ಡ್ ಸಿ. ಎಕ್ಸ್ಟ್ರಾವೆಹಿಕ್ಯೂಲರ್ ಆಕ್ಟಿವಿಟಿ ಸಿಸ್ಟಮ್ಸ್ -ಚಾಪ್ಟರ್ 22: 707-738.
 • ವೈಲ್ಯಾಂಡ್‌, ಪೌಲ್‌ O., ಡಿಸೈನಿಂಗ್‌ ಫಾರ್ ಹ್ಯೂಮನ್ ಪ್ರೆಸೆನ್ಸ್ ಇನ್ ಸ್ಪೇಸ್: ಆನ್ ಇಂಟ್ರಡಕ್ಷನ್ ಟು ಎನ್ವಿರಾನ್‌ಮೆಂಟಲ್ ಕಂಟ್ರೋಲ್ ಆಂಡ್‌ ಲೈಫ್ ಸಪೋರ್ಟ್ ಸಿಸ್ಟಮ್ಸ್ . ನ್ಯಾಷನಲ್ ಏರೊನಾಟಿಕ್ಸ್ ಆಂಡ್‌ ಸ್ಪೇಸ್ ಅಡ್ಮಿನಿಸ್ಟ್ರೇಷನ್, ನಾಸಾ ರೆಫರೆನ್ಸ್ ಪಬ್ಲಿಕೇಷನ್ ಆರ್‌ಪಿ-1324, 1994

ಬಾಹ್ಯ ಕೊಂಡಿಗಳು‌[ಬದಲಾಯಿಸಿ]